Breakfast Recipe: ಪಾಲಕ್ ಸೊಪ್ಪಿನ ರೈಸ್​ ಬಾತ್ ಮಾಡುವ ಸುಲಭ ವಿಧಾನ ಇಲ್ಲಿದೆ

Palak Rice Recipe: ಪಾಲಕ್ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳಿದೆ. ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಕರ ಸಹ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods) ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ಇಲ್ಲಿ ಹೆಚ್ಚು ರೈಸ್​ (Rice) ಬಳಸಿ ತಿಂಡಿಯನ್ನು ತಯಾರಿಸಲಾಗುತ್ತದೆ. ಇವತ್ತು ಸಹ ಪಾಲಕ್ ರೈಸ್ (Palak Rice) ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಪಾಲಕ್ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳಿದೆ. ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಕರ ಸಹ.

ಬೇಕಾಗುವ ಪದಾರ್ಥಗಳು:
2 ಕಪ್ ಅನ್ನ
1 ಕಪ್ ಪಾಲಾಕ್ ಸೊಪ್ಪು (ಕತ್ತರಿಸಿಕೊಳ್ಳಿ)
1 ದೊಡ್ಡ ಈರುಳ್ಳಿ

ಇದನ್ನೂ ಓದಿ: ಬೆಳಗಿನ ತಿಂಡಿಗೆ ಇಲ್ಲಿದೆ ಸೂಪರ್ ಬನಾರಸ್ ದೋಸೆ ರೆಸಿಪಿ

3-4 ಹಸಿರು ಮೆಣಸಿನಕಾಯಿ
1/2 ಚಕ್ಕೆ, 3 ಕರಿಮೆಣಸು
1 ಚಮಚ ಸಾಸಿವೆ, 1 ಚಮಚ ಜೀರಿಗೆ, ಲವಂಗ
1/2 ಕಪ್ ಗೋಡಂಬಿ
ಉಪ್ಪು, ಎಣ್ಣೆ, ಒಂದು ನಿಂಬೆಹಣ್ಣು

 ಪಾಲಾಕ್ ರೈಸ್ ಮಾಡುವ ವಿಧಾನ:
ಮೊದಲು ಪಾಲಕ್ ಸೊಪ್ಪನ್ನ ತೊಳೆದು ಹೆಚ್ಚಿಕೊಂಡು ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಹಾಕಿ ಕೆಲವು ನಿಮಿಷ ಫ್ರೈ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ಬರುವ ತನಕ ಫ್ರೈ ಮಾಡಿ.

ನಂತರ ಕತ್ತರಿಸಿಕೊಂಡ ಪಾಲಾಕ್ ಸೊಪ್ಪನ್ನು ಅದಕ್ಕೆ ಹಾಕಿ ಹುರಿಯಬೇಕು.
ಇದಕ್ಕೆ ಅರ್ಧ ಕಪ್ ನೀರು ಹಾಕಿ ಕುದಿಯುವವರೆಗೂ ಸಣ್ಣ ಉರಿಯಲ್ಲಿ ಇಟ್ಟು ಕುದಿಸಿ. ನೀರು ಕುದಿಯಲು ಆರಂಭಿಸಿದ ನಂತರ ಗ್ಯಾಸ್​ ಆಫ್​ ಮಾಡಿ. ಈಗ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಬೇರೆ ಬಾಣಲೆಯಲ್ಲಿ ಎಣ್ಣೆಗೆ ಹಾಕಿ ಹುರಿಯಿರಿ.

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಬಟಾಣಿ ಟೊಮೊಟೊ ರೈಸ್ ಬಾತ್ - ಇಲ್ಲಿದೆ ರೆಸಿಪಿ

ಎಲ್ಲಾ ಪದಾರ್ಥಗಳನ್ನು ಹುರಿದುಕೊಂಡ ಮೇಲೆ ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣವನ್ನು ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ಕಲಸಿ ತಣ್ಣಗಾಗಲು ಬಿಡಬೇಕು. ಈ ಪಾಲಾಕ್ ಮಸಾಲೆಯೊಂದಿಗೆ ಅನ್ನವನ್ನು ಬೆರೆಸಿ ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿದರೆ ಪಾಲಾಕ್ ರೈಸ್ ರೆಡಿ.
Published by:Sandhya M
First published: