Avalakki Payasa: ವಿಜಯದಶಮಿ ಹಬ್ಬಕ್ಕೆ ಸ್ಪೆಷಲ್​ ಅವಲಕ್ಕಿ ಪಾಯಸ ಟ್ರೈ ಮಾಡಿ

Food Recipe: ವಿಭಿನ್ನವಾದ ರುಚಿಯಿರುವ ಈ ಅವಲಕ್ಕಾಗಿ ಪಾಯಸ  ಈ ವಿಜಯದಶಮಿ ದಿನಕ್ಕೆ ನಿಜಕ್ಕೂ ವಿಶೇಷ.  ಹಬ್ಬದ ಈ ಸಡಗರ ಸಂಭ್ರಮದಂದು ಈ ಅವಲಕ್ಕಿ ಪಾಯಸ ಟ್ರೈ ಮಾಡಿ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬಗಳು(Festival) ಬಂದರೆ ಸಿಹಿ ಮಾಡಬೇಕು. ಇಂದಿನ ದಿನ ಸಿಹಿ ತಿನಿಸುಗಳನ್ನು ಎಷ್ಟೇ ಮಾಡಿದ್ರೂ ಸಹ ಮಕ್ಕಳು ತಿನ್ನುವುದಿಲ್ಲ. ಒಂದು ಪದಾರ್ಥ ಒಬ್ಬರಿಗೆ ಇಷ್ಟವಾದ್ರೆ ಇನ್ನೊಂದು ಇನ್ನೊಬ್ಬರಿಗೆ. ಆದರೆ ಈ ಅವಲಕ್ಕಿ ಪಾಯಸ(Avalakki Payasa) ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ವಿಭಿನ್ನವಾದ ರುಚಿಯಿರುವ ಈ ಅವಲಕ್ಕಿ ಪಾಯಸ  ಈ ವಿಜಯದಶಮಿ ದಿನಕ್ಕೆ ನಿಜಕ್ಕೂ ವಿಶೇಷ.  ಹಬ್ಬದ ಈ ಸಡಗರ ಸಂಭ್ರಮದಂದು ಈ ಅವಲಕ್ಕಿ ಪಾಯಸ ಟ್ರೈ ಮಾಡಿ.  

ಅವಲಕ್ಕಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

ಕೊಬ್ಬರಿ ತುರಿ – 1 ಕಪ್ಗಟ್ಟಿ ಅವಲಕ್ಕಿ- ಅರ್ಧ ಕಪ್
ಬೆಲ್ಲ – 3 ಅಚ್ಚು ಅಥವಾ ಸಕ್ಕರೆ
ಏಲಕ್ಕಿ – 2-3
ಗೋಡಂಬಿ – ದ್ರಾಕ್ಷಿ – 50 ಗ್ರಾಂ
ಶ್ಯಾವಿಗೆ – 100 ಗ್ರಾಂ
ಕಡ್ಲೆಬೇಳೆ – ಸ್ವಲ್ಪ(ಬೇಕಿದ್ದರೆ)

ಹೆಸರು ಬೇಳೆ – 50 ಗ್ರಾಂ.
9. ತುಪ್ಪ – 2-3 ಚಮಚ

ಹಾಲು- ಅರ್ಧ ಕಪ್

 ಮಾಡುವ ವಿಧಾನ

ಇದನ್ನೂ ಓದಿ: ವಿಜಯದಶಮಿ ದಿನ ಶಮಿ ಮರವನ್ನು ಪೂಜಿಸುವುದು ಏಕೆ ಗೊತ್ತಾ? ಈ ದಿನ ಮಹತ್ವವೇನು?

ಮೊದಲು ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ ಹಾಗೆಯೇ  ಒಂದು ಬದಿಯಲ್ಲಿ ಇಡಿ. ಅದನ್ನು ಹೆಚ್ಚು ಹೊತ್ತು ನೆನಸುವುದು ಕೂಡ ಒಳ್ಳೆಯದಲ್ಲ.  ಹೆಚ್ಚು ಮೆತ್ತಾಗಾಗಬಾರದು. ಯಾಕೆಂದರೆ ಹೆಚ್ಚು ಮೆತ್ತಾಗಾದರೆ ಕರಗಿಬಿಡುತ್ತದೆ.   ಮೊದಲು ಪ್ಯಾನ್‌ ತೆಗೆದುಕೊಳ್ಳಿ, ನಂತರ ಅದಕ್ಕೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಇಟ್ಟುಕೊಳ್ಳಿ. ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದರೆ ಪಾಯಸದ ರುಚಿ ಹೆಚ್ಚಾಗುತ್ತದೆ.

ನಂತರ ಎರಡು ದೊಡ್ಡ ಕಪ್ ಹಾಲು ಹಾಕಿ ಕುದಿಸಿ, ಅದಕ್ಕೆ  ಅರ್ಧ ಕಪ್ ಸಕ್ಕರೆ ಹಾಕಿ ಚನ್ನಾಗಿ ಕುದಿಸಿ.  ಇನ್ನು ನಿಮಗೆ ಬೇಕಿದ್ದಲ್ಲಿ ಅಂದರೆ ಕೇವಲ ಅವಲಕ್ಕಿ ಪಾಯಸ ಇಷ್ಟವಿಲ್ಲ ಎಂದಲ್ಲಿ ಅದಕ್ಕೆ ಹೆಸರುಬೇಳೆಯನ್ನು ಬೇಳೆಯನ್ನು ಬೇಯಿಸಿ ಸೇರಿಸಿ. ಈಗ ನೆನೆಸಿದ ಹಾಕಿದ ಅವಲಕ್ಕಿ ಹಾಕಿ ಮಿಕ್ಸ್ ಮಾಡಿ ನಂತರ  ಗ್ಯಾಸ್​ ಆಫ್ ಮಾಡಿ. ಹಾಲು ಚನ್ನಾಗಿ. ಅವಲಕ್ಕಿ ಹಾಕಿದ ಮೇಲೆ ಅದನ್ನು ಹೆಚ್ಚು ಹೊತ್ತು ಕುದಿಯಲು ಬಿಡಬಾರದು. ನಂತರ ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿಯಿಂದ ಅಲಂಕಾರ ಮಾಡಿದರೆ ಅವಲಕ್ಕಿ ಪಾಯಸ ಸವಿಯಲು ರೆಡಿ.
Published by:Sandhya M
First published: