Breakfast Recipe: ಈ ಇಡ್ಲಿಯನ್ನು ಕೇವಲ 20 ನಿಮಿಷದಲ್ಲಿ ಮಾಡಬಹುದು, ನೀವೂ ಟ್ರೈ ಮಾಡಿ

Coriander Idli Recipe: ಇಡ್ಲಿಯನ್ನು ಮೆಚ್ಚುವ ಜನರು ಎಷ್ಟರ ಮಟ್ಟಿಗೆ ಇದ್ದಾರೆ ಎಂದರೆ, ಇಂದು ನಾವು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕನಿಷ್ಠ ಒಂದಾದರೂ ಇಡ್ಲಿ ಮಾರುವ ಹೋಟೆಲ್ ಅನ್ನು ಕಾಣಬಹುದು. ಅನೇಕರು ಮನೆಯಲ್ಲಿಯೂ ಇಡ್ಲಿಗಳನ್ನು ತಯಾರಿಸುತ್ತಾರೆ.

ಇಡ್ಲಿ

ಇಡ್ಲಿ

  • Share this:
ದಕ್ಷಿಣ ಭಾರತದ ತಿಂಡಿಗಳಲ್ಲಿ ಇಡ್ಲಿ, ದೋಸೆ ಪ್ರಮುಖ ಪಾತ್ರವಹಿಸುತ್ತದೆ. ಶುಭ ಕಾರ್ಯದಿಂದ ಹಿಡಿದು ಪಾರ್ಟಿಗಳಲ್ಲಿ ಸಹ ಇದು ಇದ್ದೇ ಇರುತ್ತದೆ. ಇಡ್ಲಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬೆಳಗ್ಗೆಯ ಉಪಾಹಾರಕ್ಕೆ ಆರೋಗ್ಯಕರವೆಂದೇ ಪರಿಗಣಿಸಿರುವ ಇಡ್ಲಿಯನ್ನು (Healthy Idli) ವಿಭಿನ್ನವಾಗಿ ಮಾಡುವುದು ಉಂಟು. ತಟ್ಟೆ ಇಡ್ಲಿ, ರವೆ ಇಡ್ಲಿ, ಪುಡಿ ಇಡ್ಲಿ, ಕಾಂಚಿಪುರಂ ಇಡ್ಲಿ ಹೀಗೆ ಅನೇಕ ತರಹದ ಇಡ್ಲಿಗಳನ್ನು (Varieties of Idli) ಮಾಡುತ್ತಾರೆ. ಇಲ್ಲಿ ಇನ್ನೊಂದು ವಿಭಿನ್ನ ತರಹದ ಇಡ್ಲಿಯನ್ನು ನಿಮಗಾಗಿ ಮಾಡುವ ವಿಧಾನ ಹೇಳಿಕೊಡಲಿದ್ದೇವೆ. ಈ ಇಡ್ಲಿಯನ್ನು ಕೇವಲ 20 ನಿಮಿಷಗಳಲ್ಲಿಯೇ (20 minute breakfast) ಮಾಡಿಕೊಳ್ಳಬಹುದು.

ದಕ್ಷಿಣ ಭಾರತದ ಪಾಕ ಪದ್ಧತಿಯಲ್ಲಿ ಎರಡನೇ ಅತ್ಯಂತ ಜನಪ್ರಿಯ ಭಕ್ಷ್ಯವೆಂದರೆ ಅದು ಇಡ್ಲಿ. ಹಬೆಯಲ್ಲಿ ಬೇಯಿಸಿದ ಅಕ್ಕಿ ಇಡ್ಲಿ (Steamed Delicacy), ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಇಡ್ಲಿ ದಿನದ ಯಾವುದೇ ಸಮಯದಲ್ಲಿ ಸೇವಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಇದು ತುಂಬಾ ಹಗುರ ಮತ್ತು ಮೃದುವಾಗಿದ್ದು ಸೇವಿಸಲು ಒಳ್ಳೆಯ ಭಕ್ಷ್ಯ (Tasty Food) ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇಡ್ಲಿಯನ್ನು ಮೆಚ್ಚುವ ಜನರು ಎಷ್ಟರ ಮಟ್ಟಿಗೆ ಇದ್ದಾರೆ ಎಂದರೆ, ಇಂದು ನಾವು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕನಿಷ್ಠ ಒಂದಾದರೂ ಇಡ್ಲಿ ಮಾರುವ ಹೋಟೆಲ್ ಅನ್ನು ಕಾಣಬಹುದು. ಅನೇಕರು ಮನೆಯಲ್ಲಿಯೂ ಇಡ್ಲಿಗಳನ್ನು ತಯಾರಿಸುತ್ತಾರೆ. ಇಡ್ಲಿ ತಯಾರಕ ಮತ್ತು ತ್ವರಿತ ಇಡ್ಲಿ ಮಿಶ್ರಣದ ಸಹಾಯದಿಂದ, ಮನೆಯಲ್ಲಿ ಈ ದಕ್ಷಿಣ ಭಾರತದ ಪ್ರಧಾನ ಭಕ್ಷ್ಯವನ್ನು ಬಹುತೇಕರು ತುಂಬಾ ಸುಲಭವಾಗಿ ಮಾಡುತ್ತಾರೆ. ಆದರೆ ಇಡ್ಲಿ ಪಾಕ ವಿಧಾನವು ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅನೇಕ ವ್ಯತ್ಯಾಸಗಳನ್ನು ಹೊಂದಿದೆ.

ಸಾಮಾನ್ಯವಾಗಿ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಕೊತ್ತಂಬರಿ ಸೊಪ್ಪಿನ ಇಡ್ಲಿ ಸಹ ಟ್ರೈ ಮಾಡಬಹುದು. ಇದು ಕೇಳಲು ವಿಚಿತ್ರವಾಗಿದ್ದರೂ ಸಹ ರುಚಿಕರ. ಕೊತ್ತಂಬರಿ ಸೊಪ್ಪಿನ ಇಡ್ಲಿ ಮಾಡುವುದು ಹೇಗೆ ಇಲ್ಲಿದೆ.

ಕೊತ್ತಂಬರಿ ಸೊಪ್ಪಿನ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು

ಅಕ್ಕಿ 2 ಕಪ್
ಕೊತ್ತ.ನರಿ ಸೊಪ್ಪು 1 ಕಪ್
ಅವಲಕ್ಕಿ, ಅರ್ಧ ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ರವೆ ಅರ್ಧ ಕಪ್
ಗಟ್ಟಿ ಮೊಸರು ಅರ್ಧ ಕಪ್

ಇದನ್ನೂ ಓದಿ: ಬರಿಗಾಲಿನಲ್ಲಿ ನಡೆಯೋದು ಕಷ್ಟ, ಆದ್ರೆ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಹಲವಾರು

ಕೊತ್ತಂಬರಿ ಇಡ್ಲಿ ಮಾಡುವ ವಿಧಾನ :

ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ 2 ಕಪ್ ಅಕ್ಕಿ ಹಾಕಿ, ಅದನ್ನ ಸ್ವಲ್ಪ ಹುರಿದುಕೊಂಡು ನಂತರ ಅದನ್ನ ಆರಿಸಿ ನೀರು ಹಾಕಿ ನೆನೆಸಿಡಿ. ಎರಡು ಗಂಟೆಯಾದರೂ ಅಕ್ಕಿ ನೆನೆಸಿ.

ನಂತರ ಅದಕ್ಕೆ ಒಂದು ಹಿಡಿ ಅವಲಕ್ಕಿ, 1/2 ಕಪ್‌ ತೆಂಗಿನಕಾಯಿ ತುರಿಯನ್ನೂ, ಚಿಟಿಕೆ ಉಪ್ಪು ಸೇರಿಸಿ ರುಬ್ಬಿಟ್ಟುಕೊಳ್ಳಿ. ರುಬ್ಬುವಾಗ ನೀರನ್ನ ಹಾಕಿ. ಹಿಟ್ಟು ದಪ್ಪವಾಗಿ, ಇಡ್ಲಿಯ ಹದಕ್ಕೆ ಇರಲಿ.

ಇದನ್ನೂ ಓದಿ: ರಾತ್ರಿ ನಿದ್ರೆ ಸರಿಯಾಗಿ ಬರ್ತಿಲ್ವಾ? ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ತುಪ್ಪ ಹಾಕಿ ಕಾಯಿಸಿ, ತುಪ್ಪ ಕಾದ ನಂತರ ಅರ್ಧ ಕಪ್ ರವೆಯನ್ನು ಹುರಿದುಕೊಂಡು, ಆರಿಸಿಕೊಳ್ಳಿ. ನಂತರ ತಯಾರಿಸಿಕೊಂಡ ಮಿಶ್ರಣಕ್ಕೆ ತುಪ್ಪದಲ್ಲಿ ಹುರಿದ ರವೆ ಮತ್ತು ಗಟ್ಟಿ ಮೊಸರು ಕಪ್‌ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ನಂತರ ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಕೊತ್ತಂಬರಿ ಸೊಪ್ಪಿನ ಇಡ್ಲಿ ರೆಡಿ.
Published by:Sandhya M
First published: