Breakfast Recipe: ಕೇವಲ 10 ನಿಮಿಷದಲ್ಲಿ ಈ ಉಪ್ಪಿಟ್ಟು ಮಾಡ್ಬೋದು, ಮಕ್ಕಳಿಗೂ ಇಷ್ಟವಾಗುತ್ತೆ

How to Prepare Bread Upma: ಬೆಳಗಿನ ತಿಂಡಿ (Breakfast) ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮನೆಯಿಂದ ಕೆಲಸ (Work from Home) ಮಾಡುವುದು ನಮ್ಮಲ್ಲಿ ಹೆಚ್ಚಿನವರಿಗೆ ರೂಢಿಯಾಗಿದೆ. ಇದು ಅಡುಗೆ (Cooking) ಮಾಡುವ ಮತ್ತು ಕಚೇರಿಯ ಕೆಲಸವನ್ನು ಮಾಡುವ ಜನರ ಜವಾಬ್ದಾರಿಯನ್ನು ದ್ವಿಗುಣಗೊಳಿಸಿದೆ. ನಿಮಗೆ ಹಸಿವಾದಾಗಲೆಲ್ಲಾ ನಿಮ್ಮ ಕಚೇರಿಯ ಕ್ಯಾಂಟೀನ್‌ಗೆ ಹೋಗಿ ನಿಮ್ಮ ನೆಚ್ಚಿನ ಉಪಾಹಾರ ಮತ್ತು ಕಾಫಿಯನ್ನು ಆರ್ಡರ್ ಮಾಡುವ ದಿನಗಳು ಈಗಿಲ್ಲ. ಈಗ ನಾವು ಕೆಲಸ ಮಾಡುವಾಗ ನಮ್ಮದೇ ತಿಂಡಿಯನ್ನು (Breakfast) ತಯಾರಿಸಿಕೊಳ್ಳಬೇಕು. ಈ ಹಿನ್ನೆಲೆ ಕಡಿಮೆ ಸಮಯದಲ್ಲಿ ಮಾಡಬಹುದಾದ ಸುಲಭವಾದ ಪರ್ಯಾಯಗಳಿವೆ. ಅದರಲ್ಲೂ ನಾಳೆ ಹಬ್ಬವಿದೆ. ಹಬ್ಬದ ದಿನ ಕೆಲಸದ ಜೊತೆ ತಿಂಡಿ ಮಾಡುವುದು ಕಷ್ಟವಾಗುತ್ತದೆ. ಮಕ್ಕಳಿರುವ ಕಡೆ, ಬೇಗ ತಿಂಡಿ ಬೇಕಾಗುತ್ತದೆ. ಹಾಗಾದ್ರೆ ಮಕ್ಕಳಿಗೆ ಇಷ್ಟವಾಗುವ ಯಾವ ತಿಂಡಿ ಮಾಡಬಹುದು ಅಂತ ಯೋಚನೆ ಮಾಡುತ್ತಿದ್ದರೆ, ಬ್ರೆಡ್​ ಉಪ್ಪಿಟ್ಟು ಮಾಡಬಹುದು.

ಬ್ರೆಡ್ ಎಂದ ತಕ್ಷಣ ನಿಮ್ಮ ತಲೆಯಲ್ಲಿ ಬರುವುದು ಸ್ಯಾಂಡ್ವಿಚ್ ಅಥವಾ ಟೋಸ್ಟ್ ಬಗ್ಗೆ ಮಾತ್ರ. ಆದರೆ ಭಾರತೀಯರಾದ ನಾವು ಅದರಿಂದ ಸಹ ಉಪ್ಪಿಟ್ಟು ತಯಾರಿಸುತ್ತೇವೆ. ಒಂದರ್ಥದಲ್ಲಿ ಉಳಿದಿರುವ ಬ್ರೆಡ್ಗಳನ್ನು ಬಳಸುವ ಉತ್ತಮ ವಿಧಾನ ಇದು. ಅಲ್ಲದೇ ರವ ಉಪ್ಪಿಟ್ಟಿನ ಬದಲು ಇದನ್ನು ಸೇವನೆ ಮಾಡಬಹುದು. ಇನ್ನು ಸಾಮಾನ್ಯವಾಗಿ ಮಕ್ಕಳಿಗೆ ಇದು ಆಕರ್ಷಕವಾಗಿ ಕಾಣುವುದರಿಂದ ಅವರಿಗೆ ತಿನ್ನಿಸಲು ಹರಸಾಹಸ ಮಾಡುವ ಅಗತ್ಯವಿರುವುದಿಲ್ಲ.

ಬೆಳಗಿನ ತಿಂಡಿ (Breakfast) ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ (Low Fat). ಬೆಳಗಿನ ತಿಂಡಿಯನ್ನು ಮಾಡುವುದು ಸಹ ನಿಜಕ್ಕೂ ಸವಾಲಿನ ಕೆಲಸ. ಮನೆಯಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಹೆಚ್ಚಿರುವ ಕಾರಣ ಬೆಳಗ್ಗೆ ತಿಂಡಿ ಮಾಡಲು ಕಡಿಮೆ ಇರುತ್ತದೆ. ಇಂಥಹ ಸಮಯದಲ್ಲಿ ಜಂಕ್​ ಫುಡ್​ಗಳತ್ತ(Junk Food) ಗಮನ ಹೋಗುತ್ತದೆ. ದಕ್ಷಿಣ ಭಾರತದ ಭಕ್ಷ್ಯಗಳು (Foods) ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ ಬೇರೆ.

ಬ್ರೆಡ್​ ಉಪ್ಪಿಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು
4 ಬ್ರೆಡ್ ( ಸಣ್ಣದಾಗಿ ಕತ್ತರಿಸಿ)
2 ಚಮಚ ಎಣ್ಣೆ
1 ಟೀಸ್ಪೂನ್ ಸಾಸಿವೆ
½ ಟೀಸ್ಪೂನ್ ಜೀರಿಗೆ
½ ಕಪ್ ಕತ್ತರಿಸಿದ ಈರುಳ್ಳಿ ಮತ್ತು ಟೊಮ್ಯಾಟೊ
1 ಟೀಸ್ಪೂನ್ ಶುಂಠಿ
ಕರಿಬೇವು
¼ ಚಮಚ ಅರಿಶಿನ ಪುಡಿ
1 ಚಮಚ ಕೊತ್ತಂಬರಿ
ರುಚಿಗೆ ಉಪ್ಪು

ಇದನ್ನೂ ಓದಿ: ಮುಖಕ್ಕೆ ಬ್ಲೀಚಿಂಗ್ ಮಾಡಿಕೊಳ್ಳುವ ಮೊದಲು ಈ ಟಿಪ್ಸ್ ಮರಿಬೇಡಿ

ಬ್ರೆಡ್​ ಉಪ್ಪಿಟ್ಟು ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ, ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ. ಅವುಗಳು ಬೆಂದ ನಂತರ ಈರುಳ್ಳಿ ಸೇರಿಸಿ ಮತ್ತು ಚನ್ನಾಗಿ ಬೇಯಿಸಿ. ಹಾಗೆಯೇ ಅದಕ್ಕೆ ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ.

ಇದನ್ನೂ ಓದಿ: ಈ ಇಡ್ಲಿಯನ್ನು ಕೇವಲ 20 ನಿಮಿಷದಲ್ಲಿ ಮಾಡಬಹುದು, ನೀವೂ ಟ್ರೈ ಮಾಡಿ

ನಂತರ ಆ ಮಿಶ್ರಣಕ್ಕೆ ಟೊಮ್ಯಾಟೊ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಮಿಶ್ರಣವನ್ನು ಚೆನ್ನಾಗಿ ಬೇಯಿಸಿದ ನಂತರ ಅದಕ್ಕೆ ಬ್ರೆಡ್ ಸೇರಿಸಿ ಮತ್ತು ಐದು ನಿಮಿಷ ಬೇಯಿಸಿದರೆ ಬ್ರೆಡ್ ಉಪ್ಪಿಟ್ಟು ರೆಡಿ. ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಹಾಕಿ ಮಕ್ಕಳಿಗೆ ತಿನ್ನಲು ಕೊಡಿ.
Published by:Sandhya M
First published: