Breakfast Recipe: ಚಪಾತಿ ನೂಡಲ್ಸ್​ ಮಾಡಿಕೊಟ್ಟರೆ ಮಕ್ಕಳು ನೋ ಅನ್ನಲ್ಲ, ಇದು ಆರೋಗ್ಯಕರ ಕೂಡ

How to Prepare Chapati Noodles: ಉಳಿದ ಚಪಾತಿಯನ್ನು ಕಸದ ಬುಟ್ಟಿಗೆ ಎಸೆಯಲು ಮನಸ್ಸಾಗುವುದಿಲ್ಲ. ಆಹಾರ ವ್ಯರ್ಥ ಮಾಡುವುದು ಕೂಡ ತಪ್ಪು. ಹಾಗಾದರೆ ನೀವು ಅದನ್ನು ಹೇಗೆ ರುಚಿಕರವಾದ ತಿಂಡಿಯನ್ನಾಗಿ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು (Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಚಪಾತಿ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ. ಚಪಾತಿ ಮಾಡುವುದರಲ್ಲಿ ಸಹ ಹಲವಾರು ವಿಧಗಳಿದೆ. ಆದರೆ ನಿಮಗೆ ಚಪಾತಿ ನೂಡಲ್ಸ್​ ಬಗ್ಗೆ ಗೊತ್ತಾ?

ಅರೇ, ಇದೇನು ಚಪಾತಿ ನೂಡಲ್ಸ್ ಎನ್ನುವ ಅನುಮಾನ ನಿಮ್ಮನ್ನ ಕಾಡುತ್ತದೆ. ಆದರೆ ಇದು ಮಕ್ಕಳಿಗೆ ನಿಜಕ್ಕೂ ಬಹಳ ಇಷ್ಟವಾಗುತ್ತದೆ. ಸಾಮಾನ್ಯವಾಗಿ ನೂಡಲ್ಸ್​ ಇಷ್ಟವಿಲ್ಲ ಎಂದು ಹೇಳುವ ಮಕ್ಕಳು ನಿಮಗೆ ಸಿಗುವುದು ಅಪರೂಪ. ಬೆಳಗ್ಗೆ, ರಾತ್ರಿ ಅವರಿಗೆ ನೂಡಲ್ಸ್​ ಕೊಟ್ಟರೆ ತಿನ್ನುತ್ತಾರೆ. ಆದರೆ ಅದು ಅವರ ಆರೋಗ್ಯಕ್ಕೆ ಬಹಳ ಅಪಾಯಕಾರಿ. ಮಕ್ಕಳಿಗೆ ಇದನ್ನು ಕೊಡುವ ಬದಲು ನೀವು ಈ ಸ್ಪೆಷಲ್ ಚಪಾತಿ ನೂಡಲ್ಸ್​ ಮಾಡಿಕೊಡಬಹುದು. ಚಪಾತಿಯನ್ನು ಮತ್ತೆ ಬೆಳಗ್ಗೆ ತಿನ್ನಬೇಕಾದರೆ ರಾತ್ರಿ ಮಾಡಿ ಇಟ್ಟ ಚಪಾತಿ ತಿನ್ನಲು ಅನೇಕರು ಬಯಸುವುದಿಲ್ಲ. ಆದರೆ ಅದನ್ನು ಕಸದ ಬುಟ್ಟಿಗೆ ಎಸೆಯಲು ಮನಸ್ಸಾಗುವುದಿಲ್ಲ. ಆಹಾರ ವ್ಯರ್ಥ ಮಾಡುವುದು ಕೂಡ ತಪ್ಪು. ಅದರ ಬದಲು ನೀವು ಸುಲಭವಾಗಿ ಈ ಚಪಾತಿ ನೂಡಲ್ಸ್​ ಮಾಡಬಹುದು. ಅಥವಾ ಹೊಸದಾಗಿ ಚಪಾತಿಯನ್ನು ಮಾಡಿ ಸಹ ಇದನ್ನು ತಯಾರಿಸಬಹುದು.

ಚಪಾತಿ ನೂಡಲ್ಸ್​ ಮಾಡಲು ಬೇಕಾಗುವ ಸಾಮಾಗ್ರಿಗಳು

ಗೋಧಿ ಹಿಟ್ಟು - 2 ಕಪ್

ಜೀರಿಗೆ - ಒಂದು ಚಮಚ

ಕಾಯಿತುರಿ: ಒಂದು ಕಪ್

ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿಕೊಳ್ಳಿ.

ಇದನ್ನೂ ಓದಿ: ಹೆಂಡತಿಯ ಕೋಪ ಹೋಗಲಾಡಿಸೋಕೆ ಇಲ್ಲೊಂದು ಮ್ಯಾಜಿಕ್ ಟ್ರಿಕ್ಸ್​ ಇದೆ, ಪಕ್ಕಾ ಹೆಲ್ಪ್​ ಆಗುತ್ತೆ

ಅಡುಗೆ ಎಣ್ಣೆ - ಎರಡು ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಈರುಳ್ಳಿ -1

ಬೆಳ್ಳುಳ್ಳಿ - 4

ಮೆಣಸಿನಕಾಯಿ- 1

ಎಲೆಕೋಸು- ಸ್ವಲ್ಪ ಸಣ್ಣದಾಗಿ ಹೆಚ್ಚಿಕೊಳ್ಳಿ

ರೆಡ್ ಚಿಲ್ಲಿ ಸಾಸ್ ಸ್ವಲ್ಪ

ವಿನೆಗರ್ ಸ್ವಲ್ಪ

ಟೊಮೆಟೊ ಸಾಸ್ - ಸ್ವಲ್ಪ

ಸೋಯಾ ಸಾಸ್ - ಸ್ವಲ್ಪ

ಬ್ರೆಡ್​ - ಅಗತ್ಯವಿದ್ದರೆ

ಚಪಾತಿ ನೂಡಲ್ಸ್​ ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಸ್ವಲ್ಪ ಉಪ್ಪು ಹಾಗೂ ಎಣ್ಣೆ ಹಾಕಿ ಕಲಸಿಕೊಳ್ಳಿ. ಅದಕ್ಕೆ  ಜೀರಿಗೆ, ಕಾಯಿತುರಿ, , ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ  ಅಗತ್ಯವಿದ್ದರೆ ಹಿಟ್ಟು ಹಾಕಿ, ಇಲ್ಲದಿದ್ದರೆ ನೀರು ಹಾಕಿ ಚೆನ್ನಾಗಿ ಕಲಸಿ. ಒಟ್ಟಿಗೆ ನೀರು ಹಾಕುವ ಬದಲು ಅದರ ಮಧ್ಯೆ ನೀವು ಸ್ವಲ್ಪ ಸ್ವಲ್ಪವಾಗಿಯೇ ನೀರು ಸೇರಿಸುತ್ತಾ ಹೋಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನೀರು ಹೆಚ್ಚಾಗದಂತೆ ಎಚ್ಚರವಹಿಸಿ, ಹೆಚ್ಚಾದರೆ ತಟ್ಟಲು ಬರುವುದಿಲ್ಲ.

ಈಗ ಒಂದು ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ,. ಪ್ಯಾನ್ ಕಾದ ನಂತರ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ಚಪಾತಿಯನ್ನು  ತಟ್ಟಿ. ಇಲ್ಲ ನಿಮಗೆ ಸಾಧ್ಯವಾಗುವುದಾದರೆ ಅದನ್ನು ಲಟ್ಟಿಸಿ, ನಂತರ ಅದನ್ನು ಕಾವಲಿ ಮೇಲೆ ಹಾಕಿ ಚನ್ನಾಗಿ ಬೇಯಿಸಿ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಹಾಲನ್ನು ಕೊಡಬಾರದಂತೆ

ಈಗ ಚಪಾತಿಯನ್ನು ನೂಡಲ್ಸ್ ರೀತಿ ಉದ್ದವಾಗಿ ಕತ್ತರಿಸಿ. ಈಗ ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಎಲೆಕೋಸು ಇತ್ಯಾದಿಗಳನ್ನು ಹಾಕಿ ಫ್ರೈ ಮಾಡಿ. ನಂತರ ರೆಡ್ ಚಿಲ್ಲಿ ಸಾಸ್, ವಿನೆಗರ್, ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ, ಬ್ರೆಡ್ ಅನ್ನು ಹಾಕಿದರೆ ನಿಮ್ಮ ಚಪಾತಿ ನೂಡಲ್ಸ್ ರೆಡಿ.
Published by:Sandhya M
First published: