ದೇಹದ (Body) ವಿವಿಧ ಅಂಗಗಳಲ್ಲಿ (Parts) ಪಾದವೂ ಸಹ ಒಂದು. ದೇಹದ ವಿವಿಧ ಅಂಗಗಳ ಬಗ್ಗೆ ಕಾಳಜಿ (Care) ತೆಗೆದುಕೊಳ್ಳುವಂತೆ ಪಾದಗಳ ಬಗ್ಗೆಯೂ ಕಾಳಜಿ ವಹಿಸುವುದು ತುಂಬಾ ಮುಖ್ಯ. ಪಾದಗಳಿಗೆ ಮಸಾಜ್ (Foot Massage) ಮಾಡುವುದು ಒಂದು ಆಯುರ್ವೇದ ಚಿಕಿತ್ಸೆ (Ayurveda Treatment) ಆಗಿದೆ. ಪಾದಗಳಿಗೆ ಮಸಾಜ್ ಮಾಡುವುದು ಹಲವು ಕಾಯಿಲೆಗಳನ್ನು ನಿವಾರಣೆ ಮಾಡುವ ಚಿಕಿತ್ಸೆ ಆಗಿದೆ. ಮಲಗುವ ಮೊದಲು ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿದ್ರೆ ಆಯಾಸ ಮತ್ತು ನೋವಿನಿಂದ ಪರಿಹಾರ ಪಡೆಯಲು ಸಹಕಾರಿ. ಪಾದಗಳಿಗೆ ಮಸಾಜ್ ಮಾಡುವುದು ದೇಹಕ್ಕೆ ಚಿಕಿತ್ಸೆ ನೀಡಿದಂತೆ. ಮಸಾಜ್ ಮಾಡಿದ್ರೆ ದೇಹದ ಒತ್ತಡ ನಿವಾರಣೆ ಆಗುತ್ತದೆ.
ಪಾದಗಳಿಗೆ ಮಸಾಜ್ ಮಾಡುವುದು ಚಿಕಿತ್ಸೆಯಿದ್ದಂತೆ
ಆಯಾಸ ಹಾಗೂ ದಣಿವು, ಪಾದಗಳ ರಕ್ತ ಸಂಚಲನ ಸರಿಯಾಗುತ್ತದೆ. ನಿಯಮಿತವಾಗಿ ಪಾದಗಳಿಗೆ ಮಸಾಜ್ ಮಾಡಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಕೆಲವು ಅಧ್ಯಯನಗಳು ಈ ವಿಷಯಗಳನ್ನು ಬೆಂಬಲಿಸಿವೆ.
ಪಾದಗಳಿಗೆ ಮಸಾಜ್ ಮಾಡುವುದು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆನೋವಿನ ಸಮಸ್ಯೆ ನಿವಾರಿಸಲು ಇದು ಸಹಾಯ ಮಾಡುತ್ತದೆ. ಹಾಗಾಗದ್ರೆ ಪಾದಗಳಿಗೆ ಮಸಾಜ್ ಮಾಡಿದರೆ ಯಾವೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ನಾವು ಇಲ್ಲಿ ತಿಳಿಯೋಣ.
ಪಾದಗಳಿಗೆ ಮಸಾಜ್ ಮಾಡಿದ್ರೆ ರಕ್ತ ಪರಿಚಲನೆ ಸುಧಾರಿಸುತ್ತದೆ
ನಿಯಮಿತವಾಗಿ ಪಾದಗಳಿಗೆ ಮಸಾಜ್ ಮಾಡಿದರೆ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ದೈಹಿಕ ವ್ಯಾಯಾಮ ಅಥವಾ ಚಟುವಟಿಕೆ ಮಾಡದೇ ಹೋದರೆ ಕಾಲುಗಳು, ಪಾದಗಳು ಮತ್ತು ದೇಹದ ಸ್ನಾಯುಗಳು ಬಿಗಿಯುತ್ತವೆ.
ಇದು ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆ ಆಗದಂತೆ ತಡೆಯುತ್ತದೆ. ಹಾಗೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ದೇಹದ ಅನೇಕ ಅಂಗಗಳಲ್ಲಿ ನೋವುಂಟು ಮಾಡುತ್ತದೆ. ಗಂಭೀರ ಕಾಯಿಲೆ, ಪಾರ್ಶ್ವವಾಯು ಅಪಾಯ ಉಂಟು ಮಾಡುತ್ತದೆ.
ಪಾದದ ಅಡಿಭಾಗಕ್ಕೆ ಎಣ್ಣೆಯಿಂದ ಮಸಾಜ್ ಮಾಡಿದಾಗ ರಿಲ್ಯಾಕ್ಸ್ ಆಗುತ್ತದೆ. ಇಡೀ ದೇಹದ ನರಗಳು ಪಾದದ ಅಡಿಭಾಗಕ್ಕೆ ಸಂಪರ್ಕ ಹೊಂದಿರುತ್ತವೆ. ಹಾಗಾಗಿ ಪಾದಗಳಿಗೆ ಮಸಾಜ್ ಮಾಡುವುದು ತುಂಬಾ ಪ್ರಯೋಜನ ನೀಡುತ್ತದೆ.
ಪಾದದ ನೋವು ಪರಿಹಾರ ಮಾಡುವುದು ಹೇಗೆ?
ಅನಾದಿ ಕಾಲದಿಂದ ಜನರು ಪಾದ ಹಾಗೂ ಕೀಲುಗಳ ನೋವಿನಿಂದ ಬಳಲುತ್ತಿದ್ದಾರೆ. ಪಾದಕ್ಕೆ ಮಸಾಜ್ ಮಾಡಿದರೆ 26 ಮೂಳೆಗಳ ಆಯಾಸ ಕಡಿಮೆ ಆಗುತ್ತದೆ.
ಕೀಲುಗಳು, ಸ್ನಾಯುಗಳು ಮತ್ತು ಅಸ್ಥಿರಜ್ಜು ಆಯಾಸ ಕಡಿಮೆ ಮಾಡುತ್ತದೆ. ಪಾದಕ್ಕೆ ಮಸಾಜ್ ಮಾಡಿದರೆ ಬಿಗಿಯಾದ ಮತ್ತು ಉದ್ವಿಗ್ನ ಸ್ನಾಯು ಸಮಸ್ಯೆ ಕಡಿಮೆ ಆಗುತ್ತದೆ.
ರಕ್ತದೊತ್ತಡ ಕಡಿಮೆ ಆಗಲು ಸಹಕಾರಿ
ಪಾದಕ್ಕೆ ಮಸಾಜ್ ಮಾಡಿದರೆ ರಕ್ತದೊತ್ತಡ ಕಡಿಮೆ ಮಾಡಲು ಪ್ರಯೋಜನಕಾರಿ. 10 ನಿಮಿಷ ಪಾದಕ್ಕೆ ಮಸಾಜ್ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ.
ಚಪ್ಪಟೆ ಪಾದ ಸಮಸ್ಯೆ ಕಡಿಮೆಯಾಗುತ್ತದೆ
ಚಪ್ಪಟೆ ಪಾದ ಸಮಸ್ಯೆ ಕಡಿಮೆ ಆಗಲು ಪಾದಕ್ಕೆ ಮಸಾಜ್ ಮಾಡುವುದು ತುಂಬಾ ಮುಖ್ಯ. ಇದು ನಡಿಗೆಯಲ್ಲಿ ಬದಲಾವಣೆ, ಚಲನೆ ಚಟುವಟಿಕೆಗೆ ತೊಂದರೆ ಉಂಟು ಮಾಡುತ್ತದೆ. ಚಪ್ಪಟೆ ಪಾದ ಸಮಸ್ಯೆ ಗುಣಪಡಿಸಲು ಮಸಾಜ್ ಲಾಭಕಾರಿ. ಮಸಾಜ್ ಮಾಡಿದಾಗ ಪಾದಗಳ ಸ್ನಾಯು ಬಲವಾಗುತ್ತದೆ.
ಖಿನ್ನತೆ, ಒತ್ತಡ ನಿವಾರಣೆಯಾಗುತ್ತದೆ
ಮಸಾಜ್ ಮಾಡಿದಾಗ ಒತ್ತಡ ಕಡಿಮೆ ಆಗುತ್ತದೆ. ಖಿನ್ನತೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಪಾದಕ್ಕೆ ಮಸಾಜ್ ಮಾಡಿದರೆ ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆ ಆಗಲು ಸಹಕಾರಿ.
ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಗೆ ಪರಿಹಾರ
ಪಾದಗಳಲ್ಲಿ ಕೆಲವು ಆಕ್ಯುಪ್ರೆಶರ್ ಪಾಯಿಂಟ್ ಗಳಿವೆ. ಇದನ್ನು ಲಘುವಾಗಿ ಒತ್ತಿದರೆ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆ ನಿವಾರಣೆ ಆಗುತ್ತದೆ.
ಪಾದಗಳಿಗೆ ಮಸಾಜ್ ಹೇಗೆ ಮಾಡಬೇಕು?
ಉಗುರು ಬೆಚ್ಚಗಿನ ಎಣ್ಣೆ ತೆಗೆದುಕೊಂಡು ಪಾದಗಳಿಗೆ ಮಸಾಜ್ ಮಾಡಿ. ಪಾದದ ಅಡಿ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಅಂಗೈಗಳಿಂದ ಕಾಲ್ಬೆರಳುಗಳು ಮತ್ತು ಕಣಕಾಲು ಕಡೆಗೆ ಉಜ್ಜಿರಿ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ಎಳ್ಳು, ಬ್ರಾಹ್ಮಿ, ಸಾಸಿವೆ ಮುಂತಾದ ತೈಲ ಮಸಾಜ್ಗೆ ಬಳಸಬಹದು. ರಾತ್ರಿ ಮಲಗುವ ಮುನ್ನ, ಬೆಳಿಗ್ಗೆ ಎದ್ದ ನಂತರ ಮಸಾಜ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ