Breakfast Recipe: ಒಂದೇ ತರಹದ ದೋಸೆ ತಿಂದು ಬೇಜಾರು ಆಗಿದೆಯಾ? ಹಾಗಿದ್ರೆ ಈ ರೆಸಿಪಿ ಟ್ರೈ ಮಾಡಿ

ಇಂದು ನಾವು ಹೇಳುತ್ತಿರುವ ದೋಸೆ ಮಕ್ಕಳಿಗೆ ಪೌಷ್ಠಿಕಾಂಶ ನೀಡುತ್ತದೆ ಮತ್ತು ಹಿರಿಯರಿಗೆ ಹೊಸ ರುಚಿಯನ್ನ ನೀಡುತ್ತದೆ.

ಎಗ್ ದೋಸೆ

ಎಗ್ ದೋಸೆ

  • Share this:
ಸಾಮಾನ್ಯವಾಗಿ ಮನೆಗಳಲ್ಲಿ ದೋಸೆ (Dosa Recipe) ಮಾಡುತ್ತಿರುತ್ತಾರೆ. ಆದರೆ ದಿನೇ ದಿನೇ ದೋಸೆ (Dosa) ತಿಂದು ಬೇಜಾರು ಆಗಿದ್ರೆ ಇಂದು ನಾವು ನಿಮಗೆ ಹೊಸ ರೆಸಿಪಿ (Recipe) ಬಗ್ಗೆ ಹೇಳುತ್ತಿದ್ದೇವೆ. ದೋಸೆಗಳಲ್ಲಿ ಹೊಸ ಹೊಸ ವೆರೈಟಿ (Variety Dosa) ಮಾಡಬಹುದು ಎಂಬುದನ್ನು ಈ ಹಿಂದೆ ಹೇಳಲಾಗಿದೆ. ಇಂದು ನಾವು ಹೇಳುತ್ತಿರುವ ದೋಸೆ ಮಕ್ಕಳಿಗೆ ಪೌಷ್ಠಿಕಾಂಶ ನೀಡುತ್ತದೆ ಮತ್ತು ಹಿರಿಯರಿಗೆ ಹೊಸ ರುಚಿಯನ್ನ ನೀಡುತ್ತದೆ. ಮೊಟ್ಟೆ (Egg) ತಿನ್ನಲ್ಲ ಎಂದು ಹೇಳುವವರಿಗೆ ಈ ದೋಸೆ ನಿಮಗೆ ಖಂಡಿತ ಇಷ್ಟವಾಗಿತ್ತದೆ. ಈ ದೋಸೆಯನ್ನು ಕೆಂಪು ಅಥವಾ ಹಸಿ ಖಾರ (Red And Green Chilly) ಹಾಕಿ ಬಗೆ ಬಗೆಯಾಗಿ ಮಾಡಬಹುದು.

ಇಂದು ನಾವು ನಿಮಗೆ ಸ್ಪೈಸಿ ಎಗ್ ಮಸಾಲಾ ದೋಸೆ ಮಾಡೋದು ಹೇಗೆ ಎಂಬುದನ್ನು ಹೇಳುತ್ತಿದ್ದೇವೆ. ಈ ದೋಸೆಗಾಗಿ ನೀವು ಹೆಚ್ಚಿನ ಶ್ರಮ ಪಡಬೇಕಿಲ್ಲ.

ಬೇಕಾಗುವ ಸಾಮಾಗ್ರಿಗಳು

ದೋಸೆ ಹಿಟ್ಟು

ಕೆಂಪು ಅಥವಾ ಹಸಿ ಮೆಣಸಿನಕಾಯಿ ಚಟ್ನಿ

ಮೊಟ್ಟೆ

ಕೋತಂಬರಿ ಸೊಪ್ಪು

ಎಣ್ಣೆ

How to make spicy egg dosa mrq
ಎಗ್ ದೋಸೆ


ಮಾಡುವ ವಿಧಾನ

*ಮಸಾಲೆ ದೋಸೆಗೆ ಬೇಕಾಗುವ ಹದಕ್ಕೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಒಂದು ವೇಳೆ ಹಿಟ್ಟು ಮಾಡಿಕೊಳ್ಳಲು ಸಮಯ ಇರದಿದ್ದರೆ ಅಂಗಡಿಯಲ್ಲಿ ಸಿಗುವ ದೋಸೆ ಹಿಟ್ಟು ಬಳಸಿಕೊಳ್ಳಬಹುದು.

*ಗ್ಯಾಸ್​ ಸ್ಟೌವ್ ಆನ್ ಮಾಡ್ಕೊಂಡು ತವೆ ಇಟ್ಟುಕೊಳ್ಳಿ. ತವೆ ಬಿಸಿಯಾಗುತ್ತಿದ್ದಂತೆ ದೋಸೆ ಹುಯ್ಯಿರಿ.

*ಹಸಿ ಹಿಟ್ಟು ಬೇಯುತ್ತಿದ್ದಂತೆ ಇದರ ಮೇಲೆ ಮೊಟ್ಟೆ ಒಡೆದು ಹಾಕಿ. ಕೂಡಲೇ ಚಮಚದಿಂದ ಮೊಟ್ಟೆಯನ್ನು ದೋಸೆ  ತುಂಬಾ ಬಾಡಿಸಿದ ನಂತರ ಅಡುಗೆ ಎಣ್ಣೆ ಹಾಕಿ.

How to make spicy egg dosa mrq
ಎಗ್ ದೋಸೆ


ಇದನ್ನೂ ಓದಿ:  Onam Food Recipe: ಓಣಂ ವಿಶೇಷ: ಕೇರಳ ಸ್ಟೈಲ್ ಬಾದಾಮಿ, ಸೇಬು ಪಾಯಸ ಸವಿಯಿರಿ

*ಮೊಟ್ಟೆ ಬೇಯುತ್ತಿದ್ದಂತೆ ಕೆಂಪು ಚಟ್ನಿಯನ್ನು ದೋಸೆ ತುಂಬ ಸವರಿಸಿ. ನಂತರ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿದ್ರೆ ಸ್ಪೈಸಿ ಎಗ್ ಮಸಾಲಾ ದೋಸೆ ಸವಿಯಲು ಸಿದ್ಧವಾಗುತ್ತದೆ.

*ಕೆಲವರು ಕೆಂಪು ಚಟ್ನಿ ಇಷ್ಟಪಡದಿದ್ರೆ ಹಸಿ ಮೆಣಸಿನಕಾಯಿ ಖಾರವನ್ನು ಬಳಸಬಹುದು. ಒಂದಿಷ್ಟು ಜನರು ಪೆಪ್ಪರ್ ಪೌಡರ್ ಸಹ ಬಳಕೆ ಮಾಡುತ್ತಾರೆ.

ಆಲೂಗೆಡ್ಡೆ ದೋಸೆ ಮಾಡುವ ವಿಧಾನ

ಕೆಲವರಿಗೆ ದೋಸೆಯಲ್ಲಿ ವಿಭಿನ್ನವಾದದ್ದನ್ನ ಪ್ರಯತ್ನಿಸುವ ಆಸೆ ಇರುತ್ತದೆ. ದೋಸೆ ಎಂದರೆ ಎಲ್ಲರಿಗೂ ನೆನಪಾಗುವುದು ಖಾಲಿ ದೋಸೆ, ಮಸಾಲೆ ದೋಸೆ, ಸೆಟ್​ ದೋಸೆ ಹೀಗೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆಲೂಗೆಡ್ಡೆ ದೋಸೆ (Potato Dosa)ಬಗ್ಗೆ ಹಲವಾರು ಕೇಳಿರುವುದಿಲ್ಲ. ಮಸಾಲೆ ದೋಸೆ, ಆಲುಗೆಡ್ಡೆ ಪಲ್ಯದ ಬಗ್ಗೆ ಗೊತ್ತಿರುತ್ತದೆ, ಆದರೆ ಇದು ಸ್ವಲ್ಪ ವಿಭಿನ್ನ.

ಆಲೂಗೆಡ್ಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

4 ಆಲೂಗಡ್ಡೆ

1 ಕಪ್ ಮೈದಾಹಿಟ್ಟು

4 ಹಸಿರು ಮೆಣಸಿನಕಾಯಿ

ಕೊತ್ತಂಬರಿ ಸ್ವಲ್ಪ

ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು.

ಆಲೂಗೆಡ್ಡೆ ದೋಸೆ ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು ಕುಕ್ಕರಿನಲ್ಲಿ ಬೇಯಿಸಿ, ಆರಿದ ಮೇಲೆ ಸಿಪ್ಪೆಯನ್ನು ಸುಲಿದು ಚೆನ್ನಾಗಿ ಪೇಸ್ಟ್​ ಮಾಡಿಟ್ಟುಕೊಳ್ಳಿ. ಅದಕ್ಕೆ ಉಪ್ಪು ಹಾಕಿ ಮತ್ತೆ ಚನ್ನಾಗಿ ಕಲಸಿ. ಅದಕ್ಕೆ ಮೈದಾಹಿಟ್ಟು ಮತ್ತು ಸ್ವಲ್ಪ ನೀರು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಅದು ದೋಸೆ ಹಿಟ್ಟಿನ ಹದಕ್ಕೆ ಬಂದರೆ ಸಾಕು.

ಇದನ್ನೂ ಓದಿ:  Rava Dosa: ಪರ್ಫೆಕ್ಟ್ ರವೆ ದೋಸೆ ಮಾಡುವುದು ಹೇಗೆ ಅಂತೀರಾ? ದೋಸೆ ಮಾಡುವಾಗ ನೆನಪಿರಲಿ ಈ ಸಲಹೆಗಳು..!

ಈ ಹಿಟ್ಟಿನ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿ, ಎಲ್ಲಾ ಮಸಾಲೆಗಳು ಸರಿಯಾಗಿ ಮಿಶ್ರಣ ಮಾಡಬೇಕು.

ನಂತರ ದೋಸೆ ಪ್ಯಾನ್​ ಅನ್ನು  ಗ್ಯಾಸ್​ ಮೇಲೆ ಇಟ್ಟು, ಪ್ಯಾನ್​ ಕಾದ ನಂತರ ಎಣ್ಣೆ ಸವರಿ ಆಲೂಗಡ್ಡೆ ಹಿಟ್ಟಿನ ಮಿಶ್ರಣವನ್ನು ದೋಸೆಯಂತೆ ಹಾಕಿ ಮತ್ತೆ ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿದರೆ ಆಲೂಗೆಡ್ಡೆ ದೋಸೆ ರೆಡಿ.
Published by:Mahmadrafik K
First published: