ಬೊಂಡಾಸ್ ಮೀನು ನೋಡಿದ್ದೀರಾ? ಇಂಗ್ಲೀಷ್ನಲ್ಲಿ ಇದಕ್ಕೆ ಸ್ಕ್ವಿಡ್ (Squid) ಎಂದು ಕರೆಯುತ್ತಾರೆ. ಬೊಂಡಾಸ್ ಬಳಸಿಕೊಂಡು ನಾನಾ ತರಹದ ಅಡುಗೆ (Cooking) ತಯಾರಿಸುತ್ತಾರೆ. ಕರಾವಳಿ ಭಾಗದ ಜನರಿಗೆ ಬೊಂಡಾಸ್ ಮೀನಿನಿಂದ ಸಿದ್ಧಪಡಿಸಬಹುದಾದ ಹಲವು ಬಗೆಯ ರೆಸಿಪಿಗಳ (Recipe) ಬಗ್ಗೆ ಗೊತ್ತಿದೆ. ಊಟದೊಂದಿಗೆ ಬೊಂಡಾಸ್ ಮಸಾಲೆ ಸೇರಿಸಿಕೊಂಡು ಸವಿದರೆ ಅದರ ಟೇಸ್ಟ್ ಸಖತ್ತಾಗಿರುತ್ತದೆ. ಅಂದಹಾಗೆಯೇ, ಭಾನುವಾರದಂದು ಮನೆಯಲ್ಲಿ ಕುಳಿತುಕೊಂಡು ಭರ್ಜರಿ ಊಟ ಮಾಡುವ ಪ್ಲಾನ್ ಹಾಕಿಕೊಂಡವರು ಒಂದು ಬಾರಿ ಬೊಂಡಾಸ್ ಮಸಾಲೆ (Squid Masala) ಮಾಡಿ, ಒಟ್ಟಿಗೆ ಕುಳಿತುಕೊಂಡು ಸವಿಯಿರಿ. ಒಂದು ವೇಳೆ ನಿಮಗೆ ಬೊಂಡಾಸ್ ಮಸಾಲೆ ತಯಾರಿಸಲು ತಿಳಿಯದೇ ಇದ್ದರೆ, ಈ ವಿಡಿಯೋ (Video) ನೋಡಿಕೊಂಡು ಅಡುಗೆ ಮಾಡಬಹುದು.
ಬೊಂಡಾಸ್ ಮಸಾಲೆ ಮಾಡಲು ಬೇಕಾಗುವ ಅಡುಗೆ ಸಾಮಾಗ್ರಿಗಳ ಬಗ್ಗೆ ಮಾಹಿತಿ ಇಲ್ಲಿದೆ:
ಬೇಕಾಗುವ ಸಾಮಗ್ರಿಗಳು
1 ಕೆಜಿ ಬೊಂಡಾಸ್, ಮೆಣಸಿನ ಪುಡಿ, ಅರಶಿಣ ಪುಡಿ, ಉಪ್ಪು, ಒಂದು ದೊಡ್ಡ ಗಾತ್ರದ ಈರುಳ್ಳಿ, ಸಣ್ಣ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಸೊಪ್ಪು, ಟೊಮೋಟೊ, ಮೆಣಸಿನ ಕಾಯಿ, ದನಿಯ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಕೊತಂಬರಿ ಸೊಪ್ಪು.
ಮಾಡುವ ವಿಧಾನ
ಚೆನ್ನಾಗಿ ತೊಳೆದು ಕತ್ತರಿಸಿ ಕೊಂಡ ಸ್ಕ್ವಿಡ್ ಅಥವಾ ಬೊಂಡಾಸ್ ಅನ್ನು ಒಂದು ಬೌಲ್ ಗೆ ಹಾಕಿ, ಅರಶಿನ ಪುಡಿ ಒಂದು ಚಮಚ, ಮೆಣಸಿನ ಪುಡಿ ಒಂದು ಚಮಚ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೆನೆಯಲು ಇಡಿ.
ಇದನ್ನೂ ಓದಿ: Inflammatory: ಕರುಳಿನಲ್ಲಿ ಉಂಟಾಗುವ ಉರಿಯೂತ ಈ ಸಮಸ್ಯೆಗಳಿಗೆ ಕಾರಣವಾಗುತ್ತೆ
ಒಂದು ಪ್ಯಾನ್ ಗೆ 2 ಚಮಚ ತೆಂಗಿನ ಎಣ್ಣೆ ಹಾಕಿ,ಸಣ್ಣಗೆ ತುಂಡರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ ನಂತರ ಸಣ್ಣ ಈರುಳ್ಳಿ , 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಕರಿ ಬೇವಿನ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ನಂತರ ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ,3 ಟೊಮೋಟೊ, ಹಾಕಿ ಫ್ರೈ ಮಾಡಿ. ನಂತರ ಸ್ವಲ್ಪ ಮೆಣಸಿನ ಪುಡಿ, ದನಿಯ ಪುಡಿ, ಜೀರಿಗೆ ಪುಡಿ, ಅರಶಿನ ಪುಡಿ, 1/2 ಚಮಚ ಕಾಳು ಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕೊನೆಯಲ್ಲಿ 1/4 ಕಪ್ ನೀರು ಸೇರಿಸಿ ಬೇಯಲು ಇಡಿ.
ನಂತರ ನೆನೆಯಲು ಇಟ್ಟಿದ್ದ ಸ್ಕ್ವಿಡ್ ಹಾಕಿ, ಗರಂ ಮಸಾಲ, ಲಿಂಬೆ ರಸ ಸೇರಿಸಿ 10 ನಿಮಿಷಗಳ ಕಾಲ ಬೇಯಲು ಬಿಡಿ. ಕೊನೆಯಲ್ಲಿ ಕೊತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿ ರುಚಿ ಆದ ಸ್ಕ್ವಿಡ್ ಮಸಾಲೆ ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ