Blue Food: ಬಟರ್‌ಫ್ಲೈ ಬಟಾಣಿ ಹೂವಿನ ಬಗ್ಗೆ ಕೇಳಿದ್ದೀರಾ? ಅದರ ಪ್ರಯೋಜನಗಳು ಇಲ್ಲಿದೆ

ನೀಲಿ ಬಣ್ಣ ನೋಡಲು ಸುಂದರವಾಗಿದ್ದರೂ ಯಾವುದೇ ಹಣ್ಣು ಅಥವಾ ತರಕಾರಿಗಳು ನೈಸರ್ಗಿಕವಾಗಿ ನೀಲಿ ಬಣ್ಣ (Blue Color) ಇಲ್ಲದಿರುವ ಕಾರಣ ಈ ಬಣ್ಣದ ಆಹಾರದ ಅಡುಗೆಯನ್ನು ನಾವು ಎಲ್ಲೂ ಕಾಣುವುದೇ ಇಲ್ಲ. ಆದರೆ ನೀಲಿ ಬಣ್ಣ ಹೊಂದಿದ ಆಹಾರ ತಯಾರಿಸಬಹುದು ಎಂಬುದಕ್ಕೆ ಬಟರ್‌ಫ್ಲೈ ಬಟಾಣಿ ಹೂ (Butterfly Pea Flower) ಈಗ ಸಾಕ್ಷಿಯಾಗುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಹಾರದಲ್ಲಿ ಹಲವು ಬಣ್ಣಗಳಿಂದ (Color) ಕೂಡಿದ ಅಡುಗೆಗಳನ್ನು ನೋಡಿಯೇ ಇರ್ತಿವಿ. ಹೆಚ್ಚು ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಅಡುಗೆ ಆಹಾರಗಳಿರುವುದು ವಿಶೇಷ. ಇನ್ನು ನೀಲಿ ಬಣ್ಣ ಎಲ್ಲರಿಗೂ ಇಷ್ಟವಾಗುವ ಬಣ್ಣವೇ ಸರಿ. ಆದರೆ ಅಡುಗೆಯಲ್ಲಿ ಈ ಬಣ್ಣದ ಆಹಾರ (Food) ನಾವು ನೋಡಿದ್ದೀವಾ ಅನ್ನೊ ಪ್ರಶ್ನೆ ಈಗ ಕಾಡುತ್ತೆ. ಹೌದು ನೀಲಿ ಬಣ್ಣ ನೋಡಲು ಸುಂದರವಾಗಿದ್ದರೂ ಯಾವುದೇ ಹಣ್ಣು ಅಥವಾ ತರಕಾರಿಗಳು ನೈಸರ್ಗಿಕವಾಗಿ ನೀಲಿ ಬಣ್ಣ (Blue Color) ಇಲ್ಲದಿರುವ ಕಾರಣ ಈ ಬಣ್ಣದ ಆಹಾರದ ಅಡುಗೆಯನ್ನು ನಾವು ಎಲ್ಲೂ ಕಾಣುವುದೇ ಇಲ್ಲ. ಆದರೆ ನೀಲಿ ಬಣ್ಣ ಹೊಂದಿದ ಆಹಾರ ತಯಾರಿಸಬಹುದು ಎಂಬುದಕ್ಕೆ ಬಟರ್‌ಫ್ಲೈ ಬಟಾಣಿ ಹೂ (Butterfly Pea Flower) ಈಗ ಸಾಕ್ಷಿಯಾಗುತ್ತಿದೆ.

ಈ ಹೂವೇ ಯಾಕೆ?
ಕ್ಲೈಟೋರಿಯಾ ಟೆರ್ನಾಟಿಯಾ ಎಂದೂ ಕರೆಯಲಾಗುವ ಈ ಹೂವನ್ನು ಕತ್ತರಿಸಿದಾಗ ಅಥವಾ ನೀರಿನಲ್ಲಿ ಬೇಯಿಸಿದಾಗ ಇದು ಸುಂದರವಾದ ನೀಲಿ ಬಣ್ಣವನ್ನು ಬಿಡುಗಡೆ ಮಾಡುತ್ತದೆ. ಅದಕ್ಕೆ ನೀಲಿ ಬಣ್ಣದ ಅಡುಗೆ ತಯಾರಿಸಲು ಇದು ಸೂಕ್ತ. ನಿಮ್ಮ ಆಹಾರಗಳಿಗೆ ಉತ್ತಮ ಪೋಷಕಾಂಶಗಳ ಜೊತೆಗೆ ನೈಸರ್ಗಿಕವಾದ ಬಣ್ಣವನ್ನು ಎಲ್ಲರಿಗೂ ಪರಿಚಯಿಸಲು ನಿಮಗೆ ಇದು ಅವಕಾಶವನ್ನು ನೀಡುತ್ತದೆ. ಇವನ್ನು ಸಾಮಾನ್ಯವಾಗಿ ನೀಲಿ ಬಟಾಣಿ ಹೂಗಳು ಎಂದು ಕರೆಯುತ್ತಾರೆ. ಇವು ಅತ್ಯಂತ ಸುಂದರವಾದ ನೀಲಿ ಬಣ್ಣವನ್ನು ನಿಮ್ಮ ಆಹಾರದಲ್ಲಿ ಬೆರೆಸುತ್ತವೆ.

ಇವುಗಳು ಆಂಥೋಸಯಾನಿನ್‌ಗಳನ್ನು ಒಳಗೊಂಡಿರುತ್ತವೆ. ಅದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಆರೋಗ್ಯದ ಹಿತದೃಷ್ಟಿಯಿಂದ ಇದು ಬಹಳ ಒಳ್ಳೆಯ ಹೂ ಆಗಿದೆ. ನಿಜ ಹೇಳಬೆಕೆಂದರೆ ಅನೇಕರು ಇದನ್ನು ನೈಸರ್ಗಿಕ ಪ್ಯಾರೆಸಿಟಮಾಲ್ ಎಂದು ಹೇಳುತ್ತಾರೆ. ಆದ್ದರಿಂದ, ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಿಗುವ ಈ ಕುತೂಹಲಕಾರಿ ಹೂ ಜೊತೆಗೆ ಅಡುಗೆ ಮಾಡಬೇಕೆಂದು ಅಂದುಕೊಂಡರೆ ಕೆಲವು ರೆಸಿಪಿಗಳು ನಿಮಗಾಗಿ ಇಲ್ಲಿವೆ.

ಆ ರೆಸಿಪಿಗಳು ಯಾವುವು? ತಿಳಿಯೋಣ ಬನ್ನಿ
1. ತೆಂಗಿನ ಹಾಲಿನೊಂದಿಗೆ ಬಟರ್‌ಫ್ಲೈ ಹೂವಿನ ಜೆಲ್ಲಿ
ಇದು ಒಂದು ಸಿಹಿ ಖಾದ್ಯವಾಗಿದ್ದು, ಈ ಸಿಹಿ ಖಾದ್ಯವನ್ನು ತಯಾರಿಸಲು ಈ ಹೂವನ್ನು ಈಗಾಗಲೇ ಹಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಇದನ್ನು ನೀವು ತೆಂಗಿನ ಹಾಲು ಮತ್ತು ನೀಲಿ ಜೆಲ್ಲಿಯನ್ನು ಸೇರಿಸಿ ತಯಾರಿಸಬಹುದು. ಈ ಸಿಹಿ ಖಾದ್ಯವು ಮನುಷ್ಯರ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Belly Fat: ಹೊಟ್ಟೆ ಬೊಜ್ಜು ಕರಗಿಸಲು ಆಪಲ್ ಸೈಡರ್ ವಿನೆಗರ್ ಹೇಗೆ ಸಹಕಾರಿ?

2. ಬಟರ್‌ಫ್ಲೈ ಹೂವಿನ ಫ್ರೈಡ್‌ ರೈಸ್‌
ಇದನ್ನು ತಯಾರಿಸುವುದು ಇನ್ನು ಸುಲಭ. ಅಕ್ಕಿಯನ್ನು ನೆನೆ ಹಾಕಿ ಆನಂತರ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ಒಣಗಿದ ಬಟರ್‌ಫ್ಲೈ ಬಟಾಣಿ ಹೂಗಳನ್ನು ಹಾಕಿ ಅನ್ನವನ್ನು ತಯಾರಿಸಲಾಗುತ್ತದೆ. ಇದಕ್ಕೆ ನೀವು ಬೇಕಾದರೆ ಸ್ವಲ್ಪ ಒಗ್ಗರಣೆ ಕೂಡ ಹಾಕಿಕೊಂಡು ಚೆನ್ನಾಗಿ ಸವಿಯಬಹುದು.

3. ಬಟರ್‌ಫ್ಲೈ ಬಟಾಣಿ ಹೂವಿನ ಚಹಾ
ಇದು ಒಂದು ಹರ್ಬಲ್‌ ಚಹಾ ಆಗಿದ್ದು, ಇದರಲ್ಲಿ ಅನೇಕ ನೈಸರ್ಗಿಕ ಗುಣಗಳು ಇರುವುದರಿಂದ ಮಳೆಗಾಲದ ಸಮಯಕ್ಕೆ ಇದು ಹೇಳಿ ಮಾಡಿಸದಂತಹ ಹರ್ಬಲ್‌ ಚಹಾ ಆಗಿದೆ. ಇದು ನೋಡಲು ಸುಂದರವಾಗಿರುವಂತೆ ಕುಡಿದರೂ ಕೂಡ ಅನೇಕ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆಯುತ್ತೇವೆ. ಇದು ಬೇರೆ ಚಹಾ ಮತ್ತು ಕಾಫಿಗಳಲ್ಲಿ ಹೊಂದಿರುವ ಕೆಫಿನ್‌ಗಳನ್ನು ಹೊಂದಿಲ್ಲ. ಹಾಗೆಯೇ ಇದು ಸಂಪೂರ್ಣ ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ತ್ವಚೆಯ ಕಾಂತಿ, ಒತ್ತಡ ನಿವಾರಣೆಯಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಮತ್ತು ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ.

ಇದನ್ನೂ ಓದಿ: Jamun: ಮಧುಮೇಹ ನಿಯಂತ್ರಿಸುವಲ್ಲಿ ನೇರಳೆ ಹಣ್ಣುಗಳು ಎತ್ತಿದ ಕೈ: ಇದನ್ನು ಈ ರೀತಿಯಾಗಿ ಸೇವಿಸಿ

4. ಬಟರ್‌ಫ್ಲೈ ಬಟಾಣಿ ಹೂವಿನ ಕೇಕ್‌
ಈ ಹೂವನ್ನು ಬಳಸಿ ಕೇಕ್‌ ಮಾಡುವುದರಿಂದ ಇದು ನೈಸರ್ಗಿಕ ನೀಲಿ ಬಣ್ಣವನ್ನು ಹೊಂದಿದ್ದು, ನೋಡಲು ಸುಂದರವಾಗಿರುವುದು ಅಲ್ಲದೇ, ಇದರಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ದೇಹದ ಊರಿಯೂತದ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ಚರ್ಮದ ಆರೈಕೆಯಲ್ಲೂ ಸಹ ಇದು ಹಿಂದೆ ಬಿದ್ದಿಲ್ಲ.
Published by:Ashwini Prabhu
First published: