ಭಾರತೀಯ (Indian) ಆಹಾರ (Food) ಪದ್ಧತಿಯಲ್ಲಿ ರೊಟ್ಟಿಗೆ (Roti) ಪ್ರಮುಖ ಸ್ಥಾನವಿದೆ. ವಿವಿಧ ಕಾಳುಗಳಿಂದ ಮಾಡುವ ರೊಟ್ಟಿಯು ಆರೋಗ್ಯಕ್ಕೆ (Health) ತುಂಬಾ ಉತ್ತಮ ಪದಾರ್ಥವಾಗಿದೆ. ರೊಟ್ಟಿಯು ವ್ಯಕ್ತಿಯ ದೇಹಕ್ಕೆ ಬೇಕಾದ ಪೋಷಕಾಂಶ ನೀಡುತ್ತದೆ. ರೊಟ್ಟಿಯು ವಿವಿಧ ಕಾಯಿಲೆಯ ರೋಗಿಗಳು ಸಹ ತಿನ್ನಬಹುದು. ರೊಟ್ಟಿಯು ವೇಟ್ ಲಾಸ್ ಗೆ ತುಂಬಾ ಪ್ರಯೋಜನಕಾರಿ ಆಗಿದೆ. ಕೆಲವೊಮ್ಮೆ ಮನೆಯಲ್ಲಿ ಮಾಡಿದ ರೊಟ್ಟಿಗಳು ಬಾಕಿ ಉಳಿಯುತ್ತವೆ. ಅವುಗಳನ್ನು ತಿನ್ನಲು ತುಂಬಾ ಬೋರ್ ಆಗುತ್ತದೆ. ಹೀಗಿದ್ದಾಗ ನೀವು ಉಳಿದ ರೊಟ್ಟಿಯನ್ನು ಬ್ರೇಕ್ ಫಾಸ್ಟ್ ಗೆ ಬಳಕೆ ಮಾಡಬಹುದು. ಉಳಿದ ರೊಟ್ಟಿಯಿಂದ ನೀವು ಬೆಳಗ್ಗೆ ರೊಟ್ಟಿಯ ಉಪ್ಪಿಟ್ಟು ಮಾಡಿ ಸೇವನೆ ಮಾಡಬಹುದು.
ರೊಟ್ಟಿಯನ್ನು ವೇಸ್ಟ್ ಮಾಡದೇ ಬೆಳಗಿನ ತಿಂಡಿಯಾಗಿ ಸೇವಿಸಿ
ಅನೇಕ ಬಾರಿ ಮನೆಯಲ್ಲಿ ಉಳಿಯುವ ರೊಟ್ಟಿಯನ್ನು ವೇಸ್ಟ್ ಮಾಡದೇ ಬೆಳಗ್ಗೆಗೆ ತಿಂಡಿಯಾಗಿ ತಯಾರು ಮಾಡುವುದು ಉತ್ತಮ ಉಪಾಯ. ಬೆಳಿಗ್ಗೆ ತ್ವರಿತ ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಮಾಡಲು ನೀವು ಉಳಿದ ರೊಟ್ಟಿ ಬಳಸಿ. ಹಾಗಾದರೆ ನಾವು ಇಲ್ಲಿ ಉಳಿದ ರೊಟ್ಟಿಯಿಂದ ರುಚಿಕರ ಉಪ್ಪಿಟ್ಟು ಮಾಡುವುದು ಹೇಗೆ ಎಂದು ನೋಡೋಣ.
ರೊಟ್ಟಿಯ ಉಪ್ಪಿಟ್ಟು ರೆಸಿಪಿ
ಬೇಕಾಗುವ ಸಾಮಗ್ರಿಗಳು
ನಾಲ್ಕು ರೊಟ್ಟಿಗಳು,
ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ,
ಸಣ್ಣದಾಗಿ ಕೊಚ್ಚಿದ ಟೊಮೇಟೊ,
ಸಣ್ಣದಾಗಿ ಕೊಚ್ಚಿದ 2 ಹಸಿರು ಮೆಣಸಿನಕಾಯಿ,
ಸಣ್ಣದಾಗಿ ಕೊಚ್ಚಿದ ಅರ್ಧ ಕ್ಯಾಪ್ಸಿಕಂ,
ಅರ್ಧ ಚಮಚ ಸಾಸಿವೆ,
ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ
ಅರ್ಧ ಕಪ್ ಅವರೆಕಾಳು,
ಒಂದು ಚಮಚ ಶೇಂಗಾ, ಹುರಿದ ಒಂದು ಚಮಚ ಕೊತ್ತಂಬರಿ ಪುಡಿ,
ಅರ್ಧ ಚಮಚ ಕೆಂಪು ಮೆಣಸಿನ ಪುಡಿ,
1 ಚಮಚ ನಿಂಬೆ ರಸ,
ಉಪ್ಪು ರುಚಿಗೆ ತಕ್ಕಷ್ಟು,
ಎಣ್ಣೆ 2 ಟೀಸ್ಪೂನ್,
ಅಲಂಕರಿಸಲು ಸಣ್ಣದಾಗಿ ಕೊತ್ತಂಬರಿ ಸೊಪ್ಪು
ರೊಟ್ಟಿ ಉಪ್ಪಿಟ್ಟು ತಯಾರಿಸುವ ವಿಧಾನ
ಮೊದಲು ರೊಟ್ಟಿಯನ್ನು ಸಣ್ಣ ತುಂಡುಗಳಾಗಿ ಮುರಿದುಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಈಗ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಈರುಳ್ಳಿ ಗೋಲ್ಡನ್ ಆಗುವವರೆಗೆ ಬೇಯಿಸಿ. ನಂತರ ಟೊಮೆಟೊ, ಕ್ಯಾಪ್ಸಿಕಂ ಮತ್ತು ಶೇಂಗಾ ಸೇರಿಸಿ ಮತ್ತು 3 ನಿಮಿಷ ಬೇಯಿಸಿ.
ನಂತರ ಬಾಣಲೆಗೆ ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಮತ್ತು ಬಟಾಣಿ ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ. ಈಗ ರೊಟ್ಟಿ ತುಂಡು ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ಇದನ್ನು 2 ನಿಮಿಷ ಬೇಯಿಸಿ ಮತ್ತು ಗ್ಯಾಸ್ ಆಫ್ ಮಾಡಿ. ಈಗ ನಿಮ್ಮ ತಿಂಡಿ ರೊಟ್ಟಿ ಉಪ್ಪಿಟ್ಟು ರೆಸಿಪಿ ರೆಡಿ. ಇದನ್ನು ಹಸಿರು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಬಡಿಸಿ.
ತೂಕ ಇಳಿಸಿಕೊಳ್ಳಲು ರೊಟ್ಟಿ ಸೇವಿಸಿ
ಗ್ರೇಟರ್ ನೋಯ್ಡಾದ ಜಿಐಎಂಎಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖ್ಯಾತ ಡಯೆಟಿಶಿಯನ್ ಡಾ.ಆಯುಷಿ ಯಾದವ್ ಅವರ ಪ್ರಕಾರ, ರೊಟ್ಟಿಯನ್ನು ವಿಶೇಷ ರೀತಿಯಲ್ಲಿ ರೆಸಿಪಿ ತಯಾರಿಸಿ ಸೇವನೆ ಮಾಡುವುದು ತೂಕ ಕಳೆದುಕೊಳ್ಳಲು ಸುಲಭವಾಗುತ್ತದೆ. ಮತ್ತು ನೀವು ಶೀಘ್ರದಲ್ಲೇ ಬೊಜ್ಜಿನಿಂದ ಮುಕ್ತರಾಗಬಹುದು. ಇದಕ್ಕಾಗಿ ನಮ್ಮ ಮನೆಗಳಲ್ಲಿ ಸುಲಭವಾಗಿ ಜೋಳ ಮತ್ತು ಗೋಧಿ, ರಾಗಿ ಹಿಟ್ಟಿನ ರೊಟ್ಟಿ ಮಾಡಿ ಸೇವಿಸಬಹುದು.
ಇದನ್ನೂ ಓದಿ: ಥೈರಾಯ್ಡ್ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು
ರೊಟ್ಟಿಯನ್ನು ನಾವು ವಿವಿಧ ಪಲ್ಯದೊಂದಿಗೆ ಸವಿಯುವುದು ಸಾಕಷ್ಟು ಪ್ರಯೋಜನಕಾರಿ ಆಗಿದೆ. ರೊಟ್ಟಿಯು ಪ್ರೋಟೀನ್, ಫೈಬರ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸೋಡಿಯಂನಂತಹ ಪ್ರಮುಖ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೀರ್ಣಕ್ರಿಯೆಗೂ ಪ್ರಮುಖವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ