Video: ರುಚಿಕರವಾದ ಪರೋಟಾವನ್ನು ತಯಾರಿಸುವುದು ಎಷ್ಟೊಂದು ಸುಲಭ

zahir | news18
Updated:October 13, 2018, 12:52 PM IST
Video: ರುಚಿಕರವಾದ ಪರೋಟಾವನ್ನು ತಯಾರಿಸುವುದು ಎಷ್ಟೊಂದು ಸುಲಭ
@Youtube
  • Advertorial
  • Last Updated: October 13, 2018, 12:52 PM IST
  • Share this:
-ನ್ಯೂಸ್ 18 ಕನ್ನಡ

ದಿನವೂ ಮನೆಯಲ್ಲಿ ಒಂದೇ ರೀತಿಯ ಆಹಾರ ಸೇವಿಸಿ ಬೇಸರವಾದಾಗ ರೆಸ್ಟೋರೆಂಟ್​ಗಳತ್ತ ಮುಖ ಮಾಡುವವರೇ ಹೆಚ್ಚು. ಅಲ್ಲಿ ಪರೋಟಾ ಸೇರಿದಂತೆ ಇತರೆ ಆಹಾರಗಳಿಗೆ ಅರ್ಡರ್ ಮಾಡಿದರೆ ಒಂದೈಪತ್ತು ನಿಮಿಷವಂತೂ ಕಾಯಬೇಕು. ಆದರೂ ಚುರುಗುಟ್ಟುತ್ತಿರುವ ಹಸಿವನ್ನು ಸಹಿಸಿ ಕಾಯುತ್ತಾರೆ. ಏಕೆಂದರೆ ಮನೆಯಲ್ಲಿ ಪರೋಟಾವನ್ನು ಮಾಡುವುದು ಎಂದರೆ ಸಾಹಸವೇ ಸರಿ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ.

ಪರೋಟಾ ಎಂಬುದು ಉತ್ತರ ಭಾರತೀಯರ ಆಹಾರ ಎನ್ನಲಾಗುತ್ತಿದ್ದರೂ, ದಕ್ಷಿಣದಲ್ಲಿ ತನ್ನದೇಯಾದ ವಿಭಿನ್ನ ರುಚಿಯ ಮೂಲಕ ನಾಲಿಗೆ ಚಪ್ಪರಿಸುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಕೇರಳ ಪರೋಟಾ ಎಂದರೆ ಹೆಚ್ಚಿನವರ ಹಾಟ್​ ಫೇವರೇಟ್​ ಆಗಿ ಹೋಗಿದೆ. ಇನ್ನು ಚೆನ್ನೈ ಪರೋಟ( ಕಾಯಿನ್ ಪರೋಟಾ) ಮತ್ತು ಸಿಲೋನ್ ಪರೋಟಾ(ಶ್ರೀಲಂಕಾ ಪರೋಟ)ಗಳನ್ನು ಬೆಂಗಳೂರಿನಂತಹ ನಗರಗಳ ರೆಸ್ಟೋರೆಂಟ್​ಗಳಲ್ಲಿ ಸಿಗುತ್ತದೆ. ಆಹಾರ ಪ್ರಿಯರ  ಮನಗೆದ್ದಿರುವ ಪರೋಟಾಗಳನ್ನು ಮನೆಯಲ್ಲೇ ಸುಲಭ ವಿಧಾನಗಳ ಮೂಲಕ ತಯಾರಿಸಿಕೊಳ್ಳಬಹುದು. ಇದನ್ನುತಿಳಿಸುವ ಹಲವಾರು ಪಾಕ ವಿಧಾನಗಳ ಯೂ-ಟ್ಯೂಬ್ ಚಾನೆಲ್​ಗಳಿವೆ. ಈ ಕೆಳಗೆ ಕೊಟ್ಟಿರುವ ಒಂದಷ್ಟು ವಿಡಿಯೋಗಳ ಮೂಲಕ ಗರಿ ಗರಿಯಾದ ಪರೋಟಾ ಮಾಡುವ ಸುಲಭ ವಿಧಾನಗಳನ್ನು ತಿಳಿದುಕೊಳ್ಳಿ.

Vaishnavi Channel / ವೈಷ್ಣವಿ ಚಾನೆಲ್
ಪಾಕ ವಿಧಾನಗಳನ್ನು ತಿಳಿಸುವ ಈ ಯೂಟ್ಯೂಬ್ ಚಾನೆಲ್​ 2 ಲಕ್ಷ 33 ಸಾವಿರಕ್ಕೂ ಹೆಚ್ಚಿನ ಚಂದಾದಾರರು ಇರುವುದೇ ಇವರ ಪಾಕ ವಿಧಾನದ ಜನಪ್ರಿಯತೆಗೆ ಕಾರಣ. ಇಲ್ಲಿ ನೀವು ಕೂಡ ಗರಿ ಗರಿಯಾದ ಪರೋಟಾವನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಬಹುದು.


Kannada recipesಈ ಯೂಟ್ಯೂನ್​ ಚಾನೆಲ್​ನಲ್ಲಿ 32 ಸಾವಿರ ಚಂದಾದಾರಿದ್ದು, ಇಲ್ಲಿ ಅತ್ಯುತ್ತಮ ಪರೋಟಾ ಹೇಗೆ ತಯಾರಿಸಬಹುದೆಂದು ಎಂದು ತಿಳಿಸಲಾಗಿದೆ.


aboywithwok
2016ರಲ್ಲಿ ಪ್ರಾರಂಭಿಸಲಾದ ಈ ಯೂಟ್ಯೂಬ್​ ಚಾನೆಲ್​ನಲ್ಲಿ 68 ಸಾವಿರ ಚಂದಾದಾರಿದ್ದು, ಯಾವ ರೀತಿಯಾಗಿ ಸುಲಭದಲ್ಲಿ ಪರೋಟಾವನ್ನು ತಯಾರಿಸಬಹುದು ಎಂದು ಇಲ್ಲಿ ತಿಳಿಸಲಾಗಿದೆ.


Nisha Madhullika
ಐದು ಲಕ್ಷಕ್ಕೂ ಹೆಚ್ಚಿನ ಚಂದಾದಾರರು ಇರುವ ಈ ಚಾನೆಲ್​ನ್ನು 2009ರಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ ಪರೋಟಾ ಮಾಡುವ ವಿಧಾನವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.


TsMadaan
2008ರಲ್ಲಿ ಈ ಯುಟ್ಯೂಬ್​ ಚಾನೆಲ್ ಆರಂಭಿಸಲಾಗಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ಈ ಚಾನೆಲ್​ನ ವೀಕ್ಷಕರಾಗಿದ್ದಾರೆ. TsMadaan ಚಾನೆಲ್​ನಲ್ಲೂ ರುಚಿ ರುಚಿಯಾದ ಪರೋಟಾವನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಲಾಗಿದೆ.
First published:October 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ