Variety Smoothies: ಪೋಷಕಾಂಶಗಳಿಂದ ತುಂಬಿರುವ ವಿವಿಧ ಬಗೆಯ ಸ್ಮೂಥಿ ಮಾಡಿ ಸವಿಯಿರಿ

ಸ್ಮೂಥಿಗಳು ಆರೋಗ್ಯದ ಜೊತೆಗೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಜೊತೆಗೆ ಫೈಬರ್ ವಿಟಮಿನ್ ಮತ್ತು ಸಂಪೂರ್ಣ ಪೌಷ್ಠಿಕಾಂಶ ನೀಡುತ್ತವೆ ಮತ್ತು ತೂಕ ನಷ್ಟಕ್ಕೂ ಸಹಾಯ ಮಾಡುತ್ತವೆ. ಹಾಗಾದ್ರೆ ನಾವು ಇಲ್ಲಿ ಮಾರ್ನಿಂಗ್ ಯಾವ ಸ್ಮೂಥಿ ಮಾಡಬಹುದು ಎಂದು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಿನ ಉಪಾಹಾರಕ್ಕೆ (Morning Breakfast) ಸಾಕಷ್ಟು ಯೋಚನೆ (Think) ಮಾಡಿ ಮಾಡಲಾಗುತ್ತದೆ. ಯಾಕಂದ್ರೆ ದಿನದ ಆರಂಭವು ರುಚಿಕರ (Tasty) ಮತ್ತು ದೀರ್ಘಕಾಲದ ಹೊಟ್ಟೆ ತುಂಬಿಸುವ ಪದಾರ್ಥ ಸೇವನೆ ಮಾಡುವುದು ಸಾಕಷ್ಟು ಮುಖ್ಯ. ಜೊತೆಗೆ ನಾವು ತಿನ್ನುವ ಆಹಾರವು (Food) ಆರೋಗ್ಯಕರವಾಗಿರಬೇಕು (Healthy). ಇನ್ನು ಬೆಳಗ್ಗೆ ಟಿಫನ್ ಆದಷ್ಟು ವೆರೈಟಿ ಮತ್ತು ಹೆಲ್ದೀ ಆಗಿರಬೇಕೆಂಬುದು ಎಲ್ಲರ ಪ್ರಯತ್ನವಾಗಿರುತ್ತದೆ. ಆದರೆ ಅನೇಕರಿಗೆ ಬೆಳಿಗ್ಗೆ ತಿಂಡಿ ಮಾಡಲು ಬಹಳ ಕಡಿಮೆ ಸಮಯ ಸಿಗುತ್ತದೆ. ನೀವು ಬೆಳಗ್ಗೆ ಗಡಿಬಿಡಿ ಅಥವಾ ಟಿಫನ್ ಮಾಡಲು ಸಾಕಷ್ಟು ಸಮಯ ಹೊಂದಿಲ್ಲದಿದ್ರೆ ಐದು ದಿನಗಳವರೆಗೆ ಐದು ರೀತಿಯ ಸ್ಮೂಥಿ ಪಾಕವಿ ಧಾನ ಮಾಡಿ ಸವಿಯಬಹುದು.

    ಸ್ಮೂಥಿಗಳು ಆರೋಗ್ಯದ ಜೊತೆಗೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಜೊತೆಗೆ ಫೈಬರ್, ವಿಟಮಿನ್ ಮತ್ತು ಸಂಪೂರ್ಣ ಪೌಷ್ಠಿಕಾಂಶ ನೀಡುತ್ತವೆ ಮತ್ತು ತೂಕ ನಷ್ಟಕ್ಕೂ ಸಹಾಯ ಮಾಡುತ್ತವೆ. ಹಾಗಾದ್ರೆ ನಾವು ಇಲ್ಲಿ ಮಾರ್ನಿಂಗ್ ನಾವು ಯಾವ ಸ್ಮೂಥಿ ಮಾಡಬಹುದು ಎಂದು ನೋಡೋಣ.

    ಬಾಳೆಹಣ್ಣು ಓಟ್ ಮೀಲ್ ಸ್ಮೂಥಿ

    ಬಾಳೆಹಣ್ಣು ಪ್ರತಿ ಋತುವಿನಲ್ಲಿ ಲಭ್ಯ ಇರುತ್ತವೆ. ಹಾಗಾಗಿ ನೀವು ಬಾಳೆಹಣ್ಣು ಸ್ಮೂಥಿಯನ್ನು ಯಾವಾಗ ಬೇಕಾದರೂ ಮಾಡಿ ಸವಿಯಬಹುದು. ಒಂದು ಸಣ್ಣ ಕಪ್ ಓಟ್ಸ್ ಅನ್ನು 5 ನಿಮಿಷ ನೀರಿನಲ್ಲಿ ನೆನೆಸಿಡಿ. ತುಂಬಾ ಅರ್ಜೆಂಟ್ ಇದ್ರೆ ಓಟ್ಸ್ ಅನ್ನು ಬಿಸಿ ನೀರಿನಲ್ಲಿ ನೆನೆಸಿಡಿ.

    ಇದನ್ನೂ ಓದಿ: ಚಯಾಪಚಯ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳು ಬಹಳ ಒಳ್ಳೆಯದಂತೆ

    ಇದರ ನಂತರ, 2 ದೊಡ್ಡ ಬಾಳೆಹಣ್ಣು ಮತ್ತು ಓಟ್ಸ್, 4-6 ಖರ್ಜೂರ, ನಿಮ್ಮಿಷ್ಟದ ಒಣ ಹಣ್ಣುಗಳು, 1 ಚಮಚ ಜೇನುತುಪ್ಪ ಮತ್ತು 1 ಕಪ್ ಸಾಮಾನ್ಯ ಅಥವಾ ಶೀತಲವಾಗಿರುವ ಹಾಲನ್ನು ಮಿಕ್ಸರ್ನಲ್ಲಿ ಸೇರಿಸಿ ಮತ್ತು ಮಿಶ್ರಣ ಮಾಡಿ. ನಿಮ್ಮ ಬನಾನಾ ಓಟ್ ಮೀಲ್ ಸ್ಮೂಥಿ ಸಿದ್ಧವಾಗಿದೆ.

    ಸೇಬು ಮತ್ತು ಬಾಳೆಹಣ್ಣಿನ ಸ್ಮೂಥಿ

    ಆಪಲ್ ಮತ್ತು ಬನಾನಾ ಸ್ಮೂಥಿಯನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿ. ಇದು ನಿಮ್ಮ ಆರೋಗ್ಯ ಹೆಚ್ಚಿಸುತ್ತದೆ. ಇದಕ್ಕಾಗಿ ಒಂದು ಸೇಬು, 1 ಬಾಳೆಹಣ್ಣು, 1 ಕಪ್ ಹಾಲು ಮತ್ತು ಕೆಲವು ಖರ್ಜೂರ ಮತ್ತು ಡ್ರೈಫ್ರೂಟ್‌ಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿದರೆ ಸಾಕು ನಿಮ್ಮ ಸೇಬು ಬಾಳೆಹಣ್ಣಿನ ಸ್ಮೂಥಿ ರೆಡಿ. ಹಾಯಾಗಿ ಕುಳಿತು ಸವಿಯಿರಿ.

    ನಟ್ಟಿ ಡಿಲೈಟ್ ಸ್ಮೂಥಿ

    ಇದರಲ್ಲಿ ನೀವು ಚಿಯಾ ಬೀಜಗಳು, ಅಗಸೆ ಬೀಜಗಳು ಮತ್ತು ಕಲ್ಲಂಗಡಿ ಆಯ್ಕೆ ಮಾಡಬೇಕು. ನೀವು ಬೇರೆ ಯಾವುದೇ ಬೀಜ ಸೇರಿಸಲು ಬಯಸಿದರೆ ಚಿಯಾ ಬೀಜಗಳನ್ನು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಎಲ್ಲಾ ಬೀಜಗಳು, 1 ಕಪ್ ಹಾಲು, 1 ಬಾಳೆಹಣ್ಣು ಮತ್ತು ಸಿಹಿಗಾಗಿ ಡ್ರೈ ಫ್ರೂಟ್ ಸೇರಿಸಿ. ಈಗ ನಿಮ್ಮ ಟೇಸ್ಟಿ ಮತ್ತು ಆರೋಗ್ಯಕರ ನಟ್ಟಿ ಡಿಲೈಟ್ ಸ್ಮೂಥಿ ಸಿದ್ಧ.

     ಸೋರೆಕಾಯಿ ಸ್ಮೂಥಿ

    ಇದು ತೂಕ ನಷ್ಟ ಮತ್ತು ದೇಹವನ್ನು ನಿರ್ವಿಷ ಮಾಡಲು ಸಹಕಾರಿ. ನೀವು ಭಾರೀ ಆಹಾರ ಸೇವಿಸಿದ ದಿನದ ನಂತರ ಸೋಮವಾರ ಬೆಳಿಗ್ಗೆ ಅಥವಾ ಮರುದಿನ ರಾತ್ರಿ ಅದನ್ನು ಕುಡಿಯಿರಿ. ಇದು ಕುಡಿಯಲು ಸ್ವಲ್ಪ ಕಡಿಮೆ ರುಚಿ ಹೊಂದಿದೆ. ಆದರೆ ದೇಹವನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ಅರ್ಧ ಸೋರೆಕಾಯಿ, 1 ನಿಂಬೆ ರಸ, ಅರ್ಧ ಸೌತೆಕಾಯಿ,

    8-10 ಪಾಲಕ್ ಎಲೆಗಳು,ಸ್ವಲ್ಪ ಉಪ್ಪು, ಸ್ವಲ್ಪ ಜೀರಿಗೆ ಅಥವಾ ಜೀರಿಗೆ ಪುಡಿ, 1 ಸ್ಲೈಸ್ ಆಮ್ಲಾ ಮತ್ತು ಸ್ವಲ್ಪ ಪುದೀನ ಎಲೆಗಳನ್ನು ಮಿಶ್ರಣ ಮಾಡಿ. ಈ ಸ್ಮೂಥಿಗೆ ನೀವು 1 ಕಪ್ ಹಾಲನ್ನು ಸೇರಿಸಬಹುದು ಮತ್ತು ನಿಮಗೆ ಹಾಲು ಬೇಡವಾದರೆ ಅರ್ಧ ಕಪ್ ನೀರು ಸೇರಿಸಿ.

    ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಯಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ?

    ಫೈಬರ್ ಭರಿತ ಸ್ಮೂಥಿ

    ಇದರಲ್ಲಿ ನೀವು ಎಲ್ಲಾ ಹಳದಿ ಬಣ್ಣದ ಹಣ್ಣುಗಳು ಮತ್ತು ತರಕಾರಿ ಬಳಸಬಹುದು. ಹಾಲು ಸೇರಿಸಬೇಡಿ. 1 ಕಪ್ ಪಪ್ಪಾಯಿ, 1 ಕ್ಯಾರೆಟ್, 1 ಕಪ್ ಕಿತ್ತಳೆ ತಿರುಳು, ತುರಿದ ಅರಿಶಿನ ಅಥವಾ ಒಂದು ಚಿಟಿಕೆ ಅರಿಶಿನ ಜೊತೆಗೆ 1 ತುಂಡು ಶುಂಠಿ ಸೇರಿಸಿ. ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸರ್‌ನಲ್ಲಿ ಮಿಶ್ರಣ ಮಾಡಿ ಮತ್ತು ಸಮಯಕ್ಕೆ ಫೈಬರ್ ಭರಿತ ಸ್ಮೂಥಿ ಸಿದ್ಧ.
    Published by:renukadariyannavar
    First published: