Natural Soap Recipe: ರಾಸಾಯನಿಕ ಇಲ್ಲದ ಸೋಪ್-ಶ್ಯಾಂಪುಗಳನ್ನ ಮನೆಯಲ್ಲೇ ತಯಾರಿಸಿ, ಈ ರೀತಿ ಮಾಡಿ ಸಾಕು

ಆಯುರ್ವೇದದಲ್ಲಿ ತನ್ನದೇ ಪ್ರತ್ಯೇಕತೆಯನ್ನು ಹೊಂದಿರುವ ಅಂಟುವಾಳ ನೊರೆಕಾಯಿಯೆಂದೇ ಗ್ರಾಮೀಣ ಭಾಗಗಳಲ್ಲಿ ಹೆಸರುವಾಸಿಯಾದುದು. ನೊರೆಕಾಯಿಯನ್ನು ಬಳಸಿಕೊಂಡು ನೈಸರ್ಗಿಕ ಶ್ಯಾಂಪೂ ತಯಾರಿಸಬಹುದು. ಯಾವುದೇ ಅಡ್ಡಪರಿಣಾಮಗಳನ್ನು ಅಂಟುವಾಳ ಕಾಯಿ ಹೊಂದಿಲ್ಲ. ಅಂತೆಯೇ ಡ್ಯಾಂಡ್ರಫ್‌ನಂಹ ಸಮಸ್ಯೆಗಳನ್ನು ದೂರಮಾಡುವಲ್ಲಿ ಅಂಟುವಾಳ ಕಾಯಿಯ ಪಾತ್ರ ಹಿರಿದಾದುದು.

ನೈಸರ್ಗಿಕ ವಸ್ತುಗಳನ್ನು ಮನೆಯಲ್ಲೇ ಸೋಪು ತಯಾರಿ

ನೈಸರ್ಗಿಕ ವಸ್ತುಗಳನ್ನು ಮನೆಯಲ್ಲೇ ಸೋಪು ತಯಾರಿ

 • Share this:

ತಮ್ಮ ಅಜ್ಜಿ ಹಾಗೂ ತಂದೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ಬಲಿಯಾದಾಗ ಪದ್ಮ ಶಂಕರ್ (Padma Shankar) (ಡಿಜಿಟಲ್ ಜಗತ್ತು ಇವರನ್ನು ಪದು ಶಂಕರ್ ಎಂದೇ ಕರೆಯುತ್ತಾರೆ) ಒಮ್ಮೆಲೆ ಸ್ತಂಭೀಭೂತರಾದರು. ತಮಿಳು ನಾಡು (Tamil Nadu) ಮೂಲದ 50 ರ ಹರೆಯದ ಪದ್ಮ ಶಂಕರ್ ಒಂದೇ ಕಾಯಿಲೆ (disease) ತಮ್ಮ ಮನೆಯ ಸದಸ್ಯರನ್ನು ಬಲಿ ತೆಗೆದುಕೊಂಡಾಗ ಆಘಾತಕ್ಕೆ ಒಳಗಾಗಿದ್ದರು. ಆದರೆ ಇದಕ್ಕೆ ಕಾರಣವೇನು ಎಂಬುದನ್ನು ಅನ್ವೇಷಿಸಲು ಪದ್ಮ ಮರೆಯಲಿಲ್ಲ. ಈ ಕಾಯಿಲೆ ಬರುವುದಾದರೂ ಹೇಗೆ ಮತ್ತು ನಮ್ಮ ಜೀವನ ಶೈಲಿಗಳು (Life Style) ಈ ರೋಗಕ್ಕೆ ಹೇಗೆ ಕಾರಣವಾಗಿದೆ ಎಂಬುದರತ್ತ ಇವರು ತಮ್ಮ ಶೋಧನೆಗಳನ್ನು ನಡೆಸಿದರು.


ಹಲವಾರು ಇಂಟರ್ನೆಟ್ ಹುಡುಕಾಟಗಳು, ಸ್ನೇಹಿತರೊಂದಿಗೆ ಚರ್ಚೆಗಳು ಹಾಗೂ ಅವರದ್ದೇ ಆದ ವೀಕ್ಷಣೆಗಳನ್ನು ಆಧರಿಸಿ ನಡೆಸಿದ ಸಂಶೋಧನೆಗಳಿಂದ ಪದ್ಮ ಅವರು ಕ್ಯಾನ್ಸರ್‌ ಉಂಟಾಗಲು ಕಾರಣಗಳೇನು ಎಂಬುದನ್ನು ಸುದ್ದಿಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.


ನೈಸರ್ಗಿಕ ವಸ್ತುಗಳನ್ನು ಮನೆಯಲ್ಲೇ ಸೋಪು ತಯಾರಿಸುವ ಪದ್ಮ
ದೈನಂದಿನ ಜೀವನದಲ್ಲಿ ಹೆಚ್ಚಾಗಿ ರಾಸಾಯನಿಕ ಪದಾರ್ಥಗಳಿಗೆ ನಾವು ಅವಲಂಬಿತರಾಗಿರುವುದೇ ಇದಕ್ಕೆ ಕಾರಣ ಎಂಬುದು ಪದ್ಮ ವಿಚಾರವಾಗಿದೆ. ಯಾವುದೇ ಆರಂಭ ನಮ್ಮಿಂದಲೇ ಪ್ರಾರಂಭವಾಗಬೇಕು ಎಂಬ ನಿಟ್ಟಿನಲ್ಲಿ ಪದ್ಮ ತಮ್ಮ ಮನೆಯಲ್ಲಿರುವ ಟಾಯ್ಲೆಟ್ ಕ್ಲೀನರ್‌ಗಳು, ಡಿಟರ್ಜೆಂಟ್‌ಗಳು, ಪಾತ್ರೆ ತೊಳೆಯುವ ಲಿಕ್ವಿಡ್‌ಗಳಿಗೆ ಪರ್ಯಾಯವಾದ ನೈಸರ್ಗಿಕ ವಸ್ತುಗಳನ್ನು ಬಳಸಲು ನಿಶ್ಚಯಿಸಿದರು.ಪ್ರತಿಯೊಂದನ್ನು ನೈಸರ್ಗಿಕದೊಂದಿಗೆ ಬದಲಾಯಿಸಲು ನಿಶ್ಚಯಿಸಿದ ಪದ್ಮ, ಇನ್ನಷ್ಟು ಸುಸ್ಥಿರ ಜೀವನ ನಡೆಸುವೆಡೆಗೆ ಮುನ್ನಡೆಯಲು ತೀರ್ಮಾನಿಸಿದರು. ವ್ಯರ್ಥವಾಗುವುದನ್ನು ಉಳಿಸಲು ಅವರು ಕಾಗದದ ಮರುಬಳಕೆ ಮಾಡಲಾರಂಭಿಸಿದರು. ಹಳೆಯ ಬಟ್ಟೆಗಳನ್ನು ಧೂಳು ಸ್ವಚ್ಛಗೊಳಿಸುವ ಪರಿಕರವನ್ನಾಗಿ ಬಳಸಿದರು. ತರಕಾರಿ ಸಿಪ್ಪೆಗಳಿಂದ ಬೇರೆ ಬೇರೆ ಖಾದ್ಯಗಳ ತಯಾರಿ ಮಾಡಲಾರಂಭಿಸಿದರು.


ಇತರರೊಡನೆ ಪಾಕವಿಧಾನಗಳನ್ನು ಹಂಚಿಕೊಂಡರು
ಪಧು ಸ್ವತಃ ತಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡಾಗ ಅದನ್ನು ಇತರರೊಡನೆ ಹಂಚಿಕೊಳ್ಳುವ ಆಲೋಚನೆ ಮಾಡಿದರು. ಅದಕ್ಕಾಗಿ ಪಧು ಸ್ಕೆಚ್ ವೆಬ್‌ಸೈಟ್ ಆರಂಭಿಸಿದರು. ಈ ವೆಬ್‌ಸೈಟ್‌ನಲ್ಲಿ ತಮ್ಮ ಪಾಕವಿಧಾನಗಳು, ಆರೋಗ್ಯಕರ ಜೀವನಶೈಲಿ, ಪರಿಸರ ಸ್ನೇಹಿ ಜೀವನದ ಸಲಹೆಗಳ ಕುರಿತು ಮಾತನಾಡಿದರು. ಹೀಗೆ ಇವರು ನೀಡುತ್ತಿದ್ದ ಸಲಹೆಗಳನ್ನು ಮೆಚ್ಚುತ್ತಿದ್ದವರು ಅದೆಷ್ಟೋ ಮಂದಿ. ಅವರ ಪ್ರೇಕ್ಷಕರ ಸಲಹೆಯ ಮೇರೆಗೆ ಪದು ಯೂಟ್ಯೂಬ್ ಚಾನಲೆ ಒಂದನ್ನು ಆರಂಭಿಸಿದರು. ಇಂದು ಯೂಟ್ಯೂಬ್ ಚಾನಲ್‌ನಲ್ಲಿ ಅವರು 1,25,000 ಚಂದಾದಾರರನ್ನು ಹೊಂದಿದ್ದಾರೆ. ತಾವು ಮಾಡಿಕೊಂಡ ಜೀವನ ಶೈಲಿಯ ಬದಲಾವಣೆಗಳನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳಲು ಪದು ಬಯಸಿದ್ದರು. ಹಾಗೆಯೇ ಅವರ ವೆಬ್‌ಸೈಟ್ ಮತ್ತು ಚಾನಲ್‌ಗಳು ಇಂದು ಕಾರ್ಯತತ್ಪರವಾಗಿದೆ. ಪದು ಅವರ ಸಲಹೆಗಳಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದು ಅಂಟುವಾಳ ಕಾಯಿ.
ಇದನ್ನೂ ಓದಿ:  Coconut Shell Idli: ನಂಬಿದ್ರೆ ನಂಬಿ, ತೆಂಗಿನ ಚಿಪ್ಪಿನಲ್ಲಿಯೂ ಇಡ್ಲಿ ಮಾಡಬಹುದು!

ಆಯುರ್ವೇದದಲ್ಲಿ ತನ್ನದೇ ಪ್ರತ್ಯೇಕತೆಯನ್ನು ಹೊಂದಿರುವ ಅಂಟುವಾಳ ನೊರೆಕಾಯಿಯೆಂದೇ ಗ್ರಾಮೀಣ ಭಾಗಗಳಲ್ಲಿ ಹೆಸರುವಾಸಿಯಾದುದು. ನೊರೆಕಾಯಿಯನ್ನು ಬಳಸಿಕೊಂಡು ನೈಸರ್ಗಿಕ ಶ್ಯಾಂಪೂ ತಯಾರಿಸಬಹುದು. ಯಾವುದೇ ಅಡ್ಡಪರಿಣಾಮಗಳನ್ನು ಅಂಟುವಾಳ ಕಾಯಿ ಹೊಂದಿಲ್ಲ. ಅಂತೆಯೇ ಡ್ಯಾಂಡ್ರಫ್‌ನಂಹ ಸಮಸ್ಯೆಗಳನ್ನು ದೂರಮಾಡುವಲ್ಲಿ ಅಂಟುವಾಳ ಕಾಯಿಯ ಪಾತ್ರ ಹಿರಿದಾದುದು. ಈ ಅಂಟುವಾಳ ಕಾಯಿಯ ಚಿಪ್ಪು ನೊರೆಯಿಂದ ಕೂಡಿದ್ದು ಸ್ವಚ್ಛತಾ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇದನ್ನು ನೈಸರ್ಗಿಕ ಡಿಟರ್ಜೆಂಟ್ ಆಗಿ ಹೇಗೆ ಬಳಸಬಹುದು ಎಂಬುದನ್ನು ಪದು ತೋರಿಸಿದರು.


ಅಂಟುವಾಳಕಾಯಿಗಳಿಂದ ಪಾತ್ರೆ ತೊಳೆಯುವ ಡಿಟರ್ಜೆಂಟ್
 • 15-20 ಅಂಟುವಾಳ ಕಾಯಿಗಳನ್ನು ಆರು ಕಪ್‌ಗಳಷ್ಟು ಬಿಸಿ ನೀರಿನಲ್ಲಿ ರಾತ್ರಿ ನೆನೆಸಿಡಿ

 • ಮರುದಿನ ಇದನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ

 • ಕುದಿಯಲು ಆರಂಭಗೊಂಡಂತೆ ಸಣ್ಣ ಉರಿಯಲ್ಲಿ 30 ನಿಮಿಷ ಹಾಗೆಯೇ ಬಿಡಿ

 • ನಂತರ ಇದನ್ನು ಸಂಪೂರ್ಣವಾಗಿ ತಣಿಸಿ

 • ತಣಿದ ನಂತರ ಬೀಜಗಳನ್ನು ಹೊರತೆಗೆಯಿರಿ ಹಾಗೂ ಬೆರಳುಗಳಿಂದ ಕಾಯಿಗಳನ್ನು ಹಿಜುಕಿ

 • ಹೀಗೆ ಬಂದ ದ್ರಾವಣವನ್ನು ಬಾಟಲಿಯಲ್ಲಿ ತೆಗೆದಿಡಿ

 • 5-6 ದಿನಗಳೊಳಗೆ ಬಳಸಿ ಇಲ್ಲವೇ ಫ್ರಿಡ್ಜ್‌ನಲ್ಲಿರಿಸಿ


ಅಂಟುವಾಳದ ದ್ರವವು ಬಹುಪಯೋಗಿ ಕ್ಲೀನರ್ ಆಗಿದೆ ಎನ್ನುವ ಪದು, "ಟೈಲ್ಸ್, ಕಟ್ಲರಿ, ಗಾಜು, ಆಭರಣಗಳು, ಕಾರ್ ವಾಶ್‌ನಂತೆ, ನೆಲವನ್ನು ಒರೆಸಲು, ಸಾಕುಪ್ರಾಣಿಗಳ ಶಾಂಪೂ, ಪಾತ್ರೆ, ಬಟ್ಟೆ ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಇದನ್ನು ಬಳಸಬಹುದು ಎನ್ನುತ್ತಾರೆ.


ಅಂಟುವಾಳಗಳನ್ನು ಮರುಬಳಕೆ ಮಾಡಬಹುದು ಮತ್ತು ಮೂರರಿಂದ ನಾಲ್ಕು ಬಾರಿ ಅಥವಾ ಅವು ವಿಭಜನೆಯಾಗುವವರೆಗೆ ಮತ್ತೆ ಕುದಿಸಬಹುದು ಎಂದು ಅವರು ಹೇಳುತ್ತಾರೆ.


ಬಳಸಿದ ಅಂಟುವಾಟಗಳನ್ನು ಎಸೆಯಬೇಡಿ ಎಂದು ಸಲಹೆ ನೀಡುವ ಪದು ಅವುಗಳನ್ನು ಗೊಬ್ಬರದಂತೆ ಬಳಸಬಹದು ಎಂದು ಸಲಹೆ ನೀಡುತ್ತಾರೆ.


ಬಟ್ಟೆ ಒಗೆಯುವ ಸೋಪು
ಅಂಟುವಾಳ ಕಾಯಿಗಳನ್ನು ತಮ್ಮ ಮನೆಗಳಲ್ಲಿ ಪದು ಇತ್ತೀಚೆಗೆ ಬಳಸುತ್ತಿಲ್ಲ ಅವರಜ್ಜಿ ಈ ನೊರೆಕಾಯಿಗಳನ್ನು ಬಳಸಿ ರೇಷ್ಮೆ ಸೀರೆಗಳನ್ನು ಒಗೆಯುತ್ತಿದ್ದರು ಹಾಗೂ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಇನ್ನು ಇದು ಯಾವುದೇ ರಾಸಾಯನಿಕಗಳನ್ನು ಹೊಂದಿಲ್ಲ ಹಾಗೆಯೇ ಇದರ ನೊರೆಗಳನ್ನು ತೆಗೆಯಲು ಕಡಿಮೆ ನೀರು ಸಾಕು.


ಬಟ್ಟೆ ಒಗೆಯುವ ಡಿಟರ್ಜೆಂಟ್‌ನಂತೆ ನೊರೆಕಾಯಿಯನ್ನು ಬಳಸುವುದು ಹೇಗೆ

 • 8-10 ನೊರೆಕಾಯಿಗಳನ್ನು ಹಳೆಯ ಕಾಲುಚೀಲದಲ್ಲಿ ಹಾಕಿ.

 • ಕಾಲುಚೀಲಗಳ ತುದಿಗೆ ಗಂಟು ಹಾಕಿ ಇದರಿಂದ ಕಾಯಿಗಳು ಒಗೆಯುವ ಸಮಯದಲ್ಲಿ ಹೊರಬರುವುದಿಲ್ಲ.

 • ಒಂದು ಕಪ್‌ನಷ್ಟು ನೀರು ಕುದಿಸಿ. ಇದು ಕುದಿದ ನಂತರ ಬಿಸಿಯಿಂದ ಹೊರತೆಗೆಯಿರಿ ಹಾಗೂ ನೊರೆಕಾಯಿಗಳೊಂದಿಗೆ ಸಾಕ್ಸ್ ಅನ್ನು ನೆನೆಸಿ.

 • 15 ನಿಮಿಷ ಹಾಗೆಯೇ ಬಿಡಿ ತಣ್ಣಗಾಗಲಿ.

 • ನೀರಿನೊಂದಿಗೆ ಅಂಟುವಾಳ ಕಾಯಿ ಇರುವ ಸಾಕ್ಸ್‌ಗಳನ್ನು ವಾಶಿಂಗ್ ಮೆಶೀನ್‌ಗೆ ಹಾಕಿ ದೈನಂದಿನ ರೀತಿಯಲ್ಲಿ ಒಗೆಯಿರಿ.

 • ಬೇಕಾದರೆ ನಿಮ್ಮಿಷ್ಟದ ಎಸನ್ಶಿಯಲ್ ತೈಲವನ್ನು ಬಳಸಬಹುದು.

 • ನೊರೆಕಾಯಿಗಳನ್ನು ಹಿಂದಿನ ರಾತ್ರಿ ಸೋಕ್ಸ್‌ನಲ್ಲಿ ನೆನೆಸಬಹುದು ಹಾಗೂ ಕುದಿಸದಿದ್ದರೆ ಆಯಿತು.

 • ಒಮ್ಮೆ ತೊಳೆದಾದ ಬಳಿಕ ಸಾಕ್ಸ್‌ನಿಂದ ಅಂಟುವಾಳ ಕಾಯಿಗಳನ್ನು ಹೊರತೆಗೆಯಿರಿ ಮತ್ತು ಒಣಗಿಸಿ.


ಇದನ್ನೂ ಓದಿ:   Himalayan Fig: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

ಇದು ನೈಸರ್ಗಿಕವಾಗಿರುವುದರಿಂದ ಈ ದ್ರಾವಣವನ್ನು ಹೆಚ್ಚು ಸಮಯ ಇರಿಸಲಾಗುವುದಿಲ್ಲ ಎಂದು ಪದು ಹೇಳುತ್ತಾರೆ. ಸಿಟ್ರಸ್ ಬಯೋ ಎಂಜೀಮ್‌ಗಳೊಂದಿಗೆ ಇದನ್ನು ಮಿಶ್ರ ಮಾಡುವುದರಿಂದ ಇದು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಪದು ಹೇಳುತ್ತಾರೆ.

Published by:Ashwini Prabhu
First published: