Roti Health Benefits: ದೇಹಕ್ಕೆ ಹೆಚ್ಚಿನ ಆರೋಗ್ಯ ಪ್ರಯೋಜನ ನೀಡುವ ರೊಟ್ಟಿಯನ್ನು ಹೆಚ್ಚು ಪೌಷ್ಠಿಕವಾಗಿ ಮಾಡೋದ್ಹೇಗೆ?

ಆರೋಗ್ಯಕ್ಕಾಗಿ ಸರಿಯಾದ ಆಹಾರ ಕ್ರಮ ಆಯ್ಕೆ ಮಾಡುವುದು ತುಂಬಾ ಮುಖ್ಯ. ಸಿರಿಧಾನ್ಯಗಳು ಆರೋಗ್ಯ ನೀಡುವ ಆಹಾರದ ಪ್ರಮುಖ ಅಂಶಗಳಾಗಿವೆ. ಸಿರಿ ಧಾನ್ಯಗಳ ಪೈಕಿ ಕೆಲವು ಕಾಳುಗಳ ಹಿಟ್ಟಿನಿಂದ ರೊಟ್ಟಿ ತಯಾರಿಸಿ ಊಟ ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿಯೊಬ್ಬರೂ (Everyone) ತಮ್ಮ ಆರೋಗ್ಯ (Health) ಮತ್ತು ಫಿಟ್ ನೆಸ್ (Fitness) ಕಾಪಾಡಲು ತುಂಬಾ ಪ್ರಯತ್ನ ಪಡುತ್ತಲೇ ಇರುತ್ತಾರೆ. ಅದರಲ್ಲೂ ಆಹಾರ ಪದ್ಧತಿಯ (Food) ಬಗ್ಗೆ ತುಂಬಾ ಕೇರ್ (Care) ತೆಗೆದುಕೊಳ್ಳುತ್ತಾರೆ. ಆರೋಗ್ಯಕ್ಕಾಗಿ  ಸರಿಯಾದ ಆಹಾರ ಕ್ರಮ ಆಯ್ಕೆ ಮಾಡುವುದು ತುಂಬಾ ಮುಖ್ಯ. ಸಿರಿಧಾನ್ಯಗಳು ಆರೋಗ್ಯ ನೀಡುವ  ಆಹಾರದ ಪ್ರಮುಖ ಅಂಶಗಳಾಗಿವೆ. ಸಿರಿ ಧಾನ್ಯಗಳ ಪೈಕಿ ಕೆಲವು ಕಾಳುಗಳ ಹಿಟ್ಟಿನಿಂದ ರೊಟ್ಟಿ  ತಯಾರಿಸಿ ಊಟ ಮಾಡುತ್ತಾರೆ. ರೊಟ್ಟಿ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಅದನ್ನು ಸೇವನೆ ಮಾಡುತ್ತೇವೆ. ಉತ್ತರ ಭಾರತದ ಜನರು ಹೆಚ್ಚಾಗಿ ರೊಟ್ಟಿ ತಿನ್ನಲು ಇಷ್ಟ ಪಡುತ್ತಾರೆ.

    ಅನೇಕ ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿದ ರೊಟ್ಟಿ ಪ್ರಯೋಜನಕಾರಿ

    ರೊಟ್ಟಿಯನ್ನು ಹೆಚ್ಚು ಪೌಷ್ಟಿಕ ಆಹಾರವಾಗಿ ಸೇವನೆ ಮಾಡಲಾಗುತ್ತದೆ. ರೊಟ್ಟಿ ನಿಮ್ಮ ಆಹಾರದ ಭಾಗವಾಗಿದ್ದರೆ ಅದು ನಿಮ್ಮ ಆರೋಗ್ಯವನ್ನು ಹೇಗೆ ಸರಿ ಮಾಡುತ್ತದೆ ಎಂದು ನೋಡೋಣ. ವಾಸ್ತವವಾಗಿ ರೊಟ್ಟಿ ಅನೇಕ ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ರೊಟ್ಟಿ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ.

    ನೀವು ಹೊಟ್ಟಿನ ಸಮೇತ ಹಿಟ್ಟನ್ನು ರೊಟ್ಟಿ ಮಾಡಿ ಸೇವನೆ ಮಾಡಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ನಾರಿನಂಶ ಹೆಚ್ಚಿಗೆ ಇದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಮತ್ತೊಂದೆಡೆ ರೊಟ್ಟಿಯು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಇದು ನಿಮಗೆ ದೀರ್ಘಕಾಲ ಹಸಿದ ಭಾವನೆ ಉಂಟು ಮಾಡಲ್ಲ.

    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

    ರೊಟ್ಟಿ ಸುಲಭವಾಗಿ ಜೀರ್ಣವಾಗುತ್ತದೆ

    ರೊಟ್ಟಿಯ ಜೊತೆ ತುಪ್ಪ ಸವರಿಕೊಂಡು ತಿಂದರೆ ಅದರಿಂದ ಒಳ್ಳೆಯ ಕೊಬ್ಬು ಕೂಡ ಸಿಗುತ್ತದೆ. ಪ್ರತಿದಿನ ರೊಟ್ಟಿ ತಿನ್ನುವುದು ಸರಿಯೇ? ಇದಕ್ಕೆ ಉತ್ತರ ಹೀಗಿದೆ.

    ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಮುಖ್ಯವಾದ ರೊಟ್ಟಿಯಲ್ಲಿ ಕರಗಬಲ್ಲ ಫೈಬರ್ಗಳನ್ನು ಹೊಂದಿದೆ. ಅದು ಸುಲಭವಾಗಿ ಜೀರ್ಣವಾಗುತ್ತದೆ. ಅದೇ ಸಮಯದಲ್ಲಿ, ಅನೇಕ ವಿಧದ ಜೀವಸತ್ವಗಳು, ಅಯೋಡಿನ್, ಸತು, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಕಂಡು ಬರುತ್ತವೆ. ಹೀಗಾಗಿ ರೊಟ್ಟಿ ಆರೋಗ್ಯಕ್ಕೆ ಒಳ್ಳೆಯದು.

    ರೊಟ್ಟಿಯನ್ನು ಹೆಚ್ಚು ಪೌಷ್ಟಿಕವಾಗಿ ಮಾಡುವ ವಿಧಾನ

    ರೊಟ್ಟಿಯನ್ನು ನೀವು ಅದನ್ನು ಪ್ರತಿದಿನ ತಿನ್ನಬಹುದು. ಹೆಚ್ಚು ಆರೋಗ್ಯಕರವಾಗಿಸಲು ಬಹು ಧಾನ್ಯದ ಹಿಟ್ಟನ್ನು ಬಳಸಿದರೆ ಅದು ಉತ್ತಮ ರಿಸಲ್ಟ್ ನೀಡುತ್ತದೆ. ಹಿಟ್ಟಿನಲ್ಲಿ ಕಲಸಿ ಬೇಳೆ ಹಿಟ್ಟನ್ನೂ ತಯಾರಿಸಬಹುದು .ಮತ್ತೊಂದೆಡೆ ಮಕ್ಕಳು ತರಕಾರಿ ತಿನ್ನಲು ನಿರಾಕರಿಸಿದರೆ, ತರಕಾರಿಗಳನ್ನು ರುಬ್ಬುವ ಅಥವಾ ಕತ್ತರಿಸುವ ಮೂಲಕ ಪರಾಠಾ ಮಾಡಿ ಕೊಡಿ.

    ಇದು ಅವರಿಗೆ ತುಂಬಾ ಪ್ರಯೋಜನಕಾರಿ. ನೀವು ಅದನ್ನು ಹಿಟ್ಟಿನಲ್ಲಿ ಸೋಯಾಬೀನ್ ಹಿಟ್ಟನ್ನು ಬೆರೆಸಿ ಮಾಡಬಹುದು. ಇದು ರೊಟ್ಟಿಯ ಪೌಷ್ಟಿಕಾಂಶದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

    ರೊಟ್ಟಿ ಉತ್ತಮ ಗುಣ ಹೊಂದಿದೆ

    ನಮ್ಮ ದೇಹವು ಆಹಾರದಿಂದ ಶಕ್ತಿ ಪಡೆಯುತ್ತದೆ. ದೇಹವು ಆರೋಗ್ಯಕರವಾಗಿರಲು ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಕೊಬ್ಬು ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳ ಅಗತ್ಯವಿದೆ. ಇದು ನಾವು ರೊಟ್ಟಿಯ ರೂಪದಲ್ಲಿ ಸೇವಿಸುವ ಕಾರ್ಬೋಹೈಡ್ರೇಟ್ ಆಗಿದೆ. ಇದು ನಮಗೆ ಶಕ್ತಿ ಮತ್ತು ಪೋಷಣೆ ನೀಡುತ್ತದೆ.

    ಬೇಳೆ ಕಾಳುಗಳ ಜೊತೆ ತಿಂದರೆ ರೊಟ್ಟಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಸಂಯೋಜನೆಯಾಗುತ್ತದೆ. ರೊಟ್ಟಿಯ ಪೌಷ್ಟಿಕಾಂಶದ ಮೌಲ್ಯ ಕರಗುವ ನಾರುಗಳನ್ನು ಹೊಂದಿದೆ. ಸುಲಭವಾಗಿ ಜೀರ್ಣವಾಗುತ್ತದೆ. ದೇಹ ಜೀವಸತ್ವ, ಅಯೋಡಿನ್, ಸತು, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಪಡೆಯುತ್ತದೆ.

    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

    ರೊಟ್ಟಿಯ ಜೊತೆಗೆ ಕ್ಯಾರೆಟ್, ಕೋಸುಗಡ್ಡೆ, ಎಲೆಕೋಸು, ಬೀನ್ಸ್ ಪಲ್ಯದ ಜೊತೆ ಸೇವಿಸಬಹುದು. ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ ಅಥವಾ ಕುದಿಸಿ ಹಿಟ್ಟಿನೊಂದಿಗೆ ಬೆರೆಸಿ, ರೊಟ್ಟಿಗೆ ಸೋಯಾಬೀನ್ ಹಿಟ್ಟನ್ನು ಸೇರಿಸಿ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು.
    Published by:renukadariyannavar
    First published: