Health Tips: ವರ್ಕ್ ಫ್ರಂ ಹೋಮ್​ನಿಂದ ತಲೆ ನೋವು ಹೆಚ್ಚಾಗಿದ್ಯಾ? ಮೈಗ್ರೇನ್​ನಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ತಲೆನೋವು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕಾಣಿಸಿಕೊಳ್ಳಲಿದೆ. ಅದರಲ್ಲೂ 20 ರಿಂದ 65 ವರ್ಷದೊಳಗಿನವರಲ್ಲೇ ಹೆಚ್ಚು ತಲೆನೋವು ಕಾಣಿಸಿಕೊಳ್ಳುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೋವಿಡ್‌ ಬಳಿಕ ಬಹುತೇಕರು ವರ್ಕ್‌ ಫ್ರಂ ಹೋಮ್‌ (Work From Home) ಹಾಗೂ ಮಕ್ಕಳು ಆನ್‌ಲೈನ್‌ ಕ್ಲಾಸಿಗೆ ಅನಿವಾರ್ಯವಾಗಿ ಒಗ್ಗಿಕೊಳ್ಳುವಂತಾಗಿತ್ತು. ಬೆಳಗಿನಿಂದ ರಾತ್ರಿವರೆಗೂ ಕಂಪ್ಯೂಟರ್‌ (Computer) ಮುಂದೆ ಕುಳಿತುಕೊಳ್ಳುವ ಜನರಲ್ಲಿ ತಲೆನೋವು (Headache) ಅದರಲ್ಲೂ ಮೈಗ್ರೇನ್‌ (Migraine) ಹೆಚ್ಚಳವಾಗುತ್ತಿರುವ ಬಗ್ಗೆ ಅಧ್ಯಯನಗಳಲ್ಲಿ ಕಂಡು ಬರುತ್ತಿದೆ. ಪ್ರಪಂಚದ ಜನಸಂಖ್ಯೆಯಲ್ಲಿ ಶೇಕಡವಾರು 52ರಷ್ಟು ಜನ ಒಂದಿಲ್ಲೊಂದು ತಲೆ ನೋವನ್ನು ಅನೂಭವಿಸುತ್ತಿದ್ದಾರೆ. ಇದರಲ್ಲಿ ಶೇ. 14 ರಷ್ಟು ಮೈಗ್ರೇನ್ ‌ತಲೆನೋವಾಗಿದೆ. ಸಂಶೋಧನೆ ಪ್ರಕಾರ, ತಲೆನೋವು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕಾಣಿಸಿಕೊಳ್ಳಲಿದೆ. ಅದರಲ್ಲೂ 20 ರಿಂದ 65 ವರ್ಷದೊಳಗಿನವರಲ್ಲೇ ಹೆಚ್ಚು ತಲೆನೋವು ಕಾಣಿಸಿಕೊಳ್ಳುತ್ತಿದೆ. ಹಾಗಿದ್ದರೆ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ (Work) ಮಾಡುವವರಲ್ಲಿ ತಲೆನೋವು ಕಾಣಿಸಿಕೊಳ್ಳಲು ಕಾರಣವೇನು ಹಾಗೇ ಇದಕ್ಕೆ ಪರಿಹಾರಗಳೇನು ನೋಡೋಣ

    ತಲೆನೋವು ತನ್ನಿಂದ ತಾನೇ ಕಮ್ಮಿಯಾಗುತ್ತದೆ

    ಮಾನಸಿಕ ಒತ್ತಡ,ದೇಹದಲ್ಲಿ ನಿರ್ಜಲೀಕರಣ, ಅಥವಾ ಪರಿಸರದ ಕೆಲವು ಒತ್ತಡ ಅಂದರೆ ಶಬ್ದ ಮಾಲಿನ್ಯ ಅಥವಾ ಪ್ರಬಲವಾದ ಬೆಳಕನ್ನು ನೋಡುವ ಮುಖೇನ ಅಥವಾ ಇನ್ನಿತರ ಪರಿಸರ ವೈಪರೀತ್ಯಗಳು ತಲೆನೋವನ್ನು ಉಂಟುಮಾಡಬಹುದು. ಮೊದಲನೆಯದಾಗಿ ಒತ್ತಡವನ್ನು ಕಮ್ಮಿ ಮಾಡಿಕೊಂಡರೆ ತಲೆನೋವು ತನ್ನಿಂದ ತಾನೇ ಕಮ್ಮಿಯಾಗುತ್ತದೆ. ಇದಕ್ಕಾಗಿ ನಿರಂತರವಾಗಿ ಪ್ರಾಣಾಯಾಮ ಹಾಗೂ ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು ಅಥವಾ ಬಿಸಿನೀರು ಕಾಯಿಸಿ ಅದರ ಹಬೆಯನ್ನು ಉಸಿರಿನ ಮೂಲಕ ಹೀರಿಕೊಂಡರೂ ಕೂಡ ತಲೆನೋವನ್ನು ಕಮ್ಮಿ ಮಾಡಿಕೊಳ್ಳಬಹುದು.

    ಇದನ್ನೂ ಓದಿ: Sleeping Tips: ನೆಲದ ಮೇಲೆ ಮಲಗುವ ಅಭ್ಯಾಸವಿದೆಯೇ? ಹಾಗಿದ್ರೆ ಅದರ ಪ್ರಯೋಜನ ತಿಳಿಯಿರಿ

    30 ನಿಮಿಷಗಳಿಗೊಮ್ಮೆ ಬ್ರೇಕ್‌ ತೆಗೆದುಕೊಳ್ಳಿ

    9 ಗಂಟೆಗಳ ನಿರಂತರವಾಗಿ ಕೆಲಸ ಮಾಡುವವರು ಕನಿಷ್ಠ 30 ನಿಮಿಷಗಳಿಗೊಮ್ಮೆ ಬ್ರೇಕ್‌ ತೆಗೆದುಕೊಳ್ಳಬೇಕು. ಕುಳಿತಿರುವ ಜಾಗದಿಂದ ಎದ್ದು ಓಡಾಡುವುದು ಒಳಿತು. ಇದರಿಂದ ದೇಹ ಹಾಗೂ ಕಣ್ಣುಗಳ ಮೇಲಾಗುವ ಒತ್ತಡವನ್ನು ನಿಯಂತ್ರಿಸಬಹುದು. ಕೆಲವೊಮ್ಮೆ ಕೆಲಸದ ಮಧ್ಯೆ ಬ್ರೇಕ್‌ ತೆಗೆದುಕೊಂಡರೂ ಆ ವೇಳೆಯೂ ಮೊಬೈಲ್‌ ನೋಡುವ ಮೂಲಕ ಮತ್ತದೇ ತಪ್ಪನ್ನು ಮಾಡುತ್ತಾರೆ. ಇದರಿಂದ ಕಣ್ಣಿಗೆ ಹೆಚ್ಚು ದನಿವಾಗಲಿದೆ. ಕಣ್ಣಿನ ನರಗಳು ನೇರ ಮೆದುಳಿಗೆ ಹೊಂದಿಕೊಂಡಿರುವುದರಿಂದ ತಲೆನೋವಿಗೆ ಇದು ಪ್ರಮುಖ ಕಾರಣವಾಗಲಿದೆ.

    ಕಂಪ್ಯೂಟರ್‌ ಅಥವಾ ಮೊಬೈಲ್‌ ಸ್ಕ್ರೀನ್‌ನ ಬ್ರೈಟ್‌ನೆಸ್‌ ಬಗ್ಗೆ ಗಮನವಿರಲಿ

    ವಾತಾವರಣಕ್ಕೆ ಅನುಗುಣವಾಗಿ ಸ್ಕ್ರೀನ್‌ ಬ್ರೈಟ್‌ನೆಸ್‌ ಇಟ್ಟುಕೊಳ್ಳುವುದು ಮುಖ್ಯ. ಕೆಲವರು ತಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ ಸ್ಕ್ರೀನ್‌ನ ಬ್ರೈಟ್‌ನೆಸ್‌ನಲ್ಲಿ ಅನವಶ್ಯಕವಾಗಿ ಹೆಚ್ಚಾಗಿ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ತೀರು ಕಡಿಮೆ ಇಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಅತಿ ಹೆಚ್ಚು ಬೆಳಕು ಹಾಗೂ ಕಡಿಮೆ ಬೆಳಕು ಎರಡೂ ಕಣ್ಣಿಗೆ ಒತ್ತಡ ಹಾಕಿದಂತೆ.

    ಸಣ್ಣ ತಲೆ ನೋವಿಗೂ ಮಾತ್ರೆಗಳನ್ನು ತೆಗೆದುಕೊಳ್ಳುವ ಹವ್ಯಾಸ ಬೇಡ

    ಮಾತ್ರೆ ತೆಗೆದುಕೊಳ್ಳುವುದರಿಂದ ತಲೆ ನೋವು ನಿವಾರಣೆಯಾಗಬಹುದು ಆದರೆ ಅದರಿಂದ ಭವಿಷ್ಯದಲ್ಲಿ ಇದರಿಂದ ಸೈಡ್‌ಎಫೆಕ್ಟ್‌ ಉಂಟಾಗಬಹುದು.  ಕೆಲವರು ಸಣ್ಣ ತಲೆ ನೋವಿಗೂ ಮಾತ್ರೆಗಳನ್ನು ತೆಗೆದುಕೊಳ್ಳುವ ಹವ್ಯಾಸ ಹೊಂದಿರುತ್ತಾರೆ. ಇದು ಅತ್ಯಂತ ಅಪಾಯಕಾರಿ. ಹೀಗಾಗಿ ಮಾತ್ರೆ ತೆಗೆದುಕೊಳ್ಳುವ ಬದಲು ನಿಮ್ಮ ತಲೆನೋವು ಯಾವ ರೀತಿಯದ್ದು ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆಯಿರಿ ಅಥವಾ ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ.

    ಇದನ್ನೂ ಓದಿ: Watermelon Seeds: ಕಲ್ಲಂಗಡಿ ಬೀಜ ಎಸೆಯೋ ಬದಲು ಹೀಗೆ ತಿನ್ನಿ, ಆರೋಗ್ಯ ಲಾಭ ಬಹಳಷ್ಟಿದೆ

    ಆಂಟಿ ರೇಡಿಯೇಷನ್‌ ಕಂಪ್ಯೂಟರ್‌ ಗ್ಲಾಸ್‌ನನ್ನು ವೈದ್ಯರ ಸಲಹೆ ಮೇರೆಗೆ ಪಡೆಯಿರಿ

    ಆಂಟಿ ರೇಡಿಯೇಷನ್‌ ಕಂಪ್ಯೂಟರ್‌ ಗ್ಲಾಸ್‌ ಕಂಪ್ಯೂಟರ್‌ನಲ್ಲಿ ಹೆಚ್ಚು ಸಮಯ ಕಳೆಯುವವರು ಕಡ್ಡಾಯವಾಗಿ ಆಂಟಿ ರೇಡಿಯೇಷನ್‌ ಕಂಪ್ಯೂಟರ್‌ ಗ್ಲಾಸ್‌ನನ್ನು ವೈದ್ಯರ ಸಲಹೆ ಮೇರೆಗೆ ಪಡೆಯಿರಿ. ಇದರಿಂದ ಕಂಪ್ಯೂಟರ್‌ ಸ್ಕ್ರೀನ್‌ ಮೇಲಿನ ಬ್ರೈಟ್‌ನೆಸ್‌ನಿಂದ ನಿಮ್ಮ ಕಣ್ಣಿಗೆ ಆಗುವ ಹಾನಿಯನ್ನು ತಡೆಯುವ ಜೊತೆಗೆ ತಲೆ ನೋವನ್ನು ನಿಗ್ರಹಿಸಲು ಸಾಧ್ಯವಾಗಲಿದೆ.
    Published by:Swathi Nayak
    First published: