Sunday Special: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿ ಮಟನ್ ಸುಕ್ಕಾ ಮಾಡುವುದು ಹೇಗೆ..?

Mutton sukka: ಮನೆಯಲ್ಲಿ ವಿಭಿನ್ನವಾದ ಅಡುಗೆ ಮಾಡಬೇಕು ಎಂದುಕೊಳ್ಳುತ್ತಿರುವವರು ಚಿಕನ್ ಸಾಂಬಾರ್ ಚಿಕನ್ ಬಿರಿಯಾನಿ ಬಿಟ್ಟು ಈ ವಾರ ಮನೆಯಲ್ಲಿ ರುಚಿರುಚಿಯಾದ ಮಟನ್ ಸುಕ್ಕಾ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ

ಮಟನ್ ಸುಕ್ಕಾ

ಮಟನ್ ಸುಕ್ಕಾ

  • Share this:
    ಭಾನುವಾರ(Sunday) ಬಂತು ಅಂದರೆ, ನಾನ್ ವೆಜ್(Non-Veg) ಪ್ರಿಯರಿಗೆ ಹಬ್ಬ. ರಜೆ ದಿನ ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ(Biriyani) ಕನಸು(Dream) ಕಾಣುವುದು ಕಾಮನ್
    .. ಮಾಂಸಾಹಾರಿಗಳಿಗೆ ತಮಗಿಷ್ಟವಾದ ಊಟ(Meal) ತಿನ್ನಲು ವಾರದ ಮಿತಿ ಇಲ್ಲದಿದ್ದರೂ ವೀಕೆಂಡ್​​​​​ನಲ್ಲಿ(Weekend) ತಮ್ಮ ಪ್ರೀತಿಪಾತ್ರರೊಂದಿಗೆ ಕುಳಿತು ವೆರೈಟಿ ಅಡುಗೆ(Food) ಮಾಡಿ ತಿಂದರೆ ಅದರ ಮಜಾನಾ ಬೇರೆ.ಹೀಗಾಗಿ ಹೆಚ್ಚಿನ ಜನರು ಭಾನುವಾರದ ಸಮಯದಲ್ಲಿ(Time) ಪ್ರೀತಿ ಪಾತ್ರರೊಂದಿಗೆ ನೆಚ್ಚಿನ ಹೋಟೆಲ್ಗಳಿಗೆ(Hotel) ಹೋಗಿ ವೆರೈಟಿ ವೆರೈಟಿ ಬಾಡೂಟ ಮಾಡಲು ಇಷ್ಟಪಡುತ್ತಾರೆ.. ಆದರೆ ಇನ್ನೂ ಕೆಲವರು ಮಾತ್ರ ಮನೆಯಲ್ಲಿಯೇ (Home)ಕುಳಿತು ರುಚಿರುಚಿಯಾಗಿ ವಿಭಿನ್ನವಾದ ಅಡುಗೆ ಗಳನ್ನು ತಯಾರಿಸಿ ತಮ್ಮ ಕುಟುಂಬದವರಿಗೂ(Family) ತಿನ್ನಿಸಿ ತಾವು ತಿಂದು ತಮ್ಮ ಭಾನುವಾರವನ್ನು ಮತ್ತಷ್ಟು ವಿಭಿನ್ನವಾಗಿಯೇ ಕಳೆಯಲು ಇಷ್ಟಪಡುತ್ತಾರೆ..

    ಹೀಗಾಗಿ ಕೆಲವು ಮಾಂಸಹಾರಿ ಪ್ರಿಯರು ಹೋಟೆಲ್ ಗಳತ್ತ ಮುಖ ಮಾಡಿದರೆ ಇನ್ನು ಕೆಲವರು, ಮನೆಯಲ್ಲಿ ರುಚಿರುಚಿಯಾದ ಮಾಂಸಾಹಾರಿ ಖಾದ್ಯ ತಯಾರಿಸಲು ಮಾಂಸದ ಅಂಗಡಿಗಳತ್ತ ತೆರಳಿ ಫ್ರೆಶ್ ಆಗಿರುವ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಹೀಗಾಗಿ ಇಂದು ಮನೆಯಲ್ಲಿ ವಿಭಿನ್ನವಾದ ಅಡುಗೆ ಮಾಡಬೇಕು ಎಂದುಕೊಳ್ಳುತ್ತಿರುವವರು ಚಿಕನ್ ಸಾಂಬಾರ್ ಚಿಕನ್ ಬಿರಿಯಾನಿ ಬಿಟ್ಟು ಈ ವಾರ ಮನೆಯಲ್ಲಿ ರುಚಿ ರುಚಿಯಾದ ಮಟನ್ ಸುಕ್ಕಾ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ .

    ಮಟನ್ ಸುಕ್ಕಾ ಮಾಡಲು ಬೇಕಾಗುವ ಸಾಮಗ್ರಿಗಳು

    * ಮಟನ್ – 1ಕೆಜಿ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಮೆಣಸಿನಪುಡಿ – 4 ಚಮಚ
    * ಟೊಮೆಟೋ – 4
    * ಅರಿಶಿಣ- 1 ಚಮಚ
    * ಅಡುಗೆ ಎಣ್ಣೆ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ತುಪ್ಪಾ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    *ಕಾಳು ಮೆಣದಸು -ಸ್ವಲ್ಪ

    ಇದನ್ನೂ ಓದಿ: ಬೆಳಗಿನ ತಿಂಡಿಗೆ ರುಚಿ-ರುಚಿಯಾದ ಅವರೆಕಾಯಿ ದೋಸೆ ಟ್ರೈ ಮಾಡಿ, ಇಲ್ಲಿದೆ ರೆಸಿಪಿ

    ಮಟನ್ ಸುಕ್ಕಾ ಮಾಡುವ ವಿಧಾನ

    ನೀವು ಭಾನುವಾರದ ಬಾಡೂಟ ಮಾಡಲು ಮಟನ್ ಸುಕ್ಕ ಮಾಡಿಕೊಳ್ಳಲು ಅಂಗಡಿಯಿಂದ ತಂದ ಮಟನ್ ನ್ನು ಮನೆಗೆ ಬಂದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಕಾಲ ನೆನೆಸಿಡಿ. ಬಳಿಕ ಅದಕ್ಕೆ ಚಿಟಿಕೆ ಉಪ್ಪು ಹಾಗೂ ಅರಿಶಿಣ ಹಾಕಿ ಒಂದು ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಕುಕ್ಕರ್ ಗೆ ಮಟನ್ ಉಪ್ಪು ಅರಿಶಿನ ಕೊತ್ತಂಬರಿ ಸೊಪ್ಪು ಹಾಗೂ ಕೊಂಚ ತುಪ್ಪ ಸೇರಿಸಿ ನಾಲ್ಕರಿಂದ ಐದು ವಿಜಲ್ ಬರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.

    ಬೆಂದ ಮಟನ್ ವಿಜಲ್ ಆರಲು ಬಿಡಿ.. ನಂತರ ಮಿಕ್ಸಿಯಲ್ಲಿ ಚೆನ್ನಾಗಿ ಟೊಮೊಟೊವನ್ನು ರುಬ್ಬಿ ಇಟ್ಟುಕೊಳ್ಳಿ.. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಕುಕ್ಕರ್ನಲ್ಲಿ ಬೇಯಿಸಿಟ್ಟುಕೊಂಡ ಮಾಂಸ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಬ್ಬಿಟ್ಟುಕೊಂಡಿದ್ದ ಟೊಮೆಟೋ ಪೇಸ್ಟ್, ಸೇರಿಸಿ ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ.. ಹೀಗೆ ಬೇಯಿಸುವಾಗ ಅಡುಗೆ ಎಣ್ಣೆ ತುಪ್ಪ ಕೊತ್ತಂಬರಿ ಸೊಪ್ಪು ಸಹ ಹೆಚ್ಚಿಗೆ ಸೇರಿಸಿ..

    ಇದನ್ನೂ ಓದಿ: ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್​ ಉಪ್ಪಿಟ್ಟು ರೆಸಿಪಿ

    ಇನ್ನು ಮಟನ್ ಗಟ್ಟಿಯಾಗುತ್ತಿರುವಾಗ ಅದರ ಮೇಲೆ ಕಾಳುಮೆಣಸಿನ ಪುಡಿ ಉದುರಿಸಿ , ಉರಿಯನ್ನು ಹೆಚ್ಚು ಮಾಡಿ. ಮಿಶ್ರಣ ಡ್ರೈ ರೀತಿಯಾದಾಗ ರುಚಿ ರುಚಿಯಾದ ಮಟನ್‌ ಸುಕ್ಕ ಖಾದ್ಯ ಸವಿಯಲು ಸಿದ್ಧವಾಗುತ್ತದೆ. ಹೀಗೆ ಮಾಡಿದ್ರೆ ನೀನು ಭಾನುವಾರದ ಬಾಡೂಟಕ್ಕೆ ಹೋಟೆಲ್ಗೆ ಹೋಗಿ ತಿನ್ನುವ ಬದಲು ನೀವು ಎಲ್ಲರ ಜೊತೆ ಕುಳಿತು ರುಚಿಯಾದ ಮಟನ್ ಸುಕ್ಕಾ ತಿನ್ನಬಹುದು.
    Published by:ranjumbkgowda1 ranjumbkgowda1
    First published: