• Home
  • »
  • News
  • »
  • lifestyle
  • »
  • Facial At Home: ಮುಖಕ್ಕೆ ಹೊಳಪು ನೀಡೋ ಕಲ್ಪತರು ಫೇಷಿಯಲ್, ಮನೆಯಲ್ಲೇ ಹೀಗೆ ತಯಾರಿಸಿ

Facial At Home: ಮುಖಕ್ಕೆ ಹೊಳಪು ನೀಡೋ ಕಲ್ಪತರು ಫೇಷಿಯಲ್, ಮನೆಯಲ್ಲೇ ಹೀಗೆ ತಯಾರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Prepare Coconut Facial: ಮೇಕಪ್ ಮಾಡುವ ಮುನ್ನ ನಮ್ಮ ತ್ವಚೆ ಬಹಳ ಸುಂದರವಾಗಿರಬೇಕು ಮತ್ತು ಕಲೆ ರಹಿತವಾಗಿರಬೇಕು ಎನ್ನುವುದನ್ನ ಮರೆತು ಬಿಡುತ್ತೇವೆ.  ಹಬ್ಬಕ್ಕೆ ರೆಡಿಯಾಗುವ ಮೊದಲು ನಿಮ್ಮ ತ್ವಚೆಯನ್ನು ರೆಡಿ ಮಾಡಬೇಕು. ಅದಕ್ಕೆ, ಫೇಶಿಯಲ್ (Facial) ಮಾಡಿದರೆ ಬಹಳ ಉತ್ತಮ ಎನ್ನುತ್ತಾರೆ ಸೌಂದರ್ಯ ತಜ್ಞರು.

ಮುಂದೆ ಓದಿ ...
  • Share this:

ನವರಾತ್ರಿ ಹಬ್ಬ (Navratri 2022) ಎಂದರೆ ಸಂಭ್ರಮ ಸಡಗರದಿಂದ ತಯಾರಾಗಿ ಆಚರಿಸುವ ಹಬ್ಬ. ಈ ದಿನ ನಾವು ಆಭರಣಗಳಿಂದ (Jewellery) ಹಿಡಿದು ಸಣ್ಣ ಸಣ್ಣ ವಿಚಾರದ ಬಗ್ಗೆ ಸಹ ನಾವು ಗಮನ ಹರಿಸುತ್ತೇವೆ. ಹಾಗಾಗೇ ಈ ಸಮಯದಲ್ಲಿ ಮುಖದ ಸೌಂದರ್ಯದ ಬಗ್ಗೆ ಸಹ ಕಾಳಜಿಯ ಅವಶ್ಯಕತೆ ಹೆಚ್ಚಾಗಿರುತ್ತದೆ. ನಾವು ಮೇಕಪ್ (Makeup) ಹಾಗೂ ಹೇರ್​ ಸ್ಟೈಲ್ (Hair Style) ಬಗ್ಗೆ ಸಹ ಬಹಳ ಕೊಡುತ್ತೇವೆ. ಆದರೆ ಮೇಕಪ್ ಮಾಡುವ ಮುನ್ನ ನಮ್ಮ ತ್ವಚೆ ಬಹಳ ಸುಂದರವಾಗಿರಬೇಕು ಮತ್ತು ಕಲೆ ರಹಿತವಾಗಿರಬೇಕು ಎನ್ನುವುದನ್ನ ಮರೆತು ಬಿಡುತ್ತೇವೆ.  ಹಬ್ಬಕ್ಕೆ ರೆಡಿಯಾಗುವ ಮೊದಲು ನಿಮ್ಮ ತ್ವಚೆಯನ್ನು ರೆಡಿ ಮಾಡಬೇಕು. ಅದಕ್ಕೆ, ಫೇಶಿಯಲ್ (Facial) ಮಾಡಿದರೆ ಬಹಳ ಉತ್ತಮ ಎನ್ನುತ್ತಾರೆ ಸೌಂದರ್ಯ ತಜ್ಞರು.


ಆಯುಧ ಪೂಜೆ ಹಾಗೂ ವಿಜಯ ದಶಮಿಗೆ ಸುಂದರವಾಗಿ ತಯಾರಾಗುವ ಮುನ್ನ ಮನೆಯಲ್ಲಿಯೇ ಕಲ್ಪತರು ಫೇಶಿಯಲ್  ಮಾಡುವುದು ಹೇಗೆ, ಅದರ ಪ್ರಯೋಜನಗಳೇನು ಎಂಬುದನ್ನ ಖಾ್ಯತ ಬ್ಯೂಟಿಶಿಯನ್ ದೀಪಾ ನಾಗೇಶ್​ ತಿಳಿಸಿಕೊಟ್ಟಿದ್ದು, ಅವರು ಹೇಳಿರುವುದನ್ನ ಫಾಲೋ ಮಾಡಿ ಹಬ್ಬಕ್ಕೆ ರೆಡಿಯಾಗಿ.  ಈ ಫೇಶಿಯಲ್ ಮಾಡುವುದು ಸಹ ಬಹಳ ಸುಲಭ ಹಾಗೂ ಇದರಿಂದ ನಿಮ್ಮ ತ್ವಚೆಗೆ ಗ್ಲೋ ಹಾಗೂ ಶೈನಿಂಗ್ ಸಿಗುತ್ತದೆ.


ಕಲ್ಪತರು ಫೇಶಿಯಲ್ ಮಾಡಲು ಬೇಕಾಗುವ ಸಾಮಾಗ್ರಿಗಳು


ತೆಂಗಿನ ಕಾಯಿ ತುರಿ – ಅರ್ಧ ಕಪ್


ತೆಂಗಿನ ಹಾಲು – 3 ಚಮಚ (ಕ್ಲೆನ್ಸಿಂಗ್ ಮಾಡಲು)


ಕೋಕೋ ಬಟರ್​: ಸ್ವಲ್ಪ


ಎಳ ನೀರು ಅಥವಾ ತೆಂಗಿನ ನೀರು


ಉಳಿದ ತೆಂಗಿನ ತುರಿ.


ಕಾಟನ್


ತಯಾರಿಸುವುದು ಹೇಗೆ?


ಮೊದಲು ತೆಂಗಿನ ಕಾಯಿಯನ್ನು ತುರಿದು ಕೊಂಡು ಮಿಕ್ಸಿ ಮಾಡಿಕೊಳ್ಳಿ.ಅದರಿಂದ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ಅಥವಾ ನಿಮಗೆ ಬರುವ ಸುಲಭ ವಿಧಾನದಿಂದ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ಈ ಹಾಲನ್ನು ಕ್ಲೆನ್ಸಿಂಗ್ ಕ್ರೀಮ್ ಆಗಿ ಬಳಕೆ ಮಾಡಬಹುದು. ಅಲ್ಲದೇ, ಈ ಹಾಲನ್ನು ನೀವು ಮೇಕಪ್ ರಿಮೂವರ್ ಆಗಿ ಸಹ ಬಳಕೆ ಮಾಡಬಹುದು.


ಇದನ್ನೂ ಓದಿ: ಪ್ರತಿದಿನ ಒಂದು ಕಪ್ ದ್ರಾಕ್ಷಿ ತಿಂದ್ರೆ ಸಾಕು ತೂಕ ಇಳಿಸೋದು ಸುಲಭವಾಗುತ್ತೆ


ನಂತರ ನೀವು ಕೋಕೋ ಬಟರ್ ತಯಾರಿಸಿಕೊಳ್ಳಿ. ಮತ್ತೊಂದು ತೆಂಗಿನ ಕಾಯಿಯನ್ನು ತುರಿದುಕೊಂಡು, ಒಂದು ಸಣ್ಣ ಬಾಣಲೆಯಲ್ಲಿ ಬಿಸಿ ಮಾಡಿ, ಪೇಸ್ಟ್​ ಮಾಡಿಕೊಳ್ಳಿ. ಅದರ ಬದಲು ನೀವು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.  ಫೇಸ್​​ ಟೋನಿಂಗ್ ಮಾಡಲು ತೆಂಗಿನ ನೀರು ಅಥವಾ ಎಳ ನೀರನ್ನು ಬಳಕೆ ಮಾಡುವುದು ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ. ಇದನ್ನು ಕೇವಲ ಪೇಶಿಯಲ್ ಮಾಡುವಾಗ ಮಾತ್ರ ಅಲ್ಲ. ಪ್ರತಿದಿನ ಸಹ ಇದನ್ನು ಮುಖಕ್ಕೆ ಹಚ್ಚುವುದು ತ್ವಚೆ ಹೊಳೆಯಲು ಸಹಾಯ ಮಾಡುತ್ತದೆ.



ಕಲ್ಪತರು ಫೇಶಿಯಲ್ ಮಾಡುವ ವಿಧಾನ


ಮೊದಲು ಮುಖವನ್ನು ತೊಳೆದುಕೊಳ್ಳಿ. ನಂತರ ಇದನ್ನು ಕ್ಲೆನ್ಸಿಂಗ್ ಮಾಡಬೇಕು.  ನೀವು ಈಗಾಗಲೇ ತಯಾರಿಸಿಕೊಂಡ ಕ್ಲೆನ್ಸಿಂಗ್ ಕ್ರೀಮ್ ತೆಗೆದುಕೊಂಡು ಅದನ್ನು ಮುಖಕ್ಕೆ ಹಚ್ಚಿ 2 ನಿಮಿಷಗಳ ಕಾಲ ಬಿಡಿ. ನಂತರ ಮಸಾಜ್  ಮಾಡಬೇಕು.  ಫೇಶಿಯಲ್​ನಲ್ಲಿ ಮಸಾಜ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದು ತ್ವಚೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕೆ ನೀವು ಕೋಕೋ ಬಟರ್ ಬಳಕೆ ಮಾಡಬೇಕು. ಅದನ್ನು ಮುಖಕ್ಕೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ.


ನಂತರ ಈಗ ಫೇಸ್​ ಪ್ಯಾಕ್​ ಹಾಕಬೇಕು. ನೀವು ಫೇಸ್​ ಪ್ಯಾಕ್​ ಹಾಕಲು ಈಗಾಗಲೇ ಹಾಲನ್ನು ತೆಗೆದುಕೊಂಡಿರುವ ತೆಂಗಿನ ತುರಿಯನ್ನು ಬಳಸಬಹುದು. ಇದನ್ನು ಸ್ವಲ್ಪ ಪೇಸ್ಟ್ ಮಾಡಿಕೊಳ್ಳಿ. ಬಿಸಿ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಸುಮಾರು 20 ರಿಂದ 30 ನಿಮಿಷ ಬಿಡಬಹುದು.  ಈ ಪ್ಯಾಕ್​ ಹಾಕಿದಾಗ ನೀವು ಕಣ್ಣಿಗೆ ಕೇವಲ ಹತ್ತಿಯನ್ನು ಇಡುವ ಬದಲು, ಅದನ್ನು ತೆಂಗಿನ ಹಾಲಿನಲ್ಲಿ ಅದ್ದಿ, ಕಣ್ಣಿನ ಮೇಲೆ ಇಡುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮ.


ಇದನ್ನೂ ಓದಿ: ಪ್ರತಿದಿನ ಒಂದು ಕಪ್ ದ್ರಾಕ್ಷಿ ತಿಂದ್ರೆ ಸಾಕು ತೂಕ ಇಳಿಸೋದು ಸುಲಭವಾಗುತ್ತೆ


ಇನ್ನು 20 ನಿಮಿಷದ ನಂತರ ಪ್ಯಾಕ್​ ತೆಗೆದು ಸ್ಟೀಮ್ ಕೊಡಿ. ಇದರ  ನಂತರ ತೆಂಗಿನ ನೀರು ಅಥವಾ ಎಳ ನೀರನ್ನು ಮುಖಕ್ಕೆ ಸ್ಪೇ ಮಾಡಿಕೊಳ್ಳಿ.  ಈ ಫೇಶಿಯಲ್ ನಿಮಗೆ ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತೆಂಗಿನಲ್ಲಿ ಇರುವ ಹಲವಾರು ಪೋಷಕಾಂಶಗಳು, ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತದೆ.

Published by:Sandhya M
First published: