Pregnancy Health: ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡ್ತಿದ್ರೆ ಡಾಕ್ಟರ್​ ಹೇಳಿರೋ ಈ ಟಿಪ್ಸ್ ಫಾಲೋ ಮಾಡಿ

How to Plan for Pregnancy: ಒಂಬತ್ತು ತಿಂಗಳ ಗರ್ಭಾವಸ್ಥೆಯ ಪ್ರಯಾಣವು ಮಹಿಳೆಗೆ ಸುಲಭವಾಗಿರುವುದಿಲ್ಲ. ಗರ್ಭಾವಸ್ಥೆಯು ಹಲವಾರು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗರ್ಭಾವಸ್ಥೆಯು (Pregnancy) ಒಂದು ವಿಭಿನ್ನ ಅನುಭವ. ಬಹಳಷ್ಟು ಅಂಶಗಳು ಅದರ ಮೇಲೆ ಪ್ರಭಾವ ಬೀರಬಹುದು. ಕೆಲವರು ಬಹು ಬೇಗ ಗರ್ಭಧರಿಸಿದರೆ, ಇನ್ನೂ ಕೆಲವರಿಗೆ ನಿಧಾನವಾಗುತ್ತದೆ. ಆದರೆ ಗರ್ಭಧರಿಸುವ ಮುನ್ನ ನಿಮ್ಮನ್ನು ಭಾವನಾತ್ಮಕವಾಗಿ (Emotional) ಹಾಗೂ ದೈಹಿಕವಾಗಿ ತಯಾರು ಮಾಡಿಕೊಳ್ಳುವುದು ಅತ್ಯಗತ್ಯ. ಕೆಲವು ಪರೀಕ್ಷೆಗಳಿಗೆ (Tests) ಒಳಗಾಗುವ ಮೂಲಕ ಮತ್ತು ಕೆಲವು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಮಾಡಿಕೊಳ್ಳಬೇಕು. ಗರ್ಭಿಣಿಯಾಗಲು ಪ್ರಯತ್ನಿಸುವಾಗ ಏನು ಮಾಡಬೇಕು ಎಂಬುದನ್ನ ಬೆಂಗಳೂರಿನ ರಾಧಾಕೃಷ್ಣ ಆಸ್ಪತ್ರೆಯ ಡಾ ವಿದ್ಯಾ ಭಟ್​ ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆ

ಗರ್ಭಧಾರಣೆಯ ಮೊದಲು ಪರೀಕ್ಷೆ ಮಾಡಿಸುವುದು ನಿಮ್ಮ ಗರ್ಭಧಾರಣೆಗೆ ಅಡ್ಡಿ ಮಾಡುವ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಂಡು ಹಿಡಿಯಲು  ನಿಮಗೆ ಸಹಾಯ ಮಾಡುತ್ತದೆ. ನೀವಿಬ್ಬರೂ ಆರೋಗ್ಯವಾಗಿದ್ದೀರಿ ಮತ್ತು ಗರ್ಭಧರಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.

ಮಾತ್ರೆಗಳ ಬಗ್ಗೆ ಪರಿಶೀಲಿಸಿ

ಮಗು ಮಾಡಿಕೊಳ್ಳುವ ಬಗ್ಗೆ ನೀವು ನಿರ್ಧರಿಸಿದಾಗ, ನಿಮ್ಮ ಔಷಧಿ ಕ್ಯಾಬಿನೆಟ್ ಅನ್ನು ಸ್ವಚ್ಛಗೊಳಿಸ ಬೇಕಾಗುತ್ತದೆ. ತಲೆನೋವು, ಶೀತ ಮತ್ತು ಆತಂಕ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನೀವು ಪ್ರತಿದಿನವೂ ತೆಗೆದುಕೊಳ್ಳುತ್ತಿರುವ ಎಲ್ಲಾ ಔಷಧಿಗಳನ್ನು ಪರಿಶೀಲಿಸಿ. ಈ ಬಗ್ಗೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ಏಕೆಂದರೆ ಅವುಗಳು ಗರ್ಭಾವಸ್ಥೆಯಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತದೆ.

ವಿಟಮಿನ್​ಗಳನ್ನು ಹೆಚ್ಚು ಸೇವಿಸಿ

ಒಂಬತ್ತು ತಿಂಗಳ ಗರ್ಭಾವಸ್ಥೆಯ ಪ್ರಯಾಣವು ಮಹಿಳೆಗೆ ಸುಲಭವಾಗಿರುವುದಿಲ್ಲ. ಗರ್ಭಾವಸ್ಥೆಯು ಹಲವಾರು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಮತ್ತು ಫಿಟ್ ಆಗಿರಲು ಪೋಷಕಾಂಶಗಳ ಅಗತ್ಯವಿದೆ. ಇದಲ್ಲದೆ, ಗರ್ಭಾಶಯದೊಳಗೆ ಬೆಳೆಯುತ್ತಿರುವ ಮಗುವಿನ ಆರೋಗ್ಯ ದೃಷ್ಟಿಯಿಂದ ಪೋಷಕಾಂಶಗಳು ಸಹ ಅಗತ್ಯವಿದೆ. ಆದ್ದರಿಂದ, ಆರೋಗ್ಯಕರ ಗರ್ಭಧಾರಣೆಗಾಗಿ  ಮಲ್ಟಿ ವಿಟಮಿನ್ ಸೇವನೆಯನ್ನು ನೀವು ಹೆಚ್ಚಿಸಿಕೊಳ್ಳಬೇಕು. ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಮಲ್ಟಿವಿಟಮಿನ್ ಮತ್ತು ಫೋಲಿಕ್ ಆಮ್ಲಗಳ ಸೇವನೆಯನ್ನು ಹೆಚ್ಚಿಸಿ.

ತೂಕ ನಿಯಂತ್ರಿಸಿಕೊಳ್ಳಿ

ನೀವು ಅಥವಾ ನಿಮ್ಮ ಸಂಗಾತಿ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿದ್ದರೆ, ನಿಮ್ಮ ತೂಕವನ್ನು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಿ. ಗರ್ಭಧರಿಸಲು ಪ್ರಯತ್ನಿಸುತ್ತಿರುವವರಿಗೆ ಅಧಿಕ ತೂಕವು ಸಮಸ್ಯೆಯಾಗಬಹುದು. ಅಲ್ಲದೇ, ನೀವು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರೆ, ಔಷಧಿಗಳನ್ನು ಸೇವಿಸಿ ನಿಯಂತ್ರಣದಲ್ಲಿಡಲು ಪ್ರಯತ್ನಿಸಿ.

ಇದನ್ನೂ ಓದಿ: ಗೌರಿ ಹಬ್ಬಕ್ಕೆ ಚೆಂದ ಚೆಂದದ ಈ ಮೆಹೆಂದಿ ಡಿಸೈನ್​ ಟ್ರೈ ಮಾಡಿ

ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಿ

ಆರೋಗ್ಯಕರ ಗರ್ಭಧಾರಣೆಗಾಗಿ ಧೂಮಪಾನ, ಮದ್ಯಪಾನವನ್ನು ಬಿಡಿ.  ಜೊತೆಗೆ ನಿಮ್ಮ ಮಲಗುವ ವೇಳಾಪಟ್ಟಿಯನ್ನು ಸರಿಯಾಗಿ ನಿರ್ವಹಿಸಿ. ಈ ಮೂರು ವಿಷಯಗಳು ಗರ್ಭಾವಸ್ಥೆಯಲ್ಲಿ ಮತ್ತು ನಂತರ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ದಿನಕ್ಕೆ ಕನಿಷ್ಠ 8-9 ಗಂಟೆಗಳ ನಿದ್ದೆ ಮಾಡಿ.

ವ್ಯಾಯಾಮ ಮಾಡಿ

ಗರ್ಭಾವಸ್ಥೆಯ ಮೊದಲು ಮತ್ತು ಆ ಸಮಯದಲ್ಲಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ವ್ಯಾಯಾಮ ಮಾಡುವುದು ಎಂದರೆ ನೀವು ಕಠಿಣ ತಾಲೀಮು ಮಾಡಬೇಕು ಎಂದು ನಾವು ಅರ್ಥವಲ್ಲ. ಕೇವಲ ದೈಹಿಕವಾಗಿ ಸಕ್ರಿಯವಾಗಿರುವುದು. ಅದಕ್ಕಾಗಿ, ನೀವು ವಾಕಿಂಗ್, ಯೋಗ ಅಥವಾ ಪೈಲೇಟ್ಸ್ ಅನ್ನು ಪ್ರಯತ್ನಿಸಬಹುದು, ಒಂದು ಗಂಟೆಯವರೆಗೆ ವಾರಕ್ಕೆ ಕನಿಷ್ಠ 3 ಬಾರಿ ವ್ಯಾಯಾಮ ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ: ಹಬ್ಬದ ದಿನ ರೇಷ್ಮೆ ಸೀರೆ ಉಡೋದು ಇದೇ ಕಾರಣಕ್ಕೆ, ಸಂಪ್ರದಾಯಗಳೆಷ್ಟು ವಿಭಿನ್ನ

ಆರೋಗ್ಯಕರ ಆಹಾರ ಸೇವಿಸಿ

ಮಲ್ಟಿವಿಟಮಿನ್‌ಗಳು ದೇಹದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತವೆ, ಅವುಗಳನ್ನು ಮಾತ್ರ ಅವಲಂಬಿಸಬೇಡಿ. ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಸಮಯದಿಂದ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ಜಂಕ್ ಮತ್ತು ಕೊಬ್ಬಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಹೆಚ್ಚು ಸೊಪ್ಪು, ಹಣ್ಣುಗಳು, ಬೀಜಗಳು, ಧಾನ್ಯ ಸೇರಿದಂತೆ ಆರೋಗ್ಯಕರ ಆಹಾರವನ್ನು ಸೇವಿಸಿ.
Published by:Sandhya M
First published: