• Home
 • »
 • News
 • »
 • lifestyle
 • »
 • Self Care: ನಿಮ್ಮ ಮನಸ್ಸು ಗೊಂದಲದಲ್ಲಿದೆಯೇ? ಈ ಒಂದು ನಿಮಿಷದ ಸೆಲ್ಫ್ ಕೇರ್ ಟಿಪ್ಸ್ ಫಾಲೋ ಮಾಡಿ

Self Care: ನಿಮ್ಮ ಮನಸ್ಸು ಗೊಂದಲದಲ್ಲಿದೆಯೇ? ಈ ಒಂದು ನಿಮಿಷದ ಸೆಲ್ಫ್ ಕೇರ್ ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Self care: ಸ್ವಯಂ-ಆರೈಕೆಯು ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು, ಅನಾರೋಗ್ಯಕ್ಕೆ ಒಳಗಾಗುವ ನಿಮ್ಮ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಶಕ್ತಿಯನ್ನು ಹೊಂದಲು ನಿಮಗೆ ಸಹಾಯ ಮಾಡುತ್ತದೆ.

 • Share this:

ಈಗಿನ ಒತ್ತಡ ಭರಿತ ಕೆಲಸಗಳಲ್ಲಿ (work) ಮತ್ತು ಬ್ಯುಸಿ ಜೀವನದಲ್ಲಿ ನಮ್ಮ ಬಗ್ಗೆ ನಾವು ಸ್ವ-ಕಾಳಜಿ (Self Care) ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ (Important). ಎಂದರೆ ಅದು ದೈಹಿಕವಾಗಿ (Physically) ಅಥವಾ ಭಾವನಾತ್ಮಕವಾಗಿ ಇರಬಹುದು, ಒಟ್ಟಿನಲ್ಲಿ ನಮ್ಮ ಬಗ್ಗೆ ನಮಗೆ ಸ್ವಲ್ಪ ಸಮಯ ಕೊಡಲೇಬೇಕು. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ನಮಗೆ ಅಗತ್ಯವಿರುವ ಅಂಶವೆಂದರೆ ಅದು ಸಮಯ (Time) ಮತ್ತು ನಮ್ಮ ಬಗ್ಗೆ ನಾವು ಗಮನವನ್ನು ಹರಿಸುವುದಾಗಿದೆ. ಸ್ವಯಂ-ಆರೈಕೆಯು ಒತ್ತಡವನ್ನು(Stress) ಉತ್ತಮವಾಗಿ ನಿರ್ವಹಿಸಲು, ಅನಾರೋಗ್ಯಕ್ಕೆ ಒಳಗಾಗುವ ನಿಮ್ಮ ಸಾಧ್ಯತೆಯನ್ನು ಕಡಿಮೆ (Less) ಮಾಡಲು ಮತ್ತು ಹೆಚ್ಚಿನ ಶಕ್ತಿಯನ್ನು ಹೊಂದಲು ನಿಮಗೆ ಸಹಾಯ ಮಾಡುತ್ತದೆ.


ನಮ್ಮ ಕಾರ್ಯನಿರತ ಜೀವನದಲ್ಲಿ, ಸ್ವಯಂ-ಆರೈಕೆಯನ್ನು ಅಭ್ಯಾಸ ಮಾಡಲು ನಮಗೆ ಆಗಾಗ್ಗೆ ಸಮಯವಿರುವುದಿಲ್ಲ. ಆದರೆ, ಇದು ನಿಮ್ಮ ಆರೋಗ್ಯವನ್ನು ಸಂರಕ್ಷಿಸುವಲ್ಲಿ ಅಥವಾ ಸುಧಾರಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಅಭ್ಯಾಸವಾಗಿದೆ. ಸ್ವಯಂ-ಆರೈಕೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ವ್ಯಾಖ್ಯಾನವನ್ನು ನೀಡಬಹುದು, ಆದ್ದರಿಂದ ನೀವು ಏನನ್ನು ಗೌರವಿಸುತ್ತೀರಿ ಮತ್ತು ಏನನ್ನು ಬಯಸುತ್ತೀರಿ ಎಂಬುದನ್ನು ಕಂಡು ಹಿಡಿಯುವುದು ನಿರ್ಣಾಯಕವಾಗಿದೆ.ಸ್ವಯಂ-ಆರೈಕೆಯು ಮಾನಸಿಕ ಕಾಯಿಲೆಗಳಿಗೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲವಾದರೂ, ನಿಮ್ಮ ಸೌಮ್ಯ ರೋಗಲಕ್ಷಣಗಳನ್ನು ಯಾವುದು ಪ್ರಚೋದಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.


ಸೆಲ್ಫ್ ಕೇರ್ ಎಂದರೇನು?


"ನೆನಪಿಟ್ಟುಕೊಳ್ಳಬೇಕಾದ ಒಂದು ಪ್ರಮುಖ ವಿಷಯವೆಂದರೆ, ಸ್ವಯಂ-ಆರೈಕೆ ಎಂದರೆ ನೀವು ಒಮ್ಮೆ ಮಾಡಿ ಬಿಡುವಂತಹ ಕೆಲಸವಲ್ಲ. ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಲು ನಾವು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.


ಸ್ವಯಂ-ಕಾಳಜಿಯು ನಮ್ಮ ದೈನಂದಿನ ಜೀವನದಲ್ಲಿ ನಿರಂತರವಾಗಿ ಸಂಯೋಜಿಸಬೇಕಾದ ವಿಷಯವಾಗಿದೆ. ಅದಕ್ಕಾಗಿಯೇ ನೀವು ಮಾಡಬಹುದಾದ ಕೆಲಸಗಳ ಬಗ್ಗೆ ತಿಳಿದಿರುವುದು ತುಂಬಾ ಮುಖ್ಯ, ಅದು ತುಂಬಾ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ” ಎಂದು ಚಿಕಿತ್ಸಕ ಡಾ. ಕೇತಮ್ ಹಮ್ದಾನ್ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹೇಳುತ್ತಾರೆ.


ಇದನ್ನೂ ಓದಿ: ಮೈಸೂರು ದಸರಾ ಎಷ್ಟೊಂದು ಸುಂದರ, ನೀವೂ ಹೋದ್ರೆ ಇವುಗಳನ್ನು ನೋಡಲು ಮರೆಯಬೇಡಿ


ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಇಲ್ಲಿವೆ ನೋಡಿ 7 ಅನನ್ಯವಾದ ಸ್ವಯಂ-ಆರೈಕೆ ಸಲಹೆಗಳು


 • ಒಂದು ನಿಮಿಷ ಚಿಕ್ಕ ಮಗುವಿನಂತಹ ಅಥವಾ ಮೂರ್ಖತನದ ಏನನ್ನಾದರೂ ಮಾಡಿ. ಒಟ್ಟಿನಲ್ಲಿ ತಮಾಷೆ ಮಾಡಿ.

 • ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಮತ್ತು ನಿಮ್ಮ ಬಗ್ಗೆ ನೀವು ಇಷ್ಟಪಡುವ 3 ವಿಷಯಗಳನ್ನು ಹೇಳಿಕೊಳ್ಳಿ.

 • ನೀವು ಏನನ್ನು ಬಯಸುತ್ತೀರೋ ಅದರ ಬಗ್ಗೆ ಮತ್ತು ನಿಮ್ಮ ಭಯಗಳನ್ನು ತೊಡೆದು ಹಾಕಲು ಒಂದು ನಿಮಿಷವನ್ನು ಕಳೆಯಿರಿ.

 • ಸುವಾಸನೆಯನ್ನು ಆನಂದಿಸಿ ಉದಾಹರಣೆಗೆ, ಕೆಲವು ಸುಂದರವಾದ ವಾಸನೆಯ ಹ್ಯಾಂಡ್ ಕ್ರೀಮ್ ಅನ್ನು ಬಳಸುವುದು, ಪರಿಮಳಯುಕ್ತ ಮೇಣದ ಬತ್ತಿಯನ್ನು ಬೆಳಗಿಸುವುದು ಅಥವಾ ಕೆಲವು ತಾಜಾ ಹೂವುಗಳ ವಾಸನೆ ನೋಡುವುದು.

 • ಯಾರನ್ನಾದರೂ ತಬ್ಬಿಕೊಳ್ಳಿ.. ಸರಾಸರಿ ಅಪ್ಪುಗೆ 6 ಸೆಕೆಂಡುಗಳು ಇರಬೇಕು, ಆ ಭಾವನೆ ಉತ್ತಮವಾಗಿದ್ದು, ಹಾರ್ಮೋನುಗಳನ್ನು (ಆಕ್ಸಿಟೋಸಿನ್) ಬಿಡುಗಡೆ ಮಾಡಲು ಹೆಚ್ಚು ಕಾಲ ತಬ್ಬಿಕೊಳ್ಳಲು ಪ್ರಯತ್ನಿಸಿ. ಸಂಗಾತಿ, ಸ್ನೇಹಿತ, ಕುಟುಂಬ ಸದಸ್ಯರು ಅಥವಾ ಸಾಕುಪ್ರಾಣಿಗಳನ್ನು ಬಿಗಿಯಾಗಿ ಅಪ್ಪಿಕೊಳ್ಳಿ.


  ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಸುಧಾಮೂರ್ತಿ ಕೊಟ್ಟ ಈ ವಿಶೇಷ ಸೀರೆ ಬೆಲೆ ಎಷ್ಟು ಗೊತ್ತಾ? ನೀವೂ ಖರೀದಿಸಬಹುದು


 • ನಿಮ್ಮ ಇಡೀ ದೇಹವನ್ನು ಒಂದು ನಿಮಿಷ ಚೆನ್ನಾಗಿ ನೋಡಿಕೊಳ್ಳಿ ಮತ್ತು ನಿಮ್ಮ ದೇಹದಲ್ಲಿ ನೀವು ಏನನ್ನು ಅನುಭವಿಸುತ್ತಿದ್ದೀರಿ ಎಂಬುದನ್ನು ಮೊದಲು ಗಮನಿಸಿ. ನೀವು ಎಲ್ಲಿ ಉದ್ವಿಗ್ನರಾಗಿದ್ದೀರಿ? ನೀವು ನೋವನ್ನು ಎಲ್ಲಿ ಅನುಭವಿಸುತ್ತೀರಿ ಅಂತ ಮೊದಲು ಗಮನಿಸಿ.

 • ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಒಂದು ನಿಮಿಷ ಆಲೋಚಿಸಿ ಮತ್ತು ನೀವು ನಿಜವಾಗಿಯೂ ಸಂತೋಷವಾಗಿದ್ದ ಹಿಂದಿನ ಸಮಯವನ್ನು ಒಮ್ಮೆ ನೆನಪಿಸಿಕೊಳ್ಳಿರಿ. ಗತಕಾಲದ ಸಂತೋಷದ ಸ್ಮರಣೆಯನ್ನು ಪುನರುಜ್ಜೀವನಗೊಳಿಸಿ ಮತ್ತು ಆ ಕ್ಷಣಗಳನ್ನು ಆನಂದಿಸಿ.

First published: