Breakfast Recipe: ಬ್ರೊಕೊಲಿ - ಪಾಲಕ್​ ಪರೋಟ ಟೇಸ್ಟಿ ಮಾತ್ರ ಅಲ್ಲ, ಆರೋಗ್ಯಕರ ಕೂಡ

Broccoli Spinach Paratha: ಇನ್ನು ಬ್ರೊಕೊಲಿ ಹಾಗೂ ಪಾಲಕ್ ಬಗ್ಗೆ ಎಲ್ಲರಿಗೂ ಗೊತ್ತು. ಅದರ ಆರೋಗ್ಯ ಪ್ರಯೋಜನಗಳನ್ನು ನಾವು ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಈ ಎರಡು ಬಹಳ ಪೋಷಕಾಂಶಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಿನವೂ ಮನೆಯಲ್ಲಿ ಒಂದೇ ರೀತಿಯ ಆಹಾರ (Food) ಸೇವಿಸಿ ಬೇಸರವಾದಾಗ ರೆಸ್ಟೋರೆಂಟ್​ಗಳತ್ತ ಮುಖ ಮಾಡುವವರೇ ಹೆಚ್ಚು. ಅಲ್ಲಿ ಪರೋಟ (Paratha) ಸೇರಿದಂತೆ ಇತರೆ ಆಹಾರಗಳಿಗೆ ಅರ್ಡರ್ ಮಾಡಿದರೆ ಒಂದೈಪತ್ತು ನಿಮಿಷವಂತೂ ಕಾಯಬೇಕು. ಆದರೂ ಚುರುಗುಟ್ಟುತ್ತಿರುವ ಹಸಿವನ್ನು ಸಹಿಸಿ ಕಾಯುತ್ತಾರೆ. ಏಕೆಂದರೆ ಮನೆಯಲ್ಲಿ ಪರೋಟವನ್ನು ಮಾಡುವುದು ಎಂದರೆ ಸಾಹಸವೇ ಸರಿ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ.  ಪರೋಟ ಎಂಬುದು ಉತ್ತರ ಭಾರತೀಯರ ಆಹಾರ ಎನ್ನಲಾಗುತ್ತಿದ್ದರೂ, ದಕ್ಷಿಣದಲ್ಲಿ ತನ್ನದೇಯಾದ ವಿಭಿನ್ನ ರುಚಿಯ ಮೂಲಕ ನಾಲಿಗೆ ಚಪ್ಪರಿಸುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು.  ಆದರೆ ಪರೋಟವನ್ನು ಮಾಡುವುದು ಕಷ್ಟವಲ್ಲ. ಅಲ್ಲದೇ, ಪಂಜಾಬಿ (Punjabi) ಶೈಲಿಯ ಪರೋಟ ಮಾಡಿದರೆ ಅದರ ರುಚಿಯೇ ಅದ್ಬುತ. ಹಾಗೆಯೇ ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತದೆ. 

ಇನ್ನು ಬ್ರೊಕೊಲಿ ಹಾಗೂ ಪಾಲಕ್ ಬಗ್ಗೆ ಎಲ್ಲರಿಗೂ ಗೊತ್ತು. ಅದರ ಆರೋಗ್ಯ ಪ್ರಯೋಜನಗಳನ್ನು ನಾವು ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಈ ಎರಡು ಬಹಳ ಪೋಷಕಾಂಶಗಳನ್ನು ಹೊಂದಿದೆ. ಇದನ್ನು ಒಟ್ಟಿಗೆ ಸೇರಿಸಿ ಪರೋಟ ಮಾಡಿದರೆ, ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಬ್ರೊಕೊಲಿ ಹಾಗೂ ಪಾಲಕ್​ ಸೊಪ್ಪಿನ ಪರೋಟ ಮಾಡುವುದು ಹೇಗೆ ಎನ್ನುವುದು ಇಲ್ಲಿದೆ.

ಪಾಲಕ್​ - ಬ್ರೊಕೊಲಿ ಪರೋಟ ಮಾಡಲು ಬೇಕಾಗುವ ಸಾಮಾಗ್ರಿಗಳು

ಪಾಲಕ್​ ಸೊಪ್ಪಿ- 1 ಕಪ್​

ಬ್ರೊಕೊಲಿ- 1 ಕಪ್

ಈರುಳ್ಳಿ – 1
ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಜೀರಿಗೆ ಪುಡಿ – 1 ಚಮಚ
ಗರಮ್ ಮಸಾಲಾ -1 ಚಮಚ

ಕಾಳುಮೆಣಸು ಪುಡಿ- 1 ಚಮಚ
ದನಿಯಾ ಪುಡಿ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಗೋಧಿ ಹಿಟ್ಟು- 1 ಕಪ್ ಅರಿಶಿನ ಪುಡಿ- ಸ್ವಲ್ಪ
ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ

ಪಾಲಕ್​ - ಬ್ರೊಕೊಲಿ ಪರೋಟ ಮಾಡುವ ವಿಧಾನ

ಮೊದಲಿಗೆ ಒಂದು ಬಾಣಲೆಯಲ್ಲಿ ಪಾಲಕ್​ ಸೊಪ್ಪನ್ನು ಎಣ್ಣೆಯಲ್ಲಿ ಬೇಯಿಸಿಕೊಳ್ಳಿ. ನಂತರ ಅದು ಬಾಡುತ್ತಿರುವಾಗ, ಕುಕ್ಕರ್​ನಲ್ಲಿ ಉಪ್ಪು ಹಾಗೂ ನೀರು ಹಾಕು ಬ್ರೊಕೊಲಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಈ ಎರಡನ್ನು ಪೇಸ್ಟ್​ ಮಾಡಿಕೊಳ್ಳಿ. ಈಗ  ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಹುರಿಯಿರಿ.

ಇದನ್ನೂ ಓದಿ: ಸೋಯಾ ಚಂಕ್ಸ್ ದೋಸೆ ಬಹಳ ಆರೋಗ್ಯಕರ, ಇಲ್ಲಿದೆ ರೆಸಿಪಿ

ಈರುಳ್ಳಿ ಕಂದು ಬಣ್ಣಕ್ಕೆ ಬಂದಾಗ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ನಂತರ ತಯಾರಾಗಿರುವ ಪೇಸ್ಟ್​ಗೆ ಈ ಒಗ್ಗರಣೆ ಹಾಕಿ ಬೇಯಿಸಿಕೊಳ್ಳಿ.              ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟನ್ನು ಹಾಕಿ ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ.

ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ. ಅದರ ಮಧ್ಯಕ್ಕೆ ಈ ಪೇಸ್ಟ್​ ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ.

ಇದನ್ನೂ ಓದಿ: ಸೂಪರ್ ಪಲಾವ್​ ಸವಿಯೋಕೆ ಬೆಂಗಳೂರಿನ ಟಾಪ್ 5 ಸ್ಥಳಗಳೇ ಬೆಸ್ಟ್

ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ.ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿದರೆ ಬ್ರೊಕೊಲಿ- ಪಾಲಕ್  ಪರೋಟ ರೆಡಿ.
Published by:Sandhya M
First published: