Breakfast Recipe: ಬೆಳಗ್ಗೆ ಎದ್ದ ಕೂಡಲೇ ತಿಂಡಿಗೆ ಏನು ಮಾಡಬೇಕು ಎಂದು ಗೃಹಿಣಿಯರು ಚಿಂತೆಗೆ ಒಳಗಾಗುತ್ತಾರೆ. ಅದರಲ್ಲಿ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಬೆಳಗ್ಗೆಯ ತಿಂಡಿಗೆ ಉಪ್ಪಿಟ್ಟು (Upma) ಅಥವಾ ಪೋಹಾ (Poha) ಮಾಡೋದು ಸಾಮಾನ್ಯ. ಆದರೆ ಎಷ್ಟೋ ಮಂದಿಗೆ ಉಪ್ಪಿಟ್ಟು (Uppittu) ಮಾಡೋದು ಸರಳ ಅಂತ ತಿಳಿದುಕೊಂಡಿರುತ್ತಾರೆ. ಆದರೆ ಉಪ್ಪಿಟ್ಟು (Upma Recipe) ಮಾಡೋದು ಅಷ್ಟು ಸರಳವಲ್ಲ. ಅದಕ್ಕೆ ಅದರದ್ದೇ ರೀತಿಯಲ್ಲಿ ಉಪ್ಪಿಟ್ಟು ಸಿದ್ಧಪಡಿಸಬೇಕು. ಇನ್ನು ದಕ್ಷಿಣ ಕರ್ನಾಟಕ (South Karnataka) ಭಾಗದಲ್ಲಿ ಉಪ್ಪಿಟ್ಟನ್ನು ಹೆಚ್ಚು ನೀರು ಬಳಸಿ ತುಂಬಾನೇ ತೆಳುವಾಗಿ ಮಾಡುತ್ತಾರೆ. ಇನ್ನು ಕೆಲವರು ಉಪ್ಪಿಟ್ಟು ತಯಾರಿಸುವಾಗ ಮನೆಯಲ್ಲಿರೋ ಎಲ್ಲಾ ತರಕಾರಿ (Vegetables) ಬಳಸಿ ಅದನ್ನ ಪುಲಾವ್ (Pulav) ಮಾಡುತ್ತಾರೆ. ಆದ್ರೆ ಉಪ್ಪಿಟ್ಟು ಮಾಡಲು ಅದಕ್ಕೆ ಆದ ಸಾಮಾಗ್ರಿಗಳನ್ನು ಬಳಸಬೇಕು. ಅಂದಾಗ ಮಾತ್ರ ಅದು ಪರ್ಫೆಕ್ಟ್ ಉಪ್ಪಿಟ್ಟು (Perffect Upma / Perfect Uppittu / Khara bath) ಆಗಲಿದೆ.
ಇಂದು ನಾವು ನಿಮಗೆ ಪರ್ಫೆಕ್ಟ್ ಉಪ್ಪಿಟ್ಟು ಹೇಗೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಇಲ್ಲಿ ಕೆಲವೇ ಸಾಮಾಗ್ರಿ ಬಳಸಿ ರುಚಿಯಾದ ಉಪ್ಪಿಟ್ಟು ಹೇಗೆ ಮಾಡೋದು ಅಂತ ಹೇಳುತ್ತಿದ್ದೇವೆ.
ಪರ್ಫೆಕ್ಟ್ ಉಪ್ಮಾ ಮಾಡಲು ಬೇಕಾಗುವ ಸಾಮಾಗ್ರಿಗಳು
ದಪ್ಪ ರವೆ: ಒಂದು ಕಪ್ (100 ಗ್ರಾಂ)
ಹಸಿ ಮೆಣಸಿನಕಾಯಿ: 2 ರಿಂದ 3
ಈರುಳ್ಳಿ: ಒಂದು (ಚಿಕ್ಕದು)
ಟೊಮ್ಯಾಟೋ: ಒಂದು (ಚಿಕ್ಕದು)
ಕರಿಬೇವು: 4 ರಿಂದ 5 ಎಲೆ
ಕೋತಂಬರಿ ಸೊಪ್ಪು
ಶೇಂಗಾ: 10 ರಿಂದ 15
ಉದ್ದಿನಬೇಳೆ: ಒಂದು ಟೀ ಸ್ಪೂನ್
ಸಾಸವೆ ಮತ್ತು ಜೀರಿಗೆ: ಒಂದು ಟೀ ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಒಗ್ಗರಣೆಗೆ
ಪರ್ಫೆಕ್ಟ್ ಉಪ್ಮಾ ಮಾಡುವ ವಿಧಾನ
*ಮೊದಲಿಗೆ ಒಂದು ಪ್ಯಾನ್ನಲ್ಲಿ ರವೆ ಹಾಕಿಕೊಂಡು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ರವೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ರವೆಯನ್ನು ಬೌಲ್ಗೆ ಹಾಕಿಕೊಂಡು ಎತ್ತಿಟ್ಟುಕೊಳ್ಳಿ.
*ತದನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ, ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
*ಈಗ ದೊಡ್ಡದಾದ ಪ್ಯಾನ್ ಒಲೆ ಮೇಲೆ ಇರಿಸಿಕೊಳ್ಳಿ. ನಿಮ್ಮ ಉಪ್ಪಿಟ್ಟು ಸಿದ್ಧವಾಗೋವರೆಗೂ ಉರಿ ಮಧ್ಯಮವಾಗಿರಬೇಕು.
*ಈಗ ಪ್ಯಾನ್ಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿ. ಸಾಸವೆ ಚಟಪಟ ಅಂತ ಸಿಡಿಯುತ್ತಿದ್ದಂತೆ ಶೇಂಗಾ ಮತ್ತು ಉದ್ದಿನಬೇಳೆ ಹಾಕಿ.
*ಶೇಂಗಾ ಮತ್ತು ಉದ್ದಿನಬೇಳೆ ಫ್ರೈ ಆಗುತ್ತಿದ್ದಂತೆ ಈರುಳ್ಳಿ ಹಾಕಿ ಹಸಿ ವಾಸನೆ ಹೋಗೋವರೆಗೂ ಫ್ರೈ ಮಾಡಿಕೊಳ್ಳಿ. (ಉದ್ದಿನಬೇಳೆ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಬೇಕು)
*ತದನಂತರ ಟೊಮ್ಯಾಟೋ ಹಾಕಿ ಅದು ಸ್ಮ್ಯಾಶ್ ಆಗೋ ಸ್ಥಿತಿಗೆ ಬರೋವರೆಗೂ ಬಾಡಿಸಿಕೊಳ್ಳಿ. ತದನಂತರ ಕರಿಬೇವು ಮತ್ತು ಹಸಿಮೆಣಸಿನಾಯಿ ಹಾಕಿ ಮೂರರಿಂದ ನಾಲ್ಕು ನಿಮಿಷ ಬಾಡಿಸಿಕೊಳ್ಳಿ.
*ಕೊನೆಯದಾಗಿ ರುಚಿಗೆ ಉಪ್ಪು ಸೇರಿಸಿ, ಎರಡು ಕಪ್ನಷ್ಟು ನೀರು ಹಾಕಿ.
*ನೀರು ಕುದಿಯಲು ಆರಂಭಿಸುತ್ತಿದ್ದಂತೆ ಹುರಿದಿರುವ ರವೆಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ರವೆ ಮಿಕ್ಸ್ ಆಗುತ್ತಿದ್ದಂತೆ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.
ಇದನ್ನೂ ಓದಿ: Upma Recipe: ಹೊಸ ಬಗೆಯ, ಭಿನ್ನ ರುಚಿಯ ಸ್ವೀಟ್ ಕಾರ್ನ್ ಉಪ್ಪಿಟ್ಟು ಮಾಡುವ ವಿಧಾನ
*ಕೊನೆಯದಾಗಿ ಮುಚ್ಚಳ ತೆಗೆದು ಉಪ್ಪಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕತ್ತರಿಸಿದ ಕೋತಂಬರಿ ಸೊಪ್ಪು ಹಾಕಿ, ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಬೇಕು. ಐದರಿಂದ ನಾಲ್ಕು ನಿಮಿಷದ ನಂತರ ತೆಗೆದ್ರೆ ಸವಿಯಲು ಉಪ್ಪಿಟ್ಟು ಸಿದ್ಧ.
(ನಿಮಗೆ ಕಟ್ಟಾ ಮಿಟ್ಟಾ ಇಷ್ಟವಾಗುತ್ತಿದ್ರೆ ಉಪ್ಪಿಟ್ಟು ಮಾಡೋವಾಗ ಬೆಲ್ಲ ಅಥವಾ ಸಕ್ಕರೆ ಬಳಸಬಹುದು ಅಥವಾ ಉಪ್ಪಿಟ್ಟು ತಿನ್ನುವಾಗ ನಿಂಬೆ ಹಣ್ಣಿನ ರಸ ಸೇರಿಸಿಕೊಳ್ಳಬಹುದು. ಕೆಲವರು ಮೊಸರಿನ ಜೊತೆ ಉಪ್ಪಿಟ್ಟು ತಿನ್ನಲು ಇಷ್ಟಪಡ್ತಾರೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ