Monsoon Wedding Hacks: ಮಳೆಗಾಲದಲ್ಲಿ ಮದುವೆ ಮಂಟಪ ಅಲಂಕಾರ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್

Wedding Decoration: ನಿಮ್ಮ ಮಂಟಪವನ್ನು ಅಲಂಕರಿಸಲು ನೀವು ಕೃತಕ ಹೂವುಗಳನ್ನು ಬಳಸಬಹುದು, ಸೀಲಿಂಗ್ ಅಲಂಕಾರವಾಗಿ ಹಸಿರು ಕೃತಕ ಹೂವಿನ ಹಾರಗಳನ್ನು ಟ್ರೈ ಮಾಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಳೆಗಾಲ (Rainy Season) ಬಹಳ ಸುಂದರವಾಗಿರುತ್ತದೆ. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ, ಬಿಸಿ ಬಿಸಿ ಕಾಫಿ (Coffee) ಇದೆಲ್ಲಾ ಒಂದು ಸುಂದರ ಅನುಭವ ಎನ್ನಬಹುದು. ಆದರೆ ಮಳೆಗಾಲದಲ್ಲಿ ಮದುವೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಲವಾರು ಸಮಸ್ಯೆಗಳಾಗುತ್ತದೆ. ಎಲ್ಲಾ ತಯಾರಿಯ ನಂತರ ಮಳೆ ಬಂದರೆ ಮಾಡಿದ ಕಾರ್ಯಗಳೆಲ್ಲಾ ಹೊಳೆಯಲ್ಲಿ ಹೋಮ ಮಾಡಿದ ಹಾಗೆ ಆಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಮದುವೆ ಮಾಡುವುದು ಭಯವನ್ನು ಹುಟ್ಟಿಸುತ್ತದೆ ಎನ್ನಬಹುದು. ಅದರಲ್ಲೂ ಈ ಸಮಯದಲ್ಲಿ ಡೆಕೋರೇಷನ್​ (Decoration)  ಮಾಡುವುದು ಸ್ವಲ್ಪವೇ ಕಷ್ಟವಾಗುತ್ತದೆ. ಆದರೂ ಕೂಡ ಕೆಲವೊಂದು ಐಡಿಯಾಗಳನ್ನು ಬಳಸಿದರೆ ಸುಂದರವಾದ ಹಾಗೂ ಸಿಂಪಲ್ ಡೆಕೋರೇಷನ್​ ಮಾಡಬಹುದು. ಹಾಗಾದ್ರೆ ಮಳೆಗಾಲದಲ್ಲಿ ಮದುವೆ ಡೆಕೋರೇಷನ್ (Wedding Decoration Tips)  ಮಾಡಲು ಕೆಲ ಟಿಪ್ಸ್ ಇಲ್ಲಿದೆ.

ನವಿಲಿನ ಅಲಂಕಾರವಿಲ್ಲದೇ ಮಳೆಗಾಲದಲ್ಲಿ ಮದುವೆ ಸಾಧ್ಯವಾ?

ನೀವು ಸಾಮಾನ್ಯವಾಗಿ ಗಮನಿಸಿರಬಹುದು ಕೆಲ ಫೋಟೋಗಳಲ್ಲಿ ಮಳೆ ಬರುವಾಗ ಕುಣಿಯುವ ನವಿಲನ್ನು ನೋಡಿರುತ್ತೇವೆ. ನವಿಲುಗಳಿಗೆ ಮಳೆ ಎಂದರೆ ಬಹಳ ಇಷ್ಟವಂತೆ. ಅದರಲ್ಲೂ ಗಂಡು ನವಿಲುಗಳು ಮಳೆ ಬಂದಾಗ ಗರಿ ಬಿಚ್ಚಿ ಕುಣಿಯುವುದನ್ನ ನೋಡುವುದೇ ಒಂದು ಸುಂದರ ಅನುಭವ. ಹಾಗಾಗಿ ನವಿಲಿನ ಡೆಕೋರೇಷನ್ ಈ ಮಳೆಗಾಲಕ್ಕೆ ಸೂಕ್ತವಾಗುತ್ತದೆ. ಹಾಗಾಗಿ ನೀವು ನವಿಲಿನ ಥೀಮ್​ನಲ್ಲಿ ಡೆಕೋರೇಷನ್​ ಮಾಡಿಸುವುದು ಬಹಳ ಸೂಕ್ತ.

ನೀವು ಸಿಂಪಲ್ ಆಗಿ ಮದುವೆ ಆಗುತ್ತಿದ್ದರೂ ಸಹ ಈ ನವಿಲಿನ ಡೆಕೋರೇಷನ್​ ರಿಚ್​ ಲುಕ್ ನೀಡುತ್ತದೆ. ನೀವು ಸಭಾಂಗಣದ ಎಂಟ್ರಿಯಲ್ಲಿ ಎರಡು ಬದಿಯಲ್ಲಿ ರೆಕ್ಕೆ ಬಿಚ್ಚಿರುವ ನವಿಲನ್ನು ಕಾರ್ಡ್​ ಬೋರ್ಡ್​ನಲ್ಲಿ ಮಾಡಿಸಿ ನಿಲ್ಲಿಸಬಹುದು. ಅಥವಾ ನಿಮ್ಮ ಮದುವೆಯ ಮಂಟಪದಲ್ಲಿ ಸಹ ನವಿಲಿನ ಥೀಮ್​ ಬಳಸಬಹುದು. ಮತ್ತೊಂದು ವಿಚಾರ ಎಂದರೆ ಇತ್ತೀಚಿಗೆ ಹೊಸ ಟ್ರೆಂಡ್​ ಆರಂಭವಾಗಿದೆ. ಫೋಟೋ ಜೋನ್​ ಎಂದು. ಸಭಾಂಗಣದ ಯಾವುದಾದರೂ ಮೂಲೆಯಲ್ಲಿ ಒಂದು ಥೀಮ್​ ರೆಡಿ ಮಾಡಿ ಇಡಲಾಗುತ್ತದೆ ಅದರಲ್ಲಿ ಇಷ್ಟ ಬಂದವರು ಫೋಟೋ ತೆಗೆಸಿಕೊಳ್ಳಬಹುದು. ಅಲ್ಲಿ ಸಹ ನವಿಲಿನ ಥೀಮ್ ಬಳಸಬಹುದು.

ಇದಿಷ್ಟೇ ಅಲ್ಲದೇ ನೀವು ಬೇರೆ ಬೇರೆ ರೀತಿಯಲ್ಲಿ ಸಹ ಇದನ್ನು ಬಹಸಬಹುದು. ಕುರ್ಚಿಗಳ ಮೇಲೆ, ಕಾರ್ಪೆಟ್​ ಅಥವಾ ವಧು - ವರರ ಎಂಟ್ರಿಯ ಸಮಯದಲ್ಲಿ ಹೀಗೆ ವಿಭಿನ್ನವಾಗಿ ಆಲೋಚನೆ ಮಾಡಿ ಬಳಸುವುದು ಸೂಕ್ತ.

ಅಲಂಕಾರಿಕ ಹೂವುಗಳನ್ನು ಬಳಸಿ

ಯಾವುದೇ ಮದುವೆಯಾಗಲಿ ಅದರಲ್ಲಿ ಹೂವು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಅದರಲ್ಲೂ ಮದುವೆಯ ಡೆಕೋರೇಷನ್ ಮಾಡುವಾಗ ನಿಮಗೆ ಹೂವು ಬೇಕೇ ಬೇಕಾಗುತ್ತದೆ. ಆದರೆ ಮಳೆಗಾಲದಲ್ಲಿ ಫ್ರೆಶ್​ ಹೂವುಗಳನ್ನು ಬಳಸುವುದು ಬಹಳ ಕಷ್ಟಕರ. ನಮಗೆ ಬೇಕಾದ ಹೂವು ಸಿಗುವುದಿಲ್ಲ ಹಾಗೂ ಅದನ್ನು ಹೆಚ್ಚು ಕಾಲ ಇಡುವುದು ಸಹ ಕಷ್ಟವಾಗುತ್ತದೆ. ಆದರೆ ಆರ್ಟಿಫಿಯಲ್​ ಹೂವುಗಳು ನಿಮಗೆ ಎಲ್ಲಾ ರೀತಿಯಿಂದಲೂ ಸೂಕ್ತ ಎನ್ನಬಹುದು. ನಿಮಗೆ ಬೇಕಾದ ಡಿಸೈನ್ ಹಾಗೂ ಬಣ್ಣದಲ್ಲಿ ಸಿಗುತ್ತದೆ. ಅಲ್ಲದೇ ಅದನ್ನು ಬಳಸಿ ಡೆಕೋರೇಟ್​ ಮಾಡುವುದು ಸುಲಭ ಸಹ.



ಇದನ್ನೂ ಓದಿ: ಹಣ್ಣುಗಳ ಹತ್ರ ನೊಣ ಬರ್ಬಾರ್ದು ಅಂದ್ರೆ ಇಷ್ಟು ಮಾಡಿ ಸಾಕು

ಅಲ್ಲದೇ ಇದನ್ನು ನೀವು ಮರುಬಳಕೆ ಸಹ ಮಾಡಬಹುದು.  ಅಲ್ಲದೇ, ಈಗ ತಾಜಾ ಹೂವನ್ನು ಬಳಸಿ ಡೆಕೋರೇಷನ್ ಮಾಡುವಾಗ ಅದು ಹಾಳಾಗುತ್ತದೆ ಎಂಬ ಭಯವಿರುತ್ತದೆ. ಕಟ್ ಆಗಬಹುದು, ಹೂವು ಉದುರಿ ಹೋಗಬಹುದು ಎಂಬುದೆಲ್ಲಾ ಇರುತ್ತದೆ. ಆದರೆ ಆರ್ಟಿಫಿಶಯಲ್ ಹೂವಾದರೆ ಸುಲಭವಾಗಿ ಹರಿಯುವುದಿಲ್ಲ. ಅಲ್ಲದೇ, ಅದನ್ನು ವೆರೈಟಿ ಆಗಿ ಬಳಸಿ ಡೆಕೋರೇಟ್​ ಮಾಡಬಹುದು. ಹಾಗಾಗಿ ಹೆಚ್ಚಾಗಿ ನೀವು ತಾಜಾ ಹೂವಿನ ಬಳಕೆ ಮಾಡುವುದನ್ನ ಕಡಿಮೆ ಮಾಡಿ, ಆರ್ಟಿಫಿಯಲ್ ಹೂವುಗಳನ್ನು ಬಳಸಿ.



ಇದನ್ನೂ ಓದಿ: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

ನಿಮ್ಮ ಮಂಟಪವನ್ನು ಅಲಂಕರಿಸಲು ನೀವು ಕೃತಕ ಹೂವುಗಳನ್ನು ಬಳಸಬಹುದು, ಸೀಲಿಂಗ್ ಅಲಂಕಾರವಾಗಿ ಹಸಿರು ಕೃತಕ ಹೂವಿನ ಹಾರಗಳನ್ನು, ಟೇಬಲ್ ಅಲಂಕಾರಕ್ಕಾಗಿ ಮದುವೆಯ ಹಾಲ್​ ಪ್ರವೇಶ ಅಥವಾ ವಾಕ್‌ವೇನಲ್ಲಿ ಹೂವಿನ ಕುಂಡಗಳು ಮತ್ತು ದೀಪಗಳಲ್ಲಿ ಸಹ ಇಡಬಹುದು.
Published by:Sandhya M
First published: