• Home
  • »
  • News
  • »
  • lifestyle
  • »
  • Evening Snacks: ಕೇವಲ 15 ನಿಮಿಷದಲ್ಲಿ ರೆಡಿಯಾಗುತ್ತೆ ಚಾಕೊಲೇಟ್​ ಕುಕ್ಕೀಸ್​, ಇಲ್ಲಿದೆ ರೆಸಿಪಿ

Evening Snacks: ಕೇವಲ 15 ನಿಮಿಷದಲ್ಲಿ ರೆಡಿಯಾಗುತ್ತೆ ಚಾಕೊಲೇಟ್​ ಕುಕ್ಕೀಸ್​, ಇಲ್ಲಿದೆ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Chocolate Cookies Recipe: ಒಂದು ಕಪ್ ಚಹಾ ಅಥವಾ ಕಾಫಿಗಿಂತ ಹೆಚ್ಚು ರಿಫ್ರೆಶ್​ ನೀಡುವುದು ಯಾವುದೂ ಇಲ್ಲ. ಅವುಗಳ ಜೊತೆ ಚಾಕೊಲೇಟ್ ಕುಕೀಗಳನ್ನು ತಿಂದರೆ ಅದರ ಮಜಾವೇ ಬೇರೆ. ಮನೆಯಲ್ಲಿ ಚಾಕೊಲೇಟ್​ ಕುಕ್ಕೀಸ್ ಮಾಡುವುದು ಬಹಳ ಸುಲಭ.

  • Share this:

ಕೊರೊನಾ (Corona) ನಂತರ ಸಾಮಾನ್ಯವಾಗಿ ಎಲ್ಲರೂ ಅಡುಗೆ (Cooking) ಮಾಡುವತ್ತ ಗಮನಹರಿಸಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಏನಾದರೂ ಹೊಸ ಆಹಾರ ಪದಾರ್ಥವನ್ನು ಟ್ರೈ ಮಾಡಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಸಂಜೆ ಹೊತ್ತು ಸ್ನ್ಯಾಕ್ಸ್ (Snacks) ಮಾಡಲು ಸಾಕಷ್ಟು ಸಮಯಾವಕಾಶ ಇರುತ್ತದೆ. ಹೀಗಾಗಿ ಕಿಚನ್ (Kitchen) ನಲ್ಲಿ ನೀವು ಹೊಸ ತಿಂಡಿಯನ್ನು ನೀವು ಟ್ರೈ ಮಾಡಬಹುದು. ಹಲವು ಜನರು ವೀಕೆಂಡ್ (weekend) ವೇಳೆಯಲ್ಲಿ ವಿಶೇಷ ತಿಂಡಿ ತಯಾರಿಸುತ್ತಾರೆ. ಹಲವಾರು ಜನರಿಗೆ ಸಂಜೆ ಸ್ನ್ಯಾಕ್ಸ್ (Snacks) ಇರಲೇ ಬೇಕು. ದಿನಕ್ಕೊಂದು ಸ್ನ್ಯಾಕ್ಸ್ ಮಾಡಿ ತಿನ್ನುವ ಅಭ್ಯಾಸವಿದೆ.  ವಾಸಿಸುವವರು ಮನೆಯಿಂದ ಹೊರಗೆ ಹೋಗಿ ಪಿಜ್ಜಾ, ಸ್ಯಾಂಡ್ ವಿಚ್ ಹೀಗೆ ಬೇಕಾದುದನ್ನು ತಿಂದು ಬರುತ್ತಾರೆ. ಆದರೆ ಹೊರಗೆ ಹೋಗಿ ತಿನ್ನಲು ಇಷ್ಟವಿಲ್ಲದವರು ಮನೆಯಲ್ಲಿಯೇ ವಿವಿಧ ಪದಾರ್ಥಗಳನ್ನು ತಯಾರಿಸಿ ಸವಿಯಬಹುದು. ಇನ್ನು ಕುಕ್ಕೀಸ್​ (Cookies)  ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮನೆಯಲ್ಲಿಯೇ ಸುಲಭವಾದ ಕುಕ್ಕೀಸ್ ಮಾಡುವ ವಿಧಾನ ಇಲ್ಲಿದೆ.


ಒಂದು ಕಪ್ ಚಹಾ ಅಥವಾ ಕಾಫಿಗಿಂತ ಹೆಚ್ಚು ರಿಫ್ರೆಶ್​ ನೀಡುವುದು ಯಾವುದೂ ಇಲ್ಲ. ಅವುಗಳ ಜೊತೆ ಚಾಕೊಲೇಟ್ ಕುಕೀಗಳನ್ನು ತಿಂದರೆ ಅದರ ಮಜಾವೇ ಬೇರೆ. ಮನೆಯಲ್ಲಿ ಚಾಕೊಲೇಟ್​ ಕುಕ್ಕೀಸ್ ಮಾಡುವುದು ಬಹಳ ಸುಲಭ.


ಚಾಕೊಲೇಟ್​ ಕುಕ್ಕೀಸ್ ಮಾಡಲು ಬೇಕಾಗುವ ಸಾಮಾಗ್ರಿಗಳು


1/2 ಕಪ್ ಬೆಣ್ಣೆ


1 ಮೊಟ್ಟೆ


1 1/2 ಕಪ್ ಕಡಲೇ ಹಿಟ್ಟು


1 ಟೀಚಮಚ ಅಡಿಗೆ ಸೋಡಾ


1 ಕಪ್ ಚಾಕೊಲೇಟ್ ಚಿಪ್ಸ್


1 ಕಪ್ ಸಕ್ಕರೆ


1 ಟೀಚಮಚ ವೆನಿಲ್ಲಾ


3 ಟೇಬಲ್ಸ್ಪೂನ್ ಕೋಕೋ ಪೌಡರ್


ಅಗತ್ಯವಿರುವಷ್ಟು ಉಪ್ಪು


ಚಾಕೊಲೇಟ್​ ಕುಕ್ಕೀಸ್​ ಮಾಡುವ ವಿಧಾನ


ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು, ಎಲೆಕ್ಟ್ರಿಕ್ ಬೀಟರ್ ಬಳಸಿ ಕೆಲವು ಸೆಕೆಂಡುಗಳ ಕಾಲ ಸಕ್ಕರೆ ಹಾಗೂ ಬೆಣ್ಣೆಯನ್ನು ಬೀಟ್​ ಮಾಡಿ, ಅದು ಕರಗಿ ಲೈಟ್ ಆಗಿ ಕ್ರೀಮ್ ರೀತಿಯಾಗಬೇಕು. ಅಲ್ಲದೇ, ಮೊಟ್ಟೆಯನ್ನು ಬೇರೆ ಬಟ್ಟಲಿನಲ್ಲಿ ಅದು ಕ್ರೀಮ್ ಆಗುವವರೆಗೂ ಬೀಟ್​ ಮಾಡಿ.  ನಂತರ ಈ  ಮೊಟ್ಟೆಯ ಮಿಶ್ರಣವನ್ನು ಬೆಣ್ಣೆ-ಸಕ್ಕರೆ ಬಟ್ಟಲಿಗೆ ಸೇರಿಸಿ, ಅದನ್ನು ಒಂದು ಚಮಚವನ್ನು ಬಳಸಿ ಚೆನ್ನಾಗಿ ಮಿಶ್ರಣ ಮಾಡಿ.


ಇದನ್ನೂ ಓದಿ: ಟೀ ಚೆಲ್ಲಿ ಬಟ್ಟೆ ಕಲೆ ಆಗಿದ್ರೆ ಬೇಜಾರ್ ಆಗ್ಬೇಡಿ, ಈ ಮ್ಯಾಜಿಕ್ ಟ್ರಿಕ್ಸ್ ಟ್ರೈ ಮಾಡಿ


ಅಲ್ಲದೆ, ವೆನಿಲ್ಲಾ ಸಾರವನ್ನು ಸೇರಿಸಿ ಮತ್ತು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.  ಎಲ್ಲಾ ಪದಾರ್ಥಗಳು ಮಿಶ್ರಣವಾಗುವುದು ಬಹಳ ಮುಖ್ಯ. ಇನ್ನೊಂದು ಬೌಲ್ ತೆಗೆದುಕೊಂಡು ಅದರಲ್ಲಿ ಹಿಟ್ಟನ್ನು ಅದಕ್ಕೆ ಹಾಕಿ. ಕಡಲೇ ಹಿಟ್ಟು, ಗೋಧಿ ಹಿಟ್ಟು ನಿಮಗೆ ಯಾವುದು ಬೇಕೋ ಅದನ್ನೇ ಬಳಸಿ.




ಈಗ, ಹಿಟ್ಟಿನ ಬಟ್ಟಲಿನಲ್ಲಿ ಕೋಕೋ ಪೌಡರ್ ಮತ್ತು ಅಡಿಗೆ ಸೋಡಾ ಸೇರಿಸಿ ಮತ್ತು ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಉಪ್ಪು ಜಾಸ್ತಿ ಆದರೆ, ಕುಕ್ಕೀಸ್ ರುಚಿ ಹಾಳಾಗುತ್ತದೆ. ಈ ಹಿಟ್ಟಿನ ಮಿಶ್ರಣವನ್ನು ಮಾಡಿದ ನಂತರ, ಹಿಟ್ಟಿನ ಬಟ್ಟಲಿಗೆ, ಈಗಾಗಲೇ ತಯಾರಿಸಿಕೊಂಡಿರುವ ಬೆಣ್ಣೆ ಹಾಗೂ ಮೊಟ್ಟೆಯ ಮಿಶ್ರಣವನ್ನು ಸೇರಿಸಿ ಮಿಶ್ರಣ ಮಾಡಿ.


ಒಂದು ಚಮಚದಿಂದ ಮಿಶ್ರಣ ಮಾಡಿ ಅಥವಾ ಬೀಟರ್​ನಿಂದ ಸಹ ಬೀಟ್​ ಮಾಡಬಹುದು. ನಂತರ, ಈ ಮಿಶ್ರಣಕ್ಕೆ ಚಾಕೊಲೇಟ್ ಚಿಪ್ಸ್ ಸೇರಿಸಿ, ಅದನ್ನು ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿ.  ಈಗ 350 ಡಿಗ್ರಿ ಫ್ಯಾರನ್‌ಹೀಟ್​ನಲ್ಲಿ ಓವೆನ್ ಬಿಸಿ ಮಾಡಿ. ನಂತರ ಬೇಕಿಂಗ್ ಶೀಟ್ ತೆಗೆದುಕೊಂಡು ಒಂದು ಚಮಚ ತಯಾರಿಸಿಕೊಂಡಿರುವ ಕುಕ್ಕೀಸ್ ಕ್ರೀಮ್ ಮಿಶ್ರಣವನ್ನು ಬೇಕಿಂಗ್ ಶೀಟ್‌ಗೆ ಹಾಕಿ.


ಇದನ್ನು ಹಾಕುವಾಗ ಒಂದಕ್ಕೊಂದು ಸ್ವಲ್ಪ ಜಾಗ ಬಿಡುವುದು ಮರೆಯಬೇಡಿ.  ಬೇಕಿಂಗ್ ಶೀಟ್ ಅನ್ನು ಒವನ್​ನಲ್ಲಿ ಇಟ್ಟು,ಅವುಗಳನ್ನು ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಅವು ಮುಗಿದ ನಂತರ, ಅವುಗಳನ್ನು ತೆಗೆದುಕೊಂಡು ಕೋಣೆಯ ಉಷ್ಣಾಂಶದಲ್ಲಿ ತಣ್ಣಗಾಗಲು ಬಿಡಿ.


ಇದನ್ನೂ ಓದಿ: ನಿಮ್ಮ ಮಗು ರಾತ್ರಿ ನಿದ್ರೆ ಮಾಡದಿರಲು ಇದೂ ಕಾರಣವಾಗಬಹುದು


ಇಷ್ಟು ಮಾಡಿದರೆ ರುಚಿಯಾದ ಚಾಕೊಲೇಟ್​ ಕುಕ್ಕೀಸ್​ ರೆಡಿ. ಕಾಫಿ ಅಥವಾ ಟೀ ಜೊತೆ ಎಂಜಾಯ್ ಮಾಡಿ.

Published by:Sandhya M
First published: