• Home
  • »
  • News
  • »
  • lifestyle
  • »
  • Ragi Upma Recipe: ರಾಗಿ ಉಪ್ಪಿಟ್ಟು ರುಚಿ ಹೇಗಿರುತ್ತೆ ಗೊತ್ತಾ? ಇದನ್ನ ತಿಂದವರು ಹೇಳ್ತಾರೆ ವಾವ್, ವಾವ್!

Ragi Upma Recipe: ರಾಗಿ ಉಪ್ಪಿಟ್ಟು ರುಚಿ ಹೇಗಿರುತ್ತೆ ಗೊತ್ತಾ? ಇದನ್ನ ತಿಂದವರು ಹೇಳ್ತಾರೆ ವಾವ್, ವಾವ್!

ರಾಗಿ ಉಪ್ಪಿಟ್ಟು

ರಾಗಿ ಉಪ್ಪಿಟ್ಟು

ಇಂದು ನಾವು ಪೌಷ್ಠಿಕಾಂಶಗಳನ್ನು ಒಳಗೊಂಡಿರುವ ರಾಗಿ ಉಪ್ಪಿಟ್ಟು ಹೇಗೆ ತಯಾರಿಸಬೇಕು ಎಂದು ಹೇಳುತ್ತಿದ್ದೇವೆ.

  • Share this:

ಮೈಸೂರು ಭಾಗದಲ್ಲಿಯ ಜನರಿಗೆ ರಾಗಿ ಮುದ್ದೆ (Ragi Ball) ಅಂದ್ರೆ ಪಂಚಪ್ರಾಣ. ರಾಗಿ ತಿಂದವನಿಗೆ ರೋಗ ಇಲ್ಲ ಅಂತ ಹೇಳ್ತಾರೆ. ಆದ್ರೆ ಕೆಲವರಿಗೆ ಬೆಳಗ್ಗೆ ರಾಗಿ ಮುದ್ದೆ ಮಾಡಲು ಸಾಧ್ಯವಾಗಲ್ಲ. ಇನ್ನು ಗೃಹಿಣಿಯರು (Women) ಕೆಲಸಕ್ಕೆ ತೆರಳುತ್ತಿದ್ರೆ ರಾಗಿ ಮುದ್ದೆ ತಯಾರಿಸಲು (Ragi ball making) ಆಗಲ್ಲ. ಬೆಂಗಳೂರಿನಂತಹ ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ಕೆಲಸಕ್ಕೆ ಹೋಗುವ ಅವಸರದಲ್ಲಿ ಆರೋಗ್ಯಕರ ತಿಂಡಿ (Breakfast) ಮಾಡಿಕೊಳ್ಳಲು ಸಮಯ ಇರಲ್ಲ. ಮ್ಯಾಗಿ ಅಂತಹ ತಿಂಡಿಗಳನ್ನೇ ಮಾಡ್ಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದ್ರೆ ಇದು ಆ ಕ್ಷಣಕ್ಕೆ ಮಾತ್ರ ಹೊಟ್ಟೆ ತುಂಬಬಹುದು. ಹಾಗಾಗಿ ಇಂದು ನಾವು ಪೌಷ್ಠಿಕಾಂಶಗಳನ್ನು ಒಳಗೊಂಡಿರುವ ರಾಗಿ ಉಪ್ಪಿಟ್ಟು ಹೇಗೆ ತಯಾರಿಸಬೇಕು ಎಂದು ಹೇಳುತ್ತಿದ್ದೇವೆ.


ಸಾಮಾನ್ಯವಾಗಿ ಮಾಡುವ ಉಪ್ಪಿಟ್ಟಿನ ರೀತಿಯಲ್ಲಿಯೇ ಇದನ್ನು ತಯಾರಿಸಬಹುದು. ಆರಂಭದಲ್ಲಿ ರಾಗಿ ಹಿಟ್ಟು ಹುರಿದುಕೊಳ್ಳುವಾಗ ಎಚ್ಚರದಿಂದಿರಬೇಕು.


ರಾಗಿ ಉಪ್ಪಿಟ್ಟು ಮಾಡುವ ವಿಧಾನ


ರಾಗಿ ಹಿಟ್ಟು: ಒಂದು ಕಪ್


ಚಿರೋಟಿ ರವೆ: ಒಂದು ಕಪ್


ಕತ್ತರಿಸಿದ ಈರುಳ್ಳಿ: ಒಂದು ಕಪ್


ಹಸಿಮೆಣಸಿನಕಾಯಿ: 4 ರಿಂದ 5


ಕರಿಬೇವು: 4 ರಿಂದ 5


ಜೀರಿಗೆ, ಸಾಸವೆ: ಒಂದು ಟೀ ಸ್ಪೂನ್


ಅರಿಶಿಣ; ಚಿಟಿಕೆ


ಇಂಗು: ಚಿಟಿಕೆ


ಉದ್ದಿನಬೇಳೆ: ಒಂದು ಟೀ ಸ್ಪೂನ್


ಕಡಲೆಬೇಳೆ: ಅರ್ಧ ಟೀ ಸ್ಪೂನ್


ಟೊಮಾಟೋ: ಅರ್ಧ ಕಪ್


ಕೋತಂಬರಿ ಸೊಪ್ಪು


ಗೋಡಂಬಿ: 4 ರಿಂದ 5


ಎಣ್ಣೆ


ಉಪ್ಪು: ರುಚಿಗೆ ತಕ್ಕಷ್ಟು


ಇದನ್ನೂ ಓದಿ: Upma Recipe: ಹೇಗ್ ಹೇಗೋ ಮಾಡಿದ್ರೆ ರುಚಿಯಾಗಲ್ಲ; ಈ ರೀತಿ ತಯಾರಿಸಿ ಸೋರೆಕಾಯಿ ಉಪ್ಪಿಟ್ಟು


ರಾಗಿ ಉಪ್ಪಿಟ್ಟು ಮಾಡುವ ವಿಧಾನ


*ಮೊದಲಿಗೆ ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ರಾಗಿ ಹಿಟ್ಟು ಕಪ್ಪು ಆಗದಂತೆ ಎಚ್ಚರ ವಹಿಸಿ. ರಾಗಿ ಹಿಟ್ಟು ಕಪ್ಪಾದ್ರೆ ಉಪ್ಪಿಟ್ಟಿನ ರುಚಿ ಕೆಡುತ್ತದೆ.


*ನಂತರ ಇದೇ ಪ್ಯಾನ್​​ನಲ್ಲಿ ರವೆಯನ್ನು ಹುರಿದುಕೊಳ್ಳಿ


*ರವೆ ಮತ್ತು ರಾಗಿ ಹಿಟ್ಟು ಹುರಿದುಕೊಂಡ ನಂತರ ತರಕಾರಿಯನ್ನು ಕತ್ತರಿಸಿಕೊಳ್ಳಿ.


*ಗ್ಯಾಸ್​ ಸ್ಟೌವ್ ಅನ್ ಮಾಡಿಕೊಂಡು ದೊಡ್ಡದಾದ ಪಾತ್ರೆ ಇರಿಸಿಕೊಂಡು ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಿ,ಮತ್ತೊಂದು ಪಾತ್ರೆಯನ್ನ ಸ್ಟೌವ್ ಮೇಲಿಟ್ಟು ನೀರು ಬಿಸಿ ಮಾಡಿಕೊಳ್ಳಿ.


*ಒಗ್ಗರಣೆಗೆ ಮೊದಲಿಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ನಂತರ ಸಾಸವೆ, ಜೀರಿಗೆ ಹಾಕಿ. ತದನಂತರ ಕಡ್ಲೆಬೇಳೆ, ಗೋಡಂಬಿ , ಉದ್ದಿನಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ,


*ತದನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಹುರಿದುಕೊಳ್ಳಿ. ತದನಂತರರ ಹಸಿ ಮೆಣಸಿನಕಾಯಿ,  ಕರೀಬೇವು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.


*ಕೊನೆಗೆ ಟೊಮಾಟೋ ಸೇರಿಸಿ ಅದು ಸಾಫ್ಟ್ ಆಗೋವರೆಗೂ ಬೇಯಿಸಿಕೊಳ್ಳಬೇಕು.


*ನಂತರ ಚಿಟಿಕೆ ಅರಿಶಿನ, ಉಪ್ಪು ಮತ್ತು ಇಂಗು ಸೇರಿಸಿ ಫ್ರೈ ಮಾಡಿ.


*ಒಗ್ಗರಣೆ ಮಸಾಲೆ ಸಿದ್ಧವಾಗುತ್ತಿದ್ದಂತೆ ಮೊದಲಿಗೆ ಹುರಿದಿಟ್ಟುಕೊಂಡಿರುವ ರವೆ ಮತ್ತು ರಾಗಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ರವೆ ಮತ್ತು ರಾಗಿ ಮಿಕ್ಸ್ ಮಾಡುವಾಗ ಉರಿಯನ್ನು ಕಡಿಮೆ ಮಾಡಿಕೊಳ್ಳಿ. ಇಲ್ಲಾವದರಲ್ಲಿ ಗಂಟು ಗಂಟು ಆಗುವ ಸಾಧ್ಯತೆಗಳಿರುತ್ತವೆ.


ಇದನ್ನೂ ಓದಿ:  Breakfast Recipe: ಬರೀ 15 ನಿಮಿಷದಲ್ಲೇ ತಯಾರಿಸಿ ರುಚಿಯಾದ ಬ್ರೆಡ್ ದಹಿ ಉಪ್ಮಾ


*ಒಗ್ಗರಣೆ ಜೊತೆ ರವೆ ಮತ್ತು ರಾಗಿಹಿಟ್ಟು ಮಿಶ್ರಣ ಆಗುತ್ತಿದ್ದಂತೆ ನೀರು ಸೇರಿಸಿ ನಾಲ್ಕರಿಂದ ಐದು ನಿಮಿಷ ಬೇಯಿಸಿ. ಕೊನೆಗೆ ಸಿದ್ಧವಾದ ರಾಗಿ ಉಪ್ಪಿಟ್ಟು ಮೇಲೆ ಕೋತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದ್ರೆ ಉಪ್ಮಾ ರೆಡಿ.


ಸಿದ್ಧವಾದ ಉಪ್ಮಾವನ್ನು ಹಸಿ ತೆಂಗಿನಕಾಯಿ ಚಟ್ನಿ ಅಥವಾ ಟೊಮಾಟೋ ಚಟ್ನಿ ಜೊತೆ ಸವಿಯಬಹುದು. ಬೆಳ್ಳುಳ್ಳಿ ಸೇವಿಸಲು ಇಷ್ಟಪಡೋರು ಈರುಳ್ಳಿ ಬದಲಾಗಿ ಇದನ್ನ ಬಳಸಬಹುದು.

Published by:Mahmadrafik K
First published: