Breakfast Recipe: ಮಕ್ಕಳು ತಿಂಡಿ ತಿನ್ನೋಕೆ ಹಠ ಮಾಡ್ತಿದ್ರೆ ಸೂಪರ್ ಟೇಸ್ಟೀ ಬೀಟ್​ರೂಟ್​ ಚಪಾತಿ ಮಾಡಿ ಕೊಡಿ

Beetroot Chapati Recipe: ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಚಪಾತಿ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ. ಚಪಾತಿ ಮಾಡುವುದರಲ್ಲಿ ಸಹ ಹಲವಾರು ವಿಧಗಳಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಚಪಾತಿ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ. ಚಪಾತಿ ಮಾಡುವುದರಲ್ಲಿ ಸಹ ಹಲವಾರು ವಿಧಗಳಿದೆ. ಇನ್ನೊಂದು ರುಚಿಕರ ಚಪಾತಿ ಎಂದರೆ ಬೀಟ್​ರೂಟ್​ ಚಪಾತಿ.

ಬೀಟ್​ರೂಟ್​ ಚಪಾತಿ ಮಾಡಲು ಬೇಕಾಗುವ ಸಾಮಾಗ್ರಿಗಳು 

ಗೋಧಿ ಹಿಟ್ಟು - 2 ಕಪ್

ಜೀರಿಗೆ - ಒಂದು ಚಮಚ

ಕಾಯಿತುರಿ: ಒಂದು ಕಪ್

ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿಕೊಳ್ಳಿ.

ಅಡುಗೆ ಎಣ್ಣೆ - ಎರಡು ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬೀಟ್​ರೂಟ್​ ಚಪಾತಿ ಮಾಡುವ ವಿಧಾನ

ಮೊದಲು ಬೀಟ್​ರೂಟ್​ ಅನ್ನು ತುರಿದುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಸ್ವಲ್ಪ ಉಪ್ಪು ಹಾಗೂ ಎಣ್ಣೆ ಹಾಕಿ ಕಲಸಿಕೊಳ್ಳಿ. ಅದಕ್ಕೆ  ಜೀರಿಗೆ, ಕಾಯಿತುರಿ, , ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ  ಅಗತ್ಯವಿದ್ದರೆ ಹಿಟ್ಟು ಹಾಕಿ, ಇಲ್ಲದಿದ್ದರೆ ನೀರು ಹಾಕಿ ಚೆನ್ನಾಗಿ ಕಲಸಿ.

ಇದನ್ನೂ ಓದಿ: ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಹೈರಾಣಾಗಿದ್ರೆ ಈ ಸೂಪರ್ ಟಿಪ್ಸ್ ಟ್ರೈ ಮಾಡಿ

ಒಟ್ಟಿಗೆ ನೀರು ಹಾಕುವ ಬದಲು ಅದರ ಮಧ್ಯೆ ನೀವು ಸ್ವಲ್ಪ ಸ್ವಲ್ಪವಾಗಿಯೇ ನೀರು ಸೇರಿಸುತ್ತಾ ಹೋಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನೀರು ಹೆಚ್ಚಾಗದಂತೆ ಎಚ್ಚರವಹಿಸಿ, ಹೆಚ್ಚಾದರೆ ತಟ್ಟಲು ಬರುವುದಿಲ್ಲ. ಮಸಾಲೆಗಳು ಇರುವ ಕಾರಣ ಇದನ್ನು ಲಟ್ಟಿಸುವುದು ಕಷ್ಟವಾಗಬಹುದು. ಹಾಗಾಗಿ ತಟ್ಟುವುದು ಸೂಕ್ತ.

ಈಗ  ಈಗ ಒಂದು ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ,. ಪ್ಯಾನ್ ಕಾದ ನಂತರ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ಚಪಾತಿಯನ್ನು  ತಟ್ಟಿ. ಇಲ್ಲ ನಿಮಗೆ ಸಾಧ್ಯವಾಗುವುದಾದರೆ ಅದನ್ನು ಲಟ್ಟಿಸಿ, ನಂತರ ಅದನ್ನು ಕಾವಲಿ ಮೇಲೆ ಹಾಕಿ ಚನ್ನಾಗಿ ಬೇಯಿಸಿದರೆ ರುಚಿ ರುಚಿಯಾದ ಬೀಟ್​ರೂಟ್​ ಚಪಾತಿ ರೆಡಿ.

ಇದನ್ನೂ ಓದಿ: ಪಾರ್ಟಿ ಹ್ಯಾಂಗೋವರ್​ ಹೋಗೋಕೆ ಇಲ್ಲಿದೆ ಸುಲಭ ಟ್ರಿಕ್ಸ್

ಮತ್ತೊಂದು ವಿಚಾರ ಎಂದರೆ ನೀವು ಗೋಧಿ ಹಿಟ್ಟಿನ ಜೊತೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸಹ ಸೇರಿಸಬಹುದು. ಅಥವಾ ಬರೀ ಅಕ್ಕಿ ಹಿಟ್ಟಿನಲ್ಲಿ ಸಹ ಮಾಡಬಹುದು. ಅದು ಅಕ್ಕಿ ರೊಟ್ಟಿಯಾಗುತ್ತದೆ. ಇದನ್ನು ಕಾಯಿ ಚಟ್ನಿ ಹಾಗೂ ಸಾಂಬಾರ್ ಜೊತೆ ಸವಿಯಬಹುದು.
Published by:Sandhya M
First published: