Rava Dosa: ಪರ್ಫೆಕ್ಟ್ ರವೆ ದೋಸೆ ಮಾಡುವುದು ಹೇಗೆ ಅಂತೀರಾ? ದೋಸೆ ಮಾಡುವಾಗ ನೆನಪಿರಲಿ ಈ ಸಲಹೆಗಳು..!

ದಕ್ಷಿಣ ಭಾರತದ ಉಪಾಹಾರದ ವಿಷಯಕ್ಕೆ ಬಂದಾಗ, ಬಹುತೇಕರ ಪ್ರೀತಿಗೆ ಪಾತ್ರವಾಗಿರುವ ಉಪಾಹಾರಗಳು ಎಂದರೆ ದೋಸೆ ಮತ್ತು ಇಡ್ಲಿ ಎಂದು ಹೇಳಬಹುದು. ಅದರಲ್ಲೂ ಈ ಇಡ್ಲಿ ಮತ್ತು ದೋಸೆಗಳನ್ನು ಅನೇಕ ರೀತಿಯಲ್ಲಿ ವಿಧ ವಿಧವಾಗಿ ತಯಾರಿಸಿಕೊಂಡು ಸೇವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South India) ಉಪಾಹಾರದ ವಿಷಯಕ್ಕೆ ಬಂದಾಗ, ಬಹುತೇಕರ ಪ್ರೀತಿಗೆ ಪಾತ್ರವಾಗಿರುವ ಉಪಾಹಾರಗಳು ಎಂದರೆ ದೋಸೆ (Dosa) ಮತ್ತು ಇಡ್ಲಿ (Iddli) ಎಂದು ಹೇಳಬಹುದು. ಅದರಲ್ಲೂ ಈ ಇಡ್ಲಿ ಮತ್ತು ದೋಸೆಗಳನ್ನು ಅನೇಕ ರೀತಿಯಲ್ಲಿ ವಿಧ ವಿಧವಾಗಿ ತಯಾರಿಸಿಕೊಂಡು ಸೇವಿಸಬಹುದು. ಇವುಗಳನ್ನು ಉಲ್ಲೇಖಿಸದೆ ಉಪಾಹಾರದ ಪಟ್ಟಿ ಪೂರ್ತಿಯಾಗುವುದೇ ಇಲ್ಲ ಎಂದು ಹೇಳಬಹುದು. ಅದರಲ್ಲೂ ಅನೇಕ ಜನರಿಗೆ ಈ ದೋಸೆಗಳನ್ನು ಕಂಡರೆ ಬಲು ಅಚ್ಚುಮೆಚ್ಚು, ದಿನದ ಯಾವುದೇ ಸಮಯದಲ್ಲಿ ಇದನ್ನು ನೀಡಿದರೂ ಅವರು ಸೇವಿಸುತ್ತಾರೆ. ಈ ದೋಸೆಯಲ್ಲಿ ಸಹ ಈಗ ಅನೇಕ ರೀತಿಯ ದೋಸೆಗಳಿವೆ. ರವೆ (Rava) ದೋಸೆ, ಮಸಾಲೆ ದೋಸೆ ಹೀಗೆ ಪಟ್ಟಿ ತುಂಬಾನೇ ದೊಡ್ಡದಾಗುತ್ತಾ ಹೋಗುತ್ತದೆ. ಈ ದೋಸೆಗಳ ಬ್ಯಾಟರ್ ಎಂದರೆ ಹಿಟ್ಟನ್ನು ಮಾಡಿಟ್ಟುಕೊಂಡರೆ, ಅದನ್ನು ತ್ವರಿತವಾಗಿ ಯಾವಾಗಾದರೂ ಮಾಡಿಕೊಳ್ಳಬಹುದು.

ರವೆ ದೋಸೆ ಹಿಟ್ಟನ್ನು ತಯಾರಿಸುವ ವಿಧಾನ:

ಈ ದಕ್ಷಿಣ ಭಾರತದ ಉಪಾಹಾರವನ್ನು ಯಾವುದೇ ಸಮಯದಲ್ಲಿ ಬೇಕಾದರೂ ತಯಾರಿಸಬಹುದು. ಆದರೂ, ಸಾಂಪ್ರದಾಯಿಕವಾಗಿ ವಸ್ತುಗಳನ್ನು ತಯಾರಿಸಲು ಇಷ್ಟಪಡುವವರಲ್ಲಿ ನೀವೂ ಒಬ್ಬರಾಗಿದ್ದರೆ, ಈ ರವೆ ದೋಸೆ ಹಿಟ್ಟನ್ನು ತಯಾರಿಸುವ ವಿಧಾನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳನ್ನು ಇಲ್ಲಿ ಹೇಳುತ್ತೇವೆ.

ಆದರೆ, ಈ ಬಾರಿ ನೀವು ವಿಭಿನ್ನ ರೀತಿಯ ದೋಸೆಯನ್ನು ತಯಾರಿಸಲು ಯೋಜಿಸಿದರೆ, ನೀವು ದೋಸೆ ಹಿಟ್ಟನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬೇಕು.

ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಉದಾಹರಣೆಗೆ, ರವೆ ದೋಸೆಯನ್ನು ತಯಾರಿಸುವಾಗ, ಆ ಪರಿಪೂರ್ಣ ರಚನೆಯನ್ನು ಪಡೆಯಲು ಹಿಟ್ಟು ಸ್ವಲ್ಪ ತೆಳುವಾಗಿರಬೇಕು. ಆದ್ದರಿಂದ, ಪರಿಪೂರ್ಣ ರವೆ ದೋಸೆಯನ್ನು ಹೇಗೆ ತಯಾರಿಸುವುದು ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಅನುಸರಿಸಬಹುದಾದ ಕೆಲವು ಸಲಹೆಗಳನ್ನು ನಾವು ಇಲ್ಲಿ ತಿಳಿಸಿದ್ದೇವೆ ನೋಡಿ.

ರವೆ ದೋಸೆ ತಯಾರಿಸಲು ಸಲಹೆಗಳು:

1. ತೆಳುವಾದ ಹಿಟ್ಟನ್ನು ಅನ್ನು ಮಾಡಿಕೊಳ್ಳಿರಿ:

ನೀವು ರವೆ ದೋಸೆ ಮಾಡಿಕೊಳ್ಳಲು ತಯಾರಿಸಿಕೊಳ್ಳುವ ಹಿಟ್ಟು ಎಂದರೆ ಬ್ಯಾಟರ್ ತಯಾರಿಯನ್ನು ಪ್ರಾರಂಭಿಸಿದಾಗ, ಅದು ತುಂಬಾನೇ ತೆಳುವಾಗಿರುವಂತೆ ನೋಡಿಕೊಳ್ಳಿರಿ. ಅದರ ಸ್ಥಿರತೆಯನ್ನು ಪರೀಕ್ಷಿಸಲು, ನೀವು ನಿಮ್ಮ ಹಿಟ್ಟಿನಲ್ಲಿ ಒಂದು ಚಮಚವನ್ನು ಹಾಕಿ ನೋಡಬಹುದು ಅಥವಾ ನೀವು ಹಿಟ್ಟನ್ನು ಲಾಡಲ್ ಹಿಂಭಾಗಕ್ಕೆ ಅಂಟಿಸಬಹುದು ಮತ್ತು ಅದು ಅಂಟಿಕೊಳ್ಳದೆ ಕೆಳಕ್ಕೆ ಬಿದ್ದರೆ ನೀವು ಅದರ ಸ್ಥಿರತೆಯ ಬಗ್ಗೆ ತಿಳಿದುಕೊಳ್ಳಬಹುದು.

2. ಬೇಯಿಸುವ ಮೊದಲು ಹಿಟ್ಟನ್ನು ಚೆನ್ನಾಗಿ ಕಲಕಿ:

ರವೆಯಿಂದ ದೋಸೆಯನ್ನು ತಯಾರಿಸಿದರೆ, ರವೆಯೂ ನೀರಿನಲ್ಲಿ ಕೆಳಗೆ ಉಳಿಯಬಹುದು. ಹಾಗೆ ಆದಾಗ ಕೊನೆಗೆ ಹಾಕಿಕೊಳ್ಳುವ ದೋಸೆಗಳು ತುಂಬಾನೇ ದಪ್ಪವಾಗಿ ಮತ್ತು ರವೆ ರವೆಯಾಗಿ ಬರುತ್ತವೆ. ಆದ್ದರಿಂದ, ನೀವು ಹಿಟ್ಟನ್ನು ತವಾದ ಮೇಲೆ ಸುರಿಯುವ ಮೊದಲು ಅದನ್ನು ಒಮ್ಮೆ ಚೆನ್ನಾಗಿ ಕಲಕಿ ಮತ್ತು ವಿನ್ಯಾಸವು ತೆಳುವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತವಾಗಿದೆ.

ಇದನ್ನೂ ಓದಿ: BreakFast Recipe: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ವೆಜ್ ಬಿರಿಯಾನಿ

3. ನಾನ್-ಸ್ಟಿಕ್ ಪ್ಯಾನ್ ಮೇಲೆ ಬೇಯಿಸಿ:

ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಅಡುಗೆ ಮಾಡುವುದು ಯಾವಾಗಲೂ ಉತ್ತಮ (ವಿಶೇಷವಾಗಿ ನೀವು ಮೊದಲ ಬಾರಿಗೆ ರವೆ ದೋಸೆಯನ್ನು ತಯಾರಿಸಲು ಪ್ರಯತ್ನಿಸುತ್ತಿದ್ದರೆ). ಏಕೆಂದರೆ ನಿಮ್ಮ ದೋಸೆಯ ಮೇಲೆ ಸೂಕ್ತವಾಗಿ ಎಣ್ಣೆ ಹಾಕದಿದ್ದರೆ ಕೆಳಭಾಗಕ್ಕೆ ಅದು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನೀವು ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಅಡುಗೆ ಮಾಡಿದಾಗ, ನೀವು ಹಾಕಿಕೊಳ್ಳುವ ರವೆ ದೋಸೆ ಅದಕ್ಕೆ ಅಂಟಿಕೊಳ್ಳದೆ ಹಾಗೆ ಗರಿಗರಿಯಾಗಿ ಹೊರ ಬರುತ್ತದೆ ಮತ್ತು ಅದನ್ನು ನಿಮ್ಮ ತಟ್ಟೆಯಲ್ಲಿ ಹಾಕಿಕೊಂಡು ಅದರ ಸ್ವಾದವನ್ನು ಸವಿಯಬಹುದು.

4. ತವಾವನ್ನು ಚೆನ್ನಾಗಿ ಬಿಸಿ ಮಾಡಿ:

ನೀವು ದೋಸೆ ಹಾಕಿಕೊಳ್ಳುವ ತವಾವನ್ನು ಒಮ್ಮೆ ಚೆನ್ನಾಗಿ ಬಿಸಿ ಮಾಡಿ. ನಂತರ ಸ್ವಲ್ಪ ನೀರನ್ನು ಅದರ ಮೇಲೆ ಚಿಮುಕಿಸಿ ಮತ್ತು ಹಿಟ್ಟನ್ನು ತವಾದಾದ್ಯಂತ ತೆಳುವಾಗಿ ಹರಡಿ, ಇದರಿಂದ ರವೆ ದೋಸೆಗೆ ಒಂದು ವಿನ್ಯಾಸ ರೂಪುಗೊಳ್ಳುತ್ತದೆ. ಇದನ್ನು ಗರಿಗರಿಯಾಗಿ ಮಾಡಿಕೊಳ್ಳಲು ಅದನ್ನು ಮಧ್ಯಮ ಉರಿಯಲ್ಲಿ ಬೇಯಿಸುವುದು ಒಳ್ಳೆಯದು.
Published by:shrikrishna bhat
First published: