• Home
  • »
  • News
  • »
  • lifestyle
  • »
  • Breakfast Recipe: ಉಪ್ಪಿಟ್ಟನ್ನು ಮತ್ತಷ್ಟು ರುಚಿಯಾಗಿಸಲು ಈ ಪದಾರ್ಥಗಳನ್ನ ಬಳಿಸಿ

Breakfast Recipe: ಉಪ್ಪಿಟ್ಟನ್ನು ಮತ್ತಷ್ಟು ರುಚಿಯಾಗಿಸಲು ಈ ಪದಾರ್ಥಗಳನ್ನ ಬಳಿಸಿ

ಉಪ್ಪಿಟ್ಟು

ಉಪ್ಪಿಟ್ಟು

ಉಪ್ಪಿಟ್ಟು ಅಂದ್ರೆ ಅದಕ್ಕೆ ಟೊಮ್ಯಾಟೋ, ಈರುಳ್ಳಿ, ಹಸಿಮೆಣಸಿನಕಾಯಿ, ರವೆ, ಕರೀಬೇವು, ಸಾಸವೆ, ಜೀರಿಗೆ, ಎಣ್ಣೆ ಮತ್ತು ಉಪ್ಪು ಬೇಕೇ ಬೇಕು. ಇದನ್ನ ಹೊರತಾಗಿಯೂ ಕೆಲ ಪದಾರ್ಥ ಸೇರಿಸಿದ್ರೆ ನಿಮ್ಮ ಉಪ್ಪಿಟ್ಟು ಮತ್ತಷ್ಟು ರುಚಿಯಾಗಿಸಬಹುದು. ಉಪ್ಪಿಟ್ಟು ರುಚಿಯಾಗಿಸಲು ಸೇರಿಸಬೇಕಾದ ಸಾಮಾಗ್ರಿಗಳು ಇಲ್ಲಿವೆ.

ಮುಂದೆ ಓದಿ ...
  • Share this:

ಬೆಳಗ್ಗೆ ಎದ್ದಕೂಡಲೇ ಗೃಹಿಣಿಯರಿಗೆ (Women) ತಿಂಡಿ (Breakfast) ಏನು ಮಾಡಬೇಕು ಅಂತ ಗೊಂದಲ ಇರುತ್ತದೆ. ಬೇಸಿಗೆಯಲ್ಲಿ (Summer) ಉಪ್ಪಿಟ್ಟು ಅಂದರೆ ಅಬ್ಬಾ ಬೇಡ ಅಂತ ಹೇಳುವ ಜನರೇ ಹೆಚ್ಚಿರ್ತಾರೆ. ಆದರೆ ಉಪ್ಪಿಟ್ಟು (Uppittu /  Upma) ಸರಳ ರೆಸಿಪಿ. ಹಾಗಾಗಿ ವಾರದಲ್ಲಿ ಎರಡ್ಮೂರು ದಿನ ಉಪ್ಪಿಟ್ಟು ಬೆಳಗ್ಗೆ ನಿಮ್ಮನ್ನ ವೆಲ್ ಕಮ್ ಮಾಡುತ್ತದೆ. ಆದ್ರೆ ಒಂದಿಷ್ಟು ಜನರಿಗೆ ಉಪ್ಪಿಟ್ಟು ಮಾಡಿದ್ರೆ, ಅದರ ರುಚಿಯಲ್ಲಿ (Taste) ಏನೋ ಕಡಿಮೆ ಎಂಬಂತೆ ಆಗುತ್ತದೆ. ಹೋಟೆಲ್ ಗಳಲ್ಲಿ (Hotel) ಉಪ್ಪಿಟ್ಟು ಮಾಡಲು ಹೆಚ್ಚು ನೀರು ಬಳಕೆ ಮಾಡುತ್ತಾರೆ. ಆದರಿಂದ ಅದರ ರುಚಿ ಸ್ವಲ್ಪ ಭಿನ್ನವಾಗಿರುತ್ತದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಉಪ್ಪಿಟ್ಟು ಮಾಡುತ್ತಾರೆ. ಆದ್ರೆ ಉಪ್ಪಿಟ್ಟು ರುಚಿ ಹೆಚ್ಚಿಸಲು ನಿಮ್ಮ ರೆಸಿಪಿಯಲ್ಲಿ ಕೆಲ ಪದಾರ್ಥಗಳನ್ನು ಸೇರಿಸಬೇಕು.


ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.


ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ.


ಇದನ್ನೂ ಓದಿ:  Breakfast Recipe: ತೂಕ ಇಳಿಸಲು ಸಹಕಾರಿ ಈ ನವಣೆ ಉಪ್ಪಿಟ್ಟು- ನೀವೂ ಟ್ರೈ ಮಾಡಿ


ಉಪ್ಪಿಟ್ಟನ್ನು ರುಚಿಯಾಗಿಸುವ ಸಾಮಾಗ್ರಿಗಳು


ಉಪ್ಪಿಟ್ಟು ಅಂದ್ರೆ ಅದಕ್ಕೆ ಟೊಮ್ಯಾಟೋ, ಈರುಳ್ಳಿ, ಹಸಿಮೆಣಸಿನಕಾಯಿ, ರವೆ, ಕರೀಬೇವು, ಸಾಸವೆ, ಜೀರಿಗೆ, ಎಣ್ಣೆ ಮತ್ತು ಉಪ್ಪು ಬೇಕೇ ಬೇಕು. ಇದನ್ನ ಹೊರತಾಗಿಯೂ ಕೆಲ ಪದಾರ್ಥ ಸೇರಿಸಿದ್ರೆ ನಿಮ್ಮ ಉಪ್ಪಿಟ್ಟು ಮತ್ತಷ್ಟು ರುಚಿಯಾಗಿಸಬಹುದು. ಉಪ್ಪಿಟ್ಟು ರುಚಿಯಾಗಿಸಲು ಸೇರಿಸಬೇಕಾದ ಸಾಮಾಗ್ರಿಗಳು ಇಲ್ಲಿವೆ.


*ಉಪ್ಪಿಟ್ಟು ಮಾಡುವಾಗ ಅಂದ್ರೆ ಒಗ್ಗರಣೆಯಲ್ಲಿ ನೀರು ಹಾಕಿದ ನಂತರ ಸ್ವಲ್ಪ ಬೆಲ್ಲ ಹಾಕಬೇಕು. ದಪ್ಪ ರವೆ ಬಳಸಿದ್ರೆ ಬೆಲ್ಲ ಮತ್ತು ಸಣ್ಣ ರವೆ ಇದ್ರೆ ಸಕ್ಕರೆ ಬಳಸಬೇಕು.


*ಇನ್ನೂ ಒಗ್ಗರಣೆಯಲ್ಲಿ ಕೆಲವರು ಕಡಲೆ ಬೀಜ ಹೆಚ್ಚು ಬಳಸುತ್ತಾರೆ. ಆದ್ರೆ ಎಣಿಕೆಯಷ್ಟು ಕಡಲೆಬೀಜ ಬಳಸೋದು ಉತ್ತಮ.


*ಹೆಚ್ಚು ಜೀರಿಗೆ ಬಳಕೆ ಮಾಡಿದ್ರೆ ಉಪ್ಪಿಟ್ಟಿನ ರುಚಿ ಹೆಚ್ಚಾಗುತ್ತದೆ.


*ಕೆಲವರಿಗೆ ಉಪ್ಪಿಟ್ಟು ಸಾಫ್ಟ್ ಆಗಿರಬೇಕು ಅಂತ ಇಷ್ಟಡ್ತಾರೆ. ಹಾಗಿದ್ರೆ ಒಗ್ಗರಣೆಯಲ್ಲಿ ಒಂದು ಆಲೂಗಡ್ಡೆ ಬಳಕೆ ಮಾಡಿದರೆ ನಿಮ್ಮ ಉಪ್ಪಿಟ್ಟು ಸಾಫ್ಟ್ ಆಗುತ್ತದೆ.


*ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಸಹ ಒಗ್ಗರಣೆಯಲ್ಲಿ ಬಳಕೆ ಮಾಡಬಹುದು.


*ಹೆಚ್ಚು ಟೊಮಾಟೋ ಬಳಸೋದಕ್ಕಿಂತ ಹುಣಸೆಹಣ್ಣಿನ ರಸ ಬಳಸಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.


*ನಿಮಗೆ ಹುಣಸೆಹಣ್ಣು ಸೇರದಿದ್ರೆ ಉಪ್ಪಿಟ್ಟು ತಿನ್ನುವಾಗ ನಿಂಬೆ ಹಣ್ಣಿನ ರಸ ಬಳಸಿ.


* ಉಪ್ಪಿಟ್ಟು ತಿನ್ನವಾಗ ಅದಕ್ಕೆ  ತುಪ್ಪ ಸೇರಿಸಿ ತಿನ್ನೋದರಿಂದ ಅದರ ರುಚಿ ಇಮ್ಮಡಿಗೊಳ್ಳುತ್ತದೆ.


ಇದನ್ನೂ ಓದಿ:  Breakfast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್​ ಉಪ್ಪಿಟ್ಟು ರೆಸಿಪಿ


ಉಪ್ಪಿಟ್ಟು ಮಾಡುವ ವಿಧಾನ


ಮೊದಲು ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಂಡು, ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ.ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೊ ಹಾಕಿ.


ನಂತರ ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಚನ್ನಾಗಿ ಹುರಿಯಿರಿ. ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ರವೆ ಹಾಕಿ ಮುಚ್ಚಳ ಮುಚ್ಚಿ

Published by:Mahmadrafik K
First published: