Chicken Upma: ಕೇವಲ ತರಕಾರಿ ಅಲ್ಲ, ಚಿಕನ್ ಹಾಕಿಯೂ ಮಾಡಬಹುದು ಉಪ್ಪಿಟ್ಟು; ತಿಂದವರು ಫಿದಾ ಆಗೋದು ಗ್ಯಾರೆಂಟಿ

ಚಿಕನ್ ಉಪ್ಮಾ

ಚಿಕನ್ ಉಪ್ಮಾ

ಚಿಕನ್ ಫುಡ್ (Chicken Recipe) ಪ್ರಿಯರಿಗಾಗಿ ಹೊಸ ರೆಸಿಪಿ ತಂದಿದ್ದೇವೆ. ಇದು ಮಾಡೋದು ತುಂಬಾ ಸುಲಭ. ಚಿಕನ್ ಉಪ್ಮಾ ಮಾಡುವ ವಿಧಾನ ಈ ಕೆಳಗಿನಂತಿದೆ.

  • Share this:

Chicken Upma: ಬೆಳಗ್ಗೆ ಎದ್ದ ಕೂಡಲೇ ಅದೇ ಉಪ್ಪಿಟ್ಟು, ಪೋಹಾ, ಚಿತ್ರನ್ನ, ಇಡ್ಲಿ-ವಡೆ, ದೋಸೆ ತಿಂದು ಬೇಜಾರು ಆಗಿದ್ರೆ, ಇಂದು ನಾವು ನಿಮಗೆ ಹೊಸ ರುಚಿಯನ್ನು (New Taste) ತಂದಿದ್ದೇವೆ. ಬೆಳಗಿನ ಬ್ರೇಕ್​​ಫಾಸ್ಟ್​ಗೆ (Breakfast) ಕೇವಲ ಸಸ್ಯಾಹಾರ ಮಾಡಬೇಕೆಂಬ ಕಡ್ಡಾಯ ನಿಯಮ ಇಲ್ಲ. ಇತ್ತೀಚೆಗೆ ಸಿಟಿ ಲೈಫ್​ನಲ್ಲಿ ಬೆಳಗಿನ ತಿಂಡಿಯನ್ನು ಮೊಟ್ಟೆ (Egg Recipe) ಆವರಿಸಿಕೊಂಡಿದೆ. ಸಮಯ ಇಲ್ಲದ ಬ್ಯುಸಿ ಲೈಫ್​ನಲ್ಲಿ ಬಹುತೇಕರು ಎರಡು ಬ್ರೆಡ್​ ರೋಸ್ಟ್ ಮಾಡಿ, ಅದರ ಮಧ್ಯೆದಲ್ಲೊಂದು ಆಮ್ಲೆಟ್ ಮಾಡಿಕೊಂಡು ದಿನದ ತಿಂಡಿ ಮುಗಿಸುತ್ತಾರೆ. ಒಂದು ವೇಳೆ ನಾನ್​ವೆಜ್ (NonVeg) ಪ್ರಿಯರಾಗಿದ್ರೆ ಇಂದು ನಾವು ನಿಮಗಾಗಿ ಸ್ಪೆಷಲ್ ರೆಸಿಪಿ (Morning Special Recipe) ತಂದಿದ್ದೇವೆ. ಚಿಕನ್ (Chicken) ಬಳಸಿ ರುಚಿಯಾದ ಉಪ್ಮಾ (Upma/Uppittu) ಮಾಡಬಹುದು. ಬಗೆ ಬಗೆಯ ತರಕಾರಿ ಉಪ್ಮಾ (Vegetable Upma) ತಿಂದು ಜಡ್ಡು ಹಿಡಿದಿರುವ ನಿಮ್ಮ ನಾಲಿಗೆಗೆ ಚಿಕನ್ ಉಪ್ಪಿಟ್ಟು (Chicken Upma Or Chicken Uppittu) ಹೊಸ ರುಚಿಯನ್ನು ನೀಡುತ್ತದೆ.


ಈ ಹಿಂದೆ ನ್ಯೂಸ್ 18 ಕನ್ನಡ ವೆಬ್​ಸೈಟ್​ನಲ್ಲಿ ಬಗೆ ಬಗೆಯ ರೆಸಿಪಿಗಳನ್ನ ನೋಡಿದ್ದೇವೆ. ಇವತ್ತು ಚಿಕನ್ ಫುಡ್ (Chicken Recipe) ಪ್ರಿಯರಿಗಾಗಿ ಹೊಸ ರೆಸಿಪಿ ತಂದಿದ್ದೇವೆ. ಇದು ಮಾಡೋದು ತುಂಬಾ ಸುಲಭ. ಚಿಕನ್ ಉಪ್ಮಾ ಮಾಡುವ ವಿಧಾನ ಈ ಕೆಳಗಿನಂತಿದೆ.


ಚಿಕನ್ ಉಪ್ಮಾ ಮಾಡುವ ವಿಧಾನ


ಬೋನ್​ಲೆಸ್​ ಚಿಕನ್: 200 ಗ್ರಾಂ


ದಪ್ಪ ರವೆ: 100 ಗ್ರಾಂ


ಈರುಳ್ಳಿ: ಒಂದು (ದೊಡ್ಡ ಗಾತ್ರದ್ದು)


ಹಸಿ ಮೆಣಸಿನಕಾಯಿ: 4 ರಿಂದ 5


ಅಚ್ಚ ಖಾರದ ಪುಡಿ ಅಥವಾ ಪೆಪ್ಪರ್ ಪೌಡರ್: ಒಂದು ಟೀ ಸ್ಪೂನ್


ಟೊಮ್ಯಾಟೋ: ಎರಡು


ಹಸಿ ಶುಂಟಿ: ಅರ್ಧ ಇಂಚು


ಸಾಸವೆ ಮತ್ತು ಜೀರಿಗೆ: ಒಂದು ಟೀ ಸ್ಪೂನ್


ಕರಿಬೇವು: 5 ರಿಂದ 6 ದಳ


ಗೋಡಂಬಿ: 4 ರಿಂದ 5


ಕೋತಂಬರಿ ಸೊಪ್ಪು


ಅಡುಗೆ ಎಣ್ಣೆ: 5 ರಿಂದ 6 ಟೀ ಸ್ಪೂನ್


ಉಪ್ಪು: ರುಚಿಗೆ ತಕ್ಕಷ್ಟು


ಅರಿಶಿನ: ಎರಡು ಚಿಟಿಕೆ


ಚಿಕನ್ ಉಪ್ಮಾ ಮಾಡುವ  ವಿಧಾನ


*ಮೊದಲಿಗೆ ಮಾರುಕಟ್ಟೆಯಿಂದ ತಂದಿರುವ ಬೋನ್​ಲೆಸ್ ಚಿಕನ್​ನನ್ನು ಬಿಸಿ ನೀರಿನಲ್ಲಿ ಎರಡು ಬಾರಿ ತೊಳೆದುಕೊಳ್ಳಿ. ಹೀಗೆ ಮಾಡೋದರಿಂದ ರಕ್ಕೆ ಪುಕ್ಕೆ, ರಕ್ತ ಸ್ವಚ್ಛವಾಗುತ್ತದೆ.


*ನಂತರ ಸ್ವಚ್ಛವಾಗಿ ತೊಳೆದ ಚಿಕನ್​ನ್ನು ಕುಕ್ಕರ್​ಗೆ ಹಾಕಿ, ಒಂದು ಕಪ್ ನೀರು, ಅರ್ಧ ಟೀ ಸ್ಪೂನ್ ಉಪ್ಪು, ಚಿಟಿಕೆ ಅರಿಶಿಣ ಹಾಕಿ ಮುಚ್ಚಳ ಮುಚ್ಚಿ ಒಂದು ವಿಷಲ್ ಕೂಗಿಸಿಕೊಳ್ಳಿ. ಒಂದು ವಿಷಲ್ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಚಿಕನ್ ಬೇರ್ಪಡಿಸಿಕೊಳ್ಳಿ. ಕುಕ್ಕರ್​ನಲ್ಲಿ ಉಳಿದಿರುವ ನೀರನ್ನು ಒಂದು ಬೌಲ್​ಗೆ ಹಾಕಿಕೊಂಡು ಎತ್ತಿಟ್ಟುಕೊಳ್ಳಿ.


*ಈಗ ಬೇಯಿಸಲಾಗಿರುವ ಚಿಕನ್​ನನ್ನು ತರಿ ತರಿಯಾಗಿ ಬೇರ್ಪಡಿಸಿಕೊಳ್ಳಿ. ಬೆಂದಿರುವ ಮಾಂಸ ಎಳೆ ಎಳೆಯಾಗಿ ಬಿಚ್ಚಿಟ್ಟುಕೊಳ್ಳಬೇಕು. (ಕೆಲವರು ಮಿಕ್ಸಿಗೆ ಸಹ ಹಾಕಿಕೊಳ್ಳುತ್ತಾರೆ. ಆದರೆ ಇದು ಕೆಲವೊಮ್ಮೆ ಪೇಸ್ಟ್​ ಆಗುತ್ತದೆ. ಆದ್ದರಿಂದ ಕೈಯಿಂದಲೇ ಬಿಡಿಸಿಕೊಳ್ಳೋದು ಉತ್ತಮ).


*ತದನಂತರ ಈರುಳ್ಳಿ, ಟೊಮ್ಯಾಟೋ, ಹಸಿ ಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ.




*ಈಗ ಒಲೆ ಮೇಲೆ ಒಂದು ಪ್ಯಾನ್ ಇರಿಸಿಕೊಂಡು ಕಡಿಮೆ ಉರಿಯಲ್ಲಿ ರವೆ ಕಂದು ಬಣ್ಣಕ್ಕೆ ಬರೋವರೆಗೂ ಹುರಿದುಕೊಳ್ಳಿ. ರವೆಯ ಪರಿಮಳ ಬರುತ್ತಿದ್ದಂತೆ, ಒಂದು ಬೌಲ್​ಗೆ ಹಾಕಿ ಎತ್ತಿಟ್ಟುಕೊಳ್ಳಿ.


*ಇದೇ ಪ್ಯಾನ್​ಗೆ 4 ರಿಂದ 5 ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸವೆ, ಜೀರಿಗೆ, ಕರೀಬೇವು ಸೇರಿಸಿ ಒಗ್ಗರಣೆ ಹಾಕಿಕೊಳ್ಳಿ. ತದನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಚೆನ್ನಾಗಿ ಬಾಡಿಸಿಕೊಳ್ಳಿ. ಈರುಳ್ಳಿ ಫ್ರೈ ಆಗುತ್ತಿದ್ದಂತೆ ಟೊಮ್ಯಾಟೋ, ಹಸಿಮೆಣಸಿನಕಾಯಿ, ಹಸಿ ಶುಂಠಿ, ಅಚ್ಚ ಖಾರದ ಪುಡಿ ಮಿಕ್ಸ್ ಮಾಡಿ ಎರಡು ನಿಮಿಷ ಬೇಯಿಸಿಕೊಳ್ಳಿ.


*ತದನಂತರ ಸಿದ್ಧ ಮಾಡಿಕೊಂಡಿರುವ ಚಿಕನ್ ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಸಾಲೆ ಜೊತೆ ಚಿಕನ್ ಫ್ರೈ ಆಗುತ್ತಿದ್ದಂತೆ ಕುಕ್ಕರ್ ನಲ್ಲಿ ಉಳಿದಿದ್ದ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.


*ಐದು ನಿಮಿಷದ ಬಳಿಕ ಪ್ಯಾನ್ ಮುಚ್ಚಳ ತೆಗೆದು ಒಂದು ಬೌಲ್ ಬಿಸಿ ನೀರು ಸೇರಿಸಿ. ಇದಾದ ಬಳಿಕ ಫ್ರೈ ಮಾಡಿಕೊಂಡಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಮಿಕ್ಸ್ ಮಾಡುತ್ತಾ ಹೋಗಿ. ನಿಮ್ಮ ರವೆಯನ್ನು ಸಮವಾಗಿ ನಾಲ್ಕರಿಂದ ಐದು ಭಾಗ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಹೋಗಬೇಕು.


ಇದನ್ನೂ ಓದಿ:  Upma Recipe: ಹೊಸ ಬಗೆಯ, ಭಿನ್ನ ರುಚಿಯ ಸ್ವೀಟ್​ ಕಾರ್ನ್​ ಉಪ್ಪಿಟ್ಟು ಮಾಡುವ ವಿಧಾನ


*ರವೆಯನ್ನು ಸೇರಿಸಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು ಕೋತಂಬರಿ ಸೊಪ್ಪು ಉದುರಿಸಿ ಮತ್ತೊಮ್ಮೆ ಎಲ್ಲಾ ಮಿಕ್ಸ್ ಮಾಡಿ ಒಲೆ ಆಫ್ ಮಾಡಬೇಕು. ಒಲೆ ಆಫ್ ಮಾಡಿದ ನಂತರ ಮುಚ್ಚಳ ಮುಚ್ಚಿ 5 ರಿಂದ 6 ನಿಮಿಷ ಬಿಡಿ.


*ಐದರಿಂದ ಆರು ನಿಮಿಷದ ನಂತರ ಮತ್ತೊಮ್ಮೆ ಉಪ್ಪಿಟ್ಟನ್ನು ಚೆನ್ನಾಗಿ ಮೇಲಿಂದ ಕೆಳಕ್ಕೆ ಮಿಕ್ಸ್ ಮಾಡಿದರೆ ರುಚಿಯಾದ ಚಿಕನ್ ಉಪ್ಮಾ ಸವಿಯಲು ಸಿದ್ಧ.


*ಚಿಕನ್ ಉಪ್ಮಾ ಸವಿಯುವಾಗ ನಿಂಬೆಹಣ್ಣಿನ ರಸ ಮಿಕ್ಸ್ ಮಾಡಿಕೊಳ್ಳಬಹುದು.

Published by:Mahmadrafik K
First published: