• Home
  • »
  • News
  • »
  • lifestyle
  • »
  • Ayudha Puja Sweet: ಆಯುಧ ಪೂಜೆಗೆ ಸ್ಪೆಷಲ್ ಬ್ರೌನ್ ರೈಸ್​ ಪೊಂಗಲ್​ ಮಾಡಿ ಸವಿಯಿರಿ

Ayudha Puja Sweet: ಆಯುಧ ಪೂಜೆಗೆ ಸ್ಪೆಷಲ್ ಬ್ರೌನ್ ರೈಸ್​ ಪೊಂಗಲ್​ ಮಾಡಿ ಸವಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Brown Rice Pongal Recipe: ನಾವು ಸಾಮಾನ್ಯವಾಗಿ ಊಟಕ್ಕೆ ಬಳಸುವ ಅಕ್ಕಿಯನ್ನು ಬಳಸಿ ನಾವು ಮಾಡುತ್ತೇವೆ. ಆದರೆ, ಈ ಸಿಹಿ ಪೊಂಗಲ್ ಬಹಳ ವಿಶೇಷ. ಆಯುಧ ಪೂಜೆ ದಿನ ಬ್ರೌನ್ ರೈಸ್​ ಸಿಹಿ ಪೊಂಗಲ್ ಮಾಡಿ ಸವಿಯಿರಿ. 

  • Share this:

ನವರಾತ್ರಿ (Navratri) ಸಂಭ್ರಮ ಆರಂಭವಾಗಿ, ಹಬ್ಬ ಸಹ ಮುಗಿಯುತ್ತಾ ಬಂದಿದೆ. ಇಂದು ಆಯುಧ ಪೂಜೆಯ (Ayudha puja) ವಿಶೇಷ ದಿನ. ಈ ದಿನ ಮನೆಯಲ್ಲಿರುವ ಆಯುಧಗಳಿಗೆ, ಗಾಡಿಗಳಿಗೆ ಪೂಜೆ ಮಾಡಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಏನಾದರೂ ಸ್ವೀಟ್​ ಮಾಡದೇ ಇದ್ದರೆ ಹೇಗೆ ಹೇಳಿ. ಈ ವಿಶೇಷ ಸಿಹಿ ಪೊಂಗಲ್ (Sweet Pongal)  ಮಾಡಬಹುದು. ಅರೇ, ಈ ಸಿಹಿ ಪೊಂಗಲ್ ಏನು ಸ್ಪೆಷಲ್​, ಯಾವಾಗಲೂ ಮಾಡೋದೇ ಅಲ್ವಾ ಅನಿಸಬಹುದು. ಆದರೆ, ಇದನ್ನು ಕುಚ್ಚಲಕ್ಕಿ ಅಥವಾ ಬ್ರೌನ್​ ರೈಸ್​ನಿಂದ (Brown Rice) ಮಾಡುವುದು. ಹೌದು, ನಾವು ಸಾಮಾನ್ಯವಾಗಿ ಊಟಕ್ಕೆ ಬಳಸುವ ಅಕ್ಕಿಯನ್ನು ಬಳಸಿ ನಾವು ಮಾಡುತ್ತೇವೆ. ಆದರೆ, ಈ ಸಿಹಿ ಪೊಂಗಲ್ ಬಹಳ ವಿಶೇಷ. ಆಯುಧ ಪೂಜೆ ದಿನ ಬ್ರೌನ್ ರೈಸ್​ ಸಿಹಿ ಪೊಂಗಲ್ ಮಾಡಿ ಸವಿಯಿರಿ.


ಬ್ರೌನ್​ ರೈಸ್​ ಸಿಹಿ ಪೊಂಗಲ್ ಮಾಡಲು ಬೇಕಾಗುವ ಸಾಮಾಗ್ರಿಗಳು


½ ಕಪ್ ಕುಚ್ಚಲಕ್ಕಿ  (15 ನಿಮಿಷ ನೆನೆಸಿ ಇಡಿ


)¼ ಕಪ್ ಹೆಸರು ಬೇಳೆ (15 ನಿಮಿಷ ನೆನೆಸಿ ಇಡಿ)


2¼ ಕಪ್ ನೀರು


¾ ಕಪ್ ಬೆಲ್ಲ


1 ಟೀಸ್ಪೂನ್ ತುಪ್ಪ


10 ಗೋಡಂಬಿ


ಸ್ವಲ್ಪ ಒಣದ್ರಾಕ್ಷಿ


1 ಲವಂಗ


¼ ಟೀಸ್ಪೂನ್ ಏಲಕ್ಕಿ ಪುಡಿ


ಸಣ್ಣ ಪಚ್ಚ ಕರ್ಪೂರದ ತುಂಡು


ಇದನ್ನೂ ಓದಿ: ಈ 5 ಡ್ರೈ ಫ್ರೂಟ್ಸ್​ ಇದ್ರೆ ನಿಮ್ಮ ಬೊಜ್ಜು ಕರಗಿಸೋದು ಸುಲಭ


ಬ್ರೌನ್​  ರೈಸ್​ ಸಿಹಿ ಪೊಂಗಲ್ ಮಾಡುವ ವಿಧಾನ


ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ನಲ್ಲಿ ½ ಕಪ್ ಬ್ರೌನ್​ ರೈಸ್​ ಮತ್ತು ¼ ಕಪ್  ಹೆಸರು ಬೇಳೆ ತೆಗೆದುಕೊಳ್ಳಿ.  ಅದಕ್ಕೆ  2¼ ಕಪ್ ನೀರು ಸೇರಿಸಿ ಮತ್ತು 8 – 10 ಸೀಟಿ ಕೂಗಿಸಿ ನಂತರ ಆಫ್ ಮಾಡಿ. ಸಾಮಾನ್ಯವಾಗಿ ಬ್ರೌನ್ ರೈಸ್​ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಬೇಳೆ ಮತ್ತು ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಎಂದು ಖಚಿತಪಡಿಸಿಕೊಳ್ಳಿ.


ನಂತರ ಬಾಣಲೆಯಲ್ಲಿ ¾ ಕಪ್ ಬೆಲ್ಲ ಮತ್ತು ¼ ಕಪ್ ನೀರು ತೆಗೆದುಕೊಂಡು ಮಿಶ್ರಣ ಮಾಡಿ.  ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಅದನ್ನು ಕಲಸುತ್ತಿರಿ. ಈಗ ಬೆಲ್ಲದ ನೀರನ್ನು ಬೇಯಿಸಿದ ಅನ್ನ ಮತ್ತು ಬೇಳೆಗೆ ಹಾಕಿ ಮಿಶ್ರಣಕ್ಕೆ ಹಾಕಿ ಕಲಸಿ. ಅದಕ್ಕೆ   ¼ ಕಪ್ ನೀರು ಅಥವಾ ಅಗತ್ಯವಿರುವಷ್ಟು ಸೇರಿಸಿ ಮಿಶ್ರಣ ಮಾಡಿ.




ಈಗ ಅದನ್ನು 2 ನಿಮಿಷಗಳ ಕಾಲ ಕುದಿಸಿ, ಆಗ ಬೆಲ್ಲದ ನೀರು ಹಾಗೂ ಅಕ್ಕಿ, ಬೇಳೆ ಸರಿಯಾಗಿ ಮಿಶ್ರಣವಾಗುತ್ತದೆ. ಈಗ ಈ ಮಿಶ್ರಣಕ್ಕೆ 2 ಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.  ಈಗ ಸಣ್ಣ ಪಾತ್ರೆಯಲ್ಲಿ 2 ಟೀಸ್ಪೂನ್ ತುಪ್ಪವನ್ನು ಹಾಕಿ ಬಿಸಿ ಮಾಡಿ.


ಇದನ್ನೂ ಓದಿ: ಬಾಯಲ್ಲಿ ಇಟ್ರೆ ಕರಗುತ್ತೆ ತುಪ್ಪದ ಉಪ್ಪಿಟ್ಟು; ರೆಸಿಪಿ ತುಂಬಾನೇ ಸಿಂಪಲ್, ನೀವು ಟ್ರೈ ಮಾಡಿ


ಅದರಲ್ಲಿ 10 ಗೋಡಂಬಿ, ಸ್ವಲ್ಪ ಒಣದ್ರಾಕ್ಷಿ ಮತ್ತು 1 ಲವಂಗವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಅನ್ನು ಸಿಹಿ ಪೊಂಗಲ್​ಗೆ ಸುರಿದು, ಕಲಸಿ.  ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಸಣ್ಣ ತುಂಡು ಪಚ್ಚ ಕರ್ಪೂರವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದರೆ, ಬ್ರೌನ್​ ರೈಸ್​ ಸಿಹಿ ಪೊಂಗಲ್ ಸವಿಯಲು ಸಿದ್ಧ.

Published by:Sandhya M
First published: