ಈ ಮಕ್ಕಳಿಗೆ ತಿನ್ನಲು ಜಾಮ್ (Jam) ಕೊಟ್ಟರೆ ಅದನ್ನು ಹಾಗೆಯೇ ತಿನ್ನುತ್ತಾರೆ. ಜಾಮ್ ಎಂದರೆ ಸಾಕು, ತಿನ್ನಲು ಏನೇ ಕೊಟ್ಟರೂ ಬೇಡ ಎನ್ನುವ ಮಕ್ಕಳು (Children) ಬಾಯಿ ಮುಚ್ಚಿಕೊಂಡು ತಿನ್ನುತ್ತಾರೆ. ಅಂಗಡಿಗಳಲ್ಲಿ ಮಾರಾಟವಾಗುವ ಜಾಮ್ಗಳಿಗೆ ಅನೇಕ ಕೃತಕ ಸುವಾಸನೆ ಮತ್ತು ಕೃತಕ ಬಣ್ಣಗಳು ದೇಹಕ್ಕೆ ಹಾನಿಕಾರಕವಾಗಿದೆ. ನೀವು ಮನೆಯಲ್ಲಿಯೆ ವಿವಿಧ ರೀತಿಯ ಜಾಮ್ಗಳನ್ನು ತಯಾರು ಮಾಡುವುದು. ಇದು ಆರೋಗ್ಯಕರ (Healthy) ಕೂಡ. ಅಲ್ಲದೇ, ನೀವು ಇದನ್ನು ತಯಾರಿಸುವಾಗನೀವು ಯಾವುದೇ ಕೃತಕ ಬಣ್ಣವನ್ನು ಬಳಸುವುದರಿಂದ ನಿಮಗೆ ಮಾತ್ರವಲ್ಲದೇ, ಮಕ್ಕಳಿಗೆ ಸಹ ಇದು ಸುರಕ್ಷಿತ. ನೀವು ಮನೆಯಲ್ಲಿ ಆಪಲ್ ಜಾಮ್, (Apple Jam) ಟೊಮ್ಯಾಟೊ ಜಾಮ್, ಮಿಕ್ಸ್ ಫ್ರೂಟ್ಸ್ ಜಾಮ್, ಪೇರಲೆ, ಸ್ಟ್ರಾಬೆರಿ ಹೀಗೆ ವಿವಿಧ ರೀತಿಯಾಗಿ ಮಾಡಬಹುದು.
ಆಪಲ್ ಜಾಮ್ ಬಹಳ ಫೇಮಸ್, ಇದನ್ನು ಮಾಡುವುದು ಸಹ ಬಹಳ ಸುಲಭ. ಆದ್ದರಿಂದ ನೀವು ಮನೆಯಲ್ಲಿಯೇ ಆಪಲ್ ಜಾಮ್ ಅನ್ನು ಸುಲಭವಾದ ರೀತಿಯಲ್ಲಿ ಮಾಡಬಹುದು. ಹೇಗೆ ಮಾಡುವುದು ಎಂಬುದು ಇಲ್ಲಿದೆ.
ಆ್ಯಪಲ್ ಜಾಮ್ ಮಾಡಲು ಅಗತ್ಯವಿರುವ ವಸ್ತುಗಳು
ಸೇಬು - 2
ಸಕ್ಕರೆ - 1 ಕಪ್
ನಿಂಬೆ - 1/2 ಹಣ್ಣು
ದಾಲ್ಚಿನ್ನಿ ಪುಡಿ – 1 ಚಮಚ
ಈ ಆ್ಯಪಲ್ ಜಾಮ್ ಅನ್ನು ನೀವು ಮೊದಲ ಬಾರಿಗೆ ಮಾಡುತ್ತಿದ್ದರೆ, ಕೇವಲ 2 ಹಣ್ಣು ಬಳಸಿ ಮಾಡುವುದು ಸೂಕ್ತ. ಅಭ್ಯಾಸವಾಗುವ ತನಕ ಕಡಿಮೆ ಪ್ರಮಾಣದಲ್ಲಿ ಮಾಡಿದರೆ, ವೇಸ್ಟ್ ಆಗುವುದಿಲ್ಲ.
ಆ್ಯಪಲ್ ಜಾಮ್ ಮಾಡುವ ವಿಧಾನ
ಮೊದಲು ಸೇಬು ಹಣ್ಣುಗಳನ್ನು ತೊಳೆದುಕೊಂಡು ಸ್ವಚ್ಛ ಮಾಡಿಕೊಳ್ಳಿ. ನಂತರ, ಅವುಗಳನ್ನು ಸಿಪ್ಪೆ ತೆಗೆದು, ಒಂದು ಕ್ಲೀನ್ ಚಾಪಿಂಗ್ ಬೋರ್ಡ್ ಬಳಸಿ, ಅವುಗಳನ್ನು ಕತ್ತರಿಸಿಕೊಳ್ಳಿ. ನಿಮಗೆ ಯಾವ ಆಕಾರದಲ್ಲಿ ಬೇಕಾದರೂ ಸದನ್ನು ಹೆಚ್ಚಿಕೊಳ್ಳಬಹುದು. ಈಗ ಅದನ್ನು ಒಂದು ಬದಿಗೆ ಇರಿಸಿಕೊಳ್ಳಿ.
ಈಗ ಒಂದು ಪ್ಯಾನ್ ತೆಗೆದುಕೊಳ್ಳಿ, ಮಧ್ಯಮ ಉರಿಯಲ್ಲಿ ಆಳವಾದ ತಳದ ಈ ಪ್ಯಾನ್ ಅನ್ನು ಸ್ವಲ್ಪ ಕಾಯಿಸಿ. ನಂತರ ಅದರಲ್ಲಿ ಸಕ್ಕರೆ ಸೇರಿಸಿ. ಮಿಶ್ರಣದ ಸ್ಥಿರತೆ ದಪ್ಪವಾಗುವವರೆಗೆ ಅದನ್ನು ಕಲಸುತ್ತಿರಿ. ಯಾವುದೇ ಕಾರಣಕ್ಕೂ ನೀರನ್ನು ಹಾಕಬೇಡಿ. ಇದು ಜಾಮ್ ಹಾಳಾಗಲು ಕಾರಣವಾಗುತ್ತದೆ.
ಇದನ್ನೂ ಓದಿ: ದಾಳಿಂಬೆ ಜ್ಯೂಸ್ ಪ್ರತಿದಿನ ಸೇವನೆ ಮಾಡಿದ್ರೆ ಕ್ಯಾನ್ಸರ್ ಹತ್ತಿರವೂ ಸುಳಿಯಲ್ಲ
ಈಗ ಸಕ್ಕರೆ ಮಿಶ್ರಣ ದಪ್ಪವಾದ ನಂತರ, ಆ ಮಿಶ್ರಣಕ್ಕೆ ಕತ್ತರಿಸಿದ ಸೇಬು ಹಣ್ಣುಗಳನ್ನು ಸೇರಿಸಿ ನಂತರ ದಾಲ್ಚಿನ್ನಿ ಪುಡಿಯನ್ನು ಎಚ್ಚರಿಕೆಯಿಂದ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಗ್ಯಾಸ್ ಉರಿಯನ್ನು ಕಡಿಮೆ ಮಾಡಿ ಈ ಮಿಶ್ರಣವನ್ನು ಅರ್ಧ ಘಂಟೆಯವರೆಗೆ ಬೇಯಲು ಬಿಡಿ.
ಅರ್ಧ ಗಂಟೆಯ ನಂತರ ಮರದ ಚಮಚವನ್ನು ಬಳಸಿ, ಆ ಮಿಶ್ರಣದಲ್ಲಿ ಇರುವ ಸೇಬು ಹಣ್ಣಿನ ತುಂಡುಗಳನ್ನು ಎಚ್ಚರಿಕೆಯಿಂದ ಮ್ಯಾಶ್ ಮಾಡಿ. ಈ ಮಿಶ್ರಣ ಜಾಮ್ ರೀತಿ ದಪ್ಪವಾಗುವಂತೆ ಚೆನ್ನಾಗಿ ಬೇಯಿಸಿ. ಅದು ದಪ್ಪವಾಗುವ ವರೆಗೂ ಕಲಸಿ.
ನಿಮ್ಮ ಪಾತ್ರೆ ತಳ ಹಿಡಿಯದಂತೆ ನೋಡಿಕೊಳ್ಳಿ. ಇನ್ನೂ ಕೆಲವು ನಿಮಿಷ ಬೇಯಿಸಿ, ನಿಮ್ಮ ಜಾಮ್ ಗಟ್ಟಿಯಾಗುವವರೆಗೆ ಬೇಕಾದರೆ ನಿಂಬೆರಸವನ್ನು ಹಾಕಬಹುದು. ನಂತರ ಗ್ಯಾಸ್ ಆಫ್ ಮಾಡಿ ಮತ್ತು ಜಾಮ್ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ನಿಮ್ಮ ಮನೆಯಲ್ಲಿ ತಯಾರಿಸಿದ ಆಪಲ್ ಜಾಮ್ ಅನ್ನು ಏರ್ ಟೈಟ್ ಕಂಟೇನರ್ಗೆ ಹಾಕಿ, ಬಳಸಬಹುದು.
ಇದನ್ನೂ ಓದಿ: ನಿಮ್ಮ ಡ್ರಿಂಕ್ಸ್ ಜೊತೆ ಈ ಆಹಾರಗಳನ್ನು ತಿನ್ಬೇಡಿ, ಆರೋಗ್ಯ ಹಾಳಾಗುತ್ತೆ
ಈ ಜಾಮ್ ಅನ್ನು ನೀವು ಬೆಳಗ್ಗೆ ತಿಂಡಿಗೆ ಮಾತ್ರವಲ್ಲದೇ, ಮಕ್ಕಳಿಗೆ ನಾಲಿಗೆ ಹಾಳಾದಾಗ ಸಹ ಒಂದು ಚಮಚ ನೀಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ