ಅತಿಥಿಗಳು (Guests) ಮನೆಗೆ ಬರ್ತಾರೆ ಅಂದ್ರೆ ಇಡೀ ಮನೆಯನ್ನು (Home) ಗುಡಿಸಿ, ಒರೆಸಿ, ಸ್ವಚ್ಛ (Clean) ಮಾಡಿ, ಸೋಫಾ ಕವರ್ ಚೇಂಜ್ ಮಾಡಿ, ರೂಮ್ (Room) ಚೆನ್ನಾಗಿ ಕಾಣಲು ಒಂದೆರಡು ಬೊಕ್ಕೆ ಇರಿಸಿ, ಅಲ್ಲಲ್ಲಿ ಬಿಸಾಕಿದ್ದ ಸಾಮಾನುಗಳನ್ನ ನೀಟಾಗಿ ಜೋಡಿಸಿ, ಮಾರ್ಕೆಟ್ ನಿಂದ ತಂದ ರೂಮ್ ಫ್ರೆಶನರ್ಸ್ ನ್ನು ಸ್ಪ್ರೇ ಮಾಡಿ, ಘಂ ಎನ್ನುವ ವಾಸನೆಯೊಂದಿಗೆ ಅಥಿತಿಗಳನ್ನು ಸ್ವಾಗತಿಸಲು ಜನರು (People) ರೆಡಿ ಆಗ್ತಾರೆ. ಅದಾಗ್ಯೂ ಕೆಲವೊಮ್ಮೆ ಮನೆಯಲ್ಲಿ ಕೆಟ್ಟದಾಗಿ ಬರುವ ವಾಸನೆ (Bad Smell) ಕಡಿಮೆ ಮಾಡುವುದು ಹೇಗೆ ಅಂತಾ ಗೊತ್ತಾಗಲ್ಲ. ಇದಕ್ಕಾಗಿ ನೀವು ದುಬಾರಿ ಉತ್ಪನ್ನಗಳನ್ನು ಕೊಂಡು ತಂದು ಬಳಸುವ ಬದಲು ಮನೆಯಲ್ಲೇ ನೈಸರ್ಗಿಕವಾಗಿ ರೂಮ್ ಫ್ರೆಶನರ್ಸ್ ತಯಾರಿಸಿಕೊಳ್ಳಬಹುದು.
ಮನೆಯಲ್ಲೇ ನೈಸರ್ಗಿಕವಾಗಿ ರೂಮ್ ಫ್ರೆಶನರ್ಸ್ ತಯಾರಿಸುವುದು ಹೇಗೆ?
ಈ ನೈಸರ್ಗಿಕ ವಿಧಾನವು ಯಾವುದೇ ರಾಸಾಯನಿಕ ಹೊಂದಿರುವುದಿಲ್ಲ. ಮನೆಯಲ್ಲಿ ದುರ್ಗಂಧವೂ ದೂರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರೂಮ್ ಫ್ರೆಶ್ನರ್ ಹಾಕುವುದು ತುಂಬಾ ಟ್ರೆಂಡ್ ನಲ್ಲಿದೆ. ಮಾರುಕಟ್ಟೆಯಲ್ಲಿ ಹಲವು ತರಹದ ಏರ್ ಫ್ರೆಶ್ನರ್ ಸ್ಪ್ರೇಗಳು ಲಭ್ಯ ಇವೆ.
ಈ ದುಬಾರಿ ಏರ್ ಫ್ರೆಶ್ನರ್ ಸ್ಪ್ರೇಗಳಲ್ಲಿ ರಾಸಾಯನಿಕವಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಬದಲು ನೀವು ಮನೆಯಲ್ಲೇ ನೈಸರ್ಗಿಕವಾಗಿ ರೂಮ್ ಏರ್ ಫ್ರೆಶ್ನರ್ ಸ್ಪ್ರೇ ತಯಾರಿಸಿ, ಬಳಸುವುದು ಉತ್ತಮ ಪರಿಹಾರವಾಗಿದೆ. ಇವು ಮನೆಯನ್ನು ನೈಸರ್ಗಿಕ ಮತ್ತು ವಿಶಿಷ್ಟವಾದ ಸುಗಂಧ ನೀಡುತ್ತವೆ.
ಕಾಫಿ ಪುಡಿ
ರಿಫ್ರೆಶ್ ಕಾಫಿ ವಾಸನೆಯು ಸಹ ನೈಸರ್ಗಿಕ ಡಿಯೋ ಆಗಿ ಕೆಲಸ ಮಾಡುತ್ತದೆ. ಇದು ಈರುಳ್ಳಿ, ಬೆಳ್ಳುಳ್ಳಿಯ ಕಟುವಾದ ವಾಸನೆ ಹೋಗಲಾಡಿಸುತ್ತದೆ. ಕಸದ ವಾಸನೆ ದೂರವಿಡಲು, ಅಡುಗೆ ಮನೆಯ ಡಸ್ಟ್ ಬಿನ್ ನಲ್ಲಿ ಕಾಫಿ ಪುಡಿ ಇರಿಸಿ.
ಸಿಟ್ರಸ್ ಹಣ್ಣು
ಸಿಟ್ರಸ್ ಹಣ್ಣುಗಳಿಂದ ಮಾಡಿದ ರೂಮ್ ಫ್ರೆಶ್ನರ್ ಕೆಟ್ಟ ಬಾತ್ರೂಮ್ ಮತ್ತು ಅಡಿಗೆ ವಾಸನೆ ತೊಡೆದು ಹಾಕುತ್ತದೆ. 5 ಹನಿ ಕಾಡು ಕಿತ್ತಳೆ ಸಾರಭೂತ ತೈಲ ಮತ್ತು ನಿಂಬೆ ಸಾರಭೂತ ತೈಲ ನೀರಿನಲ್ಲಿ ಮಿಶ್ರಣ ಮಾಡಿ. ಈಗ ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಮನೆಯಲ್ಲೆಲ್ಲಾ ಚಿಮುಕಿಸಿ.
ಪಾಟ್ಪುರಿ
ಪಾಟ್ಪುರಿ ಸುಗಂಧಕ್ಕಾಗಿ ಬಳಸುತ್ತಾರೆ. ಎಲೆಗಳು ಮತ್ತು ಮಸಾಲೆಗಳನ್ನು ಒಣಗಿಸಿ, ಒಣಗಿದ ಹಣ್ಣುಗಳು, ಗಿಡಮೂಲಿಕೆಗಳು, ಮಸಾಲೆ ತೆಗೆದುಕೊಳ್ಳಿ. ಪರಿಮಳದ ಕೆಲವು ಹನಿ ಸಾರಭೂತ ತೈಲ ಮಿಶ್ರಣ ಮಾಡಿ ಮತ್ತು ಕೋಣೆಯಲ್ಲಿ ಪಾತ್ರೆಯಲ್ಲಿ ಇರಿಸಿ.
ಏರ್ ಫ್ರೆಶ್ನರ್ ಜೆಲ್
ಮನೆಯಲ್ಲಿ ಏರ್ ಫ್ರೆಶ್ನರ್ ಜೆಲ್ ತಯಾರು ಮಾಡಲು ನೀವು ಮಲ್ಲಿಗೆ, ತುಳಸಿ, ಕಿತ್ತಳೆ ಸಾರಭೂತ ತೈಲಗಳ ಜೊತೆಗೆ ಜೆಲಾಟಿನ್ ತೆಗೆದುಕೊಳ್ಳಿ. ಜೊತೆಗೆ ಅದನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬಳಕೆ ಮಾಡಿ.
ಅಡಿಗೆ ಸೋಡಾ ಮತ್ತು ದಾಲ್ಚಿನ್ನಿ ರೂಮ್ ಫ್ರೆಶನರ್ ತಯಾರಿಸುವುದು ಹೇಗೆ?
ಅಡಿಗೆ ಸೋಡಾ ಮತ್ತು ದಾಲ್ಚಿನ್ನಿ ಬಳಕೆಯು ರೂಮಿನಲ್ಲಿ ಹರಡಿದ ಕೆಟ್ಟ ರೀತಿಯ ವಾಸನೆ ತೊಡೆದು ಹಾಕಲು ಸಹಕಾರಿ ಆಗಿದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಪ್ರತಿದಿನ ಮನೆಯಲ್ಲಿ ಅಡಿಗೆ ಸೋಡಾ ಮತ್ತು ದಾಲ್ಚಿನ್ನಿಯಿಂದ ತಯಾರಿಸಿದ ರೂಮ್ ಫ್ರೆಶ್ನರ್ ಸಿಂಪಡಿಸಿ.
ಇದನ್ನೂ ಓದಿ: ದೇಹದ ಆರೋಗ್ಯ ಕಾಪಾಡುವ ಸೌತೆಕಾಯಿ ಸೌಂದರ್ಯವನ್ನೂ ಹೆಚ್ಚಿಸುತ್ತದೆ!
ಇದನ್ನು ತಯಾರಿಸುವುದು ಹೇಗೆ?
ಒಂದು ಸ್ಪ್ರೇ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ನೀರು ಹಾಕಿ. ಅಡಿಗೆ ಸೋಡಾ ಮತ್ತು ದಾಲ್ಚಿನ್ನಿ ಸೇರಿಸಿ. ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ದಾಲ್ಚಿನ್ನಿ ಬದಲಿಗೆ ಕಿತ್ತಳೆ ಪುಡಿ ಸಹ ಬಳಕೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ