ವಾಂಗೀಬಾತ್ (Vangibath) ಜನಪ್ರಿಯವಾದ ಅಡುಗೆ. ಇದರಲ್ಲಿ ಮುಖ್ಯವಾದ ರುಚಿ ಬರುವುದೇ ಬದನೆಕಾಯಿ ಹಾಗೂ ಬಳಸುವ ಮಸಾಲೆಯಿಂದ. ವಾಂಗೀಬಾತ್ ಪುಡಿ (Powder) ಅಂಗಡಿಗಳಲ್ಲಿ ತರೋ ಬದಲು ಮನೆಯಲ್ಲೇ ಸುಲಭವಾಗಿ ಮಾಡಿ. ಮನೆಯಲ್ಲಿಯೇ ಯಾವ ರೀತಿ ವಾಂಗೀಬಾತ್ ಪುಡಿ ಮಾಡುವುದನ್ನು ಹೇಳ್ತಿವಿ. ಈ ಪುಡಿಯನ್ನು ಡಬ್ಬದಲ್ಲಿ (Box) ಹಾಕಿ ಇಟ್ಟುಕೊಂಡರೆ ಬೇಕಾದಾಗ ಬೇಗನೇ ವಾಂಗೀಬಾತ್ ಮಾಡಿ ಸವಿಯಬಹುದು. ವಾಂಗೀಬಾತ್ ನ್ನು ಬೆಳಗಿನ ಉಪಹಾರಕ್ಕೆ, (BreakFast) ಮಧ್ಯಾಹ್ನದ ಊಟಕ್ಕೆ ಹಾಗೂ ರಾತ್ರಿ ಊಟಕ್ಕೂ ಮಾಡಿಕೊಳ್ಳಬಹುದು. ಕೆಲಸಕ್ಕೆ ಹೋಗುವವರಿಗೆ ಅಥವಾ ಮಕ್ಕಳಿಗೆ ಊಟದ ಡಬ್ಬಿಗೂ ಹಾಕಿ ಕೊಡಬಹುದು. ವಾಂಗೀಬಾತ್ ಪುಡಿ ಸಿದ್ಧವಿದ್ದರೆ ಸಾಕು ಇದ್ದರೆ 5 ನಿಮಿಷದಲ್ಲಿ ವಾಂಗೀಬಾತ್ ಮಾಡಬಹುದು..
ವಾಂಗೀಬಾತ್ ಪುಡಿಗೆ ಬೇಕಾಗುವ ಸಾಮಾಗ್ರಿಗಳು:
ಚಕ್ಕೆ ಚೂರುಗಳು – 3
ಲವಂಗ – 5
ಜಾವಿತ್ರಿ – 1
ಗಸ ಗಸೆ – 1 ದೊಡ್ಡ ಚಮಚ
ಜೀರಿಗೆ – 3 ಚಮಚ
ಮೆಂತೆ ಬೀಜ – 10
ಕೊತ್ತಂಬರಿ ಬೀಜ – 4 ಚಮಚ
ಉದ್ದಿನ ಬೇಳೆ – 4 ಚಮಚ
ಗುಂಟೂರು ಒಣ ಮೆಣಸಿನಕಾಯಿ – 10
ಎಣ್ಣೆ – 3 ರಿಂದ 4 ಹನಿ
ಒಣ ಕೊಬ್ಬರಿ ತುರಿ – 4 ಚಮಚ
ಅರಸಿನ ಪುಡಿ – 1/4 ಚಮಚ
ವಾಂಗೀಬಾತ್ ಪುಡಿ ಮಾಡುವ ವಿಧಾನ:
ಒಂದು ಬಾಣಲೆಗೆ 3 ರಿಂದ 4 ಚಕ್ಕೆ ಚೂರುಗಳು, 5 ರಿಂದ 6 ಲವಂಗ, 1 ಜಾವಿತ್ರಿ, 1 ದೊಡ್ಡ ಚಮಚ ಗಸ ಗಸೆ ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವ ತನಕ ಹುರಿಯಿರಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ.
ನಂತರ ಅದೇ ಬಾಣಲೆಗೆ ಜೀರಿಗೆ, ಮೆಂತೆ ಬೀಜ, ಕೊತ್ತಂಬರಿ ಬೀಜ, 4 ಚಮಚ ಉದ್ದಿನ ಬೇಳೆ ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವ ತನಕ ಹುರಿದು ಅದೇ ಮಿಕ್ಸಿ ಜಾರಿಗೆ ಹಾಕಿ.
ಮತ್ತೆ ಬಾಣಲೆಗೆ ಗುಂಟೂರು ಒಣ ಮೆಣಸಿನಕಾಯಿ, ಸ್ವಲ್ಪ ಎಣ್ಣೆ ಹಾಕಿ ಹುರಿದು ಅದೇ ಮಿಕ್ಸಿ ಜಾರಿಗೆ ಹಾಕಿ.
ಸ್ಟವ್ ಆಫ್ ಮಾಡಿ ಬಾಣಲೆಗೆ ಒಣ ಕೊಬ್ಬರಿ ತುರಿ ಹಾಕಿ ಕೆಂಪಗೆ ಹುರಿಯಿರಿ.
ಇದನ್ನು ಕೂಡ ಅದೇ ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ಸ್ವಲ್ಪ ಅರಸಿನ ಪುಡಿ ಹಾಕಿ.
ಇವಿಷ್ಟನ್ನು ನುಣ್ಣಗೆ ರುಬ್ಬಿದರೆ ವಾಂಗೀಬಾತ್ ಪುಡಿ ಸಿದ್ಧವಾಗುತ್ತೆ
ಇದನ್ನೂ ಓದಿ: Recipe: ಮನೆಯಲ್ಲಿ ಸುಲಭವಾಗಿ ಮಾಡಿ ರುಚಿಕರ ಮೇಲುಕೋಟೆ ಪುಳಿಯೋಗರೆ ಪುಡಿ
ವಾಂಗಿಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು:
ಎಣ್ಣೆ – 3 ದೊಡ್ಡ ಚಮಚ
ಸಾಸಿವೆ – 1 ಚಮಚ
ಉದ್ದಿನಬೇಳೆ – 1ಚಮಚ
ಕಡ್ಲೆಬೇಳೆ – 1 ಚಮಚ
ಕರಿಬೇವಿನ ಎಲೆ – 10 ರಿಂದ 12
ಶೇಂಗಾ ಬೀಜ – 3 ದೊಡ್ಡ ಚಮಚ
ಹಸಿರು ಉದ್ದ ಬದನೆಕಾಯಿ – 2
ಹುಣಸೆ ರಸ – 2 ಚಮಚ
ಬೆಲ್ಲ – 1 ಚಮಚ
ಉಪ್ಪು – ಅರ್ಧ ಚಮಚ
ವಾಂಗೀಬಾತ್ ಪುಡಿ – ಎರಡುವರೆ ಚಮಚ
ಅನ್ನ – 4 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ವಾಂಗೀಬಾತ್ ಮಾಡುವ ವಿಧಾನ:
ಒಂದು ಬಾಣಲೆಗೆ 3 ದೊಡ್ಡ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಸಾಸಿವೆ ಹಾಕಿ ಸಿಡಿಸಿ.ನಂತರ ಇದಕ್ಕೆ 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆ ಬೇಳೆ, 10 ಕರಿಬೇವಿನ ಎಲೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.
ಈಗ ಇದಕ್ಕೆ 3 ದೊಡ್ಡ ಚಮಚ ಹುರಿದ ಶೇಂಗಾ ಬೀಜ , 2 ಉದ್ದವಾಗಿ ಹೆಚ್ಚಿದ ಹಸಿರು ಉದ್ದ ಬದನೆಕಾಯಿ ಹಾಕಿ 2 ನಿಮಿಷ ಹುರಿಯಿರಿ.
ನಂತರ ಇದಕ್ಕೆ 2 ಚಮಚ ಹುಣಸೆ ರಸ, 1 ಚಮಚ ಬೆಲ್ಲ, ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ.
ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಈಗ ಇದಕ್ಕೆ ಎರಡೂವರೆ ಚಮಚ ವಾಂಗೀಬಾತ್ ಪುಡಿ ಹಾಕಿ ಕಲಸಿ.
ನಂತರ ಇದಕ್ಕೆ 4 ಕಪ್ ಅನ್ನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ.
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ ಕಲಸಿದರೆ ರುಚಿಯಾದ ವಾಂಗೀಬಾತ್ ತಿನ್ನಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ