Momo ತಯಾರಿಸಲು ಬರೀ ಅರ್ಧ ಗಂಟೆ ಸಾಕು! ನೀವೂ ಟ್ರೈ ಮಾಡಿ ನೋಡಿ

ಅಂದಹಾಗೆಯೇ Momo ಡಿಶ್​ ಅನ್ನು ತಯಾರಿಸುವುದು ಹೇಗೆ? ಅದಕ್ಕೆ ಏನೆಲ್ಲಾ ಸಾಮಾಗ್ರಿ ಬೇಕು? Momo ತಿನ್ನಲು ನೇಪಾಲ ಹೋಗುವ ಬದಲು ಮನೆಯಲ್ಲಿಯೇ ಕುಳಿತುಕೊಂಡು ಈ ಡಿಶ್​ ಅನ್ನು ತಯಾರಿಸಬಹುದಾಗಿದೆ. ಅದಕ್ಕಾಗಿ ಬೇಕಾದ ಸಾಮಾಗ್ರಿ ಮತ್ತು ವಿಧಾನದ ಬಗ್ಗೆ ಮಾಹಿತಿಯನ್ನು ಇಲ್ಲಿ ಹಂಚಲಾಗಿದೆ.

Momo

Momo

  • Share this:
    Momo ತಿಂದಿದ್ದೀರಾ? ಇದನ್ನು ಟೇಸ್ಟ್ (Taste)​ ಮಾಡಿದವರಿಗೆ ಈ ವಿಶೇಷ ಆಹಾರದ (Food) ರುಚಿಯ ಬಗ್ಗೆ ತಿಳಿದಿರಬಹುದು. ಸದ್ಯ ಭಾರತದ ಮೂಲೆ ಮೂಲೆಯಲ್ಲೂ ಈ ಡಿಶ್ (Dish)​ ಸಿಗುತ್ತದೆ. ಅದರಲ್ಲೂ ಬಹಳ ರುಚಿಕರವಾದ ಮತ್ತು ಬಿಸಿಯಾದ Momo ಸವಿಯುವುದರಲ್ಲಿರುವ ಮಜವೇ ಬೇರೆ. ಅಂದಹಾಗೆಯೇ ಬಹುತೇಕರಿಗೆ Momo ಅಂದರೆ ಗೊತ್ತಿದೆ. ಅದರ ರುಚಿಯನ್ನು ವರ್ಣನೆ ಮಾಡಲು ಗೊತ್ತಿದೆ. ಆದರೆ ಈ Momo ಡಿಶ್​ ಎಲ್ಲಿಂದ ಬಂತು ಎಂಬ ಬಗ್ಗೆ ಗೊತ್ತಿಲ್ಲ. ರೆಸ್ಟೋರೆಂಟ್​ಗಳಿಗೆ ತೆರಳಿದಾಗ ಈ ಡಿಶ್​ ಅನ್ನು ಆರ್ಡರ್​ (Order) ಮಾಡುತ್ತೇವೆ ವಿನಃ. Momo ಹೇಗೆ ತಯಾರಿಸುವು? ಮತ್ತು ಅದಕ್ಕೆ ಬೇಕಾದ ಸಾಮಾಗ್ರಿ ಏನು ಎಂಬುದು ತಿಳಿದಿಲ್ಲ. ಹಾಗಾಗಿ ಮನೆಯಲ್ಲಿಯೇ Momo ಡಿಶ್​ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

    ಗಮನಿಸಬೇಕಾದ ಸಂಗತಿ ಎಂದರೆ Momo ಡಿಶ್​​ ಹತ್ತಿರದ ನೇಪಾಳ ಮತ್ತು ಟಿಬೆಟ್​ನಿಂದ ಬಂದಿದೆ. ವಿನ್ಯಾಸವು ವಿಭಿನ್ನವಾಗಿರುವ ಈ ಡಿಶ್​ ಅನ್ನು ಸವಿದಾಗಲೇ ಅದರ ಟೇಸ್ಟ್​ ವರ್ಣನೆ ಮಾಡಲು ಸಾಧ್ಯ. ಸದ್ಯ ನಗರ ಪ್ರದೇಶ ಮತ್ತು ರೆಸ್ಟೋರೆಂಟ್​​​ಗಳಲ್ಲಿ ಈ ಡಿಶ್​ ಸಿಗುತ್ತದೆ. ಚಿಕನ್​ ಹಾಗೂ ವೆಜ್​ ರೂಪದಲ್ಲೂ ಇದನ್ನು ತಯಾರಿಸುತ್ತಾರೆ. ಎರಡು ಕೂಡ ರುಚಿಕರವಾಗಿರುತ್ತದೆ. ಆದರೆ ಚಿಕನ್​ನಿಂದ ಮಾಡಲ್ಪಟ್ಟ Momo ಸ್ಪಲ್ಪ ಹೆಚ್ಚು ಟೇಸ್ಟಿಯಾಗಿರುತ್ತದೆ.

    ಅಂದಹಾಗೆಯೇ Momo ಡಿಶ್​ ಅನ್ನು ತಯಾರಿಸುವುದು ಹೇಗೆ? ಅದಕ್ಕೆ ಏನೆಲ್ಲಾ ಸಾಮಾಗ್ರಿ ಬೇಕು? Momo ತಿನ್ನಲು ನೇಪಾಲ ಹೋಗುವ ಬದಲು ಮನೆಯಲ್ಲಿಯೇ ಕುಳಿತುಕೊಂಡು ಈ ಡಿಶ್​ ಅನ್ನು ತಯಾರಿಸಬಹುದಾಗಿದೆ. ಅದಕ್ಕಾಗಿ ಬೇಕಾದ ಸಾಮಾಗ್ರಿ ಮತ್ತು ವಿಧಾನದ ಬಗ್ಗೆ ಮಾಹಿತಿಯನ್ನು ಇಲ್ಲಿ ಹಂಚಲಾಗಿದೆ.

    ಬೇಕಾಗುವ ಸಾಮಗ್ರಿಗಳು

    ಮೈದಾ , ಅಡುಗೆ ಸೋಡ, ಉಪ್ಪು,300 ಗ್ರಾಂ ಬೋನ್ ಲೆಸ್ ಚಿಕನ್, ಕೊತ್ತಂಬರಿ ಸೊಪ್ಪು, ಎಳಸು ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ವಿನೆಗರ್, ಸೋಯಾ ಸಾಸ್.

    ಇದನ್ನೂ ಓದಿ:  Prawns Ghee Roast: ಕುಂದಾಪುರ ಸ್ಟೈಲ್ ಸಿಗಡಿ ಘೀ ರೋಸ್ಟ್ ಮಾಡೋಕೆ ಬರುತ್ತಾ? ಇಲ್ಲವಾದ್ರೆ ಈ ವಿಡಿಯೋ ನೋಡಿ



    ಮಾಡುವ ವಿಧಾನ

    ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಸ್ವಲ್ಪ ಅಡುಗೆ ಸೋಡ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರ ಮಾಡಿ ,ಹಿಟ್ಟು ನೆನೆಯಲು ಬಿಡಿ. ನಂತರ ಬೋನ್ ಲೆಸ್ ಚಿಕನ್ ಅನ್ನು ಮಿಕ್ಸಿ ಗೆ ಹಾಕಿ ರುಬ್ಬಿ ಸಣ್ಣಗೆ ಪುಡಿ ಮಾಡಿ.

    ಮಿಶ್ರಣಕ್ಕೆ ಸಣ್ಣಗೆ ತುಂಡರಿಸಿದ ಈರುಳ್ಳಿ , ಕೊತ್ತಂಬರಿ ಸೊಪ್ಪು, ಎಳಸು ಈರುಳ್ಳಿ, ಕಾಳು ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ವಿನೆಗರ್ ,1/2 ಚಮಚ ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ.

    ಇದನ್ನೂ ಓದಿ: Mushrooms: ಅಣಬೆ ತಿಂದ್ರೆ ಮಧುಮೇಹ ನಿಯಂತ್ರಣವಾಗುತ್ತಾ? ಉತ್ತರ ಇಲ್ಲಿದೆ

    ನಂತರ ನೆನೆಯಲು ಇಟ್ಟಿದ್ದ ಮೈದಾ ಹಿಟ್ಟನ್ನು ಸಣ್ಣಗೆ ಮೋಮೋ ಅಳತೆಗೆ ತಕ್ಕಂತೆ ಲಟ್ಟಿಸಿ ಅದರೊಳಗೆ ಚಿಕನ್ ಮಿಶ್ರಣವನ್ನು ಹಾಕಿ. ಹೀಗೆ ಉಳಿದ ಎಲ್ಲಾ ಹಿಟ್ಟಿಗು ಮೊಮೋ ಮಾಡಿ .

    ಹೀಗೆ ತಯಾರಿಸಿದ ಮೋಮೊ ಗಳನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು 20-25 ನಿಮಿಷಗಳ ಕಾಲ ಬೇಯಿಸಿದರೆ ಬಿಸಿಬಿಸಿ ಮಾಮೋ ಸವಿಯಲು ಸಿದ್ದ.
    Published by:Harshith AS
    First published: