Sweet Corn Upma: ಪ್ರತಿದಿನ ಮನೆಯಲ್ಲಿ ಬೆಳಗ್ಗೆ ತಿಂಡಿ (Breakfast Recipe) ಏನು ಮಾಡೋದು ಅನ್ನೋ ಚಿಂತೆಯಲ್ಲಿದ್ದೀರಾ? ಮಾರುಕಟ್ಟೆಗೆ ಹೋದ್ರೆ ಮಕ್ಕಳು ಹಠ ಮಾಡಿ ಸ್ವೀಟ್ ಕಾರ್ನ್ (Sweetcorn) ಖರೀದಿಸಿ ತಿನ್ನುತ್ತಾರೆ. ಇಂದು ನೀವು ಅದೇ ಸ್ವೀಟ್ ಕಾರ್ನ್ ಬಳಸಿ ಬೆಳಗಿನ ತಿಂಡಿ ಮಾಡಬಹುದು. ಇಂದು ಮಾರುಕಟ್ಟೆಯಲ್ಲಿ (Market) ಹಸಿಯಾದ ಸ್ವೀಟ್ ಕಾರ್ನ್ ಸಿಗುತ್ತದೆ. ಇದನ್ನೇ ಬಳಸಿ ರುಚಿಯಾದ ಉಪ್ಪಿಟ್ಟು (Sweetcorn Uppittu) ತಯಾರಿಸಬಹುದು. ಸ್ವೀಟ್ ಕಾರ್ನ್ ಇಷ್ಟಪಡುವ ಮಕ್ಕಳು ಈ ಉಪ್ಪಿಟ್ಟನ್ನು (Upma Recipe) ಇಷ್ಟಪಟ್ಟು ಸೇವಿಸುತ್ತಾರೆ. ಇಂದು ನಾವು ನಿಮಗೆ ರುಚಿಯಾದ ಸ್ವೀಟ್ ಕಾರ್ನ್ ಉಪ್ಪಿಟ್ಟು ಹೇಗೆ ಮಾಡಬೇಕು ಎಂಬುದನ್ನು ಹೇಳುತ್ತಿದ್ದೇವೆ.
ಬೇಕಾಗುವ ಸಾಮಾಗ್ರಿಗಳು
ಸ್ವೀಟ್ ಕಾರ್ನ್: 4 ಕಪ್
ರವೆ: ಒಂದು ಕಪ್
ತೆಂಗಿನಕಾಯಿ ತುರಿ: ಮೂರು ಟೇಬಲ್ ಸ್ಪೂನ್
ಕಡಲೆಬೀಜ: 1 ಟೀ ಸ್ಪೂನ್
ಉದ್ದಿನಬೇಳೆ: 1 ಟೀ ಸ್ಪೂನ್
ಟೊಮ್ಯಾಟೋ: ಒಂದು (ದೊಡ್ಡದು)
ಈರುಳ್ಳಿ: ಒಂದು (ದೊಡ್ಡದು)
ಹಸಿಮೆಣಸಿನಕಾಯಿ: 4 ರಿಂದ 5
ಅರಿಶಿನ: ಚಿಟಿಕೆ
ಕರೀಬೇವು: 4 ರಿಂದ 5 ದಳ
ಎಣ್ಣೆ: ಮೂರು ಟೀ ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಸ್ವೀಟ್ ಕಾರ್ನ್ ಉಪ್ಪಿಟ್ಟು ಮಾಡುವ ವಿಧಾನ
*ಮೊದಲಿಗೆ ಮೂರು ಕಪ್ನಷ್ಟು ಸ್ವೀಟ್ ಕಾರ್ನ್ಗಳನ್ನು ಜಾರ್ಗೆ ಹಾಕಿ ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ರುಬ್ಬಿದ ಸ್ವೀಟ್ ಕಾರ್ನ್ ತೆಗೆದಿಟ್ಟುಕೊಳ್ಳಿ.
*ಈಗ ಇದೇ ಜಾರ್ಗೆ ಉಳಿದ ಮತ್ತೊಂದು ಕಪ್ ಸ್ವೀಟ್ ಕಾರ್ನ್ ಹಾಕಿ ನೀರು ಸೇರಿಸದೇ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. (ಒಂದ ಸ್ವೀಟ್ ಕಾರ್ನ್ ನಾಲ್ಕರಿಂದ ಐದು ತುಣುಕ ಆಗುವ ರೀತಿಯಲ್ಲಿ ರುಬ್ಬಬೇಕು)
*ಈಗ ಒಂದು ಪ್ಯಾನ್ ಒಲೆ ಮೇಲೆ ಇರಿಸಿಕೊಳ್ಳಿ. ಪ್ಯಾನ್ ಬಿಸಿ ಆಗುತ್ತಿದ್ದಂತೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿ. ಸಾಸವೆ ಮತ್ತು ಜೀರಿಗೆ ಚಿಟಪಟ ಅಂತ ಸಿಡಿಯಲು ಆರಂಭಿಸುತ್ತಿದ್ದಂತೆ ಉದ್ದಿನಬೇಳೆ ಮತ್ತು ಶೇಂಗಾ ಸೇರಿಸಿ.
*ಉದ್ದಿನಬೇಳೆ ಮತ್ತು ಶೇಂಗಾ ಫ್ರೈ ಆಗುತ್ತಿದ್ದಂತೆ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಬೇಯಿಸಿ. ಈರುಳ್ಳಿಯ ಹಸಿ ವಾಸನೆ ಹೋಗುತ್ತಿದ್ದಂತೆ ಟೊಮ್ಯಾಟೋ ಮಿಕ್ಸ್ ಮಾಡಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.
ಇದನ್ನೂ ಓದಿ: ಸಿಂಪಲ್ ಆಗಿ ಬ್ಯಾಚೂಲರ್ ಗಳು ತಯಾರಿಸುವ ಬೆಳ್ಳುಳ್ಳಿ ಉಪ್ಪಿಟ್ಟು ಮಾಡಿ ಸವಿಯಿರಿ
*ಈಗ ಉದ್ದವಾಗಿ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ ಮತ್ತು ಕರೀಬೇವು ಸೇರಿಸಿ. ಈಗ ಇದಕ್ಕೆ ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
*ಎಲ್ಲಾ ಮಸಾಲೆ ಎರಡರಿಂದ ಮೂರು ನಿಮಿಷ ಬೇಯಿಸಿದ ನಂತರ ನುಣ್ಣಗೆ ರುಬ್ಬಿಕೊಂಡಿರುವ ಸ್ವೀಟ್ ಕಾರ್ನ್ ಪೇಸ್ಟ್ ಸೇರಿಸಿ. ನಂತರ ತರಿ ತರಿಯಾಗಿ ರುಬ್ಬಿರುವ ಸ್ವೀಟ್ ಕಾರ್ನ್ ಸಹ ಸೇರಿಸಿಕೊಳ್ಳಿ.
*ಸ್ವೀಟ್ ಕಾರ್ನ್ ಪೇಸ್ಟ್ ಸೇರಿಸಿದ ನಂತರ ಅದು ಸೀದು ಹೋಗದಂತೆ ಕೈ ಆಡಿಸುತ್ತಿರಬೇಕು. ಈ ವೇಳೆ ಅರ್ಧ ಕಪ್ ನೀರು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.
*ಸ್ವೀಟ್ ಕಾರ್ನ್ ಪೇಸ್ಟ್ ಬೇಯುತ್ತಿರುವಾಗ ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸ್ ಮಾಡಿ.
*ಈಗ ಸಿದ್ಧವಾಗಿರುವ ಮಸಾಲೆಗೆ ಎರಡೂವರೆ ಕಪ್ನಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ.
ಇದನ್ನೂ ಓದಿ: Upma Recipe: ಮಕ್ಕಳಿಗೆ ಇಷ್ಟವಾಗುತ್ತೆ ಕಟ್ಟಾ ಮಿಟ್ಟಾ ಉಪ್ಪಿಟ್ಟು; ನೀವೂ ಟ್ರೈ ಮಾಡಿ ರೆಸಿಪಿ
*ನೀರು ಬೇಯುತ್ತಿರುವಾಗಲೇ ರವೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ.
*ನಂತರ ಮುಚ್ಚಳ ತೆಗೆದು ಸೀದು ಹೋಗದಂತೆ ರವೆಯನ್ನು ಮೇಲೆ ಕೆಳಗೆ ತಿರುಗಿಸುತ್ತಿರಬೇಕು. ಈಗ ಒಲೆ ಬಂದ್ ಮಾಡಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಎತ್ತಿಡಿ. ನಂತರ ಮುಚ್ಚಳ ತೆಗೆದು ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಸ್ವೀಟ್ ಕಾರ್ನ್ ಉಪ್ಪಿಟ್ಟು ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ