ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.
ನಾವು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಪುರಿ ಮಾಡುತ್ತೇವೆ. ಆದರೆ ಇಂದು ನಾವು ಕೊಡುತ್ತಿರುವ ರೆಸಿಪಿ ಸ್ವಲ್ಪ ವಿಭಿನ್ನ ವಾದ ಪುರಿ ಎನ್ನಬಹುದು. ಪೂರಿ ಬದಲಿಗೆ ನೀವು ತಿಂಡಿಗೆ ಟ್ರೈ ಮಾಡಲು ಪತ್ತರಿ/ಪತ್ತಲ್ ಬೆಸ್ಟ್ ಎನ್ನಲಾಗುತ್ತದೆ. ಡಯಟ್ನಲ್ಲಿರುವವರಿಗೆ ಈ ತಿಂಡಿ ಸೂಕ್ತವಲ್ಲ, ಚೀಟಿಂಗ್ ಡೇಯಲ್ಲಿ ತಿನ್ನಬಹುದು. ಇನ್ನು ಅಪರೂಪಕ್ಕೆ ಇಂಥ ರುಚಿಕರ ತಿನಿಸು ಟೇಸ್ಟ್ ಮಾಡುವುದರಲ್ಲಿ ಏನು ತಪ್ಪಿಲ್ಲ.
ಇದನ್ನು ಮಾಡುವ ವಿಧಾನ ಹೆಚ್ಚೇನು ಕಷ್ಟವಲ್ಲ. ಇದು ಮೊಟ್ಟೆ ಅಥವಾ ಮಶ್ರೂಮ್ ಗ್ರೇವಿ, ಕಡ್ಲೆ ಗ್ರೇವಿ ಇವುಗಳ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತೆ. ಹಾಗಾದ್ರೆ ಪತ್ತಲ್ ಮಾಡುವ ವಿಧಾನ ಇಲ್ಲಿದೆ.
ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು
ಪತ್ತಲ್ ಅಥವಾ ಪತ್ತರಿ ಮಾಡಲು ಬೇಕಾಗುವ ಸಾಮಗ್ರಿ
1/2 ಕಪ್ ಕುಚಲಕ್ಕಿ
1/2 ಕಪ್ ಬೆಳಿ ಅಕ್ಕಿ
4 ಈರುಳ್ಳಿ
1/2 ಕಪ್ ಅನ್ನ (ಕುಚಲಕ್ಕಿಯ ಅನ್ನ ಆದರೆ ಒಳ್ಳೆಯದು)
1 ಚಮಚ ಸೋಂಪು
ರುಚಿಗೆ ತಕ್ಕ ಉಪ್ಪು
ಎಣ್ಣೆ ಸ್ವಲ್ಪ
ಪತ್ತಲ್ ಅಥವಾ ಪತ್ತರಿ ಮಾಡುವುದು ಹೇಗೆ?
ಮೊದಲು ಅಕ್ಕಿಯನ್ನು ಚನ್ನಾಗಿ ತೊಳೆದುಕೊಂಡು ಎಂಟು ಗಂಟೆಗಳ ಕಾಲ ನೆನೆ ಹಾಕಿ. ನಂತರ ನೀರು ಸೋಸಿ ಅದರ ಸಂಪೂರ್ಣ ನೀರು ಹೋಗಲು ಬಿಡಿ. ಕಷ್ಟ ಎನಿಸಿದರೆ, ಅರ್ಧ ಗಂಟೆ ನೀರು ಹೋಗುವಂಥ ತಟ್ಟೆ ಅಥವಾ ಮಾತ್ರೆಯಲ್ಲಿ ಹಾಕಿಡಿ, ಆಗ ನೀರು ಚನ್ನಾಗಿ ಹೋಗುತ್ತದೆ.
ನಂತರ ಅಕ್ಕಿಯನ್ನು ಮಿಕ್ಸಿಯಲ್ಲಿ ರುಬ್ಬಿ. ರುಬ್ಬಿವಾಗ ಸ್ವಲ್ಪ-ಸ್ವಲ್ಪ ಹಾಕಿ ರುಬ್ಬಿ ಇಲ್ಲದಿದ್ದರೆ ರುಬ್ಬಲು ಕಷ್ಟವಾಗಬಹುದು. ಅಕ್ಕಿಯನ್ನು ರುಬ್ಬುವಾಗ ನೀರನ್ನು ಹಾಕಬೇಡಿ. ಅಕ್ಕಿ ರುಬ್ಬಿಕೊಂಡ ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಗೆಯೇ ಇಡಿ.
ನಂತರ ಈರುಳ್ಳಿ ಮತ್ತು ಅನ್ನ ಹಾಕಿ ಚನ್ನಾಗಿ ರುಬ್ಬಿ.ಈಗ ಅಕ್ಕಿ ಪುಡಿಗೆ ರುಬ್ಬಿದ ಈರುಳ್ಳಿ-ಅನ್ನದ ಮಿಶ್ರಣ ಹಾಕಿ, ಚನ್ನಾಗಿ ಕಲಸಿ. ನಂತರ 1 ಚಮಚ ಉಪ್ಪು ಹಾಕಿ, ನಿಮಗೆ ಎಷ್ಟು ಬೇಕೋ ಅಷ್ಟು ಹಾಕಿ, ರುಚಿಗೆ ತಕ್ಕಷ್ಟು.
ನಂತರ ಅದಕ್ಕೆ ಸೋಂಪು ಕಾಳುಗಳನ್ನು ಸೇರಿಸಿ ಚನ್ನಾಗಿ ಮಿಕ್ಸಿ ಮಾಡಿ. ನುಣ್ಣಗೆ ಪೇಸ್ಟ್ ಆದ ನಂತರ ಎಲ್ಲಾ ಮಿಶ್ರಣವನ್ನು ಬಟ್ಟೆಯಲ್ಲಿ ಕವರ್ ಮಾಡಿ ಅರ್ಧ ಗಂಟೆ ಹಾಗೆಯೇ ಇಡಿ.
ಇದನ್ನೂ ಓದಿ: ಚಳಿಗಾಲಕ್ಕೆ ಬಿಸಿ ಬಿಸಿ ಕಿಚಡಿ ಮಾಡಿ -ಮಕ್ಕಳಿಗೂ ಇಷ್ಟ ಈ ಸೂಪರ್ ತಿಂಡಿ
ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಒಂದೂವರೆ ಕಪ್ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕುದಿಯುವಾಗ ಮಿಶ್ರಣವನ್ನು ಸ್ವಲ್ಪ-ಸ್ವಲ್ಪ ತೆಗೆದು ಉಂಡೆ ಕಟ್ಟಿ, ಪ್ಲಾಸ್ಟಿಕ್ಗೆ ಎಣ್ಣೆ ಸವರಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಆಗ ಪತ್ತರಿ ಉಬ್ಬುತ್ತದೆ. ಪತ್ತರಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆದರೆ ರುಚಿ ರುಚಿಯಾದ ಪತ್ತರಿ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ