Rice Papad: ಅನ್ನದಿಂದ ಹಪ್ಪಳ ತಯಾರಿಸಿ! ಅರೇ, ಹೇಗೆ ತಯಾರಿಸೋದು ಅಂತ ಇಲ್ಲಿ ಕಲಿಯಿರಿ

ಹಪ್ಪಳ ಮಾಡಲು ನೀವು ಅನ್ನವನ್ನು ತಕ್ಷಣದಲ್ಲಿ ತಯಾರಿಸಿ ಸಹ ಮಾಡಬಹುದು. ಇಲ್ಲವೇ ಉಳಿದ ಅನ್ನದಲ್ಲೂ ತಯಾರಿಸಬಹುದು.

ಹೆಚ್ಚಾದ ಅನ್ನ ವ್ಯರ್ಥ ಮಾಡದೆ ರುಚಿರುಚಿ ಹಪ್ಪಳ ತಯಾರಿಸಿ

ಹೆಚ್ಚಾದ ಅನ್ನ ವ್ಯರ್ಥ ಮಾಡದೆ ರುಚಿರುಚಿ ಹಪ್ಪಳ ತಯಾರಿಸಿ

  • Share this:
ಊಟದ ನಂತರ ಅನ್ನ (Rice) ಅಥವಾ ರೊಟ್ಟಿ (Roti) ಉಳಿದುಕೊಳ್ಳುವುದು ಎಲ್ಲಾ ಮನೆಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಕೆಲವರು ಹೀಗೆ ಉಳಿದ ಅನ್ನವನ್ನು ನಂತರದ ಊಟಕ್ಕೆ ಮತ್ತೆ ಬಳಸುತ್ತಾರೆ. ಇನ್ನು ಕೆಲವು ಬಾರಿ ಮತ್ತೆ ಬಳಸಲು ಇಟ್ಟು ಅಲ್ಲಿಯೇ ಮರೆತು ಬಿಡುತ್ತೇವೆ. ಆಹಾರವನ್ನು ನಾವು ಯಾವತ್ತೂ ವ್ಯರ್ಥ ಮಾಡಬಾರದು. ಬದಲಿಗೆ ಉಳಿದ ಆಹಾರನ್ನು ಏನು ಮಾಡಬಹುದು, ಹೇಗೆ ಉಪಯೋಗಿಸಬಹುದು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು. ಹೀಗೆ ಉಳಿದ ಅನ್ನದಲ್ಲಿ ಹಲವು ರೀತಿಯ ತಿಂಡಿಗಳನ್ನು, ಅದರಲ್ಲೂ ಹಪ್ಪಳವನ್ನು (Rice Papad) ನಾವು ಮನೆಯಲ್ಲಿಯೇ ಮಾಡಬಹುದು. ಇಂತಹ ರುಚಿಕರವಾದ ವಿಧಾನಗಳಲ್ಲಿ ಒಂದರ ಬಗ್ಗೆ ನಾವಿಂದು (Cooking Tips) ತಿಳಿದುಕೊಳ್ಳೋಣ.

ಫುಡ್ ಬ್ಲಾಗರ್ ರೇಶು ಸಿಂಗ್ ಅವರ 'ಕುಕಿಂಗ್ ವಿತ್ ರೇಶು' ಚಾನೆಲ್‌ನಲ್ಲಿ ಅನ್ನದಿಂದ ತಯಾರಿಸಬಹುದಾದ ಒಂದು ರುಚಿಕರ ಪದಾರ್ಥವನ್ನು ತೋರಿಸಿದ್ದಾರೆ. ಈ ವೀಡಿಯೊದಲ್ಲಿ, ರೇಶು ಬೇಯಿಸಿದ ಅನ್ನದ ಸಹಾಯದಿಂದ ಗರಿಗರಿಯಾದ ಮತ್ತು ಕುರುಕುಲಾದ ಅಕ್ಕಿ ಪಾಪಡ್‌ಗಳನ್ನು ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ.

ಹಪ್ಪಳವಿಲ್ಲದೇ ಊಟವೇ ಅಪೂರ್ಣ
ಸರಳವಾದ ಪದಾರ್ಥಗಳ ಪಟ್ಟಿ ಮತ್ತು ಪಾಕವಿಧಾನದೊಂದಿಗೆ, ನೀವು ಇದನ್ನು ಮತ್ತೆ ಮತ್ತೆ ಮಾಡಿ ಸವಿಯಬಹುದು. ಪಾಪಡ್ ಅಥವಾ ಹಪ್ಪಳ ಊಟದಲ್ಲಿ ಇದ್ದರೆ ಒಂದು ತುತ್ತು ಹೆಚ್ಚೇ ಸೇವಿಸಬಹುದು. ಉಪ್ಪಿನಕಾಯಿ ರೀತಿಯೇ ಹಪ್ಪಳವೂ ಕೆಲವರಿಗೆ ಅಗತ್ಯವಾಗಿ ಬೇಕಿರುತ್ತದೆ. ಮದುವೆ ಮನೆಗಳಲ್ಲಿ, ಸಮಾರಂಭದ ಊಟಗಳಲ್ಲಿ ಹಪ್ಪಳವಿಲ್ಲದೇ ಊಟವೇ ಅಪೂರ್ಣ ಅನಿಸಿ ಬಿಡುತ್ತದೆ.

ಅನ್ನದ ಹಪ್ಪಳ ಮಾಡುವುದು ಹೇಗೆ?
ನಾವು ನೀವೆಲ್ಲಾ ಹೆಚ್ಚಾಗಿ ಉದ್ದಿನ ಹಪ್ಪಳವನ್ನು ಕರಿದು ತಿನ್ನುತ್ತೇವೆ. ಹೀಗೆ ಉದ್ದಿನ ಹಪ್ಪಳ ತಿಂದು ಬೇಜಾರಾಗಿದೆ ಎನ್ನುವವರು ಅನ್ನದ ಹಪ್ಪಳ ಕೂಡ ಮಾಡಿ ತಿನ್ನಬಹುದು. ಅಥವಾ ಅನ್ನ ತುಂಬಾ ಉಳಿದಿದೆ ಎನ್ನುವವರು ಸಹ ಅನ್ನವನ್ನು ಎಸೆಯದೇ ಈ ರೀತಿಯಾದ ಗರಿಗರಿ, ರುಚಿಕರವಾದ ಹಪ್ಪಳ ಮಾಡಿ ಸವಿಯಬಹುದು.

ಈ ಪಾಕವಿಧಾನ ಕೂಡ ತುಂಬಾ ಸರಳವಾಗಿದ್ದು, ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಕೆಲವೇ ಕೆಲವು ಮೂಲಭೂತ ವಸ್ತುಗಳನ್ನು ಉಪಯೋಗಿಸಿಕೊಂಡು ಅಕ್ಕಿ ಪಾಪಡ್ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು
ಅನ್ನ
ನೀರು
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಎಣ್ಣೆ

ಅನ್ನದ ಹಪ್ಪಳ ಮಾಡುವ ವಿಧಾನ
ಹಪ್ಪಳ ಮಾಡಲು ನೀವು ಅನ್ನವನ್ನು ತಕ್ಷಣದಲ್ಲಿ ತಯಾರಿಸಿ ಸಹ ಮಾಡಬಹುದು. ಇಲ್ಲ ಉಳಿದ ಅನ್ನದಲ್ಲೂ ತಯಾರಿಸಬಹುದು.
• ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ 4,5 ವಿಸಲ್ ಹೊಡೆಸಿ. ಅನ್ನವನ್ನು ಸ್ವಲ್ಪ ಮೆತ್ತಗೆ ಹುಗ್ಗಿಯ ರೀತಿ ಬೇಯಿಸಿಕೊಳ್ಳಬೇಕು. ಹೀಗಾಗಿ ದಿನನಿತ್ಯ ಅನ್ನ ಮಾಡಲು ವಿಸಲ್ ಹೊಡೆಸುವುದಕ್ಕಿಂತ ಹೆಚ್ಚು ಕುಕ್ಕರ್‌ನಲ್ಲಿ ಬೇಯಿಸಬೇಕು.

ಇದನ್ನೂ ಓದಿ: Weight Loss Tips: ಮನೆಯಲ್ಲಿ ಏಲಕ್ಕಿ ಇದೆಯಾ? ಹಾಗಿದ್ರೆ ಸುಲಭವಾಗಿ ತೂಕ ಇಳಿಸಬಹುದು!

• ಒಮ್ಮೆ ಅನ್ನ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಅನ್ನಕ್ಕೆ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಿ. ಉಪ್ಪು ಅನ್ನ ಎರಡು ಸರಿಯಾಗಿ ಹೊಂದಿಸಲು ಎರಡನ್ನೂ ಸೌಟಿನ ಸಹಾಯದಿಂದ ಸ್ಮ್ಯಾಶ್ ಮಾಡಿ. ಈ ಮಿಶ್ರಣವು ಸಿದ್ಧವಾದ ನಂತರ, ಸ್ವಲ್ಪ ಕೈಗೆ ಎಣ್ಣೆ ಹಚ್ಚಿಕೊಂಡು ಅನ್ನದ ಸಣ್ಣ ಸಣ್ಣ ಉಂಡೆ ಮಾಡಿ ಒಂದು ಪಾತ್ರೆಯಲ್ಲಿ ಇರಿಸಿಕೊಳ್ಳಿ.

ಎಷ್ಟು ದಿನ ಬಿಸಿಲಲ್ಲಿ ಒಣಗಿಸಬೇಕು?
• ಹೀಗೆ ಒಂದೊಂದೇ ಅನ್ನದ ಉಂಡೆಯನ್ನು ತೆಳುವಾದ ಪ್ಲಾಸ್ಟಿಕ್ ಮೇಲ ದುಂಡನೆಯದಾಗಿ ರೋಲಿಂಗ್ ಮಾಡಿ. ನಂತರ ಅದನ್ನು ಬಿಸಿಲಿನಲ್ಲಿ ಒಣಗಲು ಬಿಡಿ. ಈ ಅನ್ನದ ಪಾಪಡ್ ಅನ್ನು ಕನಿಷ್ಠ ಒಂದು ದಿನ ಬಿಸಿಲಿನಲ್ಲಿ ಒಣಗಲು ಬಿಡಿ.

ಇದನ್ನೂ ಓದಿ: Sweet Recipe: ಸಖತ್ ರುಚಿಕರ ಗೋಧಿ ಹಲ್ವಾ, 3 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ

ಹೀಗೆ ಹಸಿಯಿರದ ಚೆನ್ನಾಗಿ ಒಣಗಿಸಿದ ಅನ್ನದ ಪಾಪಡ್ ಅನ್ನು ನೀವು ಹೆಚ್ಚು ಹೆಚ್ಚು ತಯಾರಿಸಿಕೊಂಡು ಮಳೆಗಾಲಕ್ಕೂ ಸಹ ಸ್ಟೋರ್ ಮಾಡಿಡಬಹುದು. ಗಾಳಿಯಾಡದ ಡಬ್ಬಿಯಲ್ಲಿ 5-6 ತಿಂಗಳುಗಳಿಗಿಂತ ಹೆಚ್ಚು ಕಾಲ ಮನೆಯಲ್ಲಿಯೇ ತಯಾರಿಸಿದ ಈ ಗರಿಗರಿಯಾದ ಪಾಪಡ್‌ಗಳನ್ನು ಇರಿಸಬಹುದು. ನಂತರ ನಿಮಗೆ ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು.
Published by:guruganesh bhat
First published: