Andhra Style ದೋಸೆಯನ್ನು ಮನೆಯಲ್ಲೇ ತಯಾರಿಸಿ ಸವಿಯಿರಿ: ಇಲ್ಲಿದೆ ರೆಸಿಪಿ

ಬೆಳಗಿನ ಉಪಾಹಾರಕ್ಕೆ ದೋಸೆ ತಿನ್ನುವುದು ನಿಮಗೆ ಇಷ್ಟ ಎಂದಾದಲ್ಲಿ, ನಾವು ನಿಮಗಾಗಿ ಪರಿಪೂರ್ಣವಾದ ಆಂಧ್ರ ಶೈಲಿಯ ದೋಸೆಯ ಪಾಕ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತೇವೆ. ಈ ಪಾಕ ವಿಧಾನದಿಂದ ಮನೆಯಲ್ಲಿಯೇ ಆಂಧ್ರ ಶೈಲಿಯ ಗರಿಗರಿಯಾದ ದೋಸೆ ಮಾಡಿಕೊಂಡು ಸವಿಯಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿದಿನದ ಉಪಾಹಾರ ಎಲ್ಲರಿಗೂ ತುಂಬಾನೇ ಪ್ರಿಯವಾಗಿರುತ್ತದೆ, ಏಕೆಂದರೆ ದಿನದ ಮೊದಲ ಊಟವನ್ನು ಉಪಾಹಾರ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದರಲ್ಲೂ ನಮಗೆ ದೋಸೆ  (Dosa) ಎಂದರೆ ತುಂಬಾನೇ ಅಚ್ಚು ಮೆಚ್ಚಿನ ಉಪಾಹಾರ ಎಂದರೆ ಅತಿಶಯೋಕ್ತಿಯಲ್ಲ. ಇತ್ತೀಚಿನ ದಿನಗಳಲ್ಲಿ, ನಾವು ವಿವಿಧ ರೀತಿಯ ಉಪಾಹಾರ ಪಾಕ ವಿಧಾನಗಳನ್ನು ಮನೆಯಲ್ಲಿ ಪ್ರಯತ್ನಿಸುತ್ತಾ ಇರುತ್ತೇವೆ. ಅದು ದಿನದ ನಮ್ಮ ಮೊದಲ ಊಟವನ್ನು ರುಚಿಕರವಾಗಿಸುತ್ತದೆ. ಅದರಲ್ಲೂ ನಮಗೆ ಈ ಆಂಧ್ರ ಶೈಲಿಯ ದೋಸೆ  (Andra Style Dosa)ಎಂದರೆ ತುಂಬಾನೇ ಇಷ್ಟ ವಾಗುತ್ತದೆ. ಏಕೆಂದರೆ ಅದರ ಸ್ವಾದ ಇನ್ನಿತರೆ ದೋಸೆಗಳಿಗಿಂತಲೂ ವಿಭಿನ್ನವಾಗಿರುತ್ತದೆ. ಬೀದಿ ಬದಿಯಲ್ಲಿರುವ ಬಂಡಿಯಲ್ಲಿ ಮಾಡುವಂತಹ ಆಂಧ್ರ ಶೈಲಿಯ ದೋಸೆ ತಿನ್ನಲು ಜನರು ತುಂಬಾನೇ ಇಷ್ಟ ಪಡುತ್ತಾರೆ.

ಈ ದಕ್ಷಿಣ ಭಾರತದ ಭಕ್ಷ್ಯವನ್ನು ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಸಹ ಸೇವಿಸಬಹುದು. ಬಿಸಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಜೋಡಿಯಾದ ಗರಿಗರಿಯಾದ ದೋಸೆ ಒಂದು ಪರಿಪೂರ್ಣವಾದ ಉಪಾಹಾರವಾಗಿದೆ.

here is why you should have dosa in your food list
ಸಾಂದರ್ಭಿಕ ಚಿತ್ರ


ಬೆಳಗಿನ ಉಪಾಹಾರಕ್ಕೆ ದೋಸೆ ತಿನ್ನುವುದು ನಿಮಗೆ ಇಷ್ಟ ಎಂದಾದಲ್ಲಿ, ನಾವು ನಿಮಗಾಗಿ ಪರಿಪೂರ್ಣವಾದ ಆಂಧ್ರ ಶೈಲಿಯ ದೋಸೆಯ ಪಾಕ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತೇವೆ. ಈ ಪಾಕ ವಿಧಾನದಿಂದ ಮನೆಯಲ್ಲಿಯೇ ಆಂಧ್ರ ಶೈಲಿಯ ಗರಿಗರಿಯಾದ ದೋಸೆ ಮಾಡಿಕೊಂಡು ಸವಿಯಬಹುದಾಗಿದೆ.

ಹೇಗಿರುತ್ತೆ ಈ ಆಂಧ್ರ ಶೈಲಿಯ ಗರಿಗರಿಯಾದ ದೋಸಾ ಗೊತ್ತೇ?

ಖಾರಂ ದೋಸೆ ಎಂದೂ ಸಹ ಕರೆಯಲ್ಪಡುವ ಆಂಧ್ರ ಶೈಲಿಯ ದೋಸೆ ಆಂಧ್ರಪ್ರದೇಶದ ಜನಪ್ರಿಯ ಸ್ಟೀಟ್​ ಫುಡ್​ ಆಗಿದೆ. ತೆಳುವಾದ ಮತ್ತು ಗರಿಗರಿಯಾದ ದೋಸೆಗಳ ಮೇಲೆ ವಿಶೇಷವಾಗಿ ಕೆಂಪು ಮೆಣಸಿನಕಾಯಿ ಚಟ್ನಿಯೊಂದಿಗೆ ಸವರಿ ಬೆಳ್ಳುಳ್ಳಿ-ಕಡಲೆ ಹಿಟ್ಟನ್ನು ಅದರ ಮೇಲೆ ಹರಡಲಾಗುತ್ತದೆ. ಈ ಮಸಾಲೆ ದೋಸೆಯು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಳಕೆಯಿಂದಾಗಿ ತೀಕ್ಷ್ಣವಾದ ಮತ್ತು ಸುವಾಸನೆಯ ಪರಿಮಳವನ್ನು ಹೊಂದಿರುತ್ತದೆ. ಮಸಾಲೆ ಪ್ರಿಯರಿಗೆ ಈ ದೋಸೆ ತುಂಬಾನೇ ಸೂಕ್ತವಾಗಿದೆ.

ಆಂಧ್ರ ಶೈಲಿಯ ದೋಸೆಯನ್ನು ಮಾಡಿಕೊಳ್ಳುವುದು ಹೇಗೆ?

ಇದನ್ನು ತಯಾರಿಸಿಕೊಳ್ಳಲು ನಿಮಗೆ ದೋಸೆ ಹಿಟ್ಟು, ಕೆಂಪು ಮೆಣಸಿನಕಾಯಿ ಚಟ್ನಿ ಮತ್ತು ಬೆಳ್ಳುಳ್ಳಿ-ಕಡಲೆ ಹಿಟ್ಟು ಬೇಕಾಗುತ್ತದೆ. ನೀವು ಅಂಗಡಿಯಲ್ಲಿ ಖರೀದಿಸಿದ ದೋಸಾ ಹಿಟ್ಟು ಸಹ ಬಳಸಬಹುದು.

ಇದನ್ನೂ ಓದಿ: ಗರಿಗರಿಯಾದ Andhra Style Bhindi: ಇದನ್ನು ಮಾಡುವ ವಿಧಾನ ಇಲ್ಲಿದೆ..!

ಕೆಂಪು ಚಟ್ನಿಗಾಗಿ, ಒಣಗಿದ ಕೆಂಪು ಮೆಣಸಿನಕಾಯಿಗಳನ್ನು ಬಾಣಲೆಯಲ್ಲಿ ಹುರಿಯುವ ಮೂಲಕ ಪ್ರಾರಂಭಿಸಿ. ಹುರಿದ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹುಣಸೆಯನ್ನು ಮಿಕ್ಸಿಯಲ್ಲಿ ಸೇರಿಸಿ, ಇದನ್ನು ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಎಣ್ಣೆ ಮತ್ತು ಸಾಸಿವೆಯ ತಡ್ಕಾವನ್ನು ತಯಾರಿಸಿ, ಮಿಶ್ರಣವನ್ನು ಇದರೊಳಗೆ ಸುರಿಯಿರಿ ಮತ್ತು ಚಟ್ನಿ ಸಿದ್ಧವಾಗುತ್ತದೆ.

ಶುಂಠಿ-ಬೆಳ್ಳುಳ್ಳಿ ಪುಡಿಯನ್ನು ಪಡೆಯಲು ಬೆಳ್ಳುಳ್ಳಿ ಮತ್ತು ಕಡಲೆಯನ್ನು ರುಬ್ಬಿಕೊಳ್ಳಿ. ನೀವು ಬಾಣಲೆಯಲ್ಲಿ ದೋಸೆವನ್ನು ಬೇಯಿಸುವಾಗ, ಚಟ್ನಿಯನ್ನು ದೋಸೆ ಮೇಲೆ ಹರಡಿ ಮತ್ತು ಅದನ್ನು ತಿರುಗಿಸಿ, ಇದರಿಂದ ಚಟ್ನಿ ಬದಿಯು ಬೇಯುತ್ತದೆ. ಬೆಳ್ಳುಳ್ಳಿ-ಕಡಲೆ ಹಿಟ್ಟು ಸಿದ್ಧವಾದಾಗ ಅದನ್ನು ದೋಸೆ ಮೇಲೆ ಹಾಕಿಕೊಳ್ಳಿರಿ. ಈ ಮಸಾಲೆಯುಕ್ತ ದೋಸೆಯನ್ನು ನೀವು ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಬಹುದು.
First published: