ನಮ್ಮ ಮನೆಯಲ್ಲಿ ಯಾವುದೋ ವೆಜ್ ಬಿರಿಯಾನಿ(Veg biriyani) ಅಥವಾ ಚಿಕನ್ ಬಿರಿಯಾನಿ (Chicken biryani) ತಯಾರಿಸಿದಾಗ ಅದರಲ್ಲಿ ಎದ್ದು ಕಾಣುವ ಒಂದು ಪದಾರ್ಥ ಎಂದರೆ ಅದುವೇ ಕಂದು ಬಣ್ಣದ ಹುರಿದುಕೊಂಡಂತಹ ಈರುಳ್ಳಿ(Onion) ಎಂದು ಹೇಳಬಹುದು. ನಮ್ಮ ಅಡುಗೆಗಳಲ್ಲಿ(Cooking) ಈ ಈರುಳ್ಳಿಯನ್ನು ತುಂಬಾನೇ ಬಳಸಲಾಗುತ್ತದೆ, ಏಕೆಂದರೆ ಈರುಳ್ಳಿಗಳು ಪರಿಮಳ(Flavored) ಮತ್ತು ಫ್ಲೇವನಾಯ್ಡ್ಗಳನ್ನು ಒಳಗೊಂಡಿರುವುದರಿಂದ ಅವು ಭಾರತೀಯ(Indian) ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿವೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಕ್ಯಾನ್ಸರ್ (Cancer)ಮತ್ತು ಹೃದಯ ರಕ್ತನಾಳದ ಅಸ್ವಸ್ಥತೆಗಳನ್ನು ತಡೆಗಟ್ಟಲು ಹೆಸರುವಾಸಿಯಾದ ಈರುಳ್ಳಿಯನ್ನು ಅದರ ಔಷಧೀಯ(Medicines) ಗುಣಲಕ್ಷಣಗಳಿಗಾಗಿ ಮತ್ತು ಅದರ ಬಹುಮುಖತೆಗಾಗಿ ಗುರುತಿಸಲಾಗುತ್ತದೆ. ಇದು ಅವುಗಳನ್ನು ವಿವಿಧ ಭಾರತೀಯ ಪಾಕವಿಧಾನಗಳಲ್ಲಿ ಅಗತ್ಯ ಪದಾರ್ಥವನ್ನಾಗಿ ಮಾಡುತ್ತದೆ.
ಗ್ರೇವಿ ಪೂರ್ಣವಾಗುವುದಿಲ್ಲ
ಸಂಪೂರ್ಣವಾಗಿ ಹುರಿದ ಈರುಳ್ಳಿ ಇಲ್ಲದೆ ಯಾವುದೇ ಭಾರತೀಯ ಗ್ರೇವಿ ಪೂರ್ಣವಾಗುವುದಿಲ್ಲ ಮತ್ತು ಅವುಗಳಿಗೆ ಉತ್ತಮ ಚಿನ್ನದ ಕಂದು ಬಣ್ಣ ಮತ್ತು ಗರಿಗರಿತನವನ್ನು ನೀಡಲು ಉತ್ತಮ ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ. ಈರುಳ್ಳಿಯನ್ನು ಹುರಿಯುವುದು ಸಹ ಒಂದು ಕಲೆಯಾಗಿದೆ ಮತ್ತು ಇದರಿಂದ ಸಮಯ ಕಡಿಮೆ ಇದ್ದಾಗ ಭಕ್ಷ್ಯದಲ್ಲಿ ಈರುಳ್ಳಿಯನ್ನು ಹಾಗೆಯೇ ಹಾಕಿಕೊಳ್ಳಬಹುದು.
ಇದನ್ನೂ ಓದಿ: ತಾನು ಬೆಳೆದ ಈರುಳ್ಳಿ ಬೇಗ ಹಾಳಾಗದಂತೆ ತಡೆಯಲು ಈ ರೈತ ಮಾಡಿರುವ ಪ್ಲಾನ್ ನೋಡಿ, ಸಖತ್ತಾಗಿದೆ!
ಗರಿಗರಿಯಾಗಿ ಹೇಗೆ ಹುರಿಯುವುದು
ಈರುಳ್ಳಿಯನ್ನು ನಿಮ್ಮ ಮನೆಯಲ್ಲಿ ಮಾಡುವ ಅಡುಗೆಗೆ ಹಾಕಿಕೊಳ್ಳಲು ಹೇಗೆ ಅದನ್ನು ಚಿನ್ನದ ಕಂದು ಬಣ್ಣಕ್ಕೆ ಬರುವಂತೆ ಗರಿಗರಿಯಾಗಿ ತಯಾರಿಸಿಕೊಳ್ಳಲು ಚೆಫ್ ಕುನಾಲ್ ಕಪೂರ್ ಇತ್ತೀಚಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಈರುಳ್ಳಿಯನ್ನು ಹೇಗೆ ಪರಿಪೂರ್ಣವಾಗಿ ಹುರಿದುಕೊಳ್ಳಬೇಕು ಎಂಬುದರ ಬಗ್ಗೆ ಸಲಹೆಯನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಕಪೂರ್ ಅವರು ಒಂದು ಕೆಜಿ ಈರುಳ್ಳಿಯನ್ನು ತೆಗೆದುಕೊಂಡು ಅವುಗಳನ್ನು ಒಂದು ಲೀಟರ್ ಎಣ್ಣೆಯಲ್ಲಿ ಹುರಿದಿದ್ದಾರೆ. ಅವುಗಳನ್ನು ಕಡಿಮೆ ಎಣ್ಣೆಯಲ್ಲಿ ಬೇಯಿಸುವುದು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ನಿಮ್ಮ ಈರುಳ್ಳಿಗಳನ್ನು ಹೇಗೆ ಚೆನ್ನಾಗಿ ಹುರಿದುಕೊಳ್ಳಬೇಕು ಎಂಬುದನ್ನು ಹಂತ ಹಂತವಾಗಿ ಇಲ್ಲಿ ನೋಡಿಕೊಳ್ಳಿರಿ:
1. ಈರುಳ್ಳಿಯನ್ನು ಒಂದೊಂದಾಗಿ ತೆಗೆದುಕೊಂಡು ಅದರ ಮೇಲಿನ ಸಿಪ್ಪೆಯನ್ನು ತೆಗೆಯಿರಿ.
2. ಈರುಳ್ಳಿಯನ್ನು ಎರಡು ಭಾಗಗಳಾಗಿ ಕತ್ತರಿಸಿ ಸಮನಾಗಿ ಕತ್ತರಿಸಿ. ನೀವು ಎಷ್ಟು ಚಿಕ್ಕದಾಗಿ ತೆಳ್ಳಗೆ ಕತ್ತರಿಸಿದಷ್ಟೂ ಉತ್ತಮ ಫಲಿತಾಂಶ ನೀಡುತ್ತದೆ.
3. ನಿಮ್ಮ ಬಳಿ ಬಾಣಸಿಗನ ಚಾಕು ಇಲ್ಲದಿದ್ದರೆ, ಈರುಳ್ಳಿಯನ್ನು ಸಮಾನವಾಗಿ ಕತ್ತರಿಸಲು ನೀವು ಗ್ರೇಟರ್ ಅನ್ನು ಬಳಸಬಹುದು.
4. ಈರುಳ್ಳಿಯನ್ನು ಕತ್ತರಿಸಿದ ನಂತರ, ಎಣ್ಣೆಯನ್ನು ಒಂದು ಬಾಣಲೆಗೆ ಹಾಕಿ ಮತ್ತು ಅದನ್ನು ಚೆನ್ನಾಗಿ ಬಿಸಿ ಮಾಡಿ. ನಂತರ ಈರುಳ್ಳಿಯನ್ನು ಕಡಿಮೆ ಉರಿಯಲ್ಲಿ ಹುರಿಯಬಾರದು, ಏಕೆಂದರೆ ಅವು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತವೆ.
5. ಎಣ್ಣೆ ಬಿಸಿಯಾದ ನಂತರ, ಕೆಲವು ಚೂರುಗಳನ್ನು ಮೊದಲು ಹಾಕಿ, ಇದರಿಂದ ಎಣ್ಣೆಯು ಎಷ್ಟು ಬಿಸಿಯಾಗಿದೆ ಎಂದು ತಿಳಿದುಕೊಳ್ಳಬಹುದು. ಮಧ್ಯಮದಿಂದ ಹೆಚ್ಚಿನ ಜ್ವಾಲೆಯಲ್ಲಿಟ್ಟು ಈರುಳ್ಳಿಯನ್ನು ಹುರಿಯಿರಿ ಆದರೆ ಅದನ್ನು ನಿರಂತರವಾಗಿ ಕಲಕುವುದನ್ನು ಮರೆಯಬೇಡಿ.
6. ಈರುಳ್ಳಿ ಚೂರುಗಳು ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ, ಎಲ್ಲಾ ಚೂರುಗಳು ಸಮವಾಗಿ ಕಂದು ಬಣ್ಣಕ್ಕೆ ತಿರುಗುವಂತೆ ನೀವು ಜ್ವಾಲೆಯನ್ನು ಸೆಟ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: Onion: ಕಣ್ಣೀರು ತರಿಸುವ ಈರುಳ್ಳಿಯಲ್ಲಿದೆ ನಾನಾ ಆರೋಗ್ಯ ಪ್ರಯೋಜನಗಳು
7. ತಿಳಿ ಚಿನ್ನದ ಬಣ್ಣ ಬಂದ ನಂತರ ನೀವು ಈರುಳ್ಳಿಯನ್ನು ಹೊರ ತೆಗೆಯಿರಿ. ಹೆಚ್ಚುವರಿ ಎಣ್ಣೆಯನ್ನು ತೆಗೆದ ನಂತರ, ಅದನ್ನು ಕಪ್ಪು ಬಣ್ಣಕ್ಕೆ ತಿರುಗದಂತೆ ಕಿಚನ್ ಟವೆಲ್ ಮೇಲೆ ಸಮಾನವಾಗಿ ಹರಡಿ.
ಈಗ ಈರುಳ್ಳಿಯನ್ನು ಯಾವುದೇ ಕರಿ ಅಥವಾ ತರಹದ ಅನ್ನ ಮಾಡಿದರೂ ಸಹ ಅದರಲ್ಲಿ ಬಳಸಿಕೊಳ್ಳಬಹುದು. ಅವುಗಳನ್ನು 2-3 ತಿಂಗಳ ಅವಧಿಗೆ ಸಂಗ್ರಹಿಸಬಹುದು ಮತ್ತು ಬಳಸಬಹುದು ಮತ್ತು ಹೀಗೆ ಮಾಡುವುದರಿಂದ ಸಾಕಷ್ಟು ಅಡುಗೆ ಸಮಯವನ್ನು ಉಳಿಸಬಹುದು ಎಂದು ಕಪೂರ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ