ಬಿರಿಯಾನಿ (Biryani) ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ರೆಸ್ಟೋರೆಂಟ್ನಲ್ಲಿ (Restaurant) ಮಾಡೋ ಬಗೆ ಬಗೆಯ ಬಿರಿಯಾನಿ ರುಚಿ ನಮ್ಮ ಮನೆಯಲ್ಲಿ ಯಾಕೆ ಸಿಗಲ್ಲ ಅನ್ನೋದು ಅನೇಕ ಮಹಿಳೆಯರ (Women) ಪ್ರಶ್ನೆಯಾಗಿರುತ್ತೆ. ಸಂಡೆಯಾದ್ರೆ ಸಾಕು ಮಕ್ಕಳು ನಾನ್ ವೆಜ್ ರೆಸಿಪಿ (Non-veg Recipe) ಬೇಕು ಎಂದು ಪಟ್ಟು ಹಿಡಿದುಕುಳಿತು ಬಿಡ್ತಾರೆ. ಏನಾದ್ರೂ ವೆರೈಟಿ ಮಾಡ್ಲೇ ಬೇಕು, ಬೆಳಗ್ಗೆ ಸುಲಭವಾಗಿ ಮಾಡಬಹುದಾದ ಬಿರಿಯಾನಿ ರೆಸಿಪಿ ಒಂದನ್ನು ನಾವು ಇಲ್ಲಿ ನಿಮಗೆ ಹೇಳಿ ಕೊಡ್ತೀವಿ ಒಮ್ಮೆ ಮಾಡಿ.
ಅದು ಯಾವ ರೆಸಿಪಿ ಅಂತೀರಾ ಅದೇ ಬೆಳ್ಳುಳ್ಳಿ ಬಿರಿಯಾನಿ , ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು, ಅಡುಗೆಯಲ್ಲಿ ಬೆಳ್ಳುಳ್ಳಿ ಉಪಯೋಗಿಸೋದ್ರಿಂದ ಆರೋಗ್ಯಕ್ಕೆ ಅಗತ್ಯವಾದ ಪೌಷ್ಠಿಕಾಂಶ ದೊರೆಯುತ್ತದೆ. ಇನ್ನು ನಾನ್ ವೆಜ್ ರೆಸಿಪಿಗಳಿಗೆ ಬೆಳ್ಳುಳ್ಳಿ ಅತಿಮುಖ್ಯವಾಗಿರುತ್ತೆ. ಬೆಳ್ಳುಳ್ಳಿ ಬಳದೇ ನಾನ್ ವೆಜ್ ರೆಸಿಪಿ ಮಾಡೋಕೆ ಸಾಧ್ಯವೇ ಇಲ್ಲ. ಹಾಗಾದ್ರೆ ಬನ್ನಿ ಬೆಳ್ಳುಳ್ಳಿ ಬಳಸಿ ಹೇಗೆ ಬಿರಿಯಾನಿ ಮಾಡೋದು ಅನ್ನೋದನ್ನು ನೋಡೋಣ
ನಿಮ್ಮ ಮನೆಯಲ್ಲಿ ಬೆಳ್ಳುಳ್ಳಿ ಇದ್ದರೆ ಇಂದು ಬೆಳ್ಳುಳ್ಳಿ ಚಿಕನ್ ಬಿರಿಯಾನಿ ಮಾಡಿ, ಈ ಹೊಸ ರುಚಿಯನ್ನೇಕೆ ಪ್ರಯತ್ನಿಸಬಾರದು? ಇದನ್ನು ಬೆಳಗಿನ ಬ್ರೇಕ್ಫಾಸ್ಟ್ಗೂ ಮಾಡಬಹುದು ಇಲ್ಲ ಮಧ್ಯಾಹ್ನದ ಊಟಕ್ಕೂ ಮಾಡಿ ಬಡಿಸಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಭಾನುವಾರ ಮನೆಯವರಿಗೆ ಏನ್ ಆದ್ರೂ ಸ್ಪೆಷನ್ ಮಾಡಿಕೊಡಬೇಕು ಅಂದ್ರೆ ಈ ಬೆಳ್ಳುಳ್ಳಿ ಬಿರಿಯಾನಿ ಮಾಡಬಹುದು.
ಇದನ್ನೂ ಓದಿ: Non-veg Recipe: ಈಸ್ಟರ್ ಸಂಡೇಗಾಗಿ ಸ್ಪೆಷಲ್ ಸ್ಪೈಸಿ ಚಿಕನ್ ಫ್ರೈ
ಅಗತ್ಯವಿರುವ ಸಾಮಾಗ್ರಿಗಳು
1. ಈರುಳ್ಳಿ - ¼ ಕಪ್ (ಚಿಕ್ಕದಾಗಿ ಹೆಚ್ಚಿದ್ದು)
2. ಕ್ಯಾಪಸ್ಸಿಕಂ -ಕೆಂಪು ಬಣ್ಣದ್ದು - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
3. ಬೆಳ್ಳುಳ್ಳಿ - 4
4. ಅಕ್ಕಿ - 1 ಕಪ್ (ಬೇಯಿಸದೇ ಇದ್ದದ್ದು) (ಬಾಸ್ಮತಿ ಉತ್ತಮ ಆಯ್ಕೆ)
5. ಅಡುಗೆ ಎಣ್ಣೆ - 2 ದೊಡ್ಡಚಮಚ
6. ಲಿಂಬೆ ರಸ - ¼ ಕಪ್
7. ಕೋಳಿಯ ಎದೆಯಭಾಗದ ಮಾಂಸ - 1 (ಮೂಳೆರಹಿತವಾಗಿಸಿ, ಚಿಕ್ಕ ಪೀಸ್ಗಳಾಗಿ ಕತ್ತರಿಸಿ)
8. ಹಸಿ ಶುಂಠಿ - 2 ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)
9. ಸೋಯಾ ಸಾಸ್ - 2 ದೊಡ್ಡಚಮಚ
10. ಜೇನು - 1 ದೊಡ್ಡಚಮಚ
11. ಕೋಳಿಮಾಂಸದ ಸೂಪ್ - ಅರ್ಧ ಕಪ್
12. ತಾಜಾ ಪಾರ್ಸ್ಲೆ ಎಲೆಗಳು - 1 ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)
13. ಉಪ್ಪು, ರುಚಿಗನುಸಾರ
ಮಾಡುವ ವಿಧಾನ:
*ಒಂದು ದೊಡ್ಡ ಪಾತ್ರೆಯಲ್ಲಿ ಚಿಕನ್, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಎಣ್ಣೆ, ಉಪ್ಪು ಮತ್ತು ಲಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧದಿಂದ ಒಂದು ಗಂಟೆ ಕಾಲ ಹಾಗೇ ಬಿಡಿ.
*ಒಂದು ದಪ್ಪತಳದ ಕುಕ್ಕರ್ನಲ್ಲಿ ಅಕ್ಕಿಯನ್ನು ಹಾಕಿ ಕೊಂಚ ನೀರಿನೊಡನೆ ಸುಮಾರು ಅರ್ಧದಷ್ಟು ಬೇಯಿಸಿ. ಬಳಿಕ ಇದಕ್ಕೆ ನೆನೆಸಿಟ್ಟ ಚಿಕನ್ ಹಾಕಿ ಮಿಶ್ರಣ ಮಾಡಿ.
*ಈಗ ಕ್ಯಾಪಸ್ಸಿಕಂ, ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ. ಬಳಿಕ ಚಿಕನ್ ಸೂಪ್ ಹಾಕಿ ಚಿಕ್ಕ ಉರಿಯಲ್ಲಿ ಮುಚ್ಚಳ ಮುಚ್ಚಿ (ಸೀಟಿ ಹಾಕಬಾರದು) ಸುಮಾರು ಐದರಿಂದ ಎಂಟು ನಿಮಿಷಗಳ ಕಾಲ ಅಥವಾ ಚಿಕನ್ ಬೇಯುವವರೆಗೆ ಬೇಯಿಸಿ.
*ಬಳಿಕ ಅಕ್ಕಿ ಪೂರ್ಣವಾಗಿ ಬೆಂದಿದೆಯೇ ಎಂದು ನೋಡಿ. ಬೆಂದಿದೆ ಎಂದು ಖಾತ್ರಿಪಡಿಸಿಕೊಂಡ ಬಳಿಕ ಜೇನು, ಪಾರ್ಸ್ಲೆ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ
*ಬಿಸಿಬಿಸಿ ಇರುವಂತೆಯೇ ಮನೆಯವರಿಗೆ ಹಾಗೂ ಅತಿಥಿಗಳಿಗೆ ಬಡಿಸಿ, ಬೆಳ್ಳುಳ್ಳಿ ಬಿರಿಯಾನಿ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ.
ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ
ಬೆಳ್ಳುಳ್ಳಿ ಕೇವಲ ಅಡುಗೆ ಸಾಮಾಗ್ರಿ ಮಾತ್ರವಲ್ಲ, ಬದಲಿಗೆ ತನ್ನ ಉರಿಯೂತ ನಿವಾರಕ ಮತ್ತು ರೋಗ ನಿರೋಧಕಕ ಶಕ್ತಿ ಹೆಚ್ಚಿಸುತ್ತದೆ ಅಷ್ಟೆ ಅಲ್ಲ ಇದನ್ನು ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ. ಆದ್ದರಿಂದ ಬೆಳ್ಳುಳ್ಳಿ ಬಳಸಿರುವ ಈ ಖಾದ್ಯ ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ವಿಶೇಷವಾಗಿ ಭಾನುವಾರ ಮಧ್ಯಾಹ್ನದ ಊಟದಲ್ಲಿ ಈ ಖಾದ್ಯವನ್ನು ಬಡಿಸುವ ಮೂಲಕ ಮನೆಯವರೆಲ್ಲಾ ಆಸ್ವಾದಿಸಬಹುದಾದ ಈ ಖಾದ್ಯ ಎಲ್ಲರ ಮನ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ