Sankranti Special: ಸಂಕ್ರಾಂತಿಗೆ ಸಿಹಿ ಹಾಗೂ ಖಾರ ಪೊಂಗಲ್ ಮಾಡಿ ಸವಿಯಿರಿ, ಮಾಡುವ ವಿಧಾನ ಇಲ್ಲಿದೆ

ಪೊಂಗಲ್ ನಲ್ಲಿ ಖಾರ ಹಾಗೂ ಸಿಹಿ ಪೊಂಗಲ್ ಅಂತ ಎರಡು ವಿಧಗಳಿವೆ. ಈ ಎರಡು ಬಗೆಯ ತಿನಿಸುಗಳನ್ನ ಮಾಡೋದು ಬಹಳ ಸುಲಭ. ಹೆಸರು ಬೇಳೆ , ತೆಂಗಿನ ತುರಿ ಹಾಗೂ ಅನ್ನದ ಮಿಶ್ರಣವು ನಾಲಿಗೆಗೆ ಅದ್ಭುತ ರುಚಿಯ ಜೊತೆಗೆ ಆರೋಗ್ಯದ ಪೋಷಣೆಯನ್ನು ಮಾಡುತ್ತದೆ.

ಸಿಹಿ ಪೊಂಗಲ್

ಸಿಹಿ ಪೊಂಗಲ್

  • Share this:
ಸಂಕ್ರಾಂತಿ ಹಬ್ಬಕ್ಕೆ ಮೆರಗು ತಂದು ಕೊಡೋದು ಸ್ಪೆಷಲ್ ಖಾದ್ಯಗಳು, ಈ ಹಬ್ಬಕ್ಕೆ ಮಾಡೋ ವಿಶೇಷ ಅಡುಗೆ ಎಂದ್ರೆ ಸಿಹಿ ಮತ್ತು ಖಾರ ಪೊಂಗಲ್
ವರ್ಷದ ಮೊದಲ ಹಬ್ಬ ಸಂಕ್ರಾಂತಿ (Sankranti festival)ಯನ್ನ ಭಾರತದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಅದ್ಧೂರಿಯಾಗಿಯೇ ಆಚರಿಸ್ತಾರೆ. ಅದರಲ್ಲೂ ತಮಿಳುನಾಡು (Tamil nadu), ಆಂಧ್ರಪ್ರದೇಶ(Andhra Pradesh) ಭಾಗದಲ್ಲಿ ಹಬ್ಬ ಬಲು ಜೋರು. ಇನ್ನು ನಮ್ಮ ಕರ್ನಾಟಕದಲ್ಲೂ ಸುಗ್ಗಿ ಹಬ್ಬ ಅಂತಾನೇ ಕರೆಯೋ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸುತ್ತಾರೆ. ಹಳ್ಳಿಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬೆಳಗ್ಗೆಯೆ ಕಿಚಡಿ ಅನ್ನ ಮಾಡ್ತಾರೆ. ಪೊಂಗಲ್ ನ್ನೇ ಹಳ್ಳಿಗಳಲ್ಲಿ ಕಿಚಡಿ (Pongal) ಅನ್ನ ಅಂತಾರೆ. ಸಿಟಿ ಜನರಿಗೆ ಹಬ್ಬ ಅಂದ್ರೆ ನೆನಪಾಗೋದು ಭಕ್ಷ್ಯ ಭೋಜನ. ವೆರೈಟಿ (Variety food) ಅಡುಗೆಗಳನ್ನ ಮಾಡಿ ತಿನ್ನುತ್ತಾ ಹಬ್ಬ ಆಚರಿಸ್ತಾರೆ. ಪೊಂಗಲ್ ಜೊತೆ ಕಡ್ಲೆ ಕಾಯಿ, ಅವರೆಕಾಯಿ ಹಾಗೂ ಗೆಣಸನ್ನು ಬೇಯಿಸಿ ತಿನ್ನುತ್ತಾರೆ. ಇನ್ನು ಈ ಹಬ್ಬದ ಸ್ಪೆಷಲ್ ಪೊಂಗಲ್ ನನ್ನು ಹೇಗೆ ಮಾಡೋದು ನೋಡೋಣ ಬನ್ನಿ.

ಪೊಂಗಲ್ ನಲ್ಲಿ ಖಾರ ಹಾಗೂ ಸಿಹಿ ಪೊಂಗಲ್ ಅಂತ ಎರಡು ವಿಧಗಳಿವೆ. ಈ ಎರಡು ಬಗೆಯ ತಿನಿಸುಗಳನ್ನ ಮಾಡೋದು ಬಹಳ ಸುಲಭ. ಹೆಸರು ಬೇಳೆ , ತೆಂಗಿನ ತುರಿ ಹಾಗೂ ಅನ್ನದ ಮಿಶ್ರಣವು ನಾಲಿಗೆಗೆ ಅದ್ಭುತ ರುಚಿಯ ಜೊತೆಗೆ ಆರೋಗ್ಯದ ಪೋಷಣೆಯನ್ನು ಮಾಡುತ್ತದೆ. ಬನ್ನಿ ಈ ಪೊಂಗಲ್ ಮಾಡೋಕೆ ಯಾವ ಯಾವ ಸಾಮಾಗ್ರಿಗಳು ಬೇಕು ನೋಡೋಣ.

ಬೇಕಾಗುವ ಸಾಮಾಗ್ರಿಗಳು

1ಕಪ್ ಅಕ್ಕಿ, ½ ಕಪ್ ಹೆಸರು ಬೇಳೆ, 1 ಕಪ್ ಸಣ್ಣದಾಗಿ ಕತ್ತರಿಸಿದ ತೆಂಗಿನಕಾಯಿ, ½ ಚಮಚ ಅರಿಶಿನಪುಡಿ,1 ಚಮಚ ಜೀರಿಗೆ, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ 5 ಚಮಚ ಎಣ್ಣೆ ಹಾಗೂ ತುಪ್ಪ, ಕರಿಬೇವು, ಸಾಸಿವೆ, ಒಣಮೆಣಸಿನ ಕಾಯಿ.

ಇದನ್ನೂ ಓದಿ: Makar Sankranthi 2022: ಸಕ್ಕರೆ ಅಚ್ಚು ಮನೆಯಲ್ಲಿ ಮಾಡೋ ಸುಲಭ ವಿಧಾನ

ತಯಾರಿಸುವ ವಿಧಾನ

ಅಕ್ಕಿ ಹಾಗೂ ಹೆಸರು ಬೇಳೆಯನ್ನು ತೊಳೆದು ಕುಕ್ಕರ್ ಗೆ ಹಾಕಿ 1 ಕಪ್ ಅಕ್ಕಿ ಹಾಗೂ ಅರ್ಧ ಕಪ್ ಹೆಸರುಬೇಳೆಗೆ 3 ಕಪ್ ನೀರು ಹಾಕಿ, ಬಳಿಕ ಸ್ವಲ್ಪ ಅರಿಶಿನ ಸೇರಿಸಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ. 4-5 ಸೀಟಿ ಕೂಗಿಸಿಕೊಳ್ಳಿ. ಅನ್ನ ಹಾಗೂ ಬೇಳೆ ಚೆನ್ನಾಗಿ ಬೆಂದಿರಬೇಕು. ಮತ್ತೊಂದೆಡೆ ಬಾಣಲೆಯಲ್ಲಿ ಎಣ್ಣೆ, ತುಪ್ಪ ಎರಡು ಹಾಕಿ ಕಾದ ಬಳಿಕ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಅದಕ್ಕೆ ಸಣ್ಣಗೆ ಹಚ್ಚಿದ ಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

ಒಗ್ಗರಣೆಯನ್ನು ಬೇಯಿಸಿದ ಅನ್ನಕ್ಕೆ ಹಾಕಿ, 1ಚಮಚ ಜೀರಿಗೆ, ಕಾಳು ಮೆಣಸಿನ ಪುಡಿ ಹಾಕಿ 2 ನಿಮಿಷ ಕುದಿಯಲು ಬಿಡಿ. ಸ್ವಲ್ಪ ಕೊತ್ತಂಬರಿ ಸೇರಿಸಿದ್ರೆ ಸಾಕು ರುಚಿ ರುಚಿ ಖಾರಾ ಪೊಂಗಲ್ ರೆಡಿಯಾಗುತ್ತೆ. ಖಾರ ಪೊಂಗಲ್ ಜೊತೆ ಸಿಹಿ ಪೊಂಗಲ್ ಬೇಕೇ ಬೇಕು. ಬನ್ನಿ ಸಿಹಿ ಪೊಂಗಲ್ ಮಾಡಲು ಯಾವ ಸಾಮಾಗ್ರಿ ಬೇಕು ಅಂತ ನೋಡೋಣ.

ಬೇಕಾಗುವ ಸಾಮಾಗ್ರಿಗಳು

1 ಕಪ್ ಅಕ್ಕಿ, 1ಕಪ್ ಹೆಸರುಬೇಳೆ, 1ಕಪ್ ಬೆಲ್ಲ, 1ಕಪ್ ಕಾಯಿತುರಿ, 6 ಚಮಚ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ.

ಇದನ್ನೂ ಓದಿ: Makar Sankranti 2022: ಸಂಕ್ರಾಂತಿ ಹಬ್ಬಕ್ಕೆ ಮನೆಯಲ್ಲಿ ಎಳ್ಳು-ಬೆಲ್ಲ ಮಾಡೋದು ಎಷ್ಟು ಸುಲಭ ನೋಡಿ

ತಯಾರಿಸುವ ವಿಧಾನ

ಅಕ್ಕಿ ಹಾಗೂ ಹೆಸರು ಬೇಳೆಯನ್ನು ತೊಳೆದು ಕುಕ್ಕರ್ ಗೆ ಹಾಕಿ 1 ಕಪ್ ಅಕ್ಕಿ ಹಾಗೂ 1 ಕಪ್ ಹೆಸರು ಬೇಳೆಗೆ 3 ಕಪ್ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ, 4-5 ಸೀಟಿ ಕೂಗಿಸಿಕೊಳ್ಳಿ. ಮತ್ತೊಂದೆಡೆ ಪಾತ್ರೆಯಲ್ಲಿ ಬೆಲ್ಲ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿದ ಬಳಿಕ ಬೆಲ್ಲದ ನೀರನ್ನು ಬೆಂದ ಅನ್ನಕ್ಕೆ ಸೇರಿಸಿ. ಅನ್ನಕ್ಕೆ ಕಾಯಿತುರಿ, ಏಲಕ್ಕಿ ಪುಡಿ, 1 ಕಪ್ ಹಾಲು ಸೇರಿಸಿ. ಮತ್ತೊಂದೆಡೆ ಬಾಣಲಿಗೆ ತುಪ್ಪ ಹಾಕಿ ಕಾದ ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿ ಕೆಂಪಗೆ ಹುರಿದು ಅನ್ನಕ್ಕೆ ಬೆರಸಿ, ನಂತರ 5 ನಿಮಿಷ ಕುದಿಸಿದರೆ ಸಂಕ್ರಾಂತಿ ಸ್ಪೆಷಲ್ ಪೊಂಗಲ್ ರೆಡಿ.
Published by:Soumya KN
First published: