• Home
  • »
  • News
  • »
  • lifestyle
  • »
  • Chat Masala Recipe: ಸೂಪರ್ ಟೇಸ್ಟಿ ಚಾಟ್​ ಮಸಾಲಾವನ್ನು ಅಂಗಡಿಯಿಂದ ತರ್ಬೇಡಿ, ನೀವೇ ಮನೆಯಲ್ಲಿ ಮಾಡಿ

Chat Masala Recipe: ಸೂಪರ್ ಟೇಸ್ಟಿ ಚಾಟ್​ ಮಸಾಲಾವನ್ನು ಅಂಗಡಿಯಿಂದ ತರ್ಬೇಡಿ, ನೀವೇ ಮನೆಯಲ್ಲಿ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Prepare Chat Masala: ಈ ಚಾಟ್ ಮಸಾಲಾ ನಿಮಗೆ ಅಭ್ಯಾಸವಾಗಿದ್ದರೆ ಅಂಗಡಿಯಿಂದ ಇದನ್ನು ಖರೀದಿಸುವ ಅಗತ್ಯವಿಲ್ಲ. ಏಕೆಂದರೆ ನೀವು ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಹೇಗೆ ಮಾಡುವುದು ಎಂಬುದು ಇಲ್ಲಿದೆ.

  • Share this:

ಈಗ ಚಾಟ್ ಮಸಾಲ (Chat Masala) ಮೆಣಸಿನ ಪುಡಿಯಂತೆ (Chilli Powder) ಅಗತ್ಯ ಪುಡಿಯಾಗಿ ಅಡುಗೆ ಮನೆಯನ್ನು (Kitchen) ಆಕ್ರಮಿಸಿದೆ. ಸಲಾಡ್‌ಗಳಿಂದ (Salad) ಸ್ಟಿರ್-ಫ್ರೈಸ್‌ನವರೆಗೆ, ಕೇವಲ ಒಂದು ಚಿಟಿಕೆ ಮಾತ್ರ ನಿಮಗೆ ಪರಿಮಳವನ್ನು ನೀಡುತ್ತದೆ. ಕೇವಲ ಮರಿಮಳ (Smell) ಮಾತ್ರವಲ್ಲದೇ, ಆಹಾರಕ್ಕೆ ಮತ್ತೊಂದು ಮಟ್ಟದ ರುಚಿಯನ್ನು (Taste) ನೀಡುತ್ತದೆ ಎಂದರೆ ತಪ್ಪಾಗಲಾದು. ಇದನ್ನು ಚಾಟ್​ ಮಸಲಾ ಎಂದು ಕರೆಯಲೂ ಒಂದು ಅರ್ಥವಿದೆ. ಇದನ್ನು ಹೆಚ್ಚಾಗಿ ಚಾಟ್ಸ್​ ಪದಾರ್ಥಗಳಿಗೆ ಬಳಸಲಾಗುತ್ತದೆ. ನೀವು ಇದನ್ನು ಫ್ರೂಟ್ಸ್​ ಸಲಾಡ್​, ಸ್ವೀಟ್​ ಕಾರ್ನ್ ಹೀಗೆ ವಿವಿಧ ಚಾಟ್​ಗಳಿಗೆ ಸಹ ಬಳಸಬಹುದು.


ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು


ಮಸಾಲೆ ಪುಡಿಗಳ ಮಿಶ್ರಣ, ಚಾಟ್ ಮಸಾಲಾ ಒಂದು ರೀತಿಯ ಹುಳಿ ರುಚಿಯನ್ನು ಹೊಂದಿರುವ ಪುಡಿಯಾಗಿದ್ದು. ಅದರ ಒಂದು ಚಿಟಿಕೆಯಿಂದ ಯಾವುದೇ ಪದಾರ್ಥವನ್ನು ಹೆಚ್ಚು ರುಚಿಕರವಾಗಿಸಬಹುದು. ಇದು ಭಾರತ ಮತ್ತು ನೆರೆಯ ದೇಶಗಳಲ್ಲಿ ಜನಪ್ರಿಯ ಮಸಾಲೆ ಮಿಶ್ರಣವಾಗಿದೆ, ಇದನ್ನು ಟಿಕ್ಕಿ, ಭಲ್ಲೆ, ಪಾಪ್ರಿ, ಬೇಲ್ಪುರಿಯಿಂದ ಹಣ್ಣುಗಳು  ಮಾತ್ರವಲ್ಲದೇ, ಮನೆಯಲ್ಲಿ ತಯಾರಿಸುವ ಆಹಾರಗಳಿಗೆ ಸಹ ಬಳಸಲಾಗುತ್ತದೆ. ಈ ಚಾಟ್ ಮಸಾಲವನ್ನು ಯಾವುದೇ ಆಹಾರದ ಮೇಲೆ ಹಾಕಿ ನೀವು ಸವಿಯಬಹುದು.


ಸಾಮಾನ್ಯವಾಗಿ ಈ ಮಸಾಲೆಯನ್ನು ನಾವು ಅಂಗಡಿಯಿಂದ ಖರೀದಿಸಿ ತಂದು ಬಳಸುತ್ತೇವೆ. ಇದನ್ನು ಮನೆಯಲ್ಲಿ ಮಾಡಬಹುದು ಎಂದು ಹಲವಾರು ಜನರಿಗೆ ಗೊತ್ತಿಲ್ಲ. ನೀವು ಅಂಗಡಿಯಿಂದ ಖರೀದಿಸಿ ತಂದ ಚಾಟ್​ ಮಸಾಲೆಯಲ್ಲಿ ರಾಸಾಯನಿಕಗಳಿರುವ ಸಾಧ್ಯತೆ ಹೆಚ್ಚು. ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ಮನೆಯಲ್ಲಿಯೇ ಈ ಮಸಾಲೆಯನ್ನು ತಯಾರು ಮಾಡಬಹುದು.


ಭಾರತೀಯ ಅಡುಗೆಮನೆಯಲ್ಲಿ ಅಚ್ಚುಮೆಚ್ಚಿನ, ಕೊತ್ತಂಬರಿ, ಜೀರಿಗೆ, ಮಾವಿನ ಪುಡಿ, ಕಪ್ಪು ಕಲ್ಲು ಉಪ್ಪು, ಮೆಣಸು, ಸಿಟ್ರಿಕ್ ಆಮ್ಲ ಮತ್ತು ಪುದೀನ ಎಲೆಗಳನ್ನು ಒಳಗೊಂಡಿರುವ ಮಸಾಲೆಗಳ ಮಿಶ್ರಣವೇ ಈ ಚಾಟ್​ ಮಸಾಲಾ.


ಅಂದಹಾಗೆ ಈ ಚಾಟ್ ಮಸಾಲಾ ನಿಮಗೆ ಅಭ್ಯಾಸವಾಗಿದ್ದರೆ ಅಂಗಡಿಯಿಂದ ಇದನ್ನು ಖರೀದಿಸುವ ಅಗತ್ಯವಿಲ್ಲ. ಏಕೆಂದರೆ ನೀವು ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಹೇಗೆ ಮಾಡುವುದು ಎಂಬುದು ಇಲ್ಲಿದೆ.


ಇದನ್ನೂ ಓದಿ: ಫಿಟ್ನೆಸ್​ ಕಾಪಾಡಲು ರಾಹುಲ್ ಗಾಂಧಿ ಪ್ರತಿದಿನ ಹೀಗ್ಮಾಡ್ತಾರಂತೆ, ದೃಢ ದೇಹದ ರಹಸ್ಯವಿದು


ಚಾಟ್​ ಮಸಾಲಾ ಮಾಡಲು ಅಗತ್ಯವಿರುವ ವಸ್ತುಗಳು:


ಧನಿಯಾ ಪುಡಿ - 2 ಟೀಸ್ಪೂನ್


ಮೆಣಸು - 1 ಟೀಸ್ಪೂನ್



ಒಣಗಿದ ಮಾವಿನಕಾಯಿ ಪುಡಿ - 1/4 ಕಪ್


ಉಪ್ಪು - 1 ಟೀ ಸ್ಪೂನ್


ಕಪ್ಪು ಉಪ್ಪು - 2 ಟೀಸ್ಪೂನ್


1 1/4 ಕಪ್ ಜೀರಿಗೆ ಬೀಜ


1/2 ಕಪ್ ಅಜ್ವೈನ್


2 1/2 ಟೀಸ್ಪೂನ್ ಗರಂ ಮಸಾಲಾ


4 ಟೀಸ್ಪೂನ್ ಕರಿಮೆಣಸಿನ ಪುಡಿ


1/2 ಕಪ್ ಒಣಗಿದ ಪುದೀನಾ ಎಲೆಗಳ ಪುಡಿ


ಚಾಟ್​ ಮಸಲಾ ಮಾಡುವ ವಿಧಾನ


ಎಣ್ಣೆ ಹಾಕದೆಯೇ ಪ್ಯಾನ್ ಅನ್ನು ಕಾಯಿಸಿ. ನಂತರ ಜೀರಿಗೆ ಮತ್ತು ಧನಿಯಾ ಪುಡಿಯನ್ನು ಅದರಲ್ಲಿ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ.  ಅದು ತಣ್ಣಗಾದ ನಂತರ ಜೀರಿಗೆ ಮತ್ತು ಧನಿಯಾ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.


ಇದನ್ನೂ ಓದಿ: ನಿಮ್ಮ ನಾಲಿಗೆ ಈ ಬಣ್ಣದಲ್ಲಿದ್ರೆ ಆರೋಗ್ಯ ಸಮಸ್ಯೆ ಇದೆ ಎಂದರ್ಥ


ಈಗ ಅದಕ್ಕೆ ಮಾವಿನಕಾಯಿ ಪುಡಿ, ಕಪ್ಪು ಉಪ್ಪು, ಸೇರಿಸಿ ಪೇಸ್ಟ್ ಮಾಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು, ಅಜ್ವೈನ್, 2 1/2 ಟೀಸ್ಪೂನ್ ಗರಂ ಮಸಾಲಾ, 4 ಟೀಸ್ಪೂನ್ ಕರಿಮೆಣಸಿನ ಪುಡಿ, 1/2 ಕಪ್ ಒಣಗಿದ ಪುದೀನಾ ಎಲೆಗಳ ಪುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಎಲ್ಲಾ ಮಿಶ್ರಣವನ್ನು ಒಟ್ಟಿಗೆ ಹಾಕಿ ಕಲಸಿದರೆ ಚಾಟ್​ ಮಸಾಲಾ ರೆಡಿ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಮತ್ತು ಅಗತ್ಯವಿರುವಾಗ ಬಳಸಿ.

Published by:Sandhya M
First published: