• Home
  • »
  • News
  • »
  • lifestyle
  • »
  • Upma Recipe: ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕೆನ್ನುವ ರುಚಿಯಾದ ಮಸಾಲೆ ಉಪ್ಪಿಟ್ಟು ಮಾಡುವ ವಿಧಾನ

Upma Recipe: ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕೆನ್ನುವ ರುಚಿಯಾದ ಮಸಾಲೆ ಉಪ್ಪಿಟ್ಟು ಮಾಡುವ ವಿಧಾನ

ಉಪ್ಪಿಟ್ಟು

ಉಪ್ಪಿಟ್ಟು

ಪ್ರತಿದಿನ ಮಾಡುವ ರೆಸಿಪಿಯಲ್ಲಿ ಕೆಲವು ಹೆಚ್ಚುವರಿ ಪದಾರ್ಥ ಸೇರಿಸಿ ಒಂದಿಷ್ಟು ವಿಶೇಷ ವಿಧಾನಗಳನ್ನು ಬಳಸಿಕೊಂಡಲ್ಲಿ ರುಚಿ ರುಚಿಯಾದ ಮಸಾಲೆ ಉಪ್ಪಿಟ್ಟು ಸಿದ್ಧವಾಗುತ್ತದೆ.

  • Share this:

    ಪ್ರತಿದಿನ ಹೊಸ ತಿಂಡಿ (Breakfast) ಮಾಡೋಕೆ ಇದು ಹೋಟೆಲ್ (Hotel) ಅಲ್ಲ ಅಂತ ಮನೆಯಲ್ಲಿ ಅಮ್ಮಂದಿರು ಹೇಳುತ್ತಿರುತ್ತಾರೆ. ಆದ್ರೆ ಮನೆಯ ಇತರೆ ಸದಸ್ಯರು ಬೆಳಗ್ಗೆ ಹೊಸ ರುಚಿ (New Taste) ನೋಡಲು ಅಡುಗೆ ಮನೆಯನ್ನು ಇಣುಕಿ ನೋಡುತ್ತಾರೆ. ದಕ್ಷಿಣ ಭಾರತದಲ್ಲಿ (South India Breakfast) ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು, ಪೋಹಾ ಅಥವಾ ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರನ್ನಾವನ್ನು ತಿಂಡಿಯಾಗಿ ನೀಡುತ್ತಾರೆ. ಆದರೆ ಅದೇಕೋ ಗೊತ್ತಿಲ್ಲ ಕೆಲವರು ಉಪ್ಪಿಟ್ಟು (Uppittu/Upma) ಹೆಸರು ಕೇಳಿದ ಕೂಡಲೇ ಜಗಳಕ್ಕೆ ಇಳಿಯುತ್ತಾರೆ. ಇಂದು ನಾವು ಹೇಳುವ ಶೈಲಿಯಲ್ಲಿ ಒಮ್ಮೆ ಉಪ್ಪಿಟ್ಟು (Uppittu Recipe) ತಯಾರಿಸಿ ಕೊಟ್ರೆ ಅವರು ಸಹ ಮತ್ತೆ ಯಾವಾಗ ತಿಂಡಿ ಮಾಡುತ್ತೀರಿ ಎಂದು ಕೇಳಿ ಒಂದು ಪ್ಲೇಟ್ ಬುಕ್ ಮಾಡಿ ಹೋಗ್ತಾರೆ. ಹೌದು, ಇಂದು ನಾವು ನಿಮಗೆ ಮಸಾಲೆ ಉಪ್ಪಿಟ್ಟು/ಉಪ್ಮಾ (Masala Upma Recipe) ಹೇಗೆ ತಯಾರಿಸಬೇಕು ಎಂಬುದರ ರೆಸಿಪಿ ಹೇಳುತ್ತಿದ್ದೇವೆ.


    ಪ್ರತಿದಿನ ಮಾಡುವ ರೆಸಿಪಿಯಲ್ಲಿ ಕೆಲವು ಹೆಚ್ಚುವರಿ ಪದಾರ್ಥ ಸೇರಿಸಿ ಒಂದಿಷ್ಟು ವಿಶೇಷ ವಿಧಾನಗಳನ್ನು ಬಳಸಿಕೊಂಡಲ್ಲಿ ರುಚಿ ರುಚಿಯಾದ ಮಸಾಲೆ ಉಪ್ಪಿಟ್ಟು ಸಿದ್ಧವಾಗುತ್ತದೆ.


    ಮಸಾಲೆ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು


    ದಪ್ಪ ರವೆ: ಒಂದು ಕಪ್


    ಹಸಿಮೆಣಸಿನಕಾಯಿ: ನಾಲ್ಕು


    ಸಾಸಿವೆ ಮತ್ತು ಜೀರಿಗೆ ಸೇರಿಸಿ: 1 ಟೀ ಸ್ಪೂನ್


    ಈರುಳ್ಳಿ: 2 (ಮಧ್ಯಮ ಗಾತ್ರದ್ದು)


    ಟೊಮಾಟೋ: ಒಂದು ಚಿಕ್ಕದ್ದು


    ನಿಂಬೆಹಣ್ಣು: ಒಂದು


    ಹಸಿತೆಂಗಿನಕಾಯಿ ತುರಿ: 2 ಟೀ ಸ್ಪೂನ್


    ಲವಂಗ, ಚೆಕ್ಕೆ ಪೌಡರ್: ಅರ್ಧ ಟೀ ಸ್ಪೂನ್


    ಕಡಲೆಬೇಳೆ: ಅರ್ಧ ಟೀ ಸ್ಪೂನ್


    ಉದ್ದಿನಬೇಳೆ: ಅರ್ಧ ಟೀ ಸ್ಪೂನ್


    ಬೀನ್ಸ್: 2


    ಕ್ಯಾರೆಟ್: 1 (ಚಿಕ್ಕದು)


    ಅರಿಶಿಣ: ಚಿಟಿಕೆ


    ಅಚ್ಚ ಖಾರದ ಪುಡಿ: 1 ಟೀ ಸ್ಪೂನ್


    ಕರಿಬೇವು: 4 ಎಲೆ


    ಶುಂಠಿ ಪೇಸ್ಟ್: ½ ಟೀ ಸ್ಪೂನ್


    ಕೋತಂಬರಿ ಸೊಪ್ಪು


    ಏಲಕ್ಕಿ: ಒಂದು


    ಎಣ್ಣೆ: 4 ಟೀ ಸ್ಪೂನ್


    ಉಪ್ಪು: ರುಚಿಗೆ ತಕ್ಕಷ್ಟು


    ಇದನ್ನೂ ಓದಿ:  Upma Recipe: ಬಾಯಲ್ಲಿ ಇಟ್ರೆ ಕರಗುತ್ತೆ ತುಪ್ಪದ ಉಪ್ಪಿಟ್ಟು; ರೆಸಿಪಿ ತುಂಬಾನೇ ಸಿಂಪಲ್, ನೀವು ಟ್ರೈ ಮಾಡಿ


    ಮಸಾಲೆ ಉಪ್ಪಿಟ್ಟು ಮಾಡುವ ವಿಧಾನ


    *ಮೊದಲಿಗೆ ಒಂದು ಪಾತ್ರೆಗೆ ರವೆ ಹಾಕಿಕೊಂಡು ಒಂದು ಟೀ ಸ್ಪೂನ್ ಎಣ್ಣೆ ಹಾಕಿ ಘಮ ಘಮ ಪರಿಮಳ ಬರೋವರೆಗೂ ಹುರಿದುಕೊಳ್ಳಿ. ನಂತರ ರವೆಯನ್ನು ಪಾತ್ರೆಯೊಂದರಲ್ಲಿ ಎತ್ತಿಟ್ಟುಕೊಳ್ಳಿ.


    How to make very delicious masala upma recipe
    ಉಪ್ಪಿಟ್ಟು


    *ಮಿಕ್ಸಿ ಜಾರ್​ಗೆ ಹಸಿಕೊಬ್ಬರಿ ತುರಿ, ಲವಂಗ-ಚಕ್ಕೆ ಪೌಡರ್, ಮೂರು ಮೆಣಸಿನಕಾಯಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.


    *ತದನಂತರ ಬೀನ್ಸ್, ಕ್ಯಾರೆಟ್, ಈರುಳ್ಳಿ, ಕ್ಯಾರೆಟ್, ಟೊಮಾಟೋ, ಕರಿಬೇವು ಮತ್ತು ಕೋತಂಬರಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.


    *ಈಗ ಅಗಲವಾದ ಪಾತ್ರೆಯನ್ನು ಒಲೆಯ ಮೇಲಿಟ್ಟುಕೊಂಡು ಗ್ಯಾಸ್​ ಸ್ಟೌವ್ ಆನ್ ಮಾಡಿಕೊಳ್ಳಿ. ಉಪ್ಪಿಟ್ಟು ಸಿದ್ಧವಾಗೋವರೆಗೂ ಕಡಿಮೆ ಉರಿಯಲ್ಲಿಯೇ ಇರಬೇಕು.


    *ಈಗ ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಕಡಲೆಬೇಳೆ, ಜೀರಿಗೆ, ಸಾಸಿವೆ ಹಾಕಿ. ಸಾಸವೆ ಚಿಟಪಟ ಅಂತ ಸಿಡಿಯುತ್ತಿದ್ದಂತೆ ಉದ್ದಿನಬೇಳೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.


    *ತದನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈರುಳ್ಳಿ ಬೇಯುತ್ತಿದ್ದಂತೆ ಎರಡು ತುಂಡು ಮಾಡಿಕೊಂಡಿರುವ ಹಸಿಮೆಣಸಿನಕಾಯಿ ಮತ್ತು ಕರಿಬೇವು, ಬೀನ್ಸ್ ಮತ್ತು ಕ್ಯಾರೆಟ್ ಸೇರಿಸಿ ಫ್ರೈ ಮಾಡಿ.


    How to make very delicious masala upma recipe
    ಉಪ್ಪಿಟ್ಟು


    *ಎಲ್ಲಾ ತರಕಾರಿ ಬೇಯುತ್ತಿದ್ದಂತೆ ಚಿಟಿಕೆ ಅರಿಶಿನ, ಅಚ್ಚ ಖಾರದ ಪುಡಿ, ಶುಂಠಿ ಪೇಸ್ಟ್ ಸೇರಿಸಿ ಬಾಡಿಸಿಕೊಳ್ಳಿ. ಈಗ ಕೊಬ್ಬರಿ ಮಿಶ್ರಣ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎರಡರಿಂದ ಮೂರು ನಿಮಿಷ ಬೇಯಿಸಿ.


    ಇದನ್ನೂ ಓದಿ:  Breakfast Recipe: ಉಪ್ಪಿಟ್ಟನ್ನು ಮತ್ತಷ್ಟು ರುಚಿಯಾಗಿಸಲು ಈ ಪದಾರ್ಥಗಳನ್ನ ಬಳಿಸಿ


    *ಮಸಾಲೆ ಸಂಪೂರ್ಣ ಬೇಯುತ್ತಿದ್ದಂತೆ ಎರಡೂವರೆ ಕಪ್ ನೀರು ಸೇರಿಸಿ. ಎರಡು ನಿಮಿಷದ ಬಳಿಕ ಹುರಿದಿಟ್ಟುಕೊಂಡಿರುವ ರವೆಯನ್ನು ಹಾಕಿ ಗಂಟು ಆಗದಂತೆ ಚಮಚದಿಂದ ಮೇಲೆ ಕೆಳಗೆ ಮಾಡಿ.


    *ತದನಂತರ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿ, ತದನಂತರ ನಿಂಬೆ ಹಣ್ಣಿನ ರಸ ಮತ್ತು ಕೋತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿದ್ರೆ ರುಚಿ ರುಚಿಯಾದ ಮಸಾಲೆ ಉಪ್ಪಿಟ್ಟು ಸವಿಯಲು ಸಿದ್ಧ.

    Published by:Mahmadrafik K
    First published: