ಸುಲಭವಾಗಿ ವಿದೇಶ ಪ್ರವಾಸ ಕೈಗೊಳ್ಳಲು ಇಲ್ಲಿದೆ ಐದು ಟಿಪ್ಸ್​

news18
Updated:July 10, 2018, 2:51 PM IST
ಸುಲಭವಾಗಿ ವಿದೇಶ ಪ್ರವಾಸ ಕೈಗೊಳ್ಳಲು ಇಲ್ಲಿದೆ ಐದು ಟಿಪ್ಸ್​
news18
Updated: July 10, 2018, 2:51 PM IST
-ನ್ಯೂಸ್ 18 ಕನ್ನಡ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯೊಂದಿದೆ. ಆದರೆ ಈ ಗಾದೆಯನ್ನು ಇನ್ನು ಮುಂದೆ ವಿದೇಶ ಸುತ್ತಿ ನೋಡು ಎಂದು ಬದಲಾಯಿಸಬೇಕಾಬಹುದು. ಏಕೆಂದರೆ ಪ್ರತಿಯೊಬ್ಬರೂ ಕೂಡ ಇಂದಿನ ಯುಗದಲ್ಲಿ ವಿದೇಶ ಯಾತ್ರೆ ಕೈಗೊಳ್ಳಬೇಕೆಂಬ ಕನಸು ಹೊಂದಿರುತ್ತಾರೆ.

ಹಣಕಾಸಿನ ಕೊರತೆ ಹಾಗೂ ಇತರೆ ಸಮಸ್ಯೆಯ ಕಾರಣದಿಂದ ಹೆಚ್ಚಿನವರ ವಿದೇಶಿ ಟ್ರಿಪ್​ ಕನಸಾಗಿ ಉಳಿದಿರುತ್ತದೆ. ಆದರೆ ಒಂದು ನಿರ್ದಿಷ್ಟ ಪ್ಲಾನಿಂಗ್ ಇದ್ದರೆ ಅನಾಯಾಸವಾಗಿ ವಿದೇಶಿ ಪ್ರವಾಸ ಕೈಗೊಳ್ಳಬಹುದು. ಅದು ಹೇಗೆ ಅಂತೀರಾ...

ಪ್ಲಾನ್​ 1 : ಮೊದಲು ವಿದೇಶ ಪ್ರವಾಸ ಮಾಡಲು ಒಂದು ಯೋಜನೆ ರೂಪಿಸಬೇಕು. ಈ ಪ್ರಯಾಣಕ್ಕಾಗಿ ತಗಲುವ ವೆಚ್ಚ ಮುಂತಾದವುಗಳ ಬಗ್ಗೆ ಪರಿಶೀಲಿಸಬೇಕು. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಪ್ರವಾಸ ಉಳಿತಾಯ ಖಾತೆಗಳಿವೆ. ಈ ಖಾತೆಯ ಮೂಲಕ ಹಾಲಿ-ಡೆ ಪ್ಯಾಕೇಜ್ ಅನ್ನು ಪಡೆಯಬಹುದಾಗಿದೆ.

ಪ್ಲಾನ್ 2 : ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ವೀಸಾ ಇಲ್ಲದೆ ಪ್ರಯಾಣಿಸಬಹುದಾದ ದೇಶಗಳ ಪಟ್ಟಿಯನ್ನು ಮಾಡಿಕೊಳ್ಳಿ. ಮಾರಿಷಸ್, ಜೋರ್ಡಾನ್, ನೇಪಾಳ ಮುಂತಾದ ದೇಶಗಳು ಉಚಿತ ವೀಸಾ ಸೌಲಭ್ಯ ನೀಡುತ್ತಿದೆ. ಅಲ್ಲದೆ ಈ ದೇಶಗಳು ಅತ್ಯಂತ ಅಗ್ಗದ ಪ್ರವಾಸಕ್ಕೆ ಖ್ಯಾತಿಗಳಿಸಿದೆ.

ಪ್ಲಾನ್ 3 : ವಿದೇಶ ಪ್ರಯಾಣಕ್ಕಾಗಿ ಪರ್ಸನಲ್ ಲೋನ್ ನೀಡುವ ಅನೇಕ ಬ್ಯಾಂಕುಗಳಿವೆ. ಅದರಲ್ಲೂ ಕೆಲವು ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಹಲವು ಬ್ಯಾಂಕ್ ಇದ್ದು ,ಪ್ರಯಾಣ ವೆಚ್ಚಕ್ಕನುಗುಣವಾಗಿ ಲೋನ್​ ಪಡೆಯಬಹುದು. ಇಎಂಐ ಮೂಲಕ ಪಾವತಿಸಬಹುದಾದ ಲೋನ್​ಗಳನ್ನು ಪಡೆಯುವುದು ಉತ್ತಮ.

ಪ್ಲಾನ್ 4 : ವಿದೇಶಿ ಪ್ರವಾಸದ ಸೌಲಭ್ಯ ಒದಗಿಸುವ ಅನೇಕ ಟ್ರಾವೆಲ್ ಏಜೆನ್ಸಿಗಳಿದ್ದು ಅವರಿಂದ ಸಹಾಯ ಪಡೆಯಬಹುದು. ಇಂತಹ ಕೆಲ ಏಜೆನ್ಸಿಗಳು ಫೈನಾನ್ಸ್​ ಸ್ಕೀಮ್ ಕೂಡ ನೀಡುತ್ತದೆ. ಇದರಲ್ಲಿ EMI ಸೌಲಭ್ಯದ ಹಾಲಿಡೆ ಪ್ಯಾಕೇಜ್ ಅವಕಾಶಗಳಿರುತ್ತದೆ. ಟ್ರಾವೆಲ್ ಏಜೆನ್ಸಿಗಳು ಬ್ಯಾಂಕ್ ಮತ್ತು NBFC ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವಿಮಾನ ವೆಚ್ಚ, ಆಹಾರ ಮುಂತಾದ ಖರ್ಚುಗಳನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ ಈ ಸ್ಕೀಮ್ ಮೂಲಕ ಹಣ ಪಡೆದರೆ 1 ರಿಂದ 5 ವರ್ಷಗಳವರೆಗೆ ಮರುಪಾವತಿಸಲು ಅವಕಾಶವಿರುತ್ತದೆ.
Loading...

ಪ್ಲಾನ್ 5 : ಪ್ರಯಾಣಕ್ಕೂ ಮುನ್ನ ಟ್ರಾವೆಲ್ ಏಜೆನ್ಸಿ ನೀಡುವ ಕೊಡುಗೆಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ ಅನೇಕ ವಿಮಾನಯಾನ ದರಗಳು ಕೂಡ ಬದಲಾಗುತ್ತದೆ. ಚಳಿಗಾಲ, ಕಿಸ್ಮಸ್ ಮತ್ತು ಬೇಸಿಗೆ ರಜಾದಿನಗಳ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ಅನೇಕ ಆಫರ್​ಗಳನ್ನು ನೀಡುತ್ತವೆ. ಇಂತಹ ಸಂದರ್ಭದಲ್ಲಿ ಉತ್ತಮ ಆಫರ್​ ಅನ್ನು ಬಳಸಿಕೊಳ್ಳಬಹುದು.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...