Breakfast Recipe: ಸ್ಟೈಸಿ ಬದನೆಕಾಯಿ ಪಲ್ಯ ಇದ್ರೆ ಅಕ್ಕಿ ರೊಟ್ಟಿ ಟೇಸ್ಟೇ ಬೇರೆ, ರೆಸಿಪಿ ಟ್ರೈ ಮಾಡಿ

Brinjal and Onion Curry: ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ  ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಜೀರಿಗೆ ಹಾಕಿ ಚನ್ನಾಗಿ ಹುರಿಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಪಾತಿ (Chapati)  ಮತ್ತು ರೊಟ್ಟಿಯನ್ನು (Rotti) ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಮಾಡಲಾಗುತ್ತದೆ. ಅದಕ್ಕೆ ವಿಭಿನ್ನ ರೀತಿಯ ಪಲ್ಯಗಳನ್ನು (Curry)  ಮಾಡುವುದು ಹೆಚ್ಚಿನ ರುಚಿ ನೀಡುತ್ತದೆ. ಚಪಾತಿ ಅಥವಾ ರೊಟ್ಟಿ ಮಾಡಿದಾಗಲೆಲ್ಲ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ (Recipe) ಇದೆ. ಅದು ಬದನೆಕಾಯಿ ಪಲ್ಯ. ಸಾಮಾನ್ಯವಾಗಿ ಬದನೆಕಾಯಿ ಎಂದರೆ ಯಾರಿಗೂ ಇಷ್ಟವಾಗುವುದಿಲ್ಲ. ಕೆಲವರು ಮಾತ್ರ ಇದನ್ನು ಇಷ್ಟಪಡುತ್ತಾರೆ. ಆದರೆ ನಾವು ಹೇಳುವ ಈ ಪಲ್ಯ ನಿಮಗೆ ಬಹಳ ಇಷ್ಟವಾಗುತ್ತದೆ. ಅಲ್ಲದೇ, ಪದೇ ಪದೇ ಮಾಡಿ ಸವಿಯುತ್ತೀರಿ. 

ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು

ಎಣ್ಣೆ – 2 ದೊಡ್ಡ ಚಮಚ

ಬದನೆಕಾಯಿ – ಅಗತ್ಯಕ್ಕೆ ತಕ್ಕಷ್ಟು

ಸಾಸಿವೆ – 1 ಚಮಚ

ಜೀರಿಗೆ – ಅರ್ಧ ಚಮಚ

ಈರುಳ್ಳಿ – 3 ಸಣ್ಣಗೆ ಹೆಚ್ಚಿದ್ದು

ಟೊಮೊಟೊ– 1  ಹೆಚ್ಚಿದ್ದು

ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ

ಉಪ್ಪು – ಒಂದು ಚಿಟಿಕೆ

ಅರಿಶಿನ ಪುಡಿ – ಕಾಲು ಚಮಚ

ಅಚ್ಛ ಖಾರದ ಪುಡಿ – 1 ಚಮಚ

ಗರಂ ಮಸಾಲಾ ಪುಡಿ – ಕಾಲು ಚಮಚ

ಕಸೂರಿ ಮೇಥಿ – 1 ಚಮಚ

ಆಮ್ ಚೂರ್ ಪುಡಿ – ಕಾಲು ಚಮಚ

ಇದನ್ನೂ ಓದಿ: ಬೆಂಗಳೂರಿನ ಈ ರೆಸ್ಟೊರೆಂಟ್​ಗಳಲ್ಲಿ ಡಿಫರೆಂಟ್​ ಟೈಪ್​ ಥಾಲಿ ಸಿಗುತ್ತಂತೆ

ಪಲ್ಯ ಮಾಡುವ ವಿಧಾನ

ಮೊದಲು ಟೊಮ್ಯಾಟೋ ಮತ್ತು ಬದನೆಕಾಯಿಯನ್ನು ಚನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಬದನೆಕಾಯಿಯಲ್ಲಿ ಹೆಚ್ಚು ಹುಳಗಳಿರುತ್ತದೆ ಹಾಗಾಗಿ ಎಚ್ಚರಿಕೆಯಿಂದ ನೋಡಿ ಹೆಚ್ಚಬೇಕು.

ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ  ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಜೀರಿಗೆ ಹಾಕಿ ಚನ್ನಾಗಿ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ ಮಿಶ್ರಣ ಮಾಡಿ.ನಂತರ ಸಣ್ಣಗೆ ಹೆಚ್ಚಿದ ಟೊಮೊಟೋಗಳನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಕಲಸಿ ನಂತರ ಮುಚ್ಚಳ ಮುಚ್ಚಿ ಟೊಮೊಟೋ ಸರಿಯಾಗಿ ಮೆತ್ತಗಾಗುವ ತನಕ ಬೇಯಿಸಿ.

ಇದನ್ನೂ ಓದಿ: ಕೂದಲು ವೇಗವಾಗಿ ಬೆಳೆಯಲು ನೀವು ಇಷ್ಟು ಮಾಡಿದ್ರೆ ಸಾಕಂತೆ

ನಂತರ, ಹೆಚ್ಚಿದ  ಬದನೆಕಾಯಿ ಹಾಕಿ ಹಾಗೂ ಚಿಟಿಕೆ ಉಪ್ಪನ್ನು ಹಾಕಿ ಬೇಯಿಸಿ ಚೆನ್ನಾಗಿ ಹುರಿಯಿರಿ. 5 ರಿಂದ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದಕ್ಕೆ ಎಲ್ಲಾ ಮಸಾಲೆಗಳನ್ನು ಸಾಕಿ ಚನ್ನಾಗಿ ಮಿಶ್ರಣ ಮಾಡಿ. ಬದನೆಕಾಯಿ ಬೇಯುವವರೆಗೆ ಬೇಯಿಸಿದರೆ ರುಚಿ ರುಚಿಯಾದ ಬದನೆಕಾಯಿ ಪಲ್ಯ ರೆಡಿ.
Published by:Sandhya M
First published: