ನಮ್ಮ ದೇಶದಲ್ಲಿ ಈ ಸಾರು, ಸಾಂಬರು ಮತ್ತು ರಸಂ (Rasam) ಎಂದು ಕರೆಯುವ ಈ ಆಹಾರಗಳು ನೋಡಲು ಒಂದೇ ತರಹವಾಗಿದ್ದರೂ, ಅವುಗಳ ರುಚಿ (Taste) ಮಾತ್ರ ಬೇರೆ-ಬೇರೆಯದ್ದಾಗಿರುತ್ತದೆ. ಇನ್ನು ಒಂದೊಂದು ಹಬ್ಬಕ್ಕೂ (Festival) ಒಂದೊಂದು ವಿಧದ ಸಾಂಬರ್ ಮತ್ತು ರಸಂ ಮಾಡುವುದು ನಮ್ಮ ದೊಶದಲ್ಲಿ ಮಾತ್ರ ಅನಿಸುತ್ತೆ. ಏನ್ ಇವರು ಇವತ್ತು ರಸಂ ಬಗ್ಗೆ ಹೇಳ್ತಿದಾರೆ ಅಂದುಕೊಂಡಿರಾ. ನಿಮ್ಮ ಊಹೆ ನಿಜಕ್ಕೂ ಸರಿ. ಇವತ್ತು ನಾನು ನಿಮಗೆ ಮನೆಯಲ್ಲಿಯೇ ದಕ್ಷಿಣ ಭಾರತದ (South India) ಪ್ರಸಿದ್ಧ ಕೊತ್ತಂಬರಿ ರಸಂ (Coriander Rasam) ಬಗ್ಗೆ ತಿಳಿಸಿಕೊಡ್ತಿದೀನಿ. ಅದರ ಬಗ್ಗೆ ಇನ್ನು ತಿಳಿಯಬೇಕೆಂದರೆ ಈ ಲೇಖನವನ್ನು ಮುಂದೆ ಓದಿ.
ಆಹಾರದ ಇತಿಹಾಸಕಾರರಾದ ರಾಕೇಶ ರಘುನಾಥನ್ ಅವರ ಪ್ರಕಾರ "ದಕ್ಷಿಣ ಭಾರತದ ಮದುವೆಗಳಲ್ಲಿ ರಸಂ ಅನ್ನುವುದು ಊಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಈ ರಸಂಗಳಲ್ಲಿ 400-500 ವಿಧದ ರಸಂಗಳಿವೆ. ಅದರಲ್ಲಿ ಈ ಕೊತ್ತಂಬರಿ ಬಳಸಿ ಮಾಡುವ ರಸಂ ಒಂದು. ಕೊತ್ತಂಬರಿ ರಸಂ ಅಂದರೆ ಮದುವೆ ಮನೆಯಲ್ಲಿ ಎಲ್ಲರೂ ಮತ್ತೆ ಮತ್ತೆ ಹಾಕಿಸಿಕೊಂಡು ಚೆನ್ನಾಗಿ ಊಟ ಮಾಡಿ ಹೋಗುತ್ತಾರೆ. ಕೊತ್ತಂಬರಿ ರಸಂ ಅನ್ನು ನುರಿತ ಅಡುಗೆ ಭಟ್ಟರು ಮಾಡುವುದರಿಂದ ಅದು ತುಂಬಾ ರುಚಿಯಾಗಿರುತ್ತದೆ. ನಾವು ಮನೆಯಲ್ಲಿ ಮಾಡಿದರೆ ಅಷ್ಟೊಂದು ಚೆನ್ನಾಗಿರಲ್ಲ ಎಂದು ಹೇಳುವವರಿಗೆ ಮನೆಯಲ್ಲಿಯೇ ಈ ಕೊತ್ತಂಬರಿ ರಸಂ ಮಾಡುವುದು ಹೇಗೆ? ಎಂದು ತಿಳಿಸಿಕೊಡ್ತಿನಿ" ಎಂದು ಹೇಳಿದ್ದಾರೆ. ಪೂರ್ಣವಾಗಿ ಓದಿ.
ಹಾಗಿದ್ರೆ ಕೊತ್ತಂಬರಿ ರಸಂ ಮಾಡುವುದು ಹೇಗೆ?
ಈ ಕೊತ್ತಂಬರಿ ರಸಂ ಮಾಡುವುದು ತುಂಬಾ ಸುಲಭ. ಇದಕ್ಕೆ ಕೆಲವೇ ಸಾಮಗ್ರಿಗಳು ಇದ್ದರೆ ಸಾಕು ರುಚಿಯಾದ ರಸಂ ಮಾಡುವುದು ಗ್ಯಾರಂಟಿ. ಹಾಗಿದ್ರೆ ಇದಕ್ಕೆ ಬೇಕಾದ ಸಾಮಾಗ್ರಿಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಯಾಗಿ ರೊಟ್ಟಿ ಉಪ್ಪಿಟ್ಟು ರೆಸಿಪಿ ಮಾಡುವುದು ಹೇಗೆ? ಇಲ್ಲಿ ವಿಧಾನ ತಿಳಿಯಿರಿ
ಇದಕ್ಕೆ ಬೇಕಾಗುವ ಸಾಮಗ್ರಿಗಳೇನು?
2 ಸಣ್ಣ ಚಮಚ ಹುಣಿಸೆ ಹಣ್ಣಿನ ರಸ, 500 ಮಿಲಿ ನೀರು,1 ಸಣ್ಣ ಚಮಚ ಅರಿಶಿಣ ಪುಡಿ, 2 ಸಣ್ಣ ಚಮಚ ರಸಂ ಪುಡಿ, ¼ ಸಣ್ಣ ಚಮಚ ಇಂಗಿನ ಪುಡಿ, ½ ಕಪ್ ಕೊತ್ತಂಬರಿ ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು, 2 ಸಣ್ಣ ಚಮಚ ಎಳ್ಳು ಎಣ್ಣೆ, 1 ಸಣ್ಣ ಚಮಚ ಸಾಸಿವೆ ಕಾಳು, 1 ಸಣ್ಣ ಚಮಚ ಕಡ್ಲೆ ಬೇಳೆ, 2 ಸಣ್ಣ ಚಮಚ ತೊಗರಿ ಬೇಳೆ, ಮತ್ತು 2 ಒಣ ಕೆಂಪು ಮೆಣಸಿನಕಾಯಿ. ಇವೆಲ್ಲವೂ ಮುಖ್ಯವಾಗಿ ಕೊತ್ತಂಬರಿ ರಸಂ ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳಾಗಿವೆ.
ಮಾಡುವ ವಿಧಾನ
ಮೊದಲನೆಯದಾಗಿ ಹುಣಿಸೆ ಹಣ್ಣನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಆನಂತರ ಇದರಿಂದ ಹುಣಸೆ ಹಣ್ಣಿನ ರಸವನ್ನು ತೆಗೆದುಕೊಂಡು ಪಕ್ಕಕ್ಕೆ ಇಡಿ.
ನಂತರ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ. ಹುಣಸೆ ಹಣ್ಣಿನ ರಸವನ್ನು ಅದಕ್ಕೆ ಸೇರಿಸಿ ಕುದಿಯಲು ಬಿಡಿ. 15 ನಿಮಿಷಗಳ ನಂತರ ಕುದಿಯಲು ಬಿಟ್ಟ ಆ ಹುಣಸೆ ಹಣ್ಣಿಗೆ ರಸಂ ಪುಡಿ ಮತ್ತು ಕೊತ್ತಂಬರಿ ಎಲೆಗಳನ್ನು ಸೇರಿಸಿ.
ಇದನ್ನೂ ಓದಿ: Breakfast Recipe: ಮಕ್ಕಳ ಲಂಚ್ ಬಾಕ್ಸ್ಗೆ ಮಾಡಿ ರುಚಿಕರ ಒಗ್ಗರಣೆ ಶಾವಿಗೆ
ಇನ್ನೊಂದು ಕಡೆ, ಒಂದು ಒಲೆ ಮೇಲೆ ಸಣ್ಣ ಪ್ಯಾನ್ಇ ಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಸೇರಿಸಿ. ಎಣ್ಣೆ ಕಾದ ನಂತರ ಅದಕ್ಕೆ ಸ್ವಲ್ಪ ಕಡ್ಲೆ ಬೇಳೇ ಮತ್ತು ತೊಗರಿ ಬೇಳೆಯನ್ನು ಸೇರಿಸಿ ಕೆಂಪಾಗಲು ಬಿಡಿ. ಇದಕ್ಕೆ ಸಾಸಿವೆ ಕಾಳು ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ. ಚೆನ್ನಾಗಿ ಕೆಂಪಾದ ನಂತರ ಇದನ್ನು ಕುದಿಯುತ್ತಿರುವ ಹುಣಿಸೆ ಹಣ್ಣಿನ ರಸಕ್ಕೆ ಸೇರಿಸಿ. ನಂತರ 5 ನಿಮಿಷ ಸಣ್ಣ ಉರಿಯಲಿ ಕುದಿಯಲು ಬಿಡಿ. ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿಯನ್ನು ಸೇರಿಸಿ. ಬಿಸಿ ಬಿಸಿ ಕೊತ್ತಂಬರಿ ರಸಂ ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ