• Home
  • »
  • News
  • »
  • lifestyle
  • »
  • Bread Jamun: ಬ್ರೆಡ್​ನಿಂದಲೂ ಮಾಡ್ಬಹುದು ಗುಲಾಬ್​ ಜಾಮೂನ್, ಇಲ್ಲಿದೆ ನೋಡಿ ರೆಸಿಪಿ

Bread Jamun: ಬ್ರೆಡ್​ನಿಂದಲೂ ಮಾಡ್ಬಹುದು ಗುಲಾಬ್​ ಜಾಮೂನ್, ಇಲ್ಲಿದೆ ನೋಡಿ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bread Gulab Jamun Recipe: ಕೆಲವರು ಹಾಲಿನ ಪುಡಿ, ಮೈದಾ ಮತ್ತು ಬೇಕಿಂಗ್ ಪೌಡರ್ ಅನ್ನು ಬಳಸಿ ಸಹ ಮಾಡುತ್ತಾರೆ. ಆದರೆ, ಬ್ರೆಡ್​ ಜಾಮೂನ್ ಬಗ್ಗೆ ಕೇಳಿದ್ದೀರಾ? ಅರೇ, ಇದೇನೂ ಬ್ರೆಡ್​ ಜಾಮೂನ್ ಅಂತ ನಿಮಗೂ ಅನುಮಾನ ಬರಬಹುದು. ಆದರೆ ಇದು ನಿಜಕ್ಕೂ ಬಹಳ ರುಚಿಕರವಾಗಿರುತ್ತದೆ.  

  • Share this:

ಜಾಮೂನು (Gulab Jamun) ಬಹುಶಃ ಭಾರತದಾದ್ಯಂತದ (All India) ಅತ್ಯಂತ ಜನಪ್ರಿಯ ಸಿಹಿ (Sweet) ಪಾಕವಿಧಾನಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ. ಇದನ್ನು  ಎಲ್ಲಾ ವಯಸ್ಸಿನವರು ಇಷ್ಟಪಡುತ್ತಾರೆ. ಇದನ್ನು ಮಾಡುವುದು ಕಷ್ಟ ಎಂದು ಎಲ್ಲರ ಅಂದೊಕೊಂಡಿದ್ದಾರೆ. ಆದರೆ, ಹಲವಾರು ಪಾಕವಿಧಾನಗಳಿದ್ದು, ರುಚಿಕರವಾದ ಜಾಮೂನ್​ ಅನ್ನು ನಾವು ಮಾಡಿ ಸವಿಯಬಹುದು. ಸಾಂಪ್ರದಾಯಿಕವಾಗಿ ಗುಲಾಬ್ ಜಾಮೂನ್ ಅನ್ನು ಅಂಗಡಿಯಲ್ಲಿ ಖರೀದಿಸಿದ ರೆಡಿ ಮಿಕ್ಸ್ ನಿಂದ ಮಾಡಲಾಗುತ್ತದೆ. ಅಲ್ಲದೇ, ಕೆಲವರು ಹಾಲಿನ ಪುಡಿ, ಮೈದಾ ಮತ್ತು ಬೇಕಿಂಗ್ ಪೌಡರ್ ಅನ್ನು ಬಳಸಿ ಸಹ ಮಾಡುತ್ತಾರೆ. ಆದರೆ, ಬ್ರೆಡ್​ ಜಾಮೂನ್ (Bread Jamun) ಬಗ್ಗೆ ಕೇಳಿದ್ದೀರಾ? ಅರೇ, ಇದೇನೂ ಬ್ರೆಡ್​ ಜಾಮೂನ್ ಅಂತ ನಿಮಗೂ ಅನುಮಾನ ಬರಬಹುದು. ಆದರೆ ಇದು ನಿಜಕ್ಕೂ ಬಹಳ ರುಚಿಕರವಾಗಿರುತ್ತದೆ.  


ಹೌದು, ಕೇವಲ ಬ್ರೆಡ್​, ಹಾಲು ಹಾಗೂ ಸಕ್ಕರೆಯಿಂದ ನೀವು ರುಚಿಕರವಾದ ಬ್ರೆಡ್​ ಜಾಮೂನ್ ಮಾಡಬಹುದು. ಹೇಗೆ ಎಂಬುದು ಇಲ್ಲಿದ್ದು, ಈ ಹಬ್ಬಕ್ಕೆ ಮಾಡಿ ಸವಿಯಿರಿ.


ಬ್ರೆಡ್​ ಜಾಮೂನ್ ಮಾಡಲು ಅಗತ್ಯವಿರುವ ವಸ್ತುಗಳು: 


ಬ್ರೆಡ್ - 6 ತುಂಡುಗಳು ಅಥವಾ 1 ಬ್ರೆಡ್​


ಹಾಲು - 6 ಟೇಬಲ್​ ಸ್ಪೂನ್​ ( ಅಗತ್ಯಕ್ಕೆ ತಕ್ಕಷ್ಟು)


ಸಕ್ಕರೆ - 1 ಕಪ್


​ಬ್ರೆಡ್​ ಜಾಮೂನ್ ಮಾಡುವ ವಿಧಾನ 


ನೀವು ಈ ಬ್ರೆಡ್​ ಜಾಮೂನ್ ಮಾಡಲು ಬ್ರೌನ್ ಬ್ರೆಡ್, ಗೋಧಿ ಬ್ರೆಡ್ ಅಥವಾ ನಿಮಗೆ ಸೂಕ್ತವಾದ ಯಾವುದೇ ರೀತಿಯ ಬ್ರೆಡ್ ತೆಗೆದುಕೊಳ್ಳಬಹುದು. ಮೊದಲು ಬ್ರೆಡ್ ಅನ್ನು 3 ಅಥವಾ 6 ತುಂಡುಗಳನ್ನು ಕತ್ತರಿಸಿಕೊಂಡು ಬ್ಲೆಂಡರ್​ನಲ್ಲಿ ಪುಡಿಮಾಡಿಕೊಳ್ಳಿ.


how to prepare bread gulab jamun
ಸಾಂದರ್ಭಿಕ ಚಿತ್ರ


ಈಗ ಬ್ರೆಡ್ ಪುಡಿಗೆ ಸ್ವಲ್ಪ ಬಿಸಿ ಮಾಡಿದ ಹಾಲನ್ನು ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಆರಂಭದಲ್ಲಿ ಒಂದಕ್ಕೊಂದು ಅಂಟಿಕೊಂಡು ಸ್ವಲ್ಪ ಜಿಗುಟಾಗಿ ಅಥವಾ ಉಂಡೆ ಉಂಡೆಯಂತೆ ಕಾಣುತ್ತದೆ. ಆದರೆ, ಉತ್ತಮವಾಗಿ ಅದನ್ನು ಮಿಶ್ರಣ ಮಾಡಿದರೆ, ಹಿಟ್ಟು ಹಗುರವಾಗಿ, ನಯವಾಗುತ್ತದೆ. ನೀವು ಒಂದು ಸೆಕೆಂಡ್​ ಸಹ ಅದನ್ನು ಕಲಸುವಾಗ ತಪ್ಪು ಮಾಡಿದರೆ, ನಿಮ್ಮ ಜಾಮೂನಿನ ಹದ ಬರುವುದಿಲ್ಲ, ಇದರಿಂದ ಅದರ ರುಚಿ ಹಾಳಾಗುತ್ತದೆ.




ಇದನ್ನು ಮಿಶ್ರಣ ಮಾಡುವಾಗ ನೆನಪಿರಲಿ ಹೆಚ್ಚು ಹಾಲನ್ನು ಸೇರಿಸಬೇಡಿ. ಅದು ಹಿಟ್ಟು ನೀರು ನೀರಾಗಲು ಕಾರಣವಾಗುತ್ತದೆ. ಹಾಗೆಯೇ, ನೀರನ್ನು ಸಹ ಸೇರಿಸಬೇಡಿ.  ಈ ಮಧ್ಯೆ, ಗುಲಾಬ್ ಜಾಮೂನ್‌ಗೆ ಬೇಕಾದ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ.




ಒಂದು ಪಾತ್ರೆಯನ್ನು ತೆಗೆದುಕೊಳ್ಳಿ, ಅದಕ್ಕೆ ನೀರನ್ನು ಸುರಿಯಿರಿ ಮತ್ತು ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ಚೆನ್ನಾಗಿ ಕುದಿಸಿ ಮತ್ತು ಸಕ್ಕರೆ ಚೆನ್ನಾಗಿ ಕರಗುವಂತೆ ನೋಡಿಕೊಳ್ಳಿ. ಅದು ಕರಗಿದ ನಂತರ, ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ಮತ್ತು ಈ ಮಿಶ್ರಣವನ್ನು ದಪ್ಪವಾಗುವವರೆಗೆ ಇರಿಸಿ. ಸಕ್ಕರೆ ಪಾಕದ ಹದಕ್ಕೆ ಬಂದ ನಂತರ ಗ್ಯಾಸ್​ ಆಫ್ ಮಾಡಿ.




ಇದನ್ನೂ ಓದಿ: ಅತಿಯಾಗಿ ವಿಡಿಯೋ ಗೇಮ್ ಆಡಿದ್ರೆ ಮಕ್ಕಳ ಹೃದಯಕ್ಕೆ ಅಪಾಯವಂತೆ


ಈಗ ಈಗಾಗಲೇ ತಯಾರಿಸಿಕೊಂಡ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಹಿಟ್ಟನ್ನು ನಿಮ್ಮ ಕೈಗಳ ಮಧ್ಯೆ ಇರಿಸಿ ಮತ್ತು ಅದನ್ನು ಸುತ್ತಿ, ಉಂಡೆ ಮಾಡಿ. ಅದನ್ನು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ತೆಗೆದುಕೊಂಡು, ಅದನ್ನು ಬಿಸಿ ಮಾಡಿ.




ಈ ಉಂಡೆಗಳನ್ನು ಚೆನ್ನಾಗಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಒಂದು ಪೇಪರ್ ಅಥವಾ ಟಿಶ್ಯೂ ಪೇಪರ್ ತೆಗೆದುಕೊಂಡು ಅದನ್ನು ಒಂದು ಪ್ಲೇಟ್​ ಮೇಲೆ ಹಾಕಿ. ಅದರ ಮೇಲೆ ಈ ಉಂಡೆಗಳನ್ನು ಹಾಕಿ. ಆಗ, ಅದರಲ್ಲಿರುವ ಎಣ್ಣೆ ಹೀರಿಕೊಳ್ಳುತ್ತದೆ.


ಈ ಉಂಡೆಗಳನ್ನು ಈಗಾಗಲೇ ತಯಾರಿಸಿಕೊಂಡಿರುವ ಸಕ್ಕರೆ ಪಾಕಕ್ಕೆ ಸೇರಿಸಿ ಮತ್ತು ಅದನ್ನು ಸ್ವಲ್ಪ ಬಿಸಿ ಮಾಡಬಹುದು. ಸುಮಾರು 2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಿ ನಂತರ, ಸ್ಟವ್ ಆಫ್ ಮಾಡಿ.


ಇದನ್ನೂ ಓದಿ: ಸೌತೆಕಾಯಿ ಆರೋಗ್ಯಕರ ಅಂತ ಜಾಸ್ತಿ ತಿನ್ಬೇಡಿ, ಕಿಡ್ನಿ ಸಮಸ್ಯೆ ಬರಬಹುದು


ಈ ಉಂಡೆಗಳನ್ನು ಈ ಸಕ್ಕರೆ ಪಾಕದಲ್ಲಿ ಸುಮಾರು ಒಂದು ಗಂಟೆ ನೆನೆಸಿಡಬೇಕು. ಸಕ್ಕರೆ ಪಾಕದಲ್ಲಿ ನೆನೆಸಿದ ನಂತರ, ಉಂಡೆಗಳು ಮೃದುವಾಗಿ ಮತ್ತು ಸಿಹಿಯಾಗುತ್ತವೆ. ಈಗ, ಗುಲಾಬ್​ ಜಾಮೂನ್ ನೀವು ಸವಿಯಲು ಸಿದ್ಧವಾಗಿದೆ. ನೀವು ಅದನ್ನು ಬಿಸಿಯಾಗಿ ಅಥವಾ ತಣ್ಣಗಾದ ನಂತರ ತಿನ್ನಬಹುದು.

Published by:Sandhya M
First published: