Acidic Burping remedies: ನೀವು ಹುಳಿ ತೇಗಿನ ಸಮಸ್ಯೆಯಿಂದ‌‌ ಬಳಲುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಸರಳ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಈ ಗಾಳಿಯನ್ನು ದೇಹದಿಂದ ಹೊರಹಾಕುವ ಮಾರ್ಗವೆಂದರೆ ತೇಗು. ಹೀಗೆ ತೇಗು ಬರುವಾಗ ಸೇವಿಸಿದ ಆಹಾರ ಕೂಡಾ ಗಂಟಲಿಗೆ ಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ.  ಏನಾದರು ತಿಂದು ಹೊಟ್ಟೆ (Stomach) ತುಂಬಿದ ನಂತರ ತೇಗು ಬರುವುದು ಸಾಮಾನ್ಯ. ಏನನ್ನಾದರೂ ತಿನ್ನುವಾಗ ಅಥವಾ ಕುಡಿಯುವಾಗ, ಆಹಾರದ (Food) ಜೊತೆಗೆ, ದೇಹದೊಳಗೆ ಗಾಳಿಯನ್ನು ಕೂಡಾ ತೆಗೆದುಕೊಳ್ಳುತ್ತೇವೆ. ಈ ಗಾಳಿಯನ್ನು ದೇಹದಿಂದ ಹೊರಹಾಕುವ ಮಾರ್ಗವೆಂದರೆ ತೇಗು. ಹೀಗೆ ತೇಗು ಬರುವಾಗ ಸೇವಿಸಿದ ಆಹಾರ ಕೂಡಾ ಗಂಟಲಿಗೆ ಬರುತ್ತದೆ. ಇದರೊಂದಿಗೆ ಬಾಯಿಯಲ್ಲಿ ಹುಳಿ ನೀರು, ಗಂಟಲು, (Throat) ಹೊಟ್ಟೆ ಮತ್ತು ಎದೆಯಲ್ಲಿ ತೀವ್ರವಾದ ಉರಿ ಕಂಡು ಬರುತ್ತದೆ. ಇದನ್ನು ಹುಳಿ ತೇಗು ಅಥವ ಆಸಿಡ್ ಬರ್ಪಿಂಗ್ (Acidic Burping) ಎಂದು ಕರೆಯುತ್ತಾರೆ.

    ಇಂಗು ತೇಗಿನ ಸಮಸ್ಯೆಗೂ ರಾಮಬಾಣ

    ಇಂಗು ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚು ಬಳಕೆಯಾಗುವ ಅಡುಗೆ ಪದಾರ್ಥವಾಗಿದ್ದು ತೇಗಿನ ಸಮಸ್ಯೆಗೂ ರಾಮಬಾಣವಾಗಿದೆ. ಆಮ್ಲತೆಯಿಂದ ಉಂಟಾಗುವ ತೇಗಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಹೊಟ್ಟೆಯಲ್ಲಿ ಆಮ್ಲದಿಂದ ಉತ್ಪಾದನೆಯಾಗಿರುವ ಹೊಟ್ಟೆ ನೋವನ್ನು ಇದು ನಿವಾರಿಸುತ್ತದೆ. ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ಇಂಗನ್ನು ಹಾಕಿರಿ. ನಂತರ ದಿನದಲ್ಲಿ ಸ್ವಲ್ಪ ಸೇವಿಸುತ್ತಿರಿ. ಇದು ಖಂಡಿತ ಪ್ರಯೋಜನಕಾರಿಯಾಗಿದೆ.

    ಇದನ್ನೂ ಓದಿ: High BP: ಅಧಿಕ ರಕ್ತದೊತ್ತಡದ ಸಮಸ್ಯೆಯೇ? ಹಾಗಿದ್ರೆ ಈ ಆಹಾರಗಳನ್ನು ಸೇವಿಸಿ

    ಪುದೀನಾ  ಸೇವನೆಯಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ

    ಬೇಸಿಗೆ ಕಾಲದಲ್ಲಿ ಪುದೀನಾ ಸೊಪ್ಪಿನ ಬಳಕೆ ಹೆಚ್ಚು ಮಾಡಬೇಕು. ಪುದೀನಾ ಸೊಪ್ಪು ಹೊಟ್ಟೆಗೆ ತಂಪು ಮತ್ತು ತಾಜಾತನವನ್ನು ನೀಡುತ್ತದೆ. ಪುದೀನಾ ಸೇವನೆಯಿಂದ ಜೀರ್ಣಕ್ರಿಯೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಪುದೀನಾ ಸೇವನೆ ಮಾಡುವುದರಿಂದ ಹುಳಿ ತೇಗು ಕೂಡ ಬರುವುದಿಲ್ಲ.

    ಮೊಸರು ಹೊಟ್ಟೆಯನ್ನು ತಣ್ಣಗಿಡುತ್ತದೆ

    ಪ್ರತಿದಿನ ಊಟದ ನಂತರ ಮೊಸರು ಸೇವನೆ ಮಾಡಬೇಕು.  ಮೊಸರು ಹೊಟ್ಟೆಯನ್ನು ತಣ್ಣಗಿಡುತ್ತದೆ. ಅದಕ್ಕಾಗಿಯೇ ಇದನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದ ಉದರ ಬಾಧೆ ದೂರವಾಗುತ್ತದೆ, ಜೊತೆಗೆ ಹುಳಿತೇಗಿನ ಸಮಸ್ಯೆಯೂ ಉಂಟಾಗುವುದಿಲ್ಲ.

    ಸೋಂಪು  ಅತ್ಯುತ್ತಮವಾದ ಜೀರ್ಣಶಕ್ತಿ ಪ್ರಚೋದಕ

    ಸೋಂಪು ಇದು ಅತ್ಯುತ್ತಮವಾದ ಜೀರ್ಣಶಕ್ತಿ ಪ್ರಚೋದಕ, ಮಲಬದ್ದತೆಯನ್ನು ನಿವಾರಿಸುತ್ತದೆ. ಇದರಲ್ಲಿ ಫ್ಲೇವನೋಯ್ಡ್ಸ್ ಇದ್ದು, ಯಥೇಚ್ಛವಾದ ವೊಲಟೈಲ್ ಹೊಂದಿದೆ. ಇದರಲ್ಲಿ ಪ್ಲಮಿಟಿ ಆಸಿಡ್ ಹಾಗು ಇನ್ನಿತರ ಅಂಶಗಳು ಇವೆ. ಇದು ಅಲ್ಸರ್ ರೋಗ ಬರದಂತೆ ತಡೆಯುವ ಅಂಶಗಳನ್ನು ತನ್ನಲ್ಲಿ ಹೊಂದಿದೆ. ಇವುಗಳೆಲ್ಲದರ ಜೊತೆಗೆ ಇದನ್ನು ಸೇವಿಸಿದ ತಕ್ಷಣ ಹೊಟ್ಟೆ ತಣ್ಣಗೆ ಹಾಗುತ್ತದೆ. ಹಾಗಾಗಿ ಇದು ಅಸಿಡಿಟಿಯಿಂದ ತಕ್ಷಣ ಉಪಶಮನವನ್ನು ನೀಡುತ್ತದೆ. ಅದಕ್ಕಾಗಿಯೇ ಹೋಟೆಲ್‍ಗಳಲ್ಲಿ ಊಟವಾದ ನಂತರ ಸೋಂಪುನ್ನು ನೀಡುತ್ತಾರೆ.

    ಇದನ್ನೂ ಓದಿ: Weight Loss: ಗಿಡಮೂಲಿಕೆಗಳಿಂದ ಶೀಘ್ರ ತೂಕ ಇಳಿಕೆ, ಇದು ಹೇಗೆ ಕೆಲಸ ಮಾಡುತ್ತೆ?

    ಒಂದು ಲೋಟ ತಣ್ಣಗಿನ ಹಾಲನ್ನು ಸೇವಿಸುವುದರಿಂದಾಗಿ ಅಸಿಡಿಟಿಯನ್ನು ದೂರವಿಡಬಹುದು

    ಹಾಲಿನಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಈ ಕ್ಯಾಲ್ಸಿಯಂ ನಮ್ಮ ಉದರದಲ್ಲಿ ಅಸಿಡ್ ಸಂಚಯಗೊಳ್ಳುವುದನ್ನು ತಡೆಯುತ್ತದೆ. ಒಂದು ಲೋಟ ಹಾಲನ್ನು ಸೇವಿಸುವುದರಿಂದಾಗಿ ಅಸಿಡಿಟಿಯನ್ನು ದೂರವಿಡಬಹುದು. ತಣ್ಣಗಿನ ಹಾಲು ಹೊಟ್ಟೆ ಉರಿಯಿಂದ ತಕ್ಷಣ ಉಪಶಮನ ನೀಡುತ್ತದೆ. ಇದನ್ನು ತಣ್ಣಗಿನ ಹಾಲನ್ನು ಸೇವಿಸುವಾಗ ನೀವು ಸಹ ಗಮನಿಸಬಹುದು. ಸಕ್ಕರೆ ಇಲ್ಲದ, ಕೆನೆ ತೆಗೆದ ಹಾಲು ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

    ಎರಡು ಏಲಕ್ಕಿಯನ್ನು ಜಗಿದು ನೀರು ಕುಡಿದರೆ ಹುಳಿ ತೇಗಿನ ಸಮಸ್ಯೆಗೆ ಪರಿಹಾರ

    ಆಹಾರದ ಸುವಾಸನೆ ಹೆಚ್ಚಿಸಲು ಚಿಕ್ಕ ಏಲಕ್ಕಿಯನ್ನು ಹೆಚ್ಚಾಗಿ ಬಳಸುತ್ತೇವೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್. ಒಂದು ಅಥವಾ ಎರಡು ಏಲಕ್ಕಿಯನ್ನು ಜಗಿದು ನೀರು ಕುಡಿದರೆ ಹುಳಿ ತೇಗಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

    ಹಸಿ ಶುಂಠಿಯನ್ನು ಸ್ವಲ್ಪ ಉಪ್ಪಿನೊಂದಿಗೆ ತಿಂದರೆ ತೇಗಿನ ಸಮಸ್ಯೆಗೆ ಪರಿಹಾರ

    ಆಹಾರದ ರುಚಿಯನ್ನು ಹೆಚ್ಚಿಸಲು ಶುಂಠಿಯನ್ನು ಮಸಾಲೆಯಾಗಿ ಬಳಸಲಾಗುತ್ತದೆ. ನೀವು ಚೂರು ಹಸಿ ಶುಂಠಿಯನ್ನು ಸ್ವಲ್ಪ ಉಪ್ಪಿನೊಂದಿಗೆ ಅಗಿದು ತಿಂದರೆ ಹೊಟ್ಟೆಯಲ್ಲಿರುವ ಆಸಿಡ್‌ ಅನ್ನು ತೊಡೆದುಹಾಕಬಹುದು.
    Published by:Swathi Nayak
    First published: