ಬೆಳಗ್ಗೆ ಆದ್ರೆ ತಿಂಡಿ (Breakfast) ಏನು ಮಾಡೋದು ಅನ್ನೋ ಚಿಂತೆಯಲ್ಲಿ ಬಹುತೇಕ ಗೃಹಿಣಿಯರು (Women) ನಿದ್ದೆಗೆ ಜಾರುತ್ತಾರೆ. ಮಕ್ಕಳಿಗೆ ತಿಂಡಿ ರಿಪೀಟ್ ಆಗಬಾರದು ಅನ್ನೋ ಟೆನ್ಷನ್ ಸಹ ಇರುತ್ತೆ. ಅದರಲ್ಲಿಯೂ ಉದ್ಯೋಗಸ್ಥ ಗೃಹಿಣಿಯಾಗಿದ್ರೆ (Working Woman) ತಿಂಡಿ ಮಾಡೋದು ಸವಾಲಿನ ಕೆಲಸ ಎಂದೇ ಹೇಳಬಹುದು. ಕಡಿಮೆ ಸಮಯದಲ್ಲಿ ಸಿದ್ಧವಾಗುವ ತಿಂಡಿಗಳಲ್ಲಿ ಒಂದು ಉಪ್ಪಿಟ್ಟು (Uppittu). ಉಪ್ಪಿಟ್ಟನ್ನು ಹೇಗೆಲ್ಲಾ (Upma Recipe) ಮಾಡಬಹುದು? ಯಾವ ವಿಧ ವಿಧವಾಗಿ ಮಾಡಬಹುದು ಅಂತ ಹೇಳಿದ್ದೇವೆ. ಇಂದು ಹೆಚ್ಚು ತರಕಾರಿ (vegetables) ಬಳಸದೇ ರುಚಿಯಾಗಿ ಒಂದು ವಿಶೇಷ ವಸ್ತು ಬಳಸಿ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಉಪ್ಮಾ ರೆಸಿಪಿ (Uppitu Recipe) ಹೇಳುತ್ತಿದ್ದೇವೆ. ಅದುವೇ ಸೋಯಾ ಉಪ್ಮಾ.
ಸಾಮಾನ್ಯವಾಗಿ ಸೋಯಾವನ್ನು ಸಾಂಬಾರ್, ಪಲ್ಯಗಳಲ್ಲಿ ಬಳಕೆ ಮಾಡುತ್ತಾರೆ. ಆದ್ರೆ ಇಂದು ನಾವು ನಿಮಗೆ ಸೋಯಾಬೀನ್ ಅಥವಾ ಸೋಯಾ ಅಥವಾ ಸೋಯಾ ಚಂಕ್ಸ್ ಬಳಸಿ ಉಪ್ಪಿಟ್ಟು ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ.
ಬೇಕಾಗುವ ಸಾಮಾಗ್ರಿಗಳು
ಸೋಯಾ: 1 ಕಪ್ ಅಥವಾ 7 ರಿಂದ 8
ದಪ್ಪ ರವೆ: 100 ಗ್ರಾಂ
ಹಸಿಮೆಣಸಿನಕಾಯಿ: 2
ಶೇಂಗಾ: 1 ಟೀ ಸ್ಪೂನ್
ಉದ್ದಿನಬೇಳೆ: 1 ಟೀ ಸ್ಪೂನ್
ಜೀರಿಗೆ ಮತ್ತು ಸಾಸವೆ: 1 ಟೀ ಸ್ಪೂನ್
ಟೊಮ್ಯಾಟೋ: 1(ಚಿಕ್ಕದು)
ಈರುಳ್ಳಿ: 1 (ಮಧ್ಯಮ ಗಾತ್ರದ್ದು)
ಕೆಂಪು ಖಾರದ ಪುಡಿ: ಅರ್ಧ ಟೀ ಸ್ಪೂನ್
ನಿಂಬೆ ಹಣ್ಣಿನ ರಸ: ಒಂದು ಟೀ ಸ್ಪೂನ್
ಕರಿಬೇವು: 4 ರಿಂದ 5
ಕೋತಂಬರಿ ಸೊಪ್ಪು
ಅರಿಶಿನ: ಚಿಟಿಕೆ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 5 ರಿಂದ 6 ಟೀ ಸ್ಪೂನ್
ಸೋಯಾ ಉಪ್ಮಾ ಮಾಡುವ ವಿಧಾನ
ಮೊದಲಿಗೆ ಸೋಯಾವನ್ನು ಬಿಸಿ ನೀರಿನಲ್ಲಿ ಹಾಕಿ ಎರಡು ನಿಮಿಷ ನೆನಸಿ. ನಂತರ ನೀರನ್ನು ಸೋಯಾದಿಂದ ಹಿಂಡಿ ಎತ್ತಿಟ್ಟುಕೊಳ್ಳಿ. ಸೋಯಾದಲ್ಲಿನ ನೀರು ಹೋಗುವಂತೆ ನೋಡಿಕೊಳ್ಳಬೇಕು.
ನೀರಿನಿಂದ ಎತ್ತಿಟ್ಟುಕೊಂಡಿರುವ ಸೋಯಾವನ್ನು ಮಿಕ್ಸಿ ಜಾರ್ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ.
ಇದನ್ನೂ ಓದಿ: Upma Breakfast: ಉಪ್ಪಿಟ್ಟಿನ ಜೊತೆ ಈ ಡಿಶ್ಗಳು ಇದ್ರೆ ಅದರ ರುಚಿಯೇ ಡಬಲ್!
ಒಲೆ ಹಚ್ಚಿಕೊಂಡು ಪ್ಯಾನ್ ಇರಿಸಿ. ಈಗ ಇದಕ್ಕೆ ರವೆ ಹಾಕಿ ಎರಡು ಟೀ ಸ್ಪೂನ್ ಎಣ್ಣೆ ಪರಿಮಳ ಬರೋವರೆಗೂ ಹುರಿದುಕೊಳ್ಳಿ. ಪರಿಮಳ ಬರುತ್ತಿದ್ದಂತೆ ರವೆಯನ್ನು ಬೇರೆ ಪಾತ್ರೆಗೆ ಹಾಕಿ ಎತ್ತಿಟ್ಟುಕೊಳ್ಳಿ.
ಈಗ ಇದೇ ಪಾತ್ರಕ್ಕೆ ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗ್ತಿದ್ದಂತೆ ಜೀರಿಗೆ, ಸಾಸವೆ ಹಾಕಿ. ಎರಡೂ ಚಿಟಪಟ ಅಂತ ಸಿಡಿಯುತ್ತಿದ್ದಂತೆ ಶೇಂಗಾ ಮತ್ತು ಉದ್ದಿನಬೇಳೆ ಹಾಕಿ.
ಶೇಂಗಾ ಮತ್ತು ಉದ್ದಿನಬೇಳೆ ಫ್ರೈ ಆಗುತ್ತಿದ್ದಂತೆ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ. ಈಗ ಇದಕ್ಕೆ ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಿ.
ತದನಂತರ ಟೊಮಾಟೋ ಸೇರಿಸಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ತರಿ ತರಿಯಾಗಿ ರುಬ್ಬಿಕೊಂಡಿರುವ ಸೋಯಾವನ್ನು ಒಗ್ಗರಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಅರಿಶಿನ ಮತ್ತು ಅಚ್ಚ ಖಾರದ ಪುಡಿ ಮಿಕ್ಸ್ ಮಾಡಿಕೊಳ್ಳಬೇಕು. ಈ ವೇಳೆ ಎರಡರಿಂದ ಮೂರು ಟೀ ಸ್ಪೂನ್ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
ಮಸಾಲೆ ಸಿದ್ಧವಾಗುತ್ತಿದ್ದಂತೆ ಎರಡು ಕಪ್ ನೀರು ಸೇರಿಸಬೇಕು. ಮುಚ್ಚಳ ಮುಚ್ಚಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿ.
ಇದನ್ನೂ ಓದಿ: Upma Recipe: ಹೊಸ ಬಗೆಯ, ಭಿನ್ನ ರುಚಿಯ ಸ್ವೀಟ್ ಕಾರ್ನ್ ಉಪ್ಪಿಟ್ಟು ಮಾಡುವ ವಿಧಾನ
ನೀರು ಕುದಿಯಲು ಆರಂಭಿಸುತ್ತಿದ್ದಂತೆ ಉರಿಯನ್ನು ಕಡಿಮೆ ಮಾಡಿಕೊಂಡು ಹುರಿದುಕೊಂಡಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿ.
ತದನಂತರ ನಿಂಬೆ ಹಣ್ಣಿನ ರಸ ಮತ್ತು ಕೋತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಂಡ್ರೆ ಸೋಯಾ ಉಪ್ಮಾ ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ