Sunday Special: ಚಳಿಗಾಲದಲ್ಲಿ ಮನೆಯಲ್ಲಿಯೇ ತಯಾರಿಸಿ ಬಿಸಿಯಾದ ಕಾಲು ಸೂಪ್

Mutton Soup: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿಯಾದ ಹೀಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಟನ್‌ ಕಾಲು ಸೂಪು ವಾರಕ್ಕೊಮ್ಮೆ ಸೇವಿಸುವುದು ಉತ್ತಮ. ಚೆನ್ನಾಗಿ ಬೆಂದ ಕುರಿಯ ಕಾಲಿನಿಂದ ಬರುವ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ ಮದ್ದಿನ ಮೂಲವಾಗಿದೆ.

ಮಟನ್ ಸೂಪ್

ಮಟನ್ ಸೂಪ್

  • Share this:
    ಚಳಿಗಾಲದಲ್ಲಿ(Winter) ಬಿಸಿಯಾದ ಹಾಗೂ ಖಾರದ ಖಾದ್ಯಗಳನ್ನು(Food) ತಿನ್ನುವುದು ಇಷ್ಟವಾಗುತ್ತದೆ. ಅದರಲ್ಲೂ ಬಿಸಿ ಬಿಸಿ ಸೂಪ್‌(Soup) ಅಂತೂ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು. ಪ್ರತಿ ಭಾನುವಾರ(Sunday) ಹೇಗಿದ್ರು ಮನೆಯಲ್ಲಿ(Home) ನಾನ್‍ವೆಜ್(Non-veg) ಮಾಡುತ್ತೀರಾ . ಪ್ರತಿ ಸಂಡೇ, ಚಿಕನ್(Chicken), ಮಟನ್(Mutton), ಫಿಶ್(Fish) ತಿನ್ನುತ್ತೀರಾ. ಅದ್ರಲ್ಲೂ ಬಿರಿಯಾನಿ(Biryani), ಕಬಾಬ್, ಪ್ರೈ ಪ್ರತಿ ವಾರ ಮಾಡಿ ತಿಂತಾನೇ ಇರ್ತಿರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಮಟನ್ ಕಾಲ್ ಸೂಪ್ ಮಾಡಿ ಸವಿಯಿರಿ, ನಿಮ್ಮ ಚಳಿಗಾಲದ ಭಾನುವಾರವನ್ನ ಮತ್ತಷ್ಟು ಬೆಚ್ಚಗೆ ಇಡೀ.

    ಇನ್ನು ಈ ಮಟನ್ ಸೂಪ್ ನಲ್ಲಿ ಕ್ಯಾಲ್ಸಿಯಂ, ಪ್ರೋಟಿನ್‌, ಮಿನರಲ್ಸ್‌, ಅಮೀನೋ ಆಸಿಡ್ಸ್‌ ಅಂಶಗಳುಳ್ಳ, ಉರಿಯೂತ, ಅಲರ್ಜಿ ನಿವಾರಕ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿಯಾದ ಹೀಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಟನ್‌ ಕಾಲು ಸೂಪು ವಾರಕ್ಕೊಮ್ಮೆ ಸೇವಿಸುವುದು ಉತ್ತಮ. ಚೆನ್ನಾಗಿ ಬೆಂದ ಕುರಿಯ ಕಾಲಿನಿಂದ ಬರುವ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ ಮದ್ದಿನ ಮೂಲವಾಗಿದೆ.

    ಇದನ್ನೂ ಓದಿ: ಮಣ್ಣಿನ ಪಾತ್ರೆಯನ್ನು ಹೀಗೆ ಇಟ್ರೆ ಬೇಗ ಒಡೆಯಲ್ಲ

    ಮಟನ್ ಸೂಪ್ ಮಾಡಲು ಬೇಕಾಗುವ ಪದಾರ್ಥ..

    *ಮೇಕೆ ಕಾಲು- 4
    *ಶುಂಠಿ,
    *ಬೆಳ್ಳುಳ್ಳಿ- ಸ್ವಲ್ಪ
    *ಈರುಳ್ಳಿ - ಮೀಡಿಯಂ
    *ಕರಿಬೇವು- ಸ್ವಲ್ಪ
    *ಕೊತ್ತಂಬರಿ ಸೊಪ್ಪು-ಸ್ವಲ್ಪ
    *ಪುದೀನಾ- ಸ್ವಲ್ಪ
    *ಹಸಿಮೆಣಸಿನಕಾಯಿ- 3-4
    *ಟೊಮೆಟೋ- 1
    *ಕಾಳುಮೆಣಸು- ಸ್ವಲ್ಪ
    *ಜೀರಿಗೆ- ಸ್ವಲ್ಪ
    *ಎಣ್ಣೆ- ಸ್ವಲ್ಪ
    *ಸಾಸಿವೆ-ಸ್ವಲ್ಪ
    *ಅರಿಶಿನದಪುಡಿ-ಸ್ವಲ್ಪ
    *ತೆಂಗಿನಕಾಯಿ
    *ಉಪ್ಪು-ರುಚಿಗೆ ತಕ್ಕಷ್ಟು

    ಸೂಪ್ ತಯಾರಿಸುವ ವಿಧಾನ

    ಮೊದಲಿಗೆ ಅಂಗಡಿಯಿಂದ ತಂಡ ಮೇಕೆ ಕಾಲನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪ್ರೆಶರ್‌ ಕುಕ್ಕರ್‌ಗೆ ಹಾಕಿ ಇದಕ್ಕೆ ಅರಿಶಿನ ಪುಡಿ, ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ 5 ರಿಂದ 6 ಕಪ್ ನೀರು ಸೇರಿಸಿ 10 ರಿಂದ 15 ನಿಮಿಷಗಳ ಕಾಲ 2 ವಿಶಲ್ ಬರುವವರೆಗೂ ಬೇಯಿಸಿ

    ಮತ್ತೊಂದೆಡೆ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ. ತಣ್ಣಗೆ ಆದ ಮೇಲೆ ಒಂದು ಮಿಕ್ಸರ್ ಜಾರ್‍ಗೆ ಹಾಕಿ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಜೊತೆಗೆ ಧನಿಯಾ, ಅರಿಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

    ಇನ್ನು ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಅರೆ ಪಾರದರ್ಶಕವಾಗುವವರೆಗೆ ಬೇಯಿಸಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ ಬೆರೆಸಿ. ಮಿಶ್ರಣವನ್ನು 30 ಸೆಕೆಂಡುಗಳ ಕಾಲ ಹುರಿಯಿರಿ.

    ಟೊಮ್ಯಾಟೊ, ಕೆಂಪು ಮೆಣಸಿನ ಪುಡಿ ತೆಂಗಿನಕಾಯಿ, ಚೆನ್ನಾಗಿ ಬೇಯಿಸಿ. ಬಳಿಕ ವಿಶಲ್ ಬಂದು ಆರಿದ ಪ್ರೆಶರ್ ಕುಕ್ಕರ್ ತೆರೆಯಿರಿ ಮತ್ತು ಅದಕ್ಕೆ ಸಿದ್ಧವಾದ ಮಸಾಲಾ ಜತೆ ಗರಂ ಮಸಾಲ ಪುಡಿ ಅನ್ನು ಹಾಕಿ ಮತ್ತೆ ಸ್ವಲ್ಪ ನೀರು ಸೇರಿಸಿ 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಇನ್ನು ಕೊನೆಯದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಈಗ ಬಿಸಿ, ರುಚಿಯಾದ ಹಾಗೂ ಆರೋಗ್ಯಕರ ಮಟನ್‌ ಕಾಲು ಸೂಪ್‌ ಸವಿಯಲು ಸಿದ್ಧ.

    ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಈ ಮೈದಾ ದೋಸೆ- ಇಲ್ಲಿದೆ ರೆಸಿಪಿ

    ಈ ವಿಧಾನದಲ್ಲೂ ಮಾಡಬಹುದು ಕಾಲು ಸೂಪ್

    ಇನ್ನು ಕಾಲು ಸೂಪಿಗೆ ಮಸಾಲೆ ಇಲ್ಲದೆಯೂ ಸೂಪ ತಯಾರಿಸಬಹುದು.

    * ಕುಕ್ಕರ್ ಬಿಸಿಗಿಟ್ಟು ಚೆನ್ನಾಗಿ ತೊಳೆದ ಕಾಲು, ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3-4 ಕೂಗು ಕೂಗಿಸಿ.
    * ಆರಿದ ಬಳಿಕ ಸೂಪಿಗೆ ಕಾಳು ಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿಯಬಹುದು.
    Published by:ranjumbkgowda1 ranjumbkgowda1
    First published: