Special Egg Upma Recipe: ಸಾಮಾನ್ಯವಾಗಿ ಮಕ್ಕಳು (Children) ಮಾಡಿದ ಅಡುಗೆಯಲ್ಲಿನ ಕೋತಂಬರಿ ಸೊಪ್ಪು, ಟೊಮ್ಯಾಟೋ, ಹಸಿ ಮೆಣಸಿನಕಾಯಿ, ಕರಿಬೇವು ಎಲ್ಲವನ್ನೂ ತೆಗೆದು ತಿನ್ನುತ್ತಾರೆ. ಹೀಗಾಗಿ ಮಕ್ಕಳಿಗೆ ಪೌಷ್ಠಿಕಾಂಶ ತಿಂಡಿ ನೀಡೋದು ಹೇಗೆ ಅಂತ ಅಮ್ಮಂದಿರು (Mother) ತಲೆಕೆಡಿಸಿಕೊಳ್ಳುತ್ತಾರೆ. ಒಂದು ವೇಳೆ ಬೆಳಗ್ಗೆ ತಿಂಡಿ ( Morning Breakfast) ಮಾಡಲು ಹೆಚ್ಚು ಸಮಯ ಇರಲ್ಲ ಅಂತ ಬಹುತೇಕರು ಉಪ್ಪಿಟ್ಟು (Uppittu Recipe) ಮಾಡಲು ಮುಂದಾಗುತ್ತಾರೆ. ಆದ್ರೆ ಒಂದೇ ರೀತಿಯ ಉಪ್ಪಿಟ್ಟು (Upma) ಎಲ್ಲರಿಗೂ ಬೇಸರವಾಗುತ್ತದೆ. ಹಾಗಾಗಿ ಇಂದು ನಾವು ನಿಮಗೆ ಪೌಷ್ಠಿಕಾಂಶವುಳ್ಳ ಉಪ್ಪಿಟ್ಟು ಹೇಗೆ ಮಾಡಬೇಕು ಅಂತ ಹೇಳುತ್ತೇವೆ. ತರಕಾರಿ (Vegetables) ಜೊತೆ ಈ ಒಂದು ಪದಾರ್ಥ ಸೇರಿಸಿದ್ರೆ ಉಪ್ಪಿಟ್ಟು (Tasty Upma) ಮತ್ತಷ್ಟು ರುಚಿಕರವಾಗಿರುತ್ತದೆ. ಇಂದು ನಾವು ನಿಮಗೆ ಎಗ್ ಉಪ್ಮಾ (Egg Upma) ಹೇಗೆ ಮಾಡಬೇಕು ಅಂತ ಹೇಳುತ್ತಿದ್ದೇವೆ.
ಆರೋಗ್ಯ ತಜ್ಞರು ಸಹ ಪ್ರತಿದಿನ ಒಂದು ಮೊಟ್ಟೆ (Egg) ತಿನ್ನಲು ಸಲಹೆ ನೀಡುತ್ತಾರೆ. ಹಾಗಾಗಿ ಇಂದು ರುಚಿಯಾದ ಉಪ್ಮಾ ರೆಸಿಪಿ ಹೇಳುತ್ತಿದ್ದೇವೆ.
ಎಗ್ ಉಪ್ಮಾ ಮಾಡಲು ಬೇಕಾಗುವ ಸಾಮಾಗ್ರಿಗಳು
ರವೆ: 200 ಗ್ರಾಂ
ಹಸಿಮೆಣಸಿನಕಾಯಿ: 4 ರಿಂದ 5
ಟೊಮ್ಯಾಟೋ: ಒಂದು (ಮಧ್ಯಮ ಗಾತ್ರದ್ದು)
ಈರುಳ್ಳಿ: ಒಂದು (ದೊಡ್ಡದು)
ಕರಿಬೇವು: 4 ರಿಂದ 5
ಮೊಟ್ಟೆ: ಒಂದು
ಶೇಂಗಾ: ಎರಡು ಟೀ ಸ್ಪೂನ್
ಉದ್ದಿನಬೇಳೆ: ಒಂದು ಟೀ ಸ್ಪೂನ್
ಅರಿಶಿನ: ಚಿಟಿಕೆ
ಸಾಸವೆ ಮತ್ತು ಜೀರಿಗೆ: ಒಂದು ಟೀ ಸ್ಪೂನ್
ಕೋತಂಬರಿ ಸೊಪ್ಪು
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ನಾಲ್ಕು ಟೀ ಸ್ಪೂನ್
ಮಾಡುವ ವಿಧಾನ
*ಮೊದಲಿಗೆ ರವೆಯನ್ನು ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಗೋಲ್ಡನ್ ಬ್ರೌನ್ ಕಲರ್ ಬರೋವರೆಗೂ ಹುರಿದುಕೊಂಡು ಪಾತ್ರೆಯೊಂದರಲ್ಲಿ ಎತ್ತಿಟ್ಟುಕೊಳ್ಳಿ.
*ಈಗ ಹಸಿಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೋ, ಕೋತಂಬರಿ ಸೊಪ್ಪು ಕತ್ತರಿಸಿಕೊಳ್ಳಿ.
*ಈಗ ಮತ್ತೊಂದು ಪಾತ್ರೆಯಲ್ಲಿ ಮೂರು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿಕೊಳ್ಳಿ. ಸಾಸವೆ ಮತ್ತು ಜೀರಿಗೆ ಚಟಪಟ ಸಿಡಿಯುತ್ತಿದ್ದಂತೆ ಉದ್ದಿನಬೇಳೆ ಮತ್ತು ಶೇಂಗಾ ಹಾಕಿಕೊಳ್ಳಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
*ತದನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಟೊಮ್ಯಾಟೋ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
*ಈಗ ಮೊಟ್ಟೆ ಒಡೆದು ಹಾಕಿ. ಒಂದರಿಂದ ಎರಡು ನಿಮಿಷ ನಂತರ ಮೊಟ್ಟೆಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದನ್ನೂ ಓದಿ: Breakfast | Upma: ನಿಮ್ಮ ರುಚಿಯನ್ನು ತಣಿಸುವ ಬ್ರೆಡ್ ಉಪ್ಪಿಟ್ಟು ಮಾಡುವ ವಿಧಾನ
*ಮಿಶ್ರಣ ಸಿದ್ಧವಾಗುತ್ತಿದ್ದಂತೆ ಫ್ರೈ ಮಾಡಿಕೊಂಡಿರುವ ರವೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆಯೊಂದಿಗೆ ರವೆ ಸೇರುತ್ತಿದ್ದಂತೆ ಮೂರು ಕಪ್ಗಳಷ್ಟು ಬಿಸಿನೀರನ್ನು ಸೇರಿಸಬೇಕು.
*ತದನಂತರ ರವೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಿ. ಆನಂತರ ನಿಂಬೆಹಣ್ಣಿನ ರಸ ಮತ್ತು ಕೋತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಎಗ್ ಉಪ್ಮಾ ಸವಿಯಲು ಸಿದ್ಧ.
(ಮೊಟ್ಟೆ ಹಾಕಿ ಉಪ್ಪಿಟ್ಟು ಮಾಡೋದರಿಂದ ದಪ್ಪ ರವೆಯನ್ನು ಅಥವಾ ಬನ್ಸಿ ರವೆ ಬಳಸೋದು ಉತ್ತಮ. ಈ ಉಪ್ಪಿಟ್ಟಿನಲ್ಲಿ ಮೊಟ್ಟೆ ಹಾಕಿರೋದರಿಂದ ಜೊತೆಗೆ ತೆಂಗಿನಕಾಯಿ ಅಥವಾ ಕೆಂಪು ಚಟ್ನಿ ಕಾಂಬಿನೇಷನ್ ಚೆನ್ನಾಗಿರುತ್ತದೆ. ಮೊಸರು ಇದಕ್ಕೆ ಸರಿಯಾಗಲ್ಲ. )
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ